ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಡೆಹ್ರಾಡೂನ್‌ನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜಿನಲ್ಲಿ ಉಪರಾಷ್ಟ್ರಪತಿಗಳ ಭಾಷಣ

प्रविष्टि तिथि: 01 SEP 2024 1:19PM by PIB Bengaluru

ಎಲ್ಲರಿಗೂ ಶುಭೋದಯ,

ಆರು ದಶಕಗಳ ಹಿಂದೆ ನಾನು ಚಿತ್ತೋರ್‌ಗಢದ ಸೈನಿಕ ಶಾಲೆಗೆ ಸೇರಿಸಿದಾಗಿನ ನೆನಪು ಮರುಕಳಿಸಿದೆ. ನಿಮ್ಮಿಂದಾಗಿ ನಾನು ಈಗ ಇಲ್ಲಿದ್ದೇನೆ. ನಾನೂ ಕೂಡ ಅರವತ್ತು ವರ್ಷಗಳ ಹಿಂದೆ ನಿಮ್ಮಂತೆಯೇ ಒಬ್ಬನಾಗಿದ್ದೆ. ಝುಂಝುನು ಜಿಲ್ಲೆಯ ಕಿತಾನ ಗ್ರಾಮದಲ್ಲಿ ನಾನು ಜನಿಸಿದೆನಾದರೂ ನನಗೆ ನಿಜವಾದ ಜನ್ಮ ನೀಡಿದ್ದು ಚಿತ್ತೋರಗಢದ ಸೈನಿಕ ಶಾಲೆ. 

ನಾನು ಇಂದು ಏನಾಗಿರುವೆನೋ ಅದೆಲ್ಲದಕ್ಕೂ ನನ್ನ ಪೋಷಕರು, ಅಜ್ಜ-ಅಜ್ಜಿಯರು, ನನ್ನ ಶಿಕ್ಷಕರು ಮತ್ತು ಮುಖ್ಯವಾಗಿ ನಾನು ಕಲಿತ ಶಾಲೆ ಕಾರಣವಾಗಿದೆ. ಆ ಸಂಪರ್ಕವು ಅಮರ ಮತ್ತು ನಾನು ನನ್ನನ್ನು ರೂಪಿಸಿದವರನ್ನು ಭೇಟಿಯಾದಾಗ ನನ್ನ ಗಮ್ಯ ಸ್ಥಾನ ತಲುಪುವಿಕೆ ಮುಂದುವರಿಯುವುದು ನನಗೆ ಖಾತರಿಯಾಗಿದೆ. ಇಲ್ಲಿರುವ ಬಾಲಕ, ಬಾಲಕಿಯರೇ ಈ ಸಂಪರ್ಕ ನಿಮಗೂ ನಿರಂತರವಾಗಿರಲಿದೆ. ನೀವು ಜೀವನದುದ್ದಕ್ಕೂ ಆಸ್ವಾದಿಸಬಲ್ಲುದನ್ನು ಇಲ್ಲಿಂದ ಪಡೆಯುವಿರಿ.

ಪ್ರತಿಯೊಬ್ಬ ವಿದ್ಯಾರ್ಥಿಯೂ 'ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದಲ್ಲಿ ತೊಡಗಿಕೊಳ್ಳುವುದನ್ನು ಖಾತರಿಪಡಿಸುವಂತೆ ನಾನು ಕಮಾಂಡಂಟ್ ಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಮತ್ತು ಅವರು ತಮ್ಮ ತವರು ನೆಲಕ್ಕೂ ಈ ಸಂದೇಶ ರವಾನಿಸುವಂತಾಗಲಿ. ಮಾನ್ಯ ಪ್ರಧಾನಮಂತ್ರಿಗಳ  ಕರೆಯು ಅರ್ಥಪೂರ್ಣವಾಗಿದ್ದು, ಹವಾಮಾನ ಬದಲಾವಣೆಯ ಪಿಡುಗಿನ ವಿರುದ್ಧದ ಕ್ರಮವಾಗಿದೆ ಮತ್ತು ನಾವು ಜೀವಿಸಲು ಇನ್ನೊಂದು ಗ್ರಹ ಇಲ್ಲದಿರುವುದರಿಂದ ನಾವು ವಾಸಿಸುತ್ತಿರುವ ಪ್ರದೇಶದ ಮಹತ್ವವನ್ನು ನಾನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ.

ನೂರು ವರ್ಷಗಳಷ್ಟು ಹಳೆಯದಾದ ವಿಶಿಷ್ಟ ಸಂಸ್ಥೆಯಲ್ಲಿ ಇಂದು ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಒಂದು ವಿಶೇಷ ಸಂದರ್ಭವಾಗಿದೆ ಮತ್ತು ನಾನು ಅದನ್ನು ನನ್ನ ಜೀವನದುದ್ದಕ್ಕೂ ಮೆಲುಕು ಹಾಕುತ್ತೇನೆ. 

1922 ರ ಸಂಸ್ಥಾಪನಾ ವರ್ಷದಲ್ಲಿ ವೇಲ್ಸ್ ದೊರೆ ಅವರು ಮೊದಲ ಮೂವತ್ತೇಳು ಕೆಡೆಟ್‌ಗಳನ್ನು ಉದ್ದೇಶಿಸಿ ಮಾಡಿದ ಭಾಷಣವು ಸಂಸ್ಥೆಯ ಅಡಿಪಾಯವನ್ನು ಸಾರಿತು. “ಜೀವನದ ಯುದ್ಧಗಳಲ್ಲಿ ಹೋರಾಡಲು ಇದು ಮಾನವನಿಗೆ ಅಡಿಪಾಯವನ್ನು ಸಿದ್ಧಪಡಿಸುವ ಮೊದಲ ಕೆಲವು ಹೊಡೆತಗಳು” ಎಂಬುದು ಅವರ ಮಾತುಗಳಲ್ಲಿ ಪ್ರತಿಫಲಿತವಾಗಿತ್ತು. 

