ಕಾನೂನು ಮತ್ತು ನ್ಯಾಯ ಸಚಿವಾಲಯ
ನೋಟರಿಗಳ ನೇಮಕಾತಿಯನ್ನು ಸುಗಮ, ದಕ್ಷ ಮತ್ತು ಪಾರದರ್ಶಕವಾಗಿಸಲು ಹೊಸ ನೋಟರಿ ಪೋರ್ಟಲ್ ಪ್ರಾರಂಭಿಸಲಾಗಿದೆ
Posted On:
03 SEP 2024 8:23PM by PIB Bengaluru
ಗೌರವಾನ್ವಿತ ರಾಜ್ಯ ಸಚಿವರು, ಕಾನೂನು ಮತ್ತು ನ್ಯಾಯ ಸಚಿವಾಲಯ (ಸ್ವತಂತ್ರ ಉಸ್ತುವಾರಿ) ಶ್ರೀ ಅರ್ಜುನ್ ರಾಮ್ ಮೇಘವಾಲ್, ಇಂದು ನವದೆಹಲಿಯಲ್ಲಿ ಕಾನೂನು ಮತ್ತು ನ್ಯಾಯ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೊಸ ನೋಟರಿ ಪೋರ್ಟಲ್ (https://notary.gov.in) ಉದ್ಘಾಟಿಸಿದರು.
ನೋಟರಿ ಪೋರ್ಟಲ್, ನೋಟರಿಗಳ ನೇಮಕಾತಿಗಾಗಿ ಅರ್ಜಿಗಳ ಸಲ್ಲಿಕೆ, ಅಭ್ಯಾಸದ ಪ್ರಮಾಣಪತ್ರಗಳ ವಿತರಣೆ ಮತ್ತು ನವೀಕರಣ, ಅಭ್ಯಾಸ ಪ್ರದೇಶದ ಬದಲಾವಣೆ, ವಾರ್ಷಿಕ ರಿಟರ್ನ್ಸ್ ಸಲ್ಲಿಕೆ ಮುಂತಾದ ವಿವಿಧ ಸೇವೆಗಳಿಗಾಗಿ ನೋಟರಿಗಳು ಮತ್ತು ಸರ್ಕಾರದ ನಡುವೆ ಆನ್ ಲೈನ್ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ನೋಟರಿ ಪೋರ್ಟಲ್ ಪ್ರಾರಂಭದೊಂದಿಗೆ, ಕೇಂದ್ರ ನೋಟರಿಗಳಿಗೆ ಭೌತಿಕ ಕ್ರಮದಲ್ಲಿ ಅರ್ಜಿಗಳು ಅಥವಾ ವಿನಂತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಅವರು ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು, ಅದರ ಪ್ರಗತಿಯನ್ನು ಮಾನಿಟರ್ ಮಾಡಬಹುದು, ಮತ್ತು ಡಿಜಿಲಾಕರ್ ಖಾತೆಯಿಂದ ಡಿಜಿಟಲ್ ಸಹಿಯಾದ ಪ್ರಾಕ್ಟೀಸ್ ಪ್ರಮಾಣಪತ್ರಗಳನ್ನು ಡೌನ್ ಲೋಡ್ ಮಾಡಬಹುದು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಶ್ರೀ ಅರ್ಜುನ್ ರಾಮ್ ಮೆಘ್ವಾಲ್, ನೋಟರಿ ಪೋರ್ಟಲ್ ಆರಂಭವನ್ನು ಕಾಗದರಹಿತ, ಮುಖವಿರಹಿತ ಮತ್ತು ಸಮರ್ಥ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಹೆಜ್ಜೆಯೆಂದು ಬಣ್ಣಿಸಿದರು. ಇದು ಭಾರತ ಪ್ರಧಾನಿಯವರ ದೃಷ್ಟಿಯಲ್ಲಿ ಡಿಜಿಟಲ್ ಇಂಡಿಯಾ ಉದ್ದೇಶದತ್ತ ತಲಪುವ ಇನ್ನೊಂದು ಹಂತವಾಗಿದೆ. ಪೋರ್ಟಲ್ ಅನ್ನು ಬಳಕೆದಾರ ಸ್ನೇಹಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಸರಿಯಾದ ಸಮಯದಲ್ಲಿ ಸಕ್ರಿಯಗೊಳಿಸಿದಾಗ ನೋಟರಿಗಳು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.
