ಕೃಷಿ ಸಚಿವಾಲಯ
1940 ಕೋಟಿ ರೂ.ಗಳ ಕೇಂದ್ರ ಪಾಲು ಸೇರಿದಂತೆ 2817 ಕೋಟಿ ರೂ. ವೆಚ್ಚದ ಡಿಜಿಟಲ್ ಕೃಷಿ ಮಿಷನ್ ಗೆ ಸಂಪುಟ ಅನುಮೋದನೆ ನೀಡಿದೆ
Posted On:
02 SEP 2024 6:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯು 1940 ಕೋಟಿ ರೂಪಾಯಿಗಳ ಕೇಂದ್ರ ಪಾಲು ಸೇರಿದಂತೆ 2817 ಕೋಟಿ ರೂಪಾಯಿ ವೆಚ್ಚದ ಡಿಜಿಟಲ್ ಕೃಷಿ ಮಿಷನ್ ಗೆ ಅನುಮೋದನೆ ನೀಡಿತು.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸುವುದು, ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ (DGCES) ಅನುಷ್ಠಾನಗೊಳಿಸುವುದು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ ಇತರ ಮಾಹಿತಿ ತಂತ್ರಜ್ಞಾನದ (ಐಟಿ) ಡಿಜಿಟಲ್ ಕೃಷಿ ಉಪಕ್ರಮಗಳನ್ನು ಬೆಂಬಲಿಸಲು ಮಿಷನ್ ಅನ್ನು ಒಂದು ಸಮೂಹ ಯೋಜನೆಯಾಗಿ ರೂಪಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತದ ಡಿಜಿಟಲ್ ಕ್ರಾಂತಿಯು ಡಿಜಿಟಲ್ ಗುರುತುಗಳನ್ನು ಮತ್ತು ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ರಚಿಸುವ ಮೂಲಕ ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ಬದಲಾವಣೆ ತಂದಿದೆ. ಇದು ಹಣಕಾಸು, ಆರೋಗ್ಯ, ಶಿಕ್ಷಣ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಿದೆ, ನಾಗರಿಕ ಕೇಂದ್ರಿತ ಡಿಜಿಟಲ್ ಪರಿಹಾರಗಳಲ್ಲಿ ಭಾರತವನ್ನು ನಾಯಕನ ಸ್ಥಾನದಲ್ಲಿ ಇರಿಸಿದೆ.
ಕೃಷಿ ಕ್ಷೇತ್ರದಲ್ಲಿ ಇದೇ ರೀತಿಯ ಪರಿವರ್ತನೆಗಾಗಿ, 2023-24ರ ಕೇಂದ್ರ ಬಜೆಟ್ ನಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಹೆಚ್ಚುವರಿಯಾಗಿ, 2024-25ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಉಪಕ್ರಮವನ್ನು ಹೆಚ್ಚಿಸಲು ಘೋಷಿಸಲಾಗಿದೆ. ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ದೃಢೀಕೃತ ಜನಸಂಖ್ಯಾ ವಿವರಗಳು, ಭೂಮಿ ಹಿಡುವಳಿಗಳು ಮತ್ತು ಬಿತ್ತಿದ ಬೆಳೆಗಳು ಸೇರಿದಂತೆ ರೈತರ ಬಗ್ಗೆ ಸಮಗ್ರ ಮತ್ತು ಉಪಯುಕ್ತ ಡೇಟಾವನ್ನು ಒದಗಿಸುವ ಗುರಿಯನ್ನು ಹೊಂದಿದೆ. ರಾಜ್ಯ ಸರ್ಕಾರದ ನೀತಿ ಪ್ರಕಾರ ಇದರಲ್ಲಿ ರೈತರು ಮತ್ತು ಸಾಗುವಳಿದಾರರು ಇರುತ್ತಾರೆ. ಇದು ಜಾನುವಾರು, ಮೀನುಗಾರಿಕೆ, ಮಣ್ಣಿನ ಆರೋಗ್ಯ, ಇತರ ವೃತ್ತಿಗಳು, ಕುಟುಂಬದ ವಿವರಗಳು ಮತ್ತು ಯೋಜನೆಗಳು ಮತ್ತು ಪ್ರಯೋಜನಗಳ ಕುರಿತು ರೈತರ ಡೇಟಾವನ್ನು ಬಳಸಲು ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರದ ಸಚಿವಾಲಯಗಳ ಸಂಬಂಧಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ, ಇದು ಕೃಷಿ ಕ್ಷೇತ್ರದಲ್ಲಿ ವಿನೂತನ ರೈತ ಕೇಂದ್ರಿತ ಡಿಜಿಟಲ್ ಸೇವೆಗಳಿಗೆ ಕಾರಣವಾಗುತ್ತದೆ. ವಿಕಸಿತ ಭಾರತ್ @2047 ರ ದೃಷ್ಟಿಗೆ ಅನುಗುಣವಾಗಿ, ಕೃಷಿಗಾಗಿ ಡಿಪಿಐ ಡಿಜಿಟಲ್ ಕೃಷಿ ಮಿಷನ್ ನ ತಿರುಳಾಗಿದೆ.