ಈ ಆವರಣದಲ್ಲಿನ ಜೀವನದ ಮೊದಲ ಕೆಲವು ಹೊಡೆತಳು ನಿಮ್ಮ ಪ್ರಗತಿಯನ್ನು ವ್ಯಾಖ್ಯಾನಿಸಿವೆ ಮತ್ತು ಸಂಸ್ಥೆಗೆ ಖ್ಯಾತಿ ಮತ್ತು ಹೆಸರನ್ನು ತಂದಿವೆ. 

ಭಾರತೀಯ ಸಂಪ್ರದಾಯವಾದ ಗುರು ಶಿಷ್ಯ ಪರಂಪರೆಗೆ  ರಾಜಕುಮಾರ ಗೌರವ ಸಲ್ಲಿಸಿದ್ದರು ಎಂಬುದು ಕುತೂಹಲಕಾರಿಯಾಗಿ ಮತ್ತು ಆಪ್ಯಾಯಮಾನ ಸಂಗತಿಯಾಗಿದೆ. ನಮ್ಮ ನಾಗರಿಕತೆಯ ನೀತಿ ಮತ್ತು ಮೌಲ್ಯವು ಎಲ್ಲರ ಗಮನ ಸೆಳೆದಿತ್ತು ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ಈಗ, ಸಹಜವಾಗಿ, ಇದು ಜಾಗತಿಕ ಆಕರ್ಷಣೆಯಾಗಿದೆ, ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದಗಳು.

ಈ ಪ್ರತಿಷ್ಠಿತ ಗೌರವಯುತ ಮಿಲಿಟರಿ ಅಕಾಡೆಮಿಯ ಉಪಕ್ರಮವು ರಕ್ಷಣಾ ಸೇವೆಗಳಲ್ಲಿ ಬ್ರಿಟಿಷರೊಂದಿಗೆ ಭಾರತೀಯರ ಸಮಾನತೆಯ ಬೇಡಿಕೆಯನ್ನು ಕೆರಳಿಸಿತು.

ಬ್ರಿಟಿಷ್-ಭಾರತೀಯ ಸೈನ್ಯದಲ್ಲಿ ಅಧಿಕಾರಿಗಳಾಗಿ ಬಡ್ತಿಯನ್ನು ಪಡೆದುಕೊಳ್ಳಲು ಮೂಲಭೂತವಾಗಿ ಈ ಬೇಡಿಕೆ ಇಡಲಾಗಿತ್ತು. ಸುಮಾರು 200 ವರ್ಷಗಳಿಂದ ನಿರಾಕರಿಸಲ್ಪಟ್ಟ ಸವಲತ್ತು ಮತ್ತು ಬ್ರಿಟಿಷರಿಗೆ ವಿಶೇಷವಾಗಿ ಈ ಅಧಿಕಾರ ಮೀಸಲಿಡಲಾಗಿತ್ತು.

ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ಕೂಡ ಇದ್ದ ರಾಷ್ಟ್ರೀಯತೆ ಮತ್ತು ಸಮಾನತೆಯ ಉತ್ಸಾಹವನ್ನು ಈ ಸಂಸ್ಥೆಯ ವಿಕಾಸನವು ಒತ್ತಿಹೇಳುತ್ತದೆ.

ಭಾರತೀಯರ ಮನಸ್ಸಿನಲ್ಲಿನ ರಾಷ್ಟ್ರೀಯತೆಯ ಕಿಚ್ಚು ಈ ಸಂಸ್ಥೆಯ ಬೆಸುಗೆಗೆ ಕಾರಣವಾಯಿತು. ಅದರ ಶತಮಾನೋತ್ಸವ ವರ್ಷದಲ್ಲಿ ಜುಲೈ 2022 ರಲ್ಲಿ ಸೈನಿಕ ಶಾಲೆಗಳು ಮತ್ತು ಮಿಲಿಟರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ನಾನು ಚಿತ್ತೋರ್‌ಗಢದ ಸೈನಿಕ ಶಾಲೆಯ ವಿದ್ಯಾರ್ಥಿಯೇ ಆಗಿದ್ದು, ಈ ನಡೆಯು ದೇಶದಲ್ಲಿ ಬದಲಾವಣೆಗೆ ಅಡಿಪಾಯವಾಗಿದೆ ಮತ್ತು ಪ್ರಸ್ತುತದ ಚಿತ್ರಣದ ಪ್ರತಿಬಿಂಬವಾಗಿದೆ.

ನನ್ನ ಯುವ ಸ್ನೇಹಿತರೇ, ಈ ಎರಡೂ, ಒಂದರ್ಥದಲ್ಲಿ, ಇದೇ ರೀತಿಯ ಉದ್ದೇಶವನ್ನು ಹೊಂದಿವೆ. ಹೆಣ್ಣು ಮಕ್ಕಳ ಸೇರ್ಪಡೆ ಎಂದರೆ ಅಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನದ ಮೂಲ ಆಶಯವನ್ನು ಸ್ಥಾಪಿಸುವುದಾಗಿದೆ. 

ನನ್ನ ಯುವ ಮಿತ್ರರೇ, ಜಾಗತಿಕ ನಾಗರಿಕ ಪೈಲಟ್ ಗಳಾಗಿ ಭಾರತದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಹೆಣ್ಣು ಮಕ್ಕಳು ಯುದ್ಧ ವಿಮಾನಗಳನ್ನು ಚಲಾಯಿಸುತ್ತಿದ್ದಾರೆ, ಅವರು ಬಾಹ್ಯಾಕಾಶ ಕಾರ್ಯಾಚರಣೆಗಳ ಮುಂಚೂಣಿಯಲ್ಲಿದ್ದಾರೆ. ನನಗಾಗಿ ಎಂತಹ ಕ್ಷಣ, 48 ಗಂಟೆಯೊಳಗೆ, ಹೆಣ್ಣು ಮಗಳು, ಹೆಸರು ಕ್ಲಿಷ್ಟಕರ, ನನ್ನ ಚಿತ್ರ ನೀಡಿದ್ದು ಅದು ಅಧಿಕೃತವಾಗಿದೆ. 