ಮಂತ್ರಿಯವರು ಪೋರ್ಟಲ್ ಉದ್ಘಾಟಿಸಿದ ನಂತರ, ರಾಜಸ್ಥಾನದ ಬಿಕಾನೇರ್ ನಿವಾಸಿಯಾದ ಶ್ರೀ ಭೂರಾ ರಾಮ್ ಅವರಿಗೆ ಮೊದಲ ನೋಟರಿ ಅಭ್ಯಾಸ ಪ್ರಮಾಣಪತ್ರವನ್ನು ಜಿಟಲ್ ಮೂಲಕ ವಿತರಿಸಲಾಯಿತು.
ಹೊಸ ನೋಟರಿ ಪೋರ್ಟಲ್ ನ ಪ್ರಮುಖ ವೈಶಿಷ್ಟ್ಯಗಳನ್ನು ವಿವರಿಸುತ್ತಾ, ಕಾನೂನು ಕಾರ್ಯದರ್ಶಿ ಡಾ. ರಾಜೀವ್ ಮಣಿ ಅವರು, ಈ ಉಪಕ್ರಮವು ದೇಶಾದ್ಯಂತ ನೋಟರಿಗಳ ಆಯ್ಕೆ ಮತ್ತು ನೇಮಕಾತಿ ವ್ಯವಸ್ಥೆಯನ್ನು ವೇಗವಾಗಿ, ದಕ್ಷವಾಗಿ ಮತ್ತು ಪಾರದರ್ಶಕವಾಗಿ ಮಾಡುವುದಷ್ಟೇ ಅಲ್ಲದೆ, ಎಲ್ಲಾ ನೋಟರಿ ಸಂಬಂಧಿತ ದಾಖಲೆಗಳ ಡಿಜಿಟಲ್ ಸಂಗ್ರಹಣಾ ಸೌಲಭ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಹಿಂದಿನ ನೋಟರಿ ಆನ್ಲೈನ್ ಅಪ್ಲಿಕೇಶನ್ ಪೋರ್ಟಲ್ಗಿಂತ ಹೊಸ ಪೋರ್ಟಲ್ ಹಲವಾರು ನೂತನ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ ಎಂದು ಅವರು ಹೇಳಿದರು. ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಪೋರ್ಟಲ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾದ ಮೇಲೆ, ಇದು ನೋಟರಿ ಕಾಯ್ದೆಯ ನಿರ್ವಹಣೆಯನ್ನು ನಿರಂತರವಾಗಿ ಸುಗಮಗೊಳಿಸಲು ಮತ್ತು ದೇಶದ ವಿಶಾಲ ಭೌಗೋಳಿಕ ವ್ಯಾಪ್ತಿಯಲ್ಲಿರುವ ನಾಗರಿಕರಿಗೆ ಪ್ರಯೋಜನಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
NIC ಯ ಸಹಯೋಗದಲ್ಲಿ ಇಂದು ಪ್ರಾರಂಭಿಸಲಾದ ನೋಟರಿ ಪೋರ್ಟಲ್ ಅನ್ನು ವಿವಿಧ ಮಾಡ್ಯೂಲ್ ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ, ಅದನ್ನು ಹಂತಗಳಲ್ಲಿ ಹೊರತರಲಾಗುವುದು. ಮೊದಲ ಹಂತದಲ್ಲಿ, ತಾತ್ಕಾಲಿಕವಾಗಿ ಆಯ್ಕೆಯಾದ ನೋಟರಿಗಳಿಗೆ ಪ್ರಾಕ್ಟೀಸ್ ಪ್ರಮಾಣಪತ್ರ ನೀಡಲು ಸಂಬಂಧಿಸಿದ ಮಾಡ್ಯೂಲ್ ಪ್ರಾರಂಭಿಸಲಾಗಿದೆ. ವರ್ಷದ ನಂತರ ಅಭ್ಯಾಸದ ಪ್ರಮಾಣಪತ್ರದ ನವೀಕರಣ ಮತ್ತು ವಾರ್ಷಿಕ ರಿಟರ್ನ್ಸ್ಗಳ ಸಲ್ಲಿಕೆಗೆ ಸಂಬಂಧಿಸಿದ ಮಾಡ್ಯೂಲ್ ಗಳನ್ನು ಹೊರತರಲು ಯೋಜಿಸಲಾಗಿದೆ.
*****
(Release ID: 2051643)
Visitor Counter : 93