ಮಿಷನ್ ಅಡಿಯಲ್ಲಿ ಅಗ್ರಿಸ್ಟ್ಯಾಕ್, ಕೃಷಿ ನಿರ್ಧಾರ ಬೆಂಬಲ ವ್ಯವಸ್ಥೆ ಮತ್ತು ಮಣ್ಣಿನ ಪ್ರೊಫೈಲ್ ಮ್ಯಾಪಿಂಗ್ ಎಂಬ ಮೂರು ಮೂರು ಡಿಪಿಐಗಳನ್ನು ರಚಿಸಲಾಗುತ್ತದೆ. ಈ ಡಿಪಿಐಗಳು ರೈತ-ಕೇಂದ್ರಿತ ಡಿಜಿಟಲ್ ಸೇವೆಗಳನ್ನು ಸಕ್ರಿಯಗೊಳಿಸುವುದರ ಜೊತೆಗೆ ಕೃಷಿ ವಲಯಕ್ಕೆ ಸಕಾಲಿಕ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತವೆ.
ಅಗ್ರಿಸ್ಟ್ಯಾಕ್ ರೈತ-ಕೇಂದ್ರಿತ ಡಿಪಿಐ ಆಗಿದ್ದು, ಇದು ರೈತರಿಗೆ ಸಮರ್ಥ, ಸುಲಭ ಮತ್ತು ವೇಗದ ಸೇವೆಗಳು ಮತ್ತು ಯೋಜನೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಏಜೆನ್ಸಿಗಳ ನಡುವಿನ ಸಹಯೋಗದ ಯೋಜನೆಯಾಗಿ ಫೆಡರಲ್ ರಚನೆಯಲ್ಲಿ ಇದನ್ನು ರಚಿಸಲಾಗುತ್ತಿದೆ. ಇದು ಕೃಷಿ ವಲಯದಲ್ಲಿ ಮೂರು ಮುಖ್ಯ ದಾಖಲಾತಿಗಳು ಅಥವಾ ಡೇಟಾಬೇಸ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ರೈತರ ನೋಂದಾವಣೆ, ಭೂವೈಜ್ಞಾನಿಕ ಉಲ್ಲೇಖದೊಂದಿಗೆ ಗ್ರಾಮ ನಕ್ಷೆಗಳು ಮತ್ತು ಬೆಳೆಗಳ ಬಿತ್ತನೆ ನೋಂದಾವಣೆ, ಇವೆಲ್ಲವನ್ನೂ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಸಿದ್ಧಪಡಿಸುತ್ತವೆ ಮತ್ತು ಅವುಗಳಿಂದ ನಿರ್ವಹಣೆಯನ್ನು ಮಾಡಲಾಗುತ್ತದೆ.
ಅಗ್ರಿಸ್ಟ್ಯಾಕ್ ಅಡಿಯಲ್ಲಿ, ರೈತರಿಗೆ ಆಧಾರ್ ನಂತೆಯೇ ಡಿಜಿಟಲ್ ಗುರುತನ್ನು (ರೈತ ಐಡಿ) ನೀಡಲಾಗುವುದು, ಇದು ವಿಶ್ವಾಸಾರ್ಹ 'ಕಿಸಾನ್ ಕಿ ಪೆಹಚಾನ್' ಆಗಿರುತ್ತದೆ. ಈ 'ರೈತ ಐಡಿ'ಯನ್ನು ರಾಜ್ಯದ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು, ಜನಸಂಖ್ಯಾ ವಿವರಗಳು, ಕುಟುಂಬದ ವಿವರಗಳು, ಯೋಜನೆಗಳು ಮತ್ತು ಪ್ರಯೋಜನಗಳು ಇತ್ಯಾದಿಗಳಿಗೆ ಕ್ರಿಯಾತ್ಮಕವಾಗಿ ಲಿಂಕ್ ಮಾಡಲಾಗುತ್ತದೆ. ರೈತರು ಬಿತ್ತಿದ ಬೆಳೆಗಳನ್ನು ಮೊಬೈಲ್ ಆಧಾರಿತ ಭೂ ಸಮೀಕ್ಷೆ ಅಂದರೆ ಡಿಜಿಟಲ್ ಬೆಳೆ ಸಮೀಕ್ಷೆ ಮೂಲಕ ದಾಖಲಿಸಲಾಗುತ್ತದೆ. ಈ ಸಮೀಕ್ಷೆಯನ್ನು ಪ್ರತಿ ಋತುವಿನಲ್ಲಿ ನಡೆಸಲಾಗುವುದು.