ಸ್ನೇಹಿತರೇ, ಈ ವರ್ಷದ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಮ್ಮ ನಾರಿ ಶಕ್ತಿ ಅನಾವರಣಗೊಂಡಿದ್ದನ್ನು ರಾಷ್ಟ್ರ ವೀಕ್ಷಿಸಿದೆ. ಅದು ಅತ್ಯದ್ಭುತವಾಗಿತ್ತು. ಜೀವನದ ಪ್ರತಿಯೊಂದು ಹಂತದಲ್ಲೂ, ಈ ಲಿಂಗ ಪ್ರಾಬಲ್ಯತೆ ಕಂಡುಬಂದಿದೆ. ಜೀವನದ ಎಲ್ಲಾ ಹಂತಗಳಲ್ಲೂ ನಾರಿ-ಶಕ್ತಿ ಜೀವನದ ಪರಿಣಾಮಕಾರಿ ಕೊಡುಗೆಗಳನ್ನು ನೀಡುತ್ತಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕಷ್ಟು ಪುರಾವೆ ಒದಗಿಸಿತು. ಇಂತಹ ಅದ್ಭುತ ಕೊಡುಗೆಗಳೊಂದಿಗೆ 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ.

ಈ ಯುಗದ ಮೈಲಿಗಲ್ಲಿನ ಘಟನೆ ನಡೆದಾಗ ನನಗೆ ರಾಜ್ಯಸಭೆಯ ಅಧ್ಯಕ್ಷನಾಗುವ ಸೌಭಾಗ್ಯ ದೊರೆತಿತ್ತು. ಸತತ ಪ್ರಯತ್ನದ ನಡುವೆಯೂ ಮೂರು ದಶಕಗಳ ಕಾಲ ಸಿಗದಿದ್ದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಮೀಸಲಾತಿ, ಖಂಡಿತವಾಗಿಯೂ ಕ್ರಾಂತಿಕಾರಕ ಬದಲಾವಣೆ ತರಲಿದೆ.

ಯುವ ಹುಡುಗರು ಮತ್ತು ಹುಡುಗಿಯರೇ, ನಿಮ್ಮ ಸ್ಫೂರ್ತಿಯೇ ಜೀವಾಳವಾಗಿ ರಕ್ಷಣಾ ಪೋಷಕ ಸಂಸ್ಥೆಗಳಾದ ಅನೇಕ ರಿಮ್ಕೊಲಿಯನ್ ಗಳು ವಿವಿಧ ಕ್ಷೇತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ರಕ್ಷಣಾ ಸೇವೆಗಳಲ್ಲಿ, ಉತ್ತುಂಗವನ್ನು ತಲುಪಿವೆ,

ದಿವಂಗತ ಜನರಲ್ ಬಿಪಿನ್ ರಾವತ್, ಖ್ಯಾತ ರಿಮ್ಕೊಲಿಯನ್ ಅವರು ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಎಂಬ ಗೌರವವನ್ನು ಪಡೆದರು. ಅವರು ಈ ನೆಲದವರು.
ದೇಶ ಸೇವೆಗಾಗಿ ಯುವ ಮನಸ್ಸುಗಳನ್ನು ಪೋಷಿಸಲು ಮತ್ತು ಅರಳಿಸಲು ಶ್ರೇಷ್ಠತಾ ಸಂಸ್ಥೆಯಾದ ಆರ್ ಐ ಎಂ ಸಿ, ರಾಷ್ಟ್ರದ ಆಸ್ತಿಯಾಗಿದೆ. ಇಲ್ಲಿ ನಿಗದಿಪಡಿಸಿರುವ ಮಾನದಂಡಗಳು ಇಂತಹ ಇತರ ಸಂಸ್ಥೆಗಳಿಗೆ ಮಾದರಿಯಾಗಿವೆ.

1972ರಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ವಿ.ವಿ.ಯವರು ಆರ್‌ಐಎಂಸಿ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹೇಳಿದ ವಿವೇಕದ ಮಾತುಗಳನ್ನು ನನ್ನ ಯುವ ಸ್ನೇಹಿತರಿಗೆ ನೆನಪಿಸುತ್ತೇನೆ. ಅವರು ತಮ್ಮ ಭಾಷಣದಲ್ಲಿ :

“ಯುವ ಕೆಡೆಟ್‌ಗಳೇ, ಇದು ನಿಮ್ಮ ಜೀವನದ ಅತ್ಯಂತ ರಚನಾತ್ಮಕ ಮತ್ತು ಲಾಭದಾಯಕ ಅವಧಿಯಾಗಿದೆ ಹಾಗೂ ದೇಶದ ಸ್ವಾವಲಂಬಿ ಮತ್ತು ವಿಶ್ವಾಸಾರ್ಹ ಸೈನಿಕರಾಗಲು ನಿಮ್ಮ ಸಕಲ ಪರಿಶ್ರಮ ಅಗತ್ಯವಾಗಿದ್ದು ಆ ಮೂಲಕ ನಾವು ನಿಮ್ಮ ಮೇಲಿಟ್ಟಿರುವ ಭರವಸೆಗಳನ್ನು ಈಡೇರಿಸಬೇಕು. ನಿಮ್ಮ ಕಾಲೇಜಿನ ಧ್ಯೇಯ ವಾಕ್ಯಕ್ಕೆ ತಕ್ಕಂತೆ ನೀವು ನಡೆದುಕೊಳ್ಳಬೇಕು- ಬಲ ವಿವೇಕ- ಅಂದರೆ ಜೀವನದ ಯುದ್ಧದಲ್ಲಿ ಹೋರಾಡಲು ನೀವು ನಿಮ್ಮಲ್ಲಿ ಶಕ್ತಿ ಮತ್ತು ಯುಕ್ತಿ ಇರಬೇಕು. ಕಷ್ಟಪಟ್ಟು ಕೆಲಸ ಮಾಡಿ, ನಮ್ಮ ಸಶಸ್ತ್ರ ಪಡೆಗಳ ಸಂಪ್ರದಾಯವನ್ನು ಕಾಪಾಡಿ, ನಮ್ಮ ದೇಶವನ್ನು ಬಲಪಡಿಸುತ್ತಾ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ದೇಶದ ಗೌರವವನ್ನು ಕಾಪಾಡಿ.”

