ಸಹಕಾರ ಸಚಿವಾಲಯ
azadi ka amrit mahotsav

ನ್ಯಾಷನಲ್ ಕೋಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (NCOL) ಮತ್ತು ಆರ್ಗಾನಿಕ್ ಪ್ರಾಡಕ್ಟ್ಸ್ ಕೌನ್ಸಿಲ್, ಉತ್ತರಾಖಂಡ್ ನಡುವಿನ ಒಪ್ಪಂದಕ್ಕೆ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು


ಭಾರತವನ್ನು ವಿಶ್ವದ ಅತಿ ದೊಡ್ಡ ಸಾವಯವ ಆಹಾರ ಉತ್ಪಾದಕ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಷನ್ ನಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ

ಭಾರತ್ ಬ್ರಾಂಡ್ ಸಾವಯವ ಉತ್ಪನ್ನಗಳು ಉತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹವಾಗಿವೆ

NCOL ತಮ್ಮ ಸಂಪೂರ್ಣ ಸಾವಯವ ಉತ್ಪನ್ನಗಳನ್ನು ಖರೀದಿಸುತ್ತದೆ ಎಂದು ಶ್ರೀ ಅಮಿತ್ ಶಾ ಉತ್ತರಾಖಂಡದ ರೈತರಿಗೆ ಹೇಳಿದರು

‘ಭಾರತ್’ ಬ್ರ್ಯಾಂಡ್ ಮೂಲಕ ರೈತರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲಾಗುವುದು

NCOL ನಿಂದ ಲಾಭವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹೋಗುತ್ತದೆ

NCOL ಮತ್ತು ಅಮುಲ್ ಸಾವಯವ ಭೂಮಿ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವ ಅಂತರರಾಷ್ಟ್ರೀಯ ಮಟ್ಟದ ಲ್ಯಾಬ್ ಗಳ  ನೆಟ್ವರ್ಕ್ ಸ್ಥಾಪಿಸುತ್ತವೆ

ರೈತರು ತಮ್ಮ ಹೊಲಗಳನ್ನು ಸಂಪೂರ್ಣ ಸಾವಯವವಾಗಿಸಿಕೊಳ್ಳಬೇಕು ಮತ್ತು ರಸಗೊಬ್ಬರ ಬಳಸುವುದನ್ನು ನಿಲ್ಲಿಸಬೇಕು

Posted On: 30 AUG 2024 7:42PM by PIB Bengaluru

ನ್ಯಾಷನಲ್ ಕೋಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್ (NCOL) ಮತ್ತು ಆರ್ಗ್ಯಾನಿಕ್ ಪ್ರಾಡಕ್ಟ್ಸ್ ಕೌನ್ಸಿಲ್, ಉತ್ತರಾಖಂಡ್ ನಡುವಿನ ಒಪ್ಪಂದಕ್ಕೆ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್, ಉತ್ತರಾಖಂಡ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಗಣೇಶ್ ಜೋಶಿ ಮತ್ತು ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ದೇಶದ ವಿಶಾಲವಾದ ಕೃಷಿಯೋಗ್ಯ ಭೂಮಿಯನ್ನು ಸಾವಯವ ಕೃಷಿಗೆ ಸಿದ್ಧಪಡಿಸುವ ಗುರಿಯನ್ನು ಹೊಂದಿದ್ದರು. ಇಂದು ಸಾವಯವ ಕೃಷಿಯ ಆಂದೋಲನ ಮಹತ್ವದ ಹಂತ ತಲುಪಿದೆ ಎಂದರು. ಭಾರತವನ್ನು ವಿಶ್ವದ ಅತಿದೊಡ್ಡ ಸಾವಯವ ಆಹಾರ ಉತ್ಪಾದಕ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವನ್ನು  ವಹಿಸುತ್ತವೆ ಎಂದು ಶ್ರೀ ಶಾ ಹೇಳಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಪ್ರಧಾನಿ ಮೋದಿ ದೇಶದ ಮುಂದೆ ಇಟ್ಟಿದ್ದಾರೆ ಮತ್ತು ಅದರ ಎರಡು ಪ್ರಮುಖ ಅಂಶಗಳಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವುದು ಒಂದು ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಇಂದು ಪ್ರಪಂಚದಾದ್ಯಂತ ಸಾವಯವ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿದೆ ಮತ್ತು ಅದಕ್ಕೆ ದೊಡ್ಡ ಜಾಗತಿಕ ಮಾರುಕಟ್ಟೆ ಇದೆ ಎಂದು ಶ್ರೀ ಶಾ ಹೇಳಿದರು. ಈ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಮೂಲಕ ನಾವು ಭಾರತದ ಪಾಲನ್ನು ಹೆಚ್ಚಿಸಿದಾಗ, ಲಾಭದಾಯಕ ಸಾವಯವ ಉತ್ಪನ್ನಗಳ ವ್ಯಾಪಾರದಲ್ಲಿ ನಮ್ಮ ರೈತರ ಪಾಲು ಮತ್ತು ಅವರ ಆದಾಯವು ಹೆಚ್ಚಾಗುತ್ತದೆ.

ದೇಶದ ನಾಗರಿಕರ ಆರೋಗ್ಯವೂ ಸಾವಯವ ಕೃಷಿಯೊಂದಿಗೆ ಸಂಬಂಧ ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗೊಬ್ಬರದ ರೂಪದಲ್ಲಿ ನಮ್ಮ ದೇಹ ಸೇರುವ ರಾಸಾಯನಿಕಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುತ್ತವೆ ಎಂದರು. ಇದರಿಂದ ಭೂಮಿಯ ಗುಣಮಟ್ಟವೂ ಕಡಿಮೆಯಾಗಿದೆ ಮತ್ತು ಅನೇಕ ರಾಜ್ಯಗಳಲ್ಲಿ ಭೂಮಿ ಸಿಮೆಂಟ್ ನಂತೆ ಗಟ್ಟಿಯಾಗಲು ಪ್ರಾರಂಭಿಸಿದೆ. ಇದರಿಂದ ಪ್ರವಾಹದ ಅಪಾಯವೂ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ ಸಾವಯವ ಕೃಷಿ ಮಾಡಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ, ನೀರು ಉಳಿತಾಯವಾಗುತ್ತದೆ, ಉತ್ಪಾದನೆ ಹೆಚ್ಚುತ್ತದೆ ಮತ್ತು ಗ್ರಾಹಕರ ಆರೋಗ್ಯವೂ ಸುಧಾರಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಇಷ್ಟೆಲ್ಲ ಪ್ರಯೋಜನಗಳಿದ್ದರೂ ಸಾವಯವ ಕೃಷಿಗೆ ಸರಿಯಾದ ಉತ್ತೇಜನ ಸಿಗಲಿಲ್ಲ.

ಈ ಹಿಂದೆ ಸಾವಯವ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ ಮತ್ತು ರೈತರಿಗೆ ಹೆಚ್ಚಿನ ಬೆಲೆ ಸಿಗಲಿಲ್ಲ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಅಲ್ಲದೆ, ಈ ಉತ್ಪನ್ನಗಳನ್ನು ಬಳಸುವಲ್ಲಿ ಹಿಂಜರಿಕೆ ಇತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಮೋದಿ ಸರ್ಕಾರವು ನ್ಯಾಷನಲ್ ಕೋ ಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (NCOL) ಅನ್ನು ಸ್ಥಾಪಿಸಿತು ಎಂದು ಶ್ರೀ ಶಾ ಹೇಳಿದರು. ಅಮುಲ್ ಮತ್ತು NCOL ಒಟ್ಟಾಗಿ ದೇಶಾದ್ಯಂತ ಅಂತರರಾಷ್ಟ್ರೀಯ ಮಟ್ಟದ ಪ್ರಯೋಗಾಲಯಗಳ ಜಾಲವನ್ನು ಸ್ಥಾಪಿಸುತ್ತದೆ. ಇದು ಸಾವಯವ ಮಣ್ಣು ಮತ್ತು ಉತ್ಪನ್ನಗಳೆರಡನ್ನೂ ಪರೀಕ್ಷಿಸಲಿದೆ ಎಂದು ಅವರು ಹೇಳಿದರು . ಈ ಎರಡೂ ಮಾನ್ಯತೆ ಪಡೆದ ಸಂಸ್ಥೆಗಳು ವಿಶ್ವಾಸಾರ್ಹ ಸಾವಯವ ಉತ್ಪನ್ನಗಳನ್ನು ‘ಭಾರತ್’ ಮತ್ತು ‘ಅಮುಲ್’ ಬ್ರ್ಯಾಂಡ್ಗಳಾಗಿ ಗ್ರಾಹಕರಿಗೆ ಒದಗಿಸುತ್ತವೆ ಎಂದು ಅವರು ಹೇಳಿದರು.

NCOL ರಚನೆಯಾದ ಕೆಲವೇ ವರ್ಷಗಳಲ್ಲಿ, ಸಾವಯವ ಉತ್ಪನ್ನಗಳಿಂದ ಬರುವ ಎಲ್ಲಾ ಲಾಭವನ್ನು ಉತ್ಪಾದಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹೋಗುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು . ಸಹಕಾರಿ ರಚನೆಯಲ್ಲಿ ಮಾತ್ರ ಸಾಧ್ಯ ಎಂದರು. ಮುಂದಿನ 2 ರಿಂದ 3 ವರ್ಷಗಳಲ್ಲಿ ' ಭಾರತ್ ' ಬ್ರಾಂಡ್ನ ಉತ್ಪನ್ನಗಳು ಎಲ್ಲಾ ರೀತಿಯ ಸಸ್ಯಾಹಾರಿ  ಆಹಾರವನ್ನು ಒಳಗೊಂಡಿರುತ್ತವೆ ಎಂದು ಶ್ರೀ ಶಾ ಹೇಳಿದರು .

ಭಾರತ್ ಬ್ರಾಂಡ್ ಸಾವಯವ ಉತ್ಪನ್ನಗಳು ಗುಣಮಟ್ಟ ಮತ್ತು ಸಾವಯವ ವೈಶಿಷ್ಟ್ಯಗಳಲ್ಲಿ ವಿಶ್ವಾಸಾರ್ಹವಾಗಿವೆ. ಹೆಚ್ಚಿನ ಲಾಭದ ಗುರಿಯನ್ನು ಹೊಂದಿರದೆ ಇರುವ ಕಾರಣ ಅಗ್ಗವಾಗಿದೆ ಮತ್ತು ಈ ಉತ್ಪನ್ನಗಳ ಮೇಲೆ ಗಳಿಸುವ ಎಲ್ಲಾ ಲಾಭವು ರೈತರ ಆದಾಯವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಸಹಕಾರಿ ಸಚಿವರು ಹೇಳಿದರು. ಈ ಎಲ್ಲಾ ಉದ್ದೇಶಗಳನ್ನು ಎನ್ಸಿಒಎಲ್ ಪೂರೈಸಲಿದೆ ಮತ್ತು ಶೀಘ್ರದಲ್ಲೇ ' ಭಾರತ್ ' ಬ್ರ್ಯಾಂಡ್ ವಿಶ್ವಾಸಾರ್ಹ ಬ್ರ್ಯಾಂಡ್ ಆಗಲಿದೆ ಎಂದು ಅವರು ಹೇಳಿದರು .

ದೇಶಾದ್ಯಂತ ಸಾವಯವ ಕೃಷಿ ಮಾಡುವ ರೈತರಿಗೆ NCOL ಗೆ ಸೇರುವಂತೆ ಶ್ರೀ ಅಮಿತ್ ಶಾ ಮನವಿ ಮಾಡಿದರು . ರೈತರು ಉತ್ಪಾದಿಸುವ ಸಾವಯವ ಅಕ್ಕಿ , ಬೇಳೆಕಾಳು ಮತ್ತು ಗೋಧಿಯನ್ನು ಸರ್ಕಾರವೇ ಖರೀದಿಸಲಿದೆ ಎಂದು ಹೇಳಿದರು . ಕಡಿಮೆ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಲಾಭವನ್ನು ವರ್ಗಾಯಿಸುವ ಸರಳ ವ್ಯವಸ್ಥೆಯನ್ನು NCOL ರೂಪಿಸಲಿದೆ ಎಂದು ಹೇಳಿದರು . ಇಂದು ದೇಶಾದ್ಯಂತ ಹೈನುಗಾರಿಕೆ ಕ್ಷೇತ್ರದಲ್ಲಿ ಇದೇ ರೀತಿಯ ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದ್ದು, ಸಹಕಾರ ಸಂಘಗಳ ಮೂಲಕ ಕೋಟ್ಯಂತರ ರೈತರು ತಮ್ಮ ಹೈನು ಉತ್ಪನ್ನಗಳ ಲಾಭವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ ಎಂದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಉತ್ತರಾಖಂಡದ ರೈತರಿಗೆ ತಮ್ಮ ಕೃಷಿಯನ್ನು ಸಂಪೂರ್ಣವಾಗಿ ಸಾವಯವವಾಗಿಸಲು ಮತ್ತು ಇತರ ರೈತರನ್ನು ಕೂಡ ನೈಸರ್ಗಿಕ ಕೃಷಿಯತ್ತ ಪ್ರೋತ್ಸಾಹಿಸುವಂತೆ ಒತ್ತಾಯಿಸಿದರು. ಉತ್ತರಾಖಂಡ ರೈತರು ತಮ್ಮ ಹೊಲಗಳನ್ನು ಸಂಪೂರ್ಣ ಸಾವಯವವಾಗಿಸಿಕೊಳ್ಳಬೇಕು ಮತ್ತು ರಸಗೊಬ್ಬರಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ವಿಶ್ವದ ಅತಿದೊಡ್ಡ ಸಾವಯವ ಆಹಾರ ಉತ್ಪಾದಕ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಕ್ಕಾಗಿ ರೈತರ ಉತ್ಪನ್ನಗಳ ರಫ್ತಿಗೆ ಸಹಕಾರಿ ಸಂಘವನ್ನು ಅಂದರೆ ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್‌ ಲಿಮಿಟೆಡ್ (NCEL) ಅನ್ನು ಕೂಡ ಮೋದಿ ಸರ್ಕಾರ ರಚಿಸಿದೆ. NCOL  ಅಭಿವೃದ್ಧಿಪಡಿಸುತ್ತಿರುವ ಭಾರತ್ ಬ್ರ್ಯಾಂಡ್ ಅನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಕೆಲಸವನ್ನು ಎರಡನೇ ಸಹಕಾರಿ ಸಂಸ್ಥೆ NCEL ಮಾಡಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

 

*****


(Release ID: 2050418) Visitor Counter : 44


Read this release in: English , Urdu , Hindi , Gujarati