ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

5ನೇ ಸೆಪ್ಟೆಂಬರ್ 2024 ರಂದು ಆಯ್ದ 82 ಶಿಕ್ಷಕರಿಗೆ 2024ನೇ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಪ್ರದಾನ ಮಾಡಲಿದ್ದಾರೆ

Posted On: 04 SEP 2024 7:33PM by PIB Bengaluru

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2024 ನೇ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನು ಆಯ್ದ 82 ಪ್ರಶಸ್ತಿ ಪುರಸ್ಕೃತರಿಗೆ 5 ಸೆಪ್ಟೆಂಬರ್ 2024 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಲಿದ್ದಾರೆ. ಭಾರತವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸುತ್ತದೆ. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳು ದೇಶದಲ್ಲಿ ಶಿಕ್ಷಕರ ಅನನ್ಯ ಕೊಡುಗೆಯನ್ನು ಆಚರಿಸುವ ಗುರಿಯನ್ನು ಹೊಂದಿವೆ ಮತ್ತು ಅವರ ಬದ್ಧತೆ ಮತ್ತು ಸಮರ್ಪಣೆಯ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಗೌರವಿಸುತ್ತದೆ. ಪ್ರತಿ ಪ್ರಶಸ್ತಿಯು ಅರ್ಹತಾ ಪ್ರಮಾಣ ಪತ್ರ, ರೂ 50,000 ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ಹೊಂದಿರುತ್ತದೆ. ಪ್ರಶಸ್ತಿ ವಿಜೇತರು ಗೌರವಾನ್ವಿತ ಪ್ರಧಾನ ಮಂತ್ರಿಯವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಸಹ ಪಡೆಯುತ್ತಾರೆ.

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವರ್ಷದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ 50 ಶಿಕ್ಷಕರನ್ನು ಆಯ್ಕೆ ಮಾಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಪಾರದರ್ಶಕ ಮತ್ತು ಆನ್‌ಲೈನ್ ಮೂಲಕ ಅವರನ್ನು ಆಯ್ಕೆ ಮಾಡಿದೆ. ಆಯ್ಕೆಯಾದ 50 ಶಿಕ್ಷಕರು 28 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು 6 ಸಂಸ್ಥೆಗಳಿಒಗೆ ಸೇರಿದ್ದಾರೆ. ಆಯ್ಕೆಯಾದ 50 ಶಿಕ್ಷಕರಲ್ಲಿ 34 ಪುರುಷರು, 16 ಮಹಿಳೆಯರು, 2 ವಿಕಲಚೇತನರು ಮತ್ತು ಒಬ್ಬ ಶಿಕ್ಷಕರು CWSN ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ಉನ್ನತ ಶಿಕ್ಷಣ ಇಲಾಖೆಯ 16 ಶಿಕ್ಷಕರು ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ 16 ಶಿಕ್ಷಕರಿಗೆ ಸಹ ಪ್ರಶಸ್ತಿಗಳನ್ನು ನೀಡಲಾಗುವುದು.

ಎನ್‌ ಇ ಪಿ 2020 ವಿದ್ಯಾರ್ಥಿಗಳು, ಸಂಸ್ಥೆಗಳು ಮತ್ತು ವೃತ್ತಿಯ ಪ್ರಗತಿಗೆ ಪ್ರೇರಿತ, ಶಕ್ತಿಯುತ ಮತ್ತು ಸಮರ್ಥ ಅಧ್ಯಾಪಕರು ಅತ್ಯಗತ್ಯ ಎಂದು ಗುರುತಿಸುತ್ತದೆ. ಇದು ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಉತ್ಕೃಷ್ಟತೆಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಶಸ್ತಿಗಳು ಮತ್ತು ಮನ್ನಣೆಯಂತಹ ಪ್ರೋತ್ಸಾಹಕಗಳನ್ನು ಸಹ ಕಲ್ಪಿಸುತ್ತದೆ. ಹೀಗಾಗಿ, 2023 ರಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ ಗಳಿಗೆ ಎನ್‌ ಎ ಟಿ ಅಡಿಯಲ್ಲಿ ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು, ಅದು ಇದುವರೆಗೆ ಶಾಲಾ ಶಿಕ್ಷಕರಿಗೆ ಮಾತ್ರ ಸೀಮಿತವಾಗಿತ್ತು. ಆಯ್ಕೆಯಾದ 16 ಶಿಕ್ಷಕರು ಪಾಲಿಟೆಕ್ನಿಕ್‌ ಗಳು, ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದಿಂದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ಕ್ರ.ಸಂ.