ಕೃಷಿಗಾಗಿ ಡಿಪಿಐ ರಚಿಸಲು ಮತ್ತು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗುತ್ತಿದೆ. ಇಲ್ಲಿಯವರೆಗೆ, 19 ರಾಜ್ಯಗಳು ಭಾರತ ಸರ್ಕಾರದ ಕೃಷಿ ಸಚಿವಾಲಯದೊಂದಿಗೆ ಎಂಒಯುಗಳಿಗೆ ಸಹಿ ಹಾಕಿವೆ. ಅಗ್ರಿಸ್ಟಾಕ್ ಅನ್ನು ಕಾರ್ಯಗತಗೊಳಿಸಲು ಮೂಲ ಐಟಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸಲಾಗಿದೆ, ಅದರ ವಿವರಗಳು ಈ ಕೆಳಗಿನಂತಿವೆ:
- ರೈತ ಗುರುತಿನ ಚೀಟಿಗಳನ್ನು ಅಭಿವೃದ್ಧಿಪಡಿಸಲು, ಆರು ರಾಜ್ಯಗಳಲ್ಲಿ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಆಯೋಜಿಸಲಾಗಿದೆ, ಅವುಗಳೆಂದರೆ: ಉತ್ತರ ಪ್ರದೇಶ (ಫರೂಕಾಬಾದ್), ಗುಜರಾತ್ (ಗಾಂಧಿನಗರ), ಮಹಾರಾಷ್ಟ್ರ (ಬೀಡ್), ಹರ್ಯಾಣ (ಯಮನಾನಗರ), ಪಂಜಾಬ್ (ಫತೇಘರ್ ಸಾಹಿಬ್) ಮತ್ತು ತಮಿಳುನಾಡು (ವಿರುದ್ಧನಗರ). ಇದು 11 ಕೋಟಿ ರೈತರಿಗೆ ಡಿಜಿಟಲ್ ಗುರುತನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ: 2024-25 ನೇ ಆರ್ಥಿಕ ವರ್ಷದಲ್ಲಿ ಆರು ಕೋಟಿ ರೈತರು, 2025-26 ನೇ ಆರ್ಥಿಕ ವರ್ಷದಲ್ಲಿ ರಲ್ಲಿ ಮೂರು ಕೋಟಿ ರೈತರು ಮತ್ತು 2026-27 ರಲ್ಲಿ ಎರಡು ಕೋಟಿ ರೈತರ ಡಿಜಿಟಲ್ ಗುರುತು ರಚಿಸಲಾಗುತ್ತದೆ.
ii. ಬೆಳೆ ಬಿತ್ತನೆ ನೋಂದಾವಣೆ ಸಿದ್ಧಪಡಿಸಲು, 2023-24ರಲ್ಲಿ 11 ರಾಜ್ಯಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ಇದಲ್ಲದೆ, 2024-25ರ ಆರ್ಥಿಕ ವರ್ಷದಲ್ಲಿ 400 ಜಿಲ್ಲೆಗಳು ಮತ್ತು 2025-26ರ ಆರ್ಥಿಕ ವರ್ಷದಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಂಡು ಎರಡು ವರ್ಷಗಳಲ್ಲಿ ದೇಶಾದ್ಯಂತ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.
ಕೃಷಿ ನಿರ್ಧಾರ ಬೆಂಬಲ ವ್ಯವಸ್ಥೆಯು ಬೆಳೆಗಳು, ಮಣ್ಣು, ಹವಾಮಾನ, ಜಲಸಂಪನ್ಮೂಲ ಇತ್ಯಾದಿಗಳ ಮೇಲಿನ ರಿಮೋಟ್ ಸೆನ್ಸಿಂಗ್ ಆಧಾರಿತ ಮಾಹಿತಿಯನ್ನು ಸಂಯೋಜಿಸಲು ಸಮಗ್ರ ಜಿಯೋಸ್ಪೇಷಿಯಲ್ ವ್ಯವಸ್ಥೆಯನ್ನು ರಚಿಸುತ್ತದೆ.