ಅವರ ಮಾತುಗಳು ಈ ಪ್ರತಿಷ್ಠಿತ ಸಂಸ್ಥೆಯು ಪ್ರತಿ ಕೆಡೆಟ್‌ನಲ್ಲೂ ಈ ಶಾಶ್ವತವಾದ ಮೌಲ್ಯಗಳು ಮತ್ತು ತತ್ವಗಳೊಂದಿಗೆ ಅನುರಣಿಸುತ್ತದೆ.

ನಿಮ್ಮ ಭವಿಷ್ಯದ ಹೊಸ್ತಿಲಲ್ಲಿ ನೀವು ನಿಂತಿರುವಾಗ, ಈ ವಿವೇಕದ ಮಾತುಗಳು ನಿಮ್ಮ ಮುಂದಿರುವ ಸವಾಲುಗಳು ಮತ್ತು ಅವಕಾಶಗಳನ್ನು ಅಪ್ಪಿಕೊಳ್ಳುತ್ತಾ ನಿಮ್ಮ ಮುಂದಿನ ದಾರಿಯನ್ನು ಬೆಳಗಿಸಲಿ. ದಿನದಿಂದ ದಿನಕ್ಕೆ ಅವಕಾಶಗಳು ಹೆಚ್ಚುತ್ತಿದೆ ಮತ್ತು ಜಗತ್ತು ಅದನ್ನು ಗುರುತಿಸಿದೆ.

ದಿವಂಗತ ವಿ.ವಿ. ಗಿರಿ ಅವರ ಮಾತುಗಳು ಸದಾ ನಿಮ್ಮ ಕಿವಿಯಲ್ಲಿ ಅನುರಣಿಸುತ್ತಿರಬೇಕು ಮತ್ತು ಸವಾಲುಗಳ ನಡುವೆಯೂ ಶ್ರೇಷ್ಠತೆ ಮತ್ತು ದೀಪಸ್ತಂಭದ ಹುಡುಕಾಟದಲ್ಲಿ ನೀವು ಸ್ಥಿರವಾಗಿ ಮಾರ್ಗದರ್ಶಕರಾಗಬೇಕು.

ದೇಶ ಸೇವೆಗಾಗಿ ಬದ್ಧ ನಾಯಕರು ಮತ್ತು ದೇಶಭಕ್ತರನ್ನು ರೂಪಿಸಿದ ಆರ್ ಐ ಎಂ ಸಿಯ RIMC ಸ್ಥಿರತೆಯನ್ನು ಈ ಮಾತುಗಳು ಒತ್ತಿಹೇಳುತ್ತವೆ, ಕೇವಲ ಪುಸ್ತಕ ವಿದ್ಯೆಯನ್ನು ಪಸರಿಸುವುದು ಅಥವಾ ಮಗುವನ್ನು ಸಾಕ್ಷರರನ್ನಾಗಿ ಮತ್ತು ದೈಹಿಕವಾಗಿ ಸಮರ್ಥವಾಗಿಸುವುದು ಮಾತ್ರ ಶಾಲೆಯ ಮಹತ್ವದ ಕಾರ್ಯವಲ್ಲ. ಶಾಲೆಯು ಅದರಲ್ಲೂ ಆರ್ ಐ ಎಂ ಸಿ ಯಂತಹ ವಸತಿ ಸಾಲೆಗಳು, ಮಗುವಿಗೆ ಜೀವನದ ಒಟ್ಟು ಅನುಭವವನ್ನು ನೀಡಬೇಕು. ಇದು ಆರ್ ಐ ಎಂ ಸಿಯ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಭಾಷಣದಲ್ಲಿ ಪ್ರತಿಧ್ವನಿಸಿತ್ತು. ಈ ನಿಜಕ್ಕೂ ಆರ್ ಐ ಎಂ ಸಿ ಗೆ ಪ್ರಶಂಸೆಯೇ ಸರಿ.

ಮಾನ್ಯ ಲೆಫ್ಟಿನೆಂಟ್ ಗವರ್ನರ್ ಜನರಲ್ ಗುರ್ಮೀತ್ ಸಿಂಗ್, ಸ್ವತಃ ಸಮವಸ್ತ್ರದಲ್ಲಿರುವ ವ್ಯಕ್ತಿಯಾಗಿದ್ದು, 2022 ರ ಅವರ ಶತಮಾನೋತ್ಸವ ಭಾಷಣದಲ್ಲಿ ಸ್ಪೂರ್ತಿದಾಯಕವಾಗಿತ್ತು.  ಪ್ರತಿ ಕೆಡೆಟ್ ಮತ್ತು ರಿಮ್‌ಕಾಲಿಯನ್‌ನಲ್ಲಿ ಬೇರೂರಿರುವ ಸೇವಾ ಮನೋಭಾವವನ್ನು ಅವರು ಕೊಂಡಾಡಿದರು.

ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತಾ ಈ ವಿಶಿಷ್ಟ ಸಂಸ್ಥೆಯು ಯುವಜನರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ತುಂಬಲು ಚಿಂತಕರ ಚಾವಡಿಯಾಗಿ ಕಾರ್ಯನಿರ್ವಹಿಸಲು ಮತ್ತು ರಾಷ್ಟ್ರ ವಿರೋಧಿ ವಿನಾಶಕಗಳನ್ನು ತಟಸ್ಥಗೊಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಪ್ರಖ್ಯಾತ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಆಗ್ರಹಿಸುತ್ತೇನೆ. ಈ ಸಂದೇಶಕ್ಕೆ ರಿಮ್‌ಕಾಲಿಯನ್‌ಗಳು ಬ್ರಾಂಡ್ ರಾಯಭಾರಿಗಳಾಗಿದ್ದು ನಾವೆಲ್ಲರೂ ಸೂಕ್ತವಲ್ಲದ ರಾಷ್ಟ್ರೀಯತೆಯ ಅನ್ವೇಷಣೆಯಲ್ಲಿದ್ದೇವೆ. ಇದು ನಮ್ಮ ಜನಸಂಖ್ಯಾ ಭದ್ರಕೋಟೆಯಾದ ಯುವಕರಿಗೆ ವಿಶೇಷವಾಗಿ ಅತ್ಯಾಧುನಿಕತೆಯನ್ನು ನೀಡುತ್ತದೆ. ನಮ್ಮ ವಯೋಮಾನ ಆಧಾರಿತ ಜನಸಂಖ್ಯೆಯು ನನ್ನ ವಯೋಮಾನದವರು ಕಾಣದ ಕನಸಿಗೆ ಸೋಪಾನವಾಗಿದ್ದು, ವಿಶ್ವದಲ್ಲಿ ಅಸಾಧಾರಣ ಪ್ರಗತಿಯಾಗಿ ಹೊರಹೊಮ್ಮಿದ್ದು, ಅದು ಈ ರಾಷ್ಟ್ರವು ಎಲ್ಲಾ ಜಾಗತಿಕ ಸಂಸ್ಥೆಗಳಿಂದ ಪುರಸ್ಕಾರಗಳನ್ನು ಗಳಿಸುವಂತೆ ಮಾಡುತ್ತಿದೆ ಹಾಗೂ ನಮ್ಮ ಆರ್ಥಿಕ ಉನ್ನತಿ ಮತ್ತು ಅಭ್ಯುದಯವನ್ನು ಖಚಿತಪಡಿಸುತ್ತಿದೆ.

ನನ್ನ ಯುವ ಮಿತ್ರರೇ, ಈ ಸುಪ್ರಸಿದ್ಧ ಪರಂಪರೆಯ ಜ್ಯೋತಿಯನ್ನು ಆರ್ ಐ ಎಂ ಸಿಯ ಕೆಡೆಟ್‌ಗಳಾಗಿ, ನೀವು ಹೊರಬೇಕು. ಇಷ್ಟು ವರ್ಷಗಳಲ್ಲಿ ಗಳಿಸಿದ ಮತ್ತು ಅರ್ಹವಾದ ಪರಂಪರೆ ಇದು. ನೀವು ಇಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳು, ನೀವು ಪಡೆಯುವ ತರಬೇತಿ ಮತ್ತು ನಿಮ್ಮ ಬಂಧಗಳು ನಿಮ್ಮನ್ನು ಅತ್ಯುನ್ನತ ದೇಶಪ್ರೇಮಿಯಾಗಿ ರೂಪಿಸುತ್ತವೆ.

ನನ್ನ ಪ್ರೀತಿಯ ಯುವ ಕೆಡೆಟ್‌ಗಳೇ, ನಿಮ್ಮ ನಿಮ್ಮ ಪಯಣಗಳಲ್ಲಿ - ವೈಯಕ್ತಿಕ ಮತ್ತು ವೃತ್ತಿಪರ ಎರಡರಲ್ಲೂ, ನಿಮ್ಮನ್ನು ಪರೀಕ್ಷಿಸುವ ಕ್ಷಣಗಳನ್ನು ನೀವು ಎದುರಿಸುವಿರಿ. ನಿಮ್ಮ ತಾಳ್ಮೆಯು ಕ್ಷೀಣಿಸುವ ಸಂಭವವೂ ಇರುತ್ತದೆ ಮತ್ತು ನೀವು ಬಳಲಬಹುದು. 

ನೀವು ಪ್ರತಿಯೊಬ್ಬರೂ ನಿಮ್ಮ ನಿಮ್ಮ ಯುದ್ಧಗಳನ್ನು ಎದುರಿಸುವಿರಿ, ಇಲ್ಲಿ ತರಬೇತಿಯಲ್ಲಿ ಮತ್ತು ಮುಂದಿನ ವರ್ಷಗಳಲ್ಲಿ, ನೆನಪಿಡಿ ಯಾರು ದೈರ್ಯವಾಗಿ ನಿಂತು ಮುನ್ನಡೆಯುವರೋ ಮತ್ತು ಸವಾಲುಗಳನ್ನು, ಅಪಾಯಗಳನ್ನು ಎದುರಿಸುವರೋ ಅಂತಹವರು ಧೈರ್ಯ, ಉಪಕ್ರಮ ಮತ್ತು ನಾಯಕತ್ವವನ್ನು ಪ್ರತಿನಿಧಿಸುವರು!

ಇದು ಕೇವಲ ಮಾತಲ್ಲ ಆದರೆ ಜೀವನ ಪ್ರಗತಿಯ ಮೂಲಭೂತ ಸತ್ಯ ಎಂಬುದನ್ನು ನೀವು ಕ್ರಮೇಣವಾಗಿ ಅರ್ಥಮಾಡಿಕೊಳ್ಳುವಿರಿ. ನೀವು ಇಲ್ಲಿ ರೂಢಿಸಿಕೊಳ್ಳುವ ಶಿಸ್ತು ಮತ್ತು ಸ್ಥಿತಿಸ್ಥಾಪಕತ್ವವು ಮುಂದಿನ ಪ್ರತಿಯೊಂದು ಯುದ್ಧದಲ್ಲೂ ನಿಮಗೆ ರಕ್ಷಾಕವಚವಾಗಿರುತ್ತದೆ. ತಂತ್ರಜ್ಞಾನದ ನಿರಂತರ ಅನ್ವೇಷಣೆಯೊಂದಿಗೆ ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶದ ಬುಟ್ಟಿ ದಿನದಿಂದ ದಿನಕ್ಕೆ ವಿಸ್ತರಿಸಲ್ಪಡುತ್ತಿದೆ.