ಪ್ರಶಸ್ತಿ ಪುರಸ್ಕೃತರ ಹೆಸರು

 

ಹುದ್ದೆ

 

ಶಾಲೆಯ ಹೆಸರು ಮತ್ತು ವಿಳಾಸ

 

ಸಂಸ್ಥೆಯ ರಾಜ್ಯ/ ಕೇಂದ್ರಾಡಳಿತ ಪ್ರದೇಶ

  1.  

ಅವಿನಾಶ್ ಶರ್ಮಾ

 

ಉಪನ್ಯಾಸಕರು

ಜಿ.ಎಂ.ಎಸ್.ಎಸ್.ಎಸ್. ಎನ್‌.ಐ.ಟಿ 3 ಫರಿದಾಬಾದ್

ಹರಿಯಾಣ

 

  1.  

ಸುನೀಲ್ ಕುಮಾರ್

ಉಪನ್ಯಾಸಕರು

ಜಿ.ಎಸ್.ಎಸ್.ಎಸ್. ಖರ್ಗತ್

ಹಿಮಾಚಲ ಪ್ರದೇಶ

  1.  

ಪಂಕಜ್ ಕುಮಾರ್ ಗೋಯಲ್

ಶಿಕ್ಷಕರು

ಹೆಣ್ಣುಮಕ್ಕಳ ಜಿ.ಎಸ್.ಎಸ್. ಬರ್ನಾಲಾ

ಪಂಜಾಬ್

 

  1.  

ರಾಜಿಂದರ್ ಸಿಂಗ್

ಶಿಕ್ಷಕರು

ಸರ್ಕಾರಿ ಪ್ರಾಥಮಿಕ ಶಾಲೆ, ಕೋಠೆ ಇಂದರ್ ಸಿಂಗ್ ವಾಲೆ

ಪಂಜಾಬ್

 

  1.  

ಬಲ್ಜಿಂದರ್ ಸಿಂಗ್ ಬ್ರಾರ್

ಉಪಪ್ರಾಂಶುಪಾಲರು

ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ 4ಜೆಜೆ

ರಾಜಸ್ಥಾನ

 

  1.  

ಹುಕಮ್ ಚಂದ್ ಚೌಧರಿ

ಶಿಕ್ಷಕರು

ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ, ಬಿಎಸ್ಎಫ್ ಬಿಕಾನೆರ್

ರಾಜಸ್ಥಾನ

 

  1.  

ಕುಸುಮ ಲತಾ ಗರಿಯಾ

ಪ್ರಭಾರ ಮುಖ್ಯ ಶಿಕ್ಷಕರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೀಣಾ

ಉತ್ತರಾಖಂಡ

 

  1.  

ಚಂದ್ರಲೇಖಾ ದಾಮೋದರ ಮೇಸ್ತ್ರಿ

ಶಿಕ್ಷಕರು

ಸತ್ಯವತಿ ಸೋಯಿರು ಆಂಗಲ್ ಹೈಯರ್ ಸೆಕೆಂಡರಿ ಸ್ಕೂಲ್, ಮಾಶೆಂ ಲೋಲಿಮ್

ಗೋವಾ

 

  1.  

ಚಂದ್ರೇಶ್‌ಕುಮಾರ್ ಭೋಲಾಶಂಕರ್ ಬೋರಿಸಾಗರ್

ಪ್ರಭಾರ ಮುಖ್ಯ ಶಿಕ್ಷಕರು

ನವಿ ಬಧದ (ಬಧದಪಾರ) ಪ್ರಾಥಮಿಕ ಶಾಲೆ, ಬಾಧಡ

ಗುಜರಾತ್

 

  1.  