ಮಿಷನ್ ಅಡಿಯಲ್ಲಿ, ದೇಶದ ಕೃಷಿ ಭೂಮಿಯಲ್ಲಿ ಸುಮಾರು 142 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ 1:10,000 ಪ್ರಮಾಣದಲ್ಲಿ ವಿವರವಾದ ಮಣ್ಣಿನ ಪ್ರೊಫೈಲ್ ನಕ್ಷೆಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಸುಮಾರು 29 ಮಿಲಿಯನ್ ಹೆಕ್ಟೇರ್ ನ ವಿವರವಾದ ಮಣ್ಣಿನ ವಿವರ ದಾಸ್ತಾನು ಈಗಾಗಲೇ ಪೂರ್ಣಗೊಂಡಿದೆ.
ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ (DGCES) ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಕೊಯ್ಲು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಅಂದಾಜುಗಳನ್ನು ಒದಗಿಸುತ್ತದೆ. ಕೃಷಿ ಉತ್ಪಾದನೆಯ ನಿಖರವಾದ ಅಂದಾಜು ಮಾಡಲು ಈ ಕ್ರಮವು ತುಂಬಾ ಉಪಯುಕ್ತವಾಗಿದೆ.
ಈ ಮಿಷನ್ ಕೃಷಿ ವಲಯದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವಲ್ಲಿ ವೇಗವರ್ಧಕ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ, ಡಿಜಿಟಲ್ ಬೆಳೆ ಸಮೀಕ್ಷೆ, ರಿಮೋಟ್ ಸೆನ್ಸಿಂಗ್ ಗಾಗಿ ವಾಸ್ತವ ಡೇಟಾ ಸಂಗ್ರಹಣೆ ಇತ್ಯಾದಿಗಳ ಮೂಲಕ ಸುಮಾರು 2.5 ಲಕ್ಷ ತರಬೇತಿ ಪಡೆದ ಸ್ಥಳೀಯ ಯುವಕರು ಮತ್ತು ಕೃಷಿ ಸಖಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ.
ಮಿಷನ್ ನ ವಿವಿಧ ಘಟಕಗಳನ್ನು ನೆಲದ ಮಟ್ಟದಲ್ಲಿ ಕಾರ್ಯಗತಗೊಳಿಸಲಾಗುವುದು ಮತ್ತು ಅಂತಿಮ ಪ್ರಯೋಜನವು ರೈತರಿಗೆ ಲಭ್ಯವಾಗುತ್ತದೆ. ರೈತರು, ಕೃಷಿಭೂಮಿ ಮತ್ತು ಬೆಳೆಗಳ ಮೇಲೆ ವಿಶ್ವಾಸಾರ್ಹ ಡೇಟಾವನ್ನು ಬಳಸಿಕೊಳ್ಳುವುದು ಮತ್ತು ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ ಮತ್ತು ರಿಮೋಟ್ ಸೆನ್ಸಿಂಗ್ ನಂತಹ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸುವುದು, ವಿತರಣಾ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿಸಲು ರೈತರು ಮತ್ತು ಪಾಲುದಾರರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ:
i ರೈತರು ತಮ್ಮನ್ನು ಡಿಜಿಟಲ್ ಮೂಲಕ ಗುರುತಿಸಲು ಮತ್ತು ಪ್ರಯೋಜನಗಳನ್ನು ಮತ್ತು ಸೇವೆಗಳನ್ನು ಪ್ರವೇಶಿಸಲು ದೃಢೀಕರಿಸಲು ಸಾಧ್ಯವಾಗುತ್ತದೆ, ತೊಡಕಿನ ದಾಖಲೆಗಳನ್ನು ತೊಡೆದುಹಾಕುತ್ತದೆ ಮತ್ತು ದೈಹಿಕವಾಗಿ ವಿವಿಧ ಕಚೇರಿಗಳು ಅಥವಾ ಸೇವಾ ಪೂರೈಕೆದಾರರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಕೆಲವು ಉದಾಹರಣೆಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಬೆಳೆ ಸಾಲಗಳನ್ನು ಪಡೆಯುವುದು, ಕೃಷಿ-ಸಲಕರಣೆಗಳ (ಇನ್‌ಪುಟ್) ಪೂರೈಕೆದಾರರು ಮತ್ತು ಕೃಷಿ ಉತ್ಪನ್ನಗಳ ಖರೀದಿದಾರರಿಗೆ ಸಂಪರ್ಕ ಕಲ್ಪಿಸುವುದು, ನೈಜ ಸಮಯದಲ್ಲಿ ವೈಯಕ್ತಿಕಗೊಳಿಸಿದ ಸಲಹೆಗಳನ್ನು ಪ್ರವೇಶಿಸುವುದು ಇತ್ಯಾದಿ.
ii ವಿಶ್ವಾಸಾರ್ಹ ಡೇಟಾವು ಸರ್ಕಾರಿ ಏಜೆನ್ಸಿಗಳು ಯೋಜನೆಗಳು ಮತ್ತು ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮತ್ತು ಪಾರದರ್ಶಕವಾಗಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ಕಾಗದರಹಿತ ಎಂ ಎಸ್ ಪಿ ಆಧಾರಿತ ಸಂಗ್ರಹಣೆ, ಬೆಳೆ ವಿಮೆ ಮತ್ತು ಕ್ರೆಡಿಟ್ ಕಾರ್ಡ್-ಸಂಯೋಜಿತ ಬೆಳೆ ಸಾಲಗಳು ಮತ್ತು ರಸಗೊಬ್ಬರಗಳನ್ನು ಅಭಿವೃದ್ಧಿಪಡಿಸುವ ವ್ಯವಸ್ಥೆಗಳು ಇತ್ಯಾದಿ. ಇದಲ್ಲದೆ, 'ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ ಆಧಾರಿತ ಇಳುವರಿ' ಮತ್ತು ರಿಮೋಟ್ ಸೆನ್ಸಿಂಗ್ ದತ್ತಾಂಶದೊಂದಿಗೆ 'ಬೆಳೆ ಬಿತ್ತಿದ ಪ್ರದೇಶದ ಡಿಜಿಟಲ್ ಡೇಟಾ' ಬೆಳೆ ಇಳುವರಿಯನ್ನು ನಿಖರವಾಗಿ ಅಂದಾಜು ಮಾಡಲು ಸಹಾಯ ಮಾಡುತ್ತದೆ. ಇದು ಬೆಳೆ ವೈವಿಧ್ಯೀಕರಣವನ್ನು ಸುಲಭಗೊಳಿಸಲು ಮತ್ತು ಬೆಳೆ ಮತ್ತು ಋತುವಿನ ಪ್ರಕಾರ ನೀರಾವರಿ ಅಗತ್ಯಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
iii ಕೃಷಿ-ಡಿ ಎಸ್ ಎಸ್ ನಲ್ಲಿ ಲಭ್ಯವಿರುವ ಮಾಹಿತಿಯು ಬೆಳೆ ಬಿತ್ತಿದ ಮಾದರಿಗಳನ್ನು ಗುರುತಿಸಲು, ಬರ/ಪ್ರವಾಹದ ಮೇಲ್ವಿಚಾರಣೆ ಮತ್ತು ತಂತ್ರಜ್ಞಾನ/ಮಾದರಿ ಆಧಾರಿತ ಇಳುವರಿ ಮೌಲ್ಯಮಾಪನಕ್ಕಾಗಿ ರೈತರಿಂದ ಬೆಳೆ ವಿಮೆ ಕ್ಲೈಮ್ ಗಳನ್ನು ಇತ್ಯರ್ಥಗೊಳಿಸಲು ಬೆಳೆ ನಕ್ಷೆ ಉತ್ಪಾದನೆಯನ್ನು ಬೆಂಬಲಿಸುತ್ತದೆ.
iv ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಕೃಷಿ ಪೂರಕ ವ್ಯವಸ್ಥೆಯ ಭಾಗೀದಾರರಿಗೆ ಕೃಷಿ ಒಳಹರಿವು ಮತ್ತು ಕೊಯ್ಲಿನ ನಂತರದ ಪ್ರಕ್ರಿಯೆಗಳಿಗೆ ಸಮರ್ಥ ಮೌಲ್ಯ ಸರಪಳಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ, ಜೊತೆಗೆ ರೈತರಿಗೆ ಬೆಳೆ ಯೋಜನೆ, ಬೆಳೆಗೆ ಸಂಬಂಧಿಸಿದ ಕಸ್ಟಮೈಸ್ ಮಾಡಿದ ಸಲಹಾ ಸೇವೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ. ಆರೋಗ್ಯ, ಕೀಟ ಮತ್ತು ರೋಗ ನಿರ್ವಹಣೆ ಮತ್ತು ನೀರಾವರಿ ಅಗತ್ಯತೆಗಳು, ನಮ್ಮ ರೈತರು ಅತ್ಯುತ್ತಮವಾದ ಮತ್ತು ಸಮಯೋಚಿತ ಮಾರ್ಗದರ್ಶನ ಮತ್ತು ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ.
*****
(Release ID: 2051184)
Visitor Counter : 44