ನನ್ನ ಯುವ ಸ್ನೇಹಿತರೇ- ಈ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿರುವ ನೀವು ನಿಜಕ್ಕೂ ಅದೃಷ್ಟವಂತರು. ನಮ್ಮ ಕಾಲದ ಸವಾಲಿನ ಸಮಯಕ್ಕಿಂತ ಭಿನ್ನವಾಗಿ, ನೀವು ಕಾನೂನಿನ ಮುಂದೆ ಸಮಾನತೆ, ಸವಲತ್ತುಗಳೊಂದಿಗೆ ಹೊಣೆಗಾರರನ್ನಾಗಿಸಬಹುದಾದ ವ್ಯವಸ್ಥೆಯನ್ನು ಖಾತರಿಪಡಿಸುವ ಫಲಾನುಭವಿಗಳಾಗಿದ್ದೀರಿ. ಈಗ ಎಲ್ಲರೂ ಕಾನೂನಿಗೆ ಬದ್ಧರಾಗಿದ್ದಾರೆ, ಇದು ನನಗೆ "ನೀವು ಎಷ್ಟಾದರೂ ಎತ್ತರದಲ್ಲಿರಿ, ಕಾನೂನು ಯಾವಾಗಲೂ ನಿಮ್ಮ ಮೇಲಿರುತ್ತದೆ" ಎಂಬ ಮಾತನ್ನು ನೆನಪಿಸುತ್ತದೆ. 

ಇದನ್ನು ಗ್ರೇಟ್ ಬ್ರಿಟನ್‌ನ ಪ್ರಸಿದ್ಧ ನ್ಯಾಯಾಧೀಶರಲ್ಲಿ ಒಬ್ಬರಾದ ಲಾರ್ಡ್ ಡೆನ್ನಿಂಗ್ ಉಲ್ಲೇಖಿಸಿದ್ದಾರೆ, ಆದರೆ ವಾಸ್ತವವಾಗಿ, ಅವರು 1933 ರಲ್ಲಿ ಡಾ. ಥಾಮಸ್ ಫುಲ್ಲರ್ ಅವರ ಬರಹಗಳಿಂದ ಸ್ಫೂರ್ತಿ ಪಡೆದರು. ಇದರ ಖಾತರಿ ಭಾರತದಲ್ಲಿ, ದೀರ್ಘಕಾಲದಿಂದ ಸಾಧ್ಯವಾಗಿರಲಿಲ್ಲ, ಆದರೆ ಈಗ ಅದು ವಾಸ್ತವವಾಗಿದೆ. ಎಲ್ಲರೂ ಸಮಾನರು ಎಂದಾಗ ಯುವ ಮನಸ್ಸುಗಳಿಗೆ ಯಾವುದೂ ಹೆಚ್ಚು ಅನುಕೂಲಕರ, ಹಿತವಾದ ಮತ್ತು ಹಿತಕರವಾಗಿರಲು ಸಾಧ್ಯವಿಲ್ಲ.

ಅವರು ವಿಶಿಷ್ಟ ವರ್ಗಕ್ಕೆ ಸೇರಿರುವ ಮಾತ್ರ ಅರ್ಹತೆಯನ್ನು ತ್ಯಾಗ ಮಾಡುವ ಮೂಲಕ ಯಾರೂ ಮುಂದೆ ಸಾಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ, ನೀವು ಅತ್ಯಂತ ಪ್ರಮುಖ ಪಾಲುದಾರರು. ಏಕೆಂದರೆ ಭಾರತವು 2047 ರಲ್ಲಿ ವಿಕಸಿತ ಭಾರತದೆಡೆಗೆ ಸಾಗುತ್ತಿರುವಾಗ, ನೀವು ಪ್ರಮುಖ ಸ್ಥಾನದಲ್ಲಿರುವಿರಿ ಮತ್ತು ಪ್ರಗತಿಗೆ ಮಹತ್ತರ ಕೊಡುಗೆ ನೀಡಿರುವಿರಾದ್ದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ.