ವಿನಯ್ ಶಶಿಕಾಂತ್ ಪಟೇಲ್

ಪ್ರಾಂಶುಪಾಲರು

ಆರ್.ಎಫ್.ಪಟೇಲ್ ಹೈಸ್ಕೂಲ್, ವಡಡ್ಲಾ

ಗುಜರಾತ್

  1.  

ಮಾಧವ ಪ್ರಸಾದ್ ಪಟೇಲ್

ಶಿಕ್ಷಕರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಲಿಧೋರ

ಮಧ್ಯಪ್ರದೇಶ

 

  1.  

ಸುನಿತಾ ಗೋಧಾ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಖಜುರಿಯಾ ಸಾರಂಗ್

ಮಧ್ಯ ಪ್ರದೇಶ

 

  1.  

ಕೆ ಶಾರದಾ

ಶಿಕ್ಷಕರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖೇಡಮರ

ಛತ್ತೀಸಗಢ

 

  1.  

ನರಸಿಂಹ ಮೂರ್ತಿ ಹೆಚ್ ಕೆ

ಶಿಕ್ಷಕರು

ಡಾಫೋಡಿಲ್ಸ್ ಇಂಗ್ಲಿಷ್ ಶಾಲೆ, ಸಂಜಯನಗರ-19

ಕರ್ನಾಟಕ

  1.  

ದ್ವಿತಿ ಚಂದ್ರ ಸಾಹು

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಬಿಲ್ಲೇಸು

ಒಡಿಶಾ

 

  1.  

ಸಂತೋಷ್ ಕುಮಾರ್ ಕರ್

ಶಿಕ್ಷಕರು

ಜಯದುರ್ಗ ಪ್ರೌಢಶಾಲೆ, ನಾರ್ಲಾ ರಸ್ತೆ

ಒಡಿಶಾ

 

  1.  

ಆಶಿಸ್ ಕುಮಾರ್ ರಾಯ್

ಶಿಕ್ಷಕರು

ಶ್ರೀ ನರಸಿಂಹ ವಿದ್ಯಾಪೀಠ, ಅಥರಾಖೈ

ಪಶ್ಚಿಮ ಬಂಗಾಳ

 

  1.  

ಪ್ರಶಾಂತ ಕುಮಾರ್ ಮಾರಿಕ್

ಮುಖ್ಯ ಶಿಕ್ಷಕರು

ಶಾಲಬಗನ್ ಜಿ ಎಸ್ ಎಫ್ ಪಿ ಶಾಲೆ, 1 ನಂ. ಗುರ್ದಾಹಾ

ಪಶ್ಚಿಮ ಬಂಗಾಳ

 

  1.  

ಡಾ ಉರ್ಫಾನಾ ಅಮೀನ್

ಶಿಕ್ಷಕರು

ಬಿ ಎಚ್‌ ಎಸ್‌ ಎಸ್‌ ಸೌರ

ಜಮ್ಮು ಮತ್ತು ಕಾಶ್ಮೀರ

  1.  

ರವಿಕಾಂತ ದ್ವಿವೇದಿ

ಮುಖ್ಯ ಶಿಕ್ಷಕರು

ಪ್ರಾಥಮಿಕ ಶಾಲೆ ಭಾಗೇಸರ್

ಉತ್ತರ ಪ್ರದೇಶ

 

  1.  

ಶ್ಯಾಮ್ ಪ್ರಕಾಶ್ ಮೌರ್ಯ

ಶಿಕ್ಷಕರು

ಹಿರಿಯ ಪ್ರಾಥಮಿಕ ಶಾಲೆ ಮಲ್ಹುಪುರ

ಉತ್ತರ ಪ್ರದೇಶ

 

  1.  

ಡಾ. ಮಿನಾಕ್ಷಿ ಕುಮಾರಿ

ಶಿಕ್ಷಕರು

ಶಿವಗಂಗಾ ಬಾಲಕಿಯರ ಪ್ಲಸ್ 2 ಪ್ರೌಢಶಾಲೆ ಮಧುಬನಿ

ಬಿಹಾರ

 

  1.  

