ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಐ.ಆರ್.ಇ.ಡಿ.ಎ. ಕಚೇರಿಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರ ಭೇಟಿ: ಕಂಪನಿಯ ಕಾರ್ಯತಂತ್ರದ ಬೆಳವಣಿಗೆಯ ಯೋಜನೆ ಪರಿಶೀಲನೆ


ಕಳೆದ ನಾಲ್ಕು ವರ್ಷಗಳಲ್ಲಿ ಐತಿಹಾಸಿಕ ಸಾಧನೆಗಾಗಿ ಐ.ಆರ್.ಇ.ಡಿ.ಎ.ಯನ್ನು ಶ್ಲಾಘಿಸಿದ ಶ್ರೀ ಪ್ರಲ್ಹಾದ್ ಜೋಶಿ

Posted On: 30 AUG 2024 7:13PM by PIB Bengaluru

ಗೌರವಾನ್ವಿತ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಹೊಸದಿಲ್ಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನಲ್ಲಿರುವ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ ನಿಯಮಿತ (ಐಆರ್ ಇಡಿಎ)ದ ನೋಂದಾಯಿತ ಕಚೇರಿಗೆ ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ಸಚಿವರು ಐಆರ್ ಇಡಿಎಯ ಕಾರ್ಯಕ್ಷಮತೆ ಮತ್ತು ಭವಿಷ್ಯದ ಕಾರ್ಯತಂತ್ರದ ಮಾರ್ಗಸೂಚಿಯನ್ನು ಪರಾಮರ್ಶಿಸಿದರು, ನಂತರ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಅಧಿವೇಶನ ನಡೆಸಿದರು.

ಐಆರ್ ಇಡಿಎ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಶ್ರೀ ಪ್ರದೀಪ್ ಕುಮಾರ್ ದಾಸ್ ಅವರು ಶ್ರೀ ಜೋಶಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಭೂಪಿಂದರ್ ಸಿಂಗ್ ಭಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಆತ್ಮೀಯ ಸ್ವಾಗತ ಕೋರಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶ್ರೀ ದಾಸ್ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಐಆರ್ ಇಡಿಎಯ ಗಮನಾರ್ಹ ಸಾಧನೆಗಳನ್ನು ಪ್ರಮುಖವಾಗಿ ಎತ್ತಿ ತೋರಿಸಿದರು ಮತ್ತು 'ವಿಕ್ಷಿತ್ ಭಾರತ್' ದೃಷ್ಟಿಕೋನಕ್ಕೆ ಅನುಗುಣವಾಗಿ 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆ ಆಧಾರಿತವಲ್ಲದ ವಿದ್ಯುತ್ ಉತ್ಪಾದಿಸುವ ಭಾರತ ಸರ್ಕಾರದ ಗುರಿಗೆ ಕೊಡುಗೆ ನೀಡುವ ಕಂಪನಿಯ ಯೋಜನೆಗಳ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಹಣಕಾಸು ನಿರ್ದೇಶಕ ಡಾ.ಬಿಜಯ್ ಕುಮಾರ್ ಮೊಹಾಂತಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಐ.ಆರ್.ಇ.ಡಿ.ಎ.ಯು ಪ್ರಾರಂಭದಿಂದಲೂ ವಹಿಸಿದ ಅದರ ಪ್ರವರ್ತಕ ಪಾತ್ರ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಅದರ ಗಮನಾರ್ಹ ಬೆಳವಣಿಗೆಯನ್ನು ಶ್ರೀ ಜೋಶಿ ಶ್ಲಾಘಿಸಿದರು. ಸಾರ್ವಜನಿಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹಸಿರು ಇಂಧನ ಪರಿಹಾರಗಳೊಂದಿಗೆ ಸಂಪರ್ಕಿಸಲು ಮೇಲ್ಛಾವಣಿ ಸೌರ, ಪಿಎಂ ಸೂರ್ಯ ಘರ್ ಉಪಕ್ರಮ, ಪಿಎಂ-ಕುಸುಮ್ ಯೋಜನೆ ಮತ್ತು ಇತರ ಸಣ್ಣ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ತನ್ನ ಹಣಕಾಸು ವಿಸ್ತರಿಸಲು ಅವರು ಐ.ಆರ್.ಇ.ಡಿ.ಎ.ಯನ್ನು ಪ್ರೋತ್ಸಾಹಿಸಿದರು. ಕಂಪನಿಯ ತ್ವರಿತ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಅವರು ಐ.ಆರ್.ಇ.ಡಿ.ಎ. ತಂಡವನ್ನು ಉತ್ತೇಜಿಸಿದರು.

ಐ.ಆರ್.ಇ.ಡಿ.ಎ. ವಲಯ ಹಣಕಾಸು, ವೈವಿಧ್ಯೀಕರಣ ಕಾರ್ಯತಂತ್ರಗಳು, ಭವಿಷ್ಯದ ಬೆಳವಣಿಗೆ ಮತ್ತು ನಿಧಿಸಂಗ್ರಹ ಯೋಜನೆಗಳು ಸೇರಿದಂತೆ ವಿವಿಧ ಮಹತ್ವದ ವಿಷಯಗಳನ್ನು ಚರ್ಚೆಗಳು ಒಳಗೊಂಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಂಡ ಪ್ರಮುಖ ಉಪಕ್ರಮಗಳ ಬಗ್ಗೆ, ವಿಶೇಷವಾಗಿ ಸುಗಮ ವ್ಯಾಪಾರ, ಡಿಜಿಟಲೀಕರಣ, ಯಾಂತ್ರೀಕರಣ, ಚಿಲ್ಲರೆ ವಿಭಾಗದ ಸ್ಥಾಪನೆ ಮತ್ತು ಗುಜರಾತ್ ಗಿಫ್ಟ್ ಸಿಟಿಯಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ (ಐಎಫ್ ಎಸ್ ಸಿ) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು ಸಂಯೋಜಿಸುವ ಬಗ್ಗೆ ಶ್ರೀ ಜೋಶಿ ಅವರಿಗೆ ವಿವರಿಸಲಾಯಿತು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಧನಸಹಾಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಐ.ಆರ್.ಇ.ಡಿ.ಎ.  ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚಿಸಲಾಯಿತು.

ಸಿಎಂಡಿ ಶ್ರೀ ದಾಸ್ ಅವರು 2030 ರ ವೇಳೆಗೆ 'ನವರತ್ನ' ದಿಂದ 'ಮಹಾರತ್ನ' ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿ (ಸಿಪಿಎಸ್ಇ) ಪರಿವರ್ತನೆಗೊಳ್ಳುವ ಐ.ಆರ್.ಇ.ಡಿ.ಎ. ಯ ಕಾರ್ಯತಂತ್ರದ ಮಾರ್ಗಸೂಚಿಯನ್ನು ಪ್ರದರ್ಶಿಸುವ ಸಮಗ್ರ ಪ್ರಸ್ತುತಿಯನ್ನು ನೀಡಿದರು. ಎಫ್ಪಿಒ, ಕ್ಯೂಐಪಿ ಅಥವಾ ಇತರ ಯಾವುದೇ ಅನುಮತಿಸಬಹುದಾದ ವಿಧಾನದ ಮೂಲಕ ಕಂಪನಿಯ ಪ್ರಮುಖ ನಿಧಿಸಂಗ್ರಹ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು, ಅದರ ಕಾರ್ಯಾಚರಣೆಗಳನ್ನು ಬಲಪಡಿಸಲು ಮತ್ತು ಹಸಿರು ಇಂಧನ ಕ್ಷೇತ್ರದ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ಸುಮಾರು 4,500 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಕುರಿತು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನಲ್ಲಿ ಸಸಿ ನೆಡುವ ಮೂಲಕ #एक_पेड़_मां_के_नाम (#Plant4Mother) ಅಭಿಯಾನದಲ್ಲಿ ಪಾಲ್ಗೊಂಡರು, ಇದು ಪರಿಸರ ಸುಸ್ಥಿರತೆಗೆ ಅವರ ಬದ್ಧತೆಯನ್ನು ಸಂಕೇತಿಸುತ್ತದೆ.

 

*****


(Release ID: 2050452) Visitor Counter : 41


Read this release in: English , Urdu , Hindi