ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಯವರು ಶ್ರೀ ವಾರಣಾ ಮಹಿಳಾ ಸಹಕಾರಿ ಗುಂಪಿನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು

Posted On: 02 SEP 2024 6:32PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 2, 2024) ಮಹಾರಾಷ್ಟ್ರದ ಕೊಲ್ಹಾಪುರದ  ವಾರಣಾನಗರದಲ್ಲಿ ಶ್ರೀ ವಾರಣಾ ಮಹಿಳಾ ಸಹಕಾರಿ ಗುಂಪಿನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ   ರಾಷ್ಟ್ರಪತಿಯವರು, ಸಮಾಜದಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಸಹಕಾರವೇ ಅತ್ಯುತ್ತಮ ಮಾಧ್ಯಮ ಎಂದು ಹೇಳಿದರು. ಸಹಕಾರದ ತತ್ವಗಳು ಸಂವಿಧಾನದಲ್ಲಿ ಸಹಕಾರದ ತತ್ವಗಳು ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯ, ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಅನುಸರಿಸುತ್ತವೆ. ವಿಭಿನ್ನ ವರ್ಗ ಮತ್ತು ಸಿದ್ಧಾಂತಗಳ ಜನರು ಸಹಕಾರಕ್ಕಾಗಿ ಒಗ್ಗೂಡಿದಾಗ, ಅವರಿಗೆ ಸಾಮಾಜಿಕ ವೈವಿಧ್ಯತೆಯ ಲಾಭ ದೊರೆಯುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರ ವಹಿಸಿವೆ. ಅಮೂಲ್ ಮತ್ತು ಲಿಜ್ಜತ್ ಪಾಪಡ್ ನಂತಹ ದೇಶೀಯ  ಬ್ರ್ಯಾಂಡ್ ಗಳು ಇಂತಹ ಸಹಕಾರಿ ಸಂಘಗಳಿಗೆ ಉದಾಹರಣೆಗಳಾಗಿವೆ ಎಂದು ಹೇಳಿದರು.

ಇಂದು ಭಾರತವು ಜಗತ್ತಿನ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದರೆ, ಈ ಯಶಸ್ಸಿಗೆ ಸಹಕಾರಿ ಗುಂಪುಗಳು ಗಣನೀಯ ಕೊಡುಗೆ ನೀಡಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ಬಹುತೇಕ ಎಲ್ಲಾ ರಾಜ್ಯಗಳಲ್ಲಿ, ಸಹಕಾರಿ ಸಂಘಗಳು ಮುಖ್ಯವಾಗಿ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತವೆ ಮತ್ತು ವಿತರಿಸುತ್ತವೆ. ಹಾಲು ಮಾತ್ರವಲ್ಲದೆ, ರಸಗೊಬ್ಬರ, ಹತ್ತಿ, ಕೈಮಗ್ಗ, ವಸತಿ, ಸಾಸಿವೆ ಎಣ್ಣೆ ಮತ್ತು ಸಕ್ಕರೆಯಂತಹ ಕ್ಷೇತ್ರಗಳಲ್ಲಿಯೂ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು. 

ಬಡತನ ನಿರ್ಮೂಲನೆ, ಆಹಾರ ಭದ್ರತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಿವೆ.  ಆದರೆ ಈ ಕ್ಷಿಪ್ರವಾಗಿ ಬದಲಾಗುತ್ತಿರುವ ಕಾಲದಲ್ಲಿ,ಅವರು ತಮ್ಮನ್ನು ತಾವೇ ಬದಲಾಯಿಸಿಕೊಳ್ಳಬೇಕಾಗಿದೆ. ಅವರು ಸಾಧ್ಯವಾದಷ್ಟು ತಂತ್ರಜ್ಞಾನವನ್ನು ಬಳಸಬೇಕು ಮತ್ತು ನಿರ್ವಹಣೆಯನ್ನು ಹೆಚ್ಚು ವೃತ್ತಿಪರಗೊಳಿಸಬೇಕು. ಅನೇಕ ಸಹಕಾರಿ ಸಂಘಗಳು ಬಂಡವಾಳ ಮತ್ತು ಸಂಪನ್ಮೂಲಗಳ ಕೊರತೆ, ಆಡಳಿತ ಮತ್ತು ನಿರ್ವಹಣೆ, ಹಾಗೂ ಕಡಿಮೆ ಭಾಗವಹಿಸುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯುವಕರು ಸಹಕಾರಿ ಸಂಘಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ರಾಷ್ಟ್ರಪತಿಯವರು ಹೇಳಿದರು. ಆಡಳಿತ ಮತ್ತು ನಿರ್ವಹಣೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಯುವಕರು ಆ ಸಂಸ್ಥೆಗಳನ್ನು ಪರಿವರ್ತಿಸಬಹುದು. ಸಾವಯವ ಕೃಷಿ, ಶೇಖರಣಾ ಸಾಮರ್ಥ್ಯ ನಿರ್ಮಾಣ ಮತ್ತು ಪರಿಸರ ಪ್ರವಾಸೋದ್ಯಮದಂತಹ ಹೊಸ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಹುಡುಕಲು ಸಹಕಾರಿ ಸಂಸ್ಥೆಗಳಿಗೆ ಸಲಹೆ ನೀಡಿದರು.

ಯಾವುದೇ ಉದ್ಯಮದ ಯಶಸ್ಸಿನ ನಿಜವಾದ ರಹಸ್ಯವೆಂದರೆ ಸಾಮಾನ್ಯ ಜನರೊಂದಿಗೆ ಅದರ ಸಂಪರ್ಕವಾಗಿದೆ ಎಂದು ಅಧ್ಯಕ್ಷರು ಹೇಳಿದರು. ಈ ದೃಷ್ಟಿಯಿಂದ ಸಹಕಾರ ಸಂಘಗಳ ಯಶಸ್ಸಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಾರದರ್ಶಕತೆ ಮುಖ್ಯವಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರ ಹಿತಾಸಕ್ತಿಯೇ ಪ್ರಧಾನವಾಗಿರಬೇಕು. ಯಾವುದೇ ಸಹಕಾರಿ ಸಂಸ್ಥೆಯು ಯಾವುದೇ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿ ಮತ್ತು ಲಾಭ ಗಳಿಸುವ ಸಾಧನವಾಗಬಾರದು, ಇಲ್ಲವಾದರೆ ಸಹಕಾರದ ಮೂಲ ಉದ್ದೇಶವೇ ಕಳೆದುಹೋಗುತ್ತದೆ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಹಕಾರಿ ಸಂಘಗಳಲ್ಲಿ ಏಕಸ್ವಾಮ್ಯದ ಬದಲು ನಿಜವಾದ ಸಹಕಾರ ಇರಬೇಕು ಎಂದು ರಾಷ್ಟ್ರಪತಿಯವರು ಹೇಳಿದರು.

https://static.pib.gov.in/WriteReadData/specificdocs/documents/2024/sep/doc202492384801.pdf

 

*****


(Release ID: 2051191) Visitor Counter : 34