ಸಿಕೇಂದ್ರ ಕುಮಾರ್ ಸುಮನ್

ಪ್ರಭಾರಮುಖ್ಯ ಶಿಕ್ಷಕರು

ಹೊಸ ಪ್ರಾಥಮಿಕ ಶಾಲೆ ತಾರಾಹಣಿ

ಬಿಹಾರ

 

  1.  

ಕೆ ಸುಮಾ

ಶಿಕ್ಷಕರು

ಜಿಎಂಎಸ್ ದುಗ್ನಾಬಾದ್

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು

  1.  

ಸುನಿತಾ ಗುಪ್ತಾ

ಉಪನ್ಯಾಸಕರು

ಜವಾಹರ್ ನವೋದಯವಿದ್ಯಾಲಯ, ಧಮಂಗಾವ್ನ್

ಮಧ್ಯ ಪ್ರದೇಶ

 

  1.  

ಚಾರು ಶರ್ಮಾ

ಪ್ರಾಂಶುಪಾಲರು

ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯ

ನವದೆಹಲಿ

  1.  

ಅಶೋಕ್ ಸೆನ್‌ ಗುಪ್ತ

ಶಿಕ್ಷಕರು

ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ 1 ಜಾಲಹಳ್ಳಿ ಪಶ್ಚಿಮ, ಕಾಮಗೊಂಡನಹಳ್ಳಿ

ಕರ್ನಾಟಕ

 

  1.  

ಎಚ್ ಎನ್ ಗಿರೀಶ್

ಉಪನ್ಯಾಸಕರು

ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಎನ್ಎನ್ 0045 ಹುಣಸೂರು ಮೈಸೂರು 571105

ಕರ್ನಾಟಕ

 

  1.  

ನಾರಾಯಣಸ್ವಾಮಿ ಆರ್

ಮುಖ್ಯ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಬಾಶೆಟ್ಟಿಹಳ್ಳಿ

ಕರ್ನಾಟಕ

 

  1.  

ಜ್ಯೋತಿ ಪಂಕ

ಶಿಕ್ಷಕರು

 

ಪ್ರಧಾನಮಂತ್ರಿ ಶ್ರೀ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆ

ಲಾಂಗಡಿಂಗ್

ಅರುಣಾಚಲ ಪ್ರದೇಶ

  1.  

ಲೆಫಿಜೊ ಅಪೊನ್

ಶಿಕ್ಷಕರು

ಜಿ.ಎಚ್.ಎಸ್.ಎಸ್. ದಿಮಾಪುರ್, ಯುನೈಟೆಡ್ ಕಾಲೋನಿ ವಾರ್ಡ್-20

ನಾಗಾಲ್ಯಾಂಡ್

 

  1.  

ನಂದಿತಾ ಚೋಂಗ್ತಮ್

ಶಿಕ್ಷಕರು

ಸಾಗೋಲ್ಬಂದ್ ರಿಷಿಕುಲ್ ಹಿರಿಯ ಪ್ರಾಥಮಿಕ ಶಾಲೆ, ಸಾಗೋಲ್ಬಂದ್

ಮಣಿಪುರ

 

  1.  

ಯಂಕಿಲಾ ಲಾಮಾ

ಶಿಕ್ಷಕರು

ಮಾಡರ್ನ್ ಸೀನಿಯರ್ ಸೆಕೆಂಡರಿ ಸ್ಕೂಲ್, ಅರಿತಂಗ್

ಸಿಕ್ಕಿಂ

  1.  

ಜೋಸೆಫ್ ವನ್ಲಾಲ್ಹ್ರುಯಾ ಸೈಲೋ

ಉಪನ್ಯಾಸಕರು

ಸಿನಡ್ ಹೈಯರ್ ಸೆಕೆಂಡರಿ ಸ್ಕೂಲ್, ತುಥಿಯಾಂಗ್ ವೆಂಗ್ ಐಜ್ವಾಲ್

ಮಿಜೋರಾಂ

 

  1.  

ಎವರ್ಲಾಸ್ಟಿಂಗ್ ಪಿಂಗ್ರೋಪ್

ಪ್ರಾಂಶುಪಾಲರು

ಮೈಂಗ್‌ಕೆನ್ ಕ್ರಿಶ್ಚಿಯನ್ ಹೈಯರ್ ಸೆಕೆಂಡರಿ ಸ್ಕೂಲ್, ಭೋರಿಂಬಾಂಗ್

ಮೇಘಾಲಯ

  1.  