ನನ್ನ ಯುವ ಸ್ನೇಹಿತರೇ, ಎಂದಿಗೂ ಭಯ, ಒತ್ತಡ ಅಥವಾ ಉದ್ವೇಗದ ಹಿಡಿತದಲ್ಲಿರಬೇಡಿ ಎಂದು ನಾನು ನಿಮಗೆ ಕಿವಿಮಾತು ಹೇಳುತ್ತಿದ್ದೇನೆ. ಭಯವು ಪ್ರಗತಿಯ ಅತಿದುಷ್ಟ ಕೊಲೆಗಾರ, ಭಯವು ನಮ್ಮಿಂದ ಉಪಕ್ರಮವನ್ನು ಕಸಿದುಕೊಳ್ಳುತ್ತದೆ, ನಾವು ಆತ್ಮವಿಶ್ವಾಸದಿಂದಿರಬೇಕಾದ ಸಮಯದಲ್ಲಿ ಭಯವು ನಮ್ಮನ್ನು ಅನಿಶ್ಚಿತಗೊಳಿಸುತ್ತದೆ. ನನ್ನ ಮಾತನ್ನು ನೆನಪಿಡಿ, ಭಯ ಸಾಮಾನ್ಯವಾಗಿ ಇರುವುದಿಲ್ಲ. ಭಯಕ್ಕೆ ಹೆಚ್ಚಿನ ಆಯಾಮಗಳನ್ನು ನೀಡುವ ಪ್ರವೃತ್ತಿಯನ್ನು ನಾವು ಹೊಂದಿದ್ದೇವೆ. ನೀವು ಭಯವನ್ನು ತೊಡೆದುಹಾಕಬೇಕು. ಅಡಿಪಾಯವಿಲ್ಲದ ಭಯ ಇರಲಾರದು, ಭಯವನ್ನು ಕುಸಿಯುವ ಮರಳಿನ ಮೇಲೆ ಆಗಾಗ್ಗೆ ಬಿತ್ತಲಾಗುತ್ತದೆ. ವೈಫಲ್ಯಕ್ಕೆ ಎಂದಿಗೂ ಹೆದರಬೇಡಿ. ನಮ್ಮ ಪಯಣದಲ್ಲಿ ವೈಫಲ್ಯಗಳು ಸಹಜ. ವೈಫಲ್ಯಗಳನ್ನು ಹಿನ್ನಡೆ ಎಂದು ಪರಿಗಣಿಸಿದ್ದಲ್ಲಿ ಮತ್ತು ನಿರ್ದಿಷ್ಟ ವಸ್ತುವಿನ ಅನ್ವೇಷಣೆಯಲ್ಲಿ ವಿಫಲವಾದ ಕಾರಣಕ್ಕೆ ಹಿಂದೆ ಸರಿದಿದ್ದಲ್ಲಿ ನಾಗರಿಕತೆಯ ಬೆಳವಣಿಗೆಯಾಗುತ್ತಿರಲಿಲ್ಲ. ಸೋಲನ್ನು ನಾನು ಗಮನಿಸಿದ್ದೇನೆ ಮತ್ತು ಕಳೆದ ಎರಡು ವರ್ಷಗಳನ್ನು ನೀವು ಹಿಂತಿರುಗಿ ನೋಡಿದಾಗ ವೈಫಲ್ಯವು ನಿಮ್ಮ ಯಶಸ್ಸಿನ ಮೆಟ್ಟಿಲಾಗಿರುವುದನ್ನು ನೋಡಬಹುದು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಇದು ಕಾಲ್ಪನಿಕವಾಗಿದೆ. ಸದಾ ನೆನಪಿಡಿ, ಭಯವು ನಮ್ಮ ಬೆಳವಣಿಗೆಯ ಪ್ರಯಾಣದ ಅಗತ್ಯ ಅಂಶವಾಗಿದೆ.

ಈ ಐತಿಹಾಸಿಕ ಚಂದ್ರಯಾನ ಕಾರ್ಯಾಚರಣೆಗಳ ಬಗ್ಗೆ ಚಿಂತಿಸಿ. ಚಂದ್ರಯಾನ 2 ಬಹುಮಟ್ಟಿಗೆ ಯಶಸ್ವಿಯಾಗಿತ್ತು, ಆದರೆ ಸಂಪೂರ್ಣವಾಗಿ ಅಲ್ಲ. ವೈಫಲ್ಯಗಳಲ್ಲಿ ನಂಬಿಕೆಯ ರೋಗವಿರುವವರು ಇದನ್ನು ವೈಫಲ್ಯ ಎಂದು ಕರೆಯುವರೇ ಹೊರತು ಬುದ್ಧಿವಂತರಲ್ಲ. ಇದು ಯಶಸ್ಸಿನತ್ತ ಒಂದು ಹೆಜ್ಜೆಯಾಗಿತ್ತು. ಮತ್ತು ಈ ದೇಶದ ನಾವೆಲ್ಲರೂ 2023ರ ಆಗಸ್ಟ್ 23 ರಂದು ಹರ್ಷದಾಯಕ ಕ್ಷಣವನ್ನು ಕಣ್ತುಂಬಿ ಕೊಂಡಿದ್ದೇವೆ. ಈಗ ಶಾಶ್ವತವಾಗಿ ನಮ್ಮ ಬಾಹ್ಯಾಕಾಶ ದಿನವಾಗಿ ಆಚರಿಸಲ್ಪಡುತ್ತಲಿದೆ. 

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಅನ್ನು ಭಾರತ ಯಶಸ್ಚಿಯಾಗಿ ಇಳಿಸಿದ್ದು ಈ ಸಾಧನೆಯನ್ನು ಮಾಡಿದ ಮೊದಲ ದೇಶವಾಗಿದೆ, ನಮ್ಮ ಮುಂದಿನ ಪೀಳಿಗೆಗೆ ನಾವು ಶಿವಶಕ್ತಿ ಮತ್ತು ತಿರಂಗ ಪಾಯಿಂಟ್ ಅಳಿಸಲಾಗದ ಮುದ್ರೆಯನ್ನು ನೀಡಿದ್ದೇವೆ. ಇಲ್ಲವಾದಲ್ಲಿ ಚಂದ್ರಯಾನ 2 ಮತ್ತು ಚಂದ್ರಯಾನ 3 ಯಶೋಗಾಥೆಗಳಾಗುತ್ತಿರಲಿಲ್ಲ.

ನನ್ನ ಯುವ ಸ್ನೇಹಿತರೇ, ಆಶಾವಾದ ಮತ್ತು ಅನಂತರ ಸಾಧ್ಯತೆಗಳ ಬದಲಾವಣೆಯ ಗಾಳಿ ಬೀಸುತ್ತಿರುವ ಈ ಸಮಯದಲ್ಲಿರುವ ನೀವುಗಳೇ ಧನ್ಯರು. ತಾಂತ್ರಿಕ ಸುಧಾರಣೆಗಳಿಂದ ನಾವು ಪ್ರತಿದಿನವೂ ರೂಪುಗೊಳ್ಳುತ್ತೇವೆ. ಯುವ ಮನಸ್ಸುಗಳು ವಿಚ್ಛಿದ್ರಕಾರಕ ತಂತ್ರಜ್ಞಾನಗಳೊಂದಿಗೆ ಸೆಣಸಾಡಬಹುದಾಗಿದ್ದು, ಅವುಗಳನ್ನು ಅವಕಾಶಗಳಾಗಿ ಮಾರ್ಪಡಿಸುವ ಶಕ್ತಿ ಹೊಂದಿವೆ. 

