ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಧರ್ಮ ಧಮ್ಮ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಆಯ್ದ ಭಾಗಗಳು  

Posted On: 23 AUG 2024 6:43PM by PIB Bengaluru

ಸ್ನೇಹಿತರೇ, ಧರ್ಮ ಮತ್ತು ಧಮ್ಮ ದೃಷ್ಟಿಕೋನಗಳ ನಡುವಿನ ಅಗತ್ಯ ಗುರುತನ್ನು ಕೇಂದ್ರೀಕರಿಸುವ ಉಪಕ್ರಮವು ವಿಶೇಷವಾಗಿ ಗಮನಾರ್ಹವಾಗಿದೆ. ಹಿಂದೂ ಮತ್ತು ಬೌದ್ಧ ನಾಗರಿಕತೆಗಳ ಪ್ರಾಚೀನ ಜ್ಞಾನದಲ್ಲಿ  ಬೇರೂರಿರುವ ಈ ವಿಚಾರಗಳು ಸಹಸ್ರಾರು ವರ್ಷಗಳಿಂದಲೂ ಇಂದಿಗೂ ಪ್ರಸ್ತುತವಾಗಿವೆ.

ಧರ್ಮ ಮತ್ತು ಧಮ್ಮದ ಬೋಧನೆಗಳು ನಿರಂತರವಾಗಿರುವುದಲ್ಲದೆ  ನೈತಿಕ ಜೀವನದ ಅನ್ವೇಷಣೆಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸುತ್ತವೆ.

ಏಷ್ಯಾ ಮತ್ತು ಅದರಾಚೆಗಿನ ನಾಗರಿಕತೆಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಪರಿಸ್ಥಿತಿಗಳನ್ನು  ಅವರು ರೂಪಿಸಿದ ವಿಧಾನದಿಂದ ಈ ತತ್ವಗಳ ಕಾಲಾತೀತ ಪ್ರಸ್ತುತತೆ ಸ್ಪಷ್ಟವಾಗಿದೆ.

ಭಾರತದ ವೈದಿಕ ಸಂಪ್ರದಾಯಗಳಿಂದ ಹಿಡಿದು ಏಷ್ಯಾದ ಖಂಡದಾದ್ಯಂತ ಹರಡಿರುವ ಬೌದ್ಧ ತತ್ತ್ವಶಾಸ್ತ್ರಗಳವರೆಗೆ, ಧರ್ಮ ಮತ್ತು ಧಮ್ಮದ ಪರಿಕಲ್ಪನೆಗಳು ಏಕೀಕರಿಸುವ ಎಳೆಯನ್ನು ಒದಗಿಸಿವೆ.

ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸದಾಚಾರದ ಸಾಮಾನ್ಯ ಪರಂಪರೆ, ನಮ್ಮನ್ನು ಒಟ್ಟಿಗೆ ಬಂಧಿಸುವ ಅನೇಕ ಏಕೀಕರಣದ ಎಳೆಯಾಗಿದೆಎಂದು ನಾನು ಹೇಳುತ್ತೇನೆ.

ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟವನ್ನು ನಿರೂಪಿಸುವ ಮಹಾಕಾವ್ಯವಾದ ಮಹಾಭಾರತದಲ್ಲಿ ಧರ್ಮವು ಕೇಂದ್ರ ವಿಷಯವಾಗಿದೆ.

ಭಗವದ್ಗೀತೆ, ಭಗವಾನ್ ಕೃಷ್ಣ ಮತ್ತು ಅರ್ಜುನನ ನಡುವಿನ ಕಾಲಾತೀತ ಸಂಭಾಷಣೆ, ಧರ್ಮದ ಸ್ವರೂಪ ಮತ್ತು ವ್ಯಕ್ತಿಯ ಕರ್ತವ್ಯಗಳ ಬಗ್ಗೆ ಆಳವಾದ ಪ್ರವಚನವಾಗಿದೆ. ಫಲಿತಾಂಶಗಳ ಬಗ್ಗೆ ಚಿಂತಿಸದೆ ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ಅರ್ಜುನನಿಗೆ ನೀಡಿದ ಶ್ರೀಕೃಷ್ಣನ ಉಪದೇಶವು ನಮ್ಮ ಜೀವನದಲ್ಲಿ ಧರ್ಮದ ಮಹತ್ವವನ್ನು ಪ್ರಬಲವಾಗಿ ನೆನಪಿಸುತ್ತದೆ.

ಪ್ರಜ್ಞಾವಂತ ಮನಸ್ಸುಗಳು ಉದ್ದೇಶಪೂರ್ವಕವಾಗಿ ರಾಜಕೀಯ ಲಾಭ ಪಡೆಯಲು ಅಥವಾ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವ ಸ್ವಹಿತಾಸಕ್ತಿಗೆ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಿದಾಗ ಅದು ಧರ್ಮಕ್ಕೆ ವಿರುದ್ಧವಾಗಿರುತ್ತದೆ.

ಸಮಾಜಕ್ಕೆ ಸವಾಲುಗಳು ಎಷ್ಟು ಗಂಭೀರವಾಗಿದೆ, ಜ್ಞಾನವುಳ್ಳ ವ್ಯಕ್ತಿಯು, ವಾಸ್ತವವನ್ನು ತಿಳಿದಿರುವ ತಿಳುವಳಿಕೆಯುಳ್ಳ ಮನಸ್ಸು ರಾಜಕೀಯ ಲಾಭ ಪಡೆಯಲು ತನ್ನ ಶ್ರೇಷ್ಠ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಮತ್ತು ಅಂತಹ ದುಸ್ಸಾಹಸವು  ಧರ್ಮಕ್ಕೆ ವಿರುದ್ಧವಾಗಿದೆ. ನಮ್ಮ ಧರ್ಮವನ್ನು ಗೌರವಿಸುತ್ತಾ ರಾಷ್ಟ್ರೀಯತೆ ಮತ್ತು ಮಾನವೀಯತೆಯನ್ನು ಗುರಿಯಾಗಿಸುವ ಇಂತಹ ಹೇಯ ಪ್ರವೃತ್ತಿಗಳು ಮತ್ತು ಮಾರಣಾಂತಿಕ ಉದ್ದೇಶಗಳಿಗೆ ನಾವು ಸರಿಯಾದ ಛೀಮಾರಿ ಹಾಕಬೇಕಾಗಿದೆ.

ಅಂತಹ ಶಕ್ತಿಗಳನ್ನು ಸಹಿಸಿಕೊಳ್ಳುವುದು ಧರ್ಮದ ಕಾರ್ಯವಲ್ಲ. ಧರ್ಮವನ್ನು ಕೆಡಿಸಲು, ನಮ್ಮ ವ್ಯವಸ್ಥೆಗಳಿಗೆ ಕಳಂಕ ತರಲು, ನಮ್ಮ ರಾಷ್ಟ್ರೀಯತೆಯನ್ನು ಕೆಡಿಸಲು ಪ್ರಯತ್ನಿಸುವ ಶಕ್ತಿಗಳನ್ನು ನಾವು ನಮ್ಮ ಶಕ್ತಿಯಿಂದ ತಟಸ್ಥಗೊಳಿಸಬೇಕೆಂದು ಧರ್ಮವು ಒತ್ತಾಯಿಸುತ್ತದೆ.
ಒಮ್ಮೆ ಅಧಿಕಾರದಲ್ಲಿ ಇದ್ದ ಹಿರಿಯ ರಾಜಕಾರಣಿಯೊಬ್ಬರು ನೆರೆಹೊರೆಯಲ್ಲಿ ಸಾರ್ವಜನಿಕವಾಗಿ ಏನಾಗುತ್ತದೆಯೋ ಅದು ಭಾರತದಲ್ಲಿ ಸಂಭವಿಸುತ್ತದೆ ಎಂದು ಹೇಳುವುದು ಬಹಳ ನೋವಿನ ಸಂಗತಿಯಾಗಿದೆ.

ಧರ್ಮದಲ್ಲಿ ನಂಬಿಕೆಯುಳ್ಳ ಯಾರಾದರೂ ಈ ರೀತಿ ವರ್ತಿಸುವುದು ಹೇಗೆ? ಅಂತಹ ಕೃತ್ಯಗಳನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ, ಅವರ ಕ್ರಿಯೆಯು ಅಧರ್ಮವಾಗಿದೆ.

ಪ್ರಸ್ತುತ ಅಧಿಕಾರದಲ್ಲಿರುವವರು ಇದರ ಬಗ್ಗೆ ಉತ್ತಮ ಪಾಠವನ್ನು ಕಲಿಯಬೇಕಾಗಿದೆ: ಕರ್ತವ್ಯದ ನಿರ್ವಹಣೆಯು ಫಲಿತಾಂಶಗಳ ಮೇಲೆ ಪ್ರಾಬಲ್ಯವನ್ನು ಪಡೆಯಬೇಕು.

ಸಂವಿಧಾನದ ನಿರ್ಮಾತೃಗಳು ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರು ಮೂರು ವರ್ಷಗಳ ಶ್ರಮದಾಯಕ ಕೆಲಸದಿಂದ, ನಾವು ಭಾರತೀಯ ಸಂವಿಧಾನವು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಮೀಸಲಾಗಿರುವ 22 ವಿಧಿಗಳನ್ನು ಹೊಂದಿದ್ದು, ಧರ್ಮದ ಬಗ್ಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ.

ಸಂವಿಧಾನದ ಭಾಗ-III ರಲ್ಲಿ ಮೂಲಭೂತ ಹಕ್ಕುಗಳು, ಮಾನವ ಅಸ್ತಿತ್ವಕ್ಕೆ ಪ್ರಮುಖವಾದ ಹಕ್ಕುಗಳು, ಮಾನವೀಯತೆಯ ಮೂಲಭೂತ ಹಕ್ಕುಗಳು ಮತ್ತು ಅಲ್ಲಿ ಶ್ರೀರಾಮ, ದೇವಿ ಸೀತೆ ಮತ್ತು ಶ್ರೀ ಲಕ್ಷ್ಮಣರ ಚಿತ್ರಗಳಿವೆ, ಅವರು  ಹೋರಾಡುವ ಭಾರತದ ಶಾಶ್ವತ ವೀರರು. ಅವು ಅಧರ್ಮದ ವಿರುದ್ಧ   ಧರ್ಮದ ವಿಜಯದ ಸಂಕೇತಗಳು.

ಅಂತೆಯೇ, ಭಾಗ-IV ರಲ್ಲಿ ನಾವು  ರಾಜ್ಯ ನೀತಿಯ ನಿರ್ದೇಶನ ತತ್ವಗಳಿಗೆ ಸಂಬಂಧಿಸಿದೆ, ಚಿತ್ರಕಲೆಯನ್ನು ನೋಡುತ್ತೇವೆ, ಕುರುಕ್ಷೇತ್ರದಲ್ಲಿ ಮಹಾಭಾರತದ ಯುದ್ಧ ಪ್ರಾರಂಭವಾಗುವ ಮೊದಲು ಶ್ರೀ ಕೃಷ್ಣನು ಅರ್ಜುನನಿಗೆ  ಜ್ಞಾನದ ಅನಂತ ಸಾಗರವನ್ನು, ಸದಾಚಾರವನ್ನು ಪ್ರತಿಪಾದಿಸುತ್ತಾನೆ.

ಸ್ನೇಹಿತರೇ, 1975ರಲ್ಲಿ ಕಠೋರ ತುರ್ತುಪರಿಸ್ಥಿತಿಯ ಘೋಷಣೆಯೊಂದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಸ್ವಾರ್ಥಕ್ಕಾಗಿ ಸರ್ವಾಧಿಕಾರಿಯಂತೆ ನಡೆದುಕೊಂಡು ಧರ್ಮವನ್ನು ನಿರ್ಲಕ್ಷಿಸಿ ಅಧಿಕಾರದಲ್ಲಿದ್ದ ಈ ಮಹಾನ್ ರಾಷ್ಟ್ರದ ಮೇಲೆ ಕರಾಳ ಅಧ್ಯಾಯವನ್ನೇ ಬರೆದಿದ್ದರು ಎಂಬುದನ್ನು ನೆನಪಿಸುತ್ತೇನೆ.

ವಾಸ್ತವವಾಗಿ,  ಧರ್ಮವನ್ನು ಅಪವಿತ್ರಗೊಳಿಸಲಾಗಿತ್ತು. ಅದು ಅಧರ್ಮವಾಗಿತ್ತು, ಅದನ್ನು ಪರಿಗಣಿಸಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ.
ಅದು ಅಧರ್ಮವಾಗಿತ್ತು, ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಅಥವಾ ಮರೆಯಲಾಗುವುದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ನಂತರ ಅವರಲ್ಲಿ ಕೆಲವರು ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಉಪ  ರಾಷ್ಟ್ರಪತಿಗಳು ಮತ್ತು ಸಾರ್ವಜನಿಕ ಸೇವೆಯ ಸ್ಥಾನಗಳನ್ನು ಅಲಂಕರಿಸಿದರು.

ಮತ್ತು ಇದೆಲ್ಲನ್ನೂ ತಮ್ಮ ಆಶಯಗಳನ್ನು ಪೂರೈಸಲು ಧರ್ಮ ರಕ್ಷಕರನ್ನು  ಹತ್ತಿಕ್ಕಿ ಮಾಡಲಾಯಿತು. ಆ ಸಮಯದಲ್ಲಿ ಆ ಧರ್ಮದ ಯೋಧರಿಗೆ ಏನಾಯಿತು ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತೇನೆ.

ನನ್ನ ಉತ್ತರ ಸರಳವಾಗಿದೆ. ಅವರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅವಮಾನ, ಜೈಲುವಾಸವನ್ನು ಎದುರಿಸಿದರು ಮತ್ತು ಇದು ಸಮಾಜವು ದೀರ್ಘಾವಧಿಯಲ್ಲಿ ಅನುಭವಿಸಬೇಕಾದ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ವಿನಾಶವನ್ನು ಸೂಚಿಸುತ್ತದೆ, ಅದು ಕಾನೂನುಬಾಹಿರತೆಯನ್ನು ಅದರ ನ್ಯಾಯಯುತ ಮುಖದಲ್ಲಿ ಅಳಿಸಲಾಗದ ಗುರುತನ್ನು ಅಚ್ಚೊತ್ತಿದೆ.

ಧರ್ಮಕ್ಕೆ ಶ್ರದ್ಧಾಂಜಲಿಯಾಗಿ, ಧರ್ಮದ ಬದ್ಧತೆಯಾಗಿ, ಧರ್ಮದ ಸೇವೆಗಾಗಿ, ಧರ್ಮದ ಮೇಲಿನ ನಂಬಿಕೆಗಾಗಿ ನವೆಂಬರ್ 26 ರಂದು ಸಂವಿಧಾನ ದಿನ ಮತ್ತು ಜೂನ್ 25 ರಂದು ಸಂವಿಧಾನ ಹತ್ಯೆ ದಿನವನ್ನು ಆಚರಿಸುವುದು ಅವಶ್ಯಕ. ಅವು ಧರ್ಮದ ಉಲ್ಲಂಘನೆಗಳ ಗಂಭೀರ ಜ್ಞಾಪನೆ ಮತ್ತು ಸಾಂವಿಧಾನಿಕ ಧರ್ಮವನ್ನು ಉತ್ಸಾಹದಿಂದ ಆಚರಿಸಲು ಕರೆ ನೀಡುತ್ತವೆ. ಈ ದಿನಗಳ ಆಚರಣೆಯು ಸಹ ಮುಖ್ಯವಾಗಿದೆ ಏಕೆಂದರೆ ಪ್ರಜಾಪ್ರಭುತ್ವದ ಕೆಟ್ಟ ಶಾಪ ಸಮಯದಲ್ಲಿ - ತುರ್ತು ಪರಿಸ್ಥಿತಿ - ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ಸಂಸ್ಥೆಗಳ ಮೇಲೆ ತಪಾಸಣೆ ಮತ್ತು ಸಮತೋಲನಗಳನ್ನು ಸ್ಥಾಪಿಸಲಾಯಿತು.

ಸ್ನೇಹಿತರೇ, ಧರ್ಮವನ್ನು ಪೋಷಿಸಲು ಮತ್ತು ಧರ್ಮವನ್ನು ಕಾಪಾಡಿಕೊಳ್ಳಲು ನಾವು ಸಾಕಷ್ಟು ಮಾಹಿತಿಯನ್ನು ಪಡೆಯುವುದು ಅವಶ್ಯಕ. ನಮ್ಮ ಯುವಕರು, ಹೊಸ ತಲೆಮಾರು ಈ ಬಗ್ಗೆ ಹೆಚ್ಚು ಸ್ಪಷ್ಟವಾಗಿ ಹೇಳಬೇಕಾಗಿದೆ, ಇದರಿಂದ ನಾವು ಧರ್ಮದ ಆಚರಣೆಯಲ್ಲಿ ಬಲಶಾಲಿಯಾಗಬಹುದು ಮತ್ತು ನಾವು ಒಮ್ಮೆ ಎದುರಿಸಿದ ಬೆದರಿಕೆಯನ್ನು ತಟಸ್ಥಗೊಳಿಸಬಹುದು.
ಸಮಕಾಲೀನ ರಾಜಕೀಯ ಸನ್ನಿವೇಶದಲ್ಲಿ ಜನಸೇವೆಯ ಜವಾಬ್ದಾರಿ ಹೊತ್ತಿರುವ ಅನೇಕರು ಧರ್ಮದಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಆತಂಕ ಹೆಚ್ಚುತ್ತಿದೆ.

ನಾನು ಧರ್ಮಕ್ಕೆ ಸೇವೆ ಸಲ್ಲಿಸಲು ತಮ್ಮ ಸ್ಥಾನದಿಂದ ಬದ್ಧರಾಗಿರುವ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಅವರು ಧರ್ಮದಿಂದ ದೂರವಾಗುತ್ತಿದ್ದಾರೆ. ಸಮಗ್ರತೆ, ಪಾರದರ್ಶಕತೆ ಮತ್ತು ನ್ಯಾಯದೊಂದಿಗೆ ಜನರಿಗೆ ಸೇವೆ ಸಲ್ಲಿಸುವ ಅವರ ಪವಿತ್ರ ಕರ್ತವ್ಯ ವಿಫಲಗೊಳ್ಳುತ್ತಿದೆ. ಅವರಲ್ಲಿ ಕೆಲವರು ಸದಾಚಾರದ ತತ್ವಗಳನ್ನು ಎತ್ತಿಹಿಡಿಯುವ ಬದಲು ಧರ್ಮದ ಸಾರಕ್ಕೆ ವಿರುದ್ಧವಾದ ಕಾರ್ಯಗಳಲ್ಲಿ ತೊಡಗುತ್ತಾರೆ.

ನೈತಿಕತೆ ಮತ್ತು ನೈತಿಕ ಜವಾಬ್ದಾರಿಗಳು ಇಲ್ಲದಿರುವಿಕೆಯು ಗಂಭೀರ ಕಾಳಜಿಯ ವಿಷಯವಾಗಿದೆ. ಇದು ಆಳವಾದ ಕಳವಳಕಾರಿ ವಿಷಯವಾಗಿದೆ, ಏಕೆಂದರೆ ಇದು ತನಗೆ ಆ ಸ್ಥಾನವನ್ನು ನೀಡಿದವರ ನಂಬಿಕೆ ಮತ್ತು ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ.

ದೇಶದ ಉಪರಾಷ್ಟ್ರಪತಿಯಾಗಿ ನಾನು ರಾಜ್ಯಸಭೆಯ ಅಧ್ಯಕ್ಷನಾಗಿದ್ದೇನೆ. ಧರ್ಮವನ್ನು ಪಾಲಿಸುವ ಅಗತ್ಯವನ್ನು ನಾನು ಅನುಭವಿಸಿದೆ. ಚರ್ಚೆ ಮತ್ತು ಮಾತುಕತೆಯ ಅನುಪಸ್ಥಿತಿಯು ನನಗೆ ನೋವನ್ನು ಉಂಟುಮಾಡಿದೆ.

ನಾನು ಅಡ್ಡಿ, ಅವಾಂತರಗಳಿಂದ ಪೀಡಿತನಾಗಿದ್ದೇನೆ, ಧರ್ಮವು ಇಲ್ಲದಿದ್ದುರಿಂದ  ಉಂಟಾಗುವ ಪರಿಸ್ಥಿತಿಯ ಅಗಾಧತೆಯು ನನ್ನನ್ನು ನೋಯಿಸುತ್ತದೆ. ಸಾರ್ವಜನಿಕ ಪ್ರತಿನಿಧಿಗಳ ಸಾಂವಿಧಾನಿಕ ಆದೇಶಗಳು ಕಿರಿದಾದ ಪಕ್ಷಪಾತದ ಆಧಾರದ ಮೇಲೆ ಬಲಿಯಾಗುತ್ತಿವೆ, ಅಂತಹ ಕರ್ತವ್ಯ ವೈಫಲ್ಯವು ಅದರ ತೀವ್ರತರವಾದ ಅಧರ್ಮದ ಪ್ರತಿಬಿಂಬವಾಗಿದೆ.

ನಿಮ್ಮ ಪ್ರತಿನಿಧಿಗಳಿಗೆ ಕಲಿಸಬೇಕೆಂದು  ನಾನು ನಿಮ್ಮೆಲ್ಲರನ್ನು ಬೇಡಿಕೊಳ್ಳುತ್ತೇನೆ. ಅವರು ರಾಷ್ಟ್ರದ ಮನಸ್ಥಿತಿಯನ್ನು ಪ್ರತಿನಿಧಿಸುತ್ತಾರೆ ಮತ್ತು ರಾಷ್ಟ್ರದ ಮನಸ್ಥಿತಿಯು ನಿಮ್ಮ ಸಾಂವಿಧಾನಿಕ ಧರ್ಮದಲ್ಲಿ ತೊಡಗಿಸಿಕೊಳ್ಳುವುದು, ಮಾನವೀಯತೆಯ ಕಲ್ಯಾಣಕ್ಕಾಗಿ  ಕೆಲಸ ಮಾಡುವುದಾಗಿದ್ದು ಮತ್ತು ಖಂಡಿತವಾಗಿಯೂ ಅಡ್ಡಿಪಡಿಸುವುದಿಲ್ಲ ಮತ್ತು ಮಾನವೀಯತೆಯ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನಿರೂಪಣೆಗಳನ್ನು  ಪ್ರಚಾರ ಮಾಡುವುದಲ್ಲ.

ಇಂದಿನ ಜಗತ್ತಿನಲ್ಲಿ, ಧರ್ಮ ಮತ್ತು ಧರ್ಮದ ಪ್ರಸ್ತುತತೆ ಎಂದಿಗಿಂತಲೂ ಹೆಚ್ಚು ವಿಮರ್ಶಾತ್ಮಕವಾಗಿದೆ. ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ವಾಸ್ತವಿಕವಾಗಿ ಇರುವ ಸವಾಲುಗಳನ್ನು ನಾವು ನೋಡಿದಾಗ,   ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿಯಿಂದ ಉಂಟಾದ ಕ್ಷಿಪ್ರ ಬದಲಾವಣೆಗಳು ಮಾತ್ರವಲ್ಲದೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡವರ ಕಾರ್ಯಗಳಿಂದ ಸಮಾಜದ ನೈತಿಕತೆ ಮತ್ತು ನೈತಿಕ ಅಡಿಪಾಯಗಳು ಸವಾಲಾಗುತ್ತಿರುವ ಸಮಯವನ್ನು ನಾವು ನೋಡುತ್ತಿದ್ದೇವೆ.

ಸಾಂಪ್ರದಾಯಕ ಪ್ರದೇಶವನ್ನು ಮೀರಿ ಹೋಗುವ ಪ್ರವೃತ್ತಿಯು ಅಧರ್ಮದ ಕ್ರೋಧವನ್ನು ಪ್ರಕಟಿಸುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಲು ನಾವು ನಮ್ಮ ಮಿತಿಗಳಿಗೆ ಬದ್ಧರಾಗಿರಬೇಕು.

ರಾಜ್ಯದ ಎಲ್ಲಾ ಅಂಗಗಳು ಸಾಮರಸ್ಯದಿಂದ ಮತ್ತು ಅವುಗಳ ನಿಗಧಿತ ಸ್ಥಳ ಮತ್ತು ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದು ಸಂಪೂರ್ಣವಾಗಿ ಮೂಲಭೂತವಾಗಿದೆ. ಉಲ್ಲಂಘನೆಗಳು ಧರ್ಮದ ಮಾರ್ಗದಿಂದ ದಿಕ್ಕು ತಪ್ಪಿರುತ್ತವೆ  ಮತ್ತು  ಕೆಲವೊಮ್ಮೆ ತೀವ್ರವಾದ ನೋವಿಗೆ ಕಾರಣವಾಗಬಹುದು.

ಪ್ರಜ್ಞಾಪೂರ್ವಕ ಮನಸ್