ಡಾ. ನಾನಿ ಗೋಪಾಲ್ ದೇಬ್ನಾಥ್

ಶಿಕ್ಷಕರು

ನೇತಾಜಿ ಸುಭಾಸ್ ವಿದ್ಯಾನಿಕೇತನ, ನೇತಾಜಿ ಚೌಮುಹಾನಿ

ತ್ರಿಪುರ

 

  1.  

ಡಿಪೆನ್ ಖನಿಕರ್

ಶಿಕ್ಷಕರು

ಚಿ ಚಿಯಾ ಬೊಕುಲೋನಿ ಬಾಲಕಿಯರ ಪ್ರಢಶಾಲೆ, ನಂ 3

ಅಸ್ಸಾಂ

  1.  

ಡಾ .ಆಶಾ ರಾಣಿ

ಸ್ನತಕೋತ್ರ ಶಿಕ್ಷಕರು

ಪ್ಲಸ್ 2 ಹೈಸ್ಕೂಲ್ ಚಂದಂಕಿಯಾರಿ ಬೊಕಾರೊ

ಜಾರ್ಖಂಡ್

  1.  

ಜಿನು ಜಾರ್ಜ್

ಶಿಕ್ಷಕರು

ಎಸ್.ಡಿ.ವಿ.ಬಿ.ಎಚ್. ಎಸ್.ಎಸ್‌, ಅಲಪ್ಪುಳ

ಕೇರಳ

  1.  

ಕೆ ಶಿವಪ್ರಸಾದ್

ಶಿಕ್ಷಕರು

ವಿಪಿಎಯುಎಸ್ ಕುಂದೂರುಕುನ್ನು, ತಚ್ಚನಾಟ್ಟುಕರ

ಕೇರಳ

 

  1.  

ಮಿಡ್ಡೆ ಶ್ರೀನಿವಾಸ ರಾವ್

ಶಿಕ್ಷಕರು

ಎಸ್.ಪಿ.ಎಸ್. ಮುನ್ಸಿಪಲ್ ಹೈಸ್ಕೂಲ್ ಪ್ಲಸ್, ಗುಡಿವಾಡ

ಆಂಧ್ರ ಪ್ರದೇಶ

 

  1.  

ಸುರೇಶ ಕುಣಟಿ

ಶಿಕ್ಷಕರು

ಜಿ.ಪಂ. ಪ್ರೌಢಶಾಲೆ ಉರಂದೂರು

ಆಂಧ್ರಪ್ರದೇಶ

  1.  

ಪ್ರಭಾಕರ ರೆಡ್ಡಿ ಪೆಸರ

ಶಿಕ್ಷಕರು

ಜೆಡ್.ಪಿ.ಎಸ್.ಎಸ್‌ ತಿರುಮಲಯಪಾಲೆಂ

ತೆಲಂಗಾಣ

 

  1.  

ತಾಡೂರಿ ಸಂಪತ್ ಕುಮಾರ್

ಶಿಕ್ಷಕರು

ಜೆಡ್.ಪಿ.ಎಚ್.ಎಸ್‌. ದಮ್ಮನ್ನಪೇಟ್

ತೆಲಂಗಾಣ

  1.  

ಪಲ್ಲವಿ ಶರ್ಮಾ

ಪ್ರಾಂಶುಪಾಲರು

ಮಮತಾ ಆಧುನಿಕ ಎಸ್.ಆರ್. ಮಾಧ್ಯಮಿಕ ಶಾಲೆ, ವಿಕಾಸಪುರಿ

ದೆಹಲಿ

  1.  

ಚಾರು ಮೈನಿ

ಪ್ರಾಂಶುಪಾಲರು

ಡಿಎವಿ ಪಬ್ಲಿಕ್ ಸ್ಕೂಲ್ ಸೆಕ್ಟರ್ 48-49, ಗುರುಗ್ರಾಮ

ಹರಿಯಾಣ

  1.  

ಗೋಪಿನಾಥ್ ಆರ್

ಶಿಕ್ಷಕರು

ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ - ರಾಜಕುಪ್ಪಂ

ತಮಿಳುನಾಡು

  1.  

ಮುರಳೀಧರನ್ ರಮಿಯಾ ಸೇತುರಾಮನ್

ವೃತ್ತಿ ಶಿಕ್ಷಕರು

ಟಿವಿಎಸ್ ಹೈಯರ್ ಸೆಕೆಂಡರಿ ಸ್ಕೂಲ್, ಮಧುರೈ

ತಮಿಳುನಾಡು

 

  1.  

ಮಂಟಯ್ಯ ಚಿನ್ನಿ ಬೇಡ್ಕೆ

ಶಿಕ್ಷಕರು

ಜಿ.ಪಂ. ಉನ್ನತ ಪ್ರಾಥಮಿಕ ಡಿಜಿಟಲ್ ಶಾಲೆ ಗೋವಂಡಿ

ಮಹಾರಾಷ್ಟ್ರ

 

  1.  

ಸಾಗರ್ ಚಿತ್ತರಂಜನ್ ಬಗಡೆ

ಶಿಕ್ಷಕರು

ಸೌ ಎಸ್ ಎಂ ಲೋಹಿಯಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಕೊಲ್ಹಾಪುರ

ಮಹಾರಾಷ್ಟ್ರ

 

 

ಉನ್ನತ ಶಿಕ್ಷಣ ಇಲಾಖೆಯ ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಗಿನಂತಿದೆ:

ಕ್ರ.ಸಂ.

ಪ್ರಶಸ್ತಿ ಪುರಸ್ಕೃತರ ಹೆಸರು

 

ಹುದ್ದೆ

 

ಶಾಲೆಯ ಹೆಸರು ಮತ್ತು ವಿಳಾಸ

 

ಸಂಸ್ಥೆಯ ರಾಜ್ಯ/ ಕೇಂದ್ರಾಡಳಿತ ಪ್ರದೇಶ

1

ಪ್ರೊ.ಅನಿತಾ ಸುಶೀಲನ್

ಮುಖ್ಯಸ್ಥರು

ಸ್ಕೂಲ್ ಆಫ್ ಆರ್ಕಿಟೆಕ್ಚರ್, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು

ಕರ್ನಾಟಕ

2

ಪ್ರೊ. ಬಿರಿಂಚಿ ಕುಮಾರ್ ಶರ್ಮಾ

ಪ್ರಾಧ್ಯಾಪಕರು

ಕೃಷಿ ವಿಜ್ಞಾನ ಕೇಂದ್ರ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ

ಉತ್ತರ ಪ್ರದೇಶ

 

3

ಡಾ. ಸಿ. ಜಯ ಶಂಕರ್ ಬಾಬು

ಸಹ ಪ್ರಾಧ್ಯಾಪಕರು

ಹಿಂದಿ ವಿಭಾಗ, ಪುದುಚೇರಿ ವಿಶ್ವವಿದ್ಯಾಲಯ

ಪುದುಚೇರಿ

 

4

ಡಾ.ಎ.ಗಾಂಧಿಮತಿ

ಉಪನ್ಯಾಸಕರು

ಇಂಗ್ಲಿಷ್ ವಿಭಾಗ, ಪಾಲಿಟೆಕ್ನಿಕ್ ಕಾಲೇಜು, ಸೇಲಂ

ತಮಿಳುನಾಡು

 

5

ಪ್ರೊ. ಕಪಿಲ್ ಅಹುಜಾ

ಪ್ರಾಧ್ಯಾಪಕರು

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ, ಐಐಟಿ ಇಂದೋರ್

ಮಧ್ಯಪ್ರದೇಶ

6

ಪ್ರೊ.ಎಸ್.ಆರ್. ಕೇಶವ

ಪ್ರಾಧ್ಯಾಪಕರು

ಅರ್ಥಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ಕರ್ನಾಟಕ

 

7

ಡಾ. ನಂದಾವರಂ ಮೃದುಲಾ ಬಾಬು

ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

ತೆಲುಗು ವಿಭಾಗ, ಸರ್ಕಾರಿ ಮಹಿಳಾ ಪದವಿ ಕಾಲೇಜು, ಹೈದರಾಬಾದ್

ತೆಲಂಗಾಣ

 

8

ಪ್ರೊ. ನಿಧಿ ಜೈನ್

ಪ್ರಾಧ್ಯಾಪಕರು

ರಸಾಯನಶಾಸ್ತ್ರ ವಿಭಾಗ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ

ನವದೆಹಲಿ

9

ಪ್ರೊ.ನೀಲಭ್ ತಿವಾರಿ

ಮುಖ್ಯಸ್ಥರು

ಶಿಕ್ಷಣ ವಿಭಾಗ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ

ನವದೆಹಲಿ

 

10

ಪ್ರೊ.ಪರಮಾರ್ ರಂಜಿತ್‌ಕುಮಾರ್ ಖಿಮ್ಜಿಭಾಯಿ

ಮುಖ್ಯಸ್ಥರು

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗ, ಸರ್ಕಾರಿ ಪಾಲಿಟೆಕ್ನಿಕ್, ಜುನಾಗಢ್

ಗುಜರಾತ್

 

11

ಪ್ರೊ. ಶಹನಾಜ್ ಅಯೂಬ್

ಸಹಾಯಕ ಪ್ರಾಧ್ಯಾಪಕರು

ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಬುಂದೇಲ್‌ಖಂಡ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಝಾನ್ಸಿ

ಉತ್ತರ ಪ್ರದೇಶ

12

ಪ್ರೊ.ಶಿಲ್ಪಗೌರಿ ಪ್ರಸಾದ್

ಸಹ ಪ್ರಾಧ್ಯಾಪಕರು

ಇಂಗ್ಲಿಷ್ ವಿಭಾಗ, ಪುಣೆ ಜಿಲ್ಲಾ ಶಿಕ್ಷಣ ಸಂಘದ ಪ್ರೊ.ರಾಮಕೃಷ್ಣ ಮೋರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಪುಣೆ

ಮಹಾರಾಷ್ಟ್ರ

 

13

 

ಡಾ. ಶಿಮಿ ಎಸ್.ಎಲ್.

ಸಹ ಪ್ರಾಧ್ಯಾಪಕರು

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗ, ಪಂಜಾಬ್ ಇಂಜಿನಿಯರಿಂಗ್ ಕಾಲೇಜು

ಚಂಡೀಗಢ

14

ಪ್ರೊ.ಎ.ಎಸ್. ಸ್ಮೈಲಿನ್ ಗಿರಿಜಾ

 

ಮುಖ್ಯಸ್ಥರು

ಮೈಕ್ರೋಬಯಾಲಜಿ ವಿಭಾಗ, ಸಾಂಕ್ರಾಮಿಕ ರೋಗಗಳ ಕೇಂದ್ರ, ಸವೀತ ದಂತ ಕಾಲೇಜು ಮತ್ತು ಆಸ್ಪತ್ರೆಗಳು, ಸವೀತ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆ, ಸವೀತ ವಿಶ್ವವಿದ್ಯಾಲಯ, ಚೆನ್ನೈ

ತಮಿಳುನಾಡು

 

15

ಪ್ರೊ.ಶ್ರೀನಿವಾಸ್ ಹೋಥಾ

ಪ್ರಾಧ್ಯಾಪಕರು

ಪ್ರೊಫೆಸರ್ ರಸಾಯನಶಾಸ್ತ್ರ ವಿಭಾಗ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಪುಣೆ

ಮಹಾರಾಷ್ಟ್ರ

 

16

ಪ್ರೊ. ವಿನಯ್ ಶರ್ಮಾ

ಪ್ರಾಧ್ಯಾಪಕರು

ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗ ಮತ್ತು ವಿನ್ಯಾಸ ವಿಭಾಗದ ಜಂಟಿ ಪ್ರಾಧ್ಯಾಪಕರು, ಐಐಟಿ ರೂರ್ಕಿ

ಉತ್ತರಾಖಂಡ

 

*****

 



(Release ID: 2052127) Visitor Counter : 23