ಜಾಗತಿಕ ಸಂಸ್ಥೆಗಳಿಂದ ನಮ್ಮ  ಬೆಳವಣಿಗೆಯ ಅಂಶಗಳ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಇಡೀ ವಿಶ್ವ ಪ್ರಗತಿಯನ್ನು ಗುರುತಿಸುತ್ತಿದೆ ಎಂಬುದು ನಿಸ್ಸಂದೇಹ. ಭಾರತ, ಭೂಮಿಯ ಮೇಲಿನ ಅತಿ ದೊಡ್ಡ  ಕಾರ್ಯನಿರ್ವಹಾಕ ಪ್ರಜಾಪ್ರಭುತ್ವಾಗಿದ್ದು, ಅಮಿತೋತ್ಸಾಹದೊಂದಿಗೆ ಮುನ್ನಡೆಯುತ್ತಾ ಜಾಗತಿಕ ನಾಯಕನಾಗಿ ತನ್ನ ಪಾತ್ರವನ್ನು ಅಪ್ಪಿಕೊಂಡಿದೆ. ನಮ್ಮ ಆರ್ಥಿಕ ಪ್ರಗತಿಯು ವಿಶ್ವವನ್ನು ಪರಿವರ್ತಿಸಿದೆ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಎಲ್ಲರೂ ಆಶ್ಚರ್ಯ ಚಕಿತರಾಗಿ ನೋಡುತಿದ್ದಾರೆ. 

1962ರ ಡಿಸೆಂಬರ್  10 ರಂದು ಆರ್ ಐ ಎಂ ಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಮಾಡಿದ ಭಾಷಣದಲ್ಲಿ ಅವರ ವಿವೇಕದ ನುಡಿಮುತ್ತುಗಳನ್ನು ಉಲ್ಲೇಖಿಸುತ್ತಾ ನಾನು ನನ್ನ ಮಾತನ್ನು ಮುಗಿಸುತ್ತೇನೆ. 

“ಪ್ರಾಚೀನ ಗ್ರಂಥಗಳು ನಮಗೆ ‘ವೀರ ಭಾಗ್ಯ ವಸುಂಧರಾ’, ಅಂದರೆ, ಭೂಮಿಯು ಧೈರ್ಯಶಾಲಿಗಳಿಗೆ, ಉತ್ಸಾಹಿಗಳಿಗೆ, ಬಲಶಾಲಿಗಳಿಗೆ ಸೇರಿದೆ, ನಿಷ್ಫಲರಿಗೆ ಅಲ್ಲ, ಸೋಮಾರಿಗಳಿಗಲ್ಲ ಮತ್ತು ಅಸಮರ್ಥರಿಗೆ ಅಲ್ಲ. ಸ್ಪರ್ಧಾತ್ಮಕ ಮತ್ತು ಪೈಪೋಟಿಯ ಈ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಮತ್ತು ತ್ಯಾಗದ ಜೀವನವನ್ನು ನಡೆಸಬೇಕು. ಈ ಶ್ರೇಷ್ಠ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ” ಹೆಮ್ಮೆ ಮತ್ತು ನಿರ್ಭೀತಿಯಿಂದ ದೇಶಕ್ಕೆ ಸೇವೆ ಸಲ್ಲಿಸಿ ಎಂಬುದು ನಿಮ್ಮೆಲ್ಲರಿಗೂ ನನ್ನ ಸಂದೇಶ! ಭಾರತ-ಮಾತೆ ನಿಮ್ಮನ್ನು ಕೈಬೀಸಿ ಕರೆದಿದ್ದಾಳೆ. ರಾಷ್ಟ್ರದ ಭವಿಷ್ಯ ನಿಮ್ಮ ಹೆಗಲ ಮೇಲೆ ನಿಂತಿದೆ. ರಾಷ್ಟ್ರೀಯ ಹಿತಾಸಕ್ತಿ ಯಾವಾಗಲೂ ಅಗ್ರವಾಗಿರಲಿ. ನಿಮ್ಮ ನಡವಳಿಕೆಯು ಶಿಸ್ತು, ಸಜ್ಜನಿಕೆ ಮತ್ತು ಸಹಾನುಭೂತಿಯ ಪ್ರತೀಕವಾಗಿರಲಿ.

ನೀವು ಎಂದೆಂದಿಗೂ ನಿಮ್ಮ ಸಂಸ್ಥೆಯ ಧ್ಯೇಯವಾಕ್ಯವಾದ ಬಲ ವಿವೇಕ ಅಂದರೆ ಶಕ್ತಿ ಮತ್ತು ಆತ್ಮಸಾಕ್ಷಿಯ ಅಸಾಧಾರಣ ಸಂಯೋಜನೆಯು ಸವಾಲಿನ ಸಂದರ್ಭಗಳಲ್ಲಿ ನಿಮ್ಮನ್ನು ಅಜೇಯರನ್ನಾಗಿಸುತ್ತದೆ.
ಆಶೀರ್ವಾದ ಸದಾ ಇರಲಿ ಮತ್ತು ಭಾರತದ ಸೇವೆಯಲ್ಲಿರಲು ಯೋಗ್ಯರಾಗಿರಿ.

ಧನ್ಯವಾದ.ಜೈಹಿಂದ್!

 

*****


(रिलीज़ आईडी: 2050841) आगंतुक पटल : 57
इस विज्ञप्ति को इन भाषाओं में पढ़ें: English , Urdu , हिन्दी , Manipuri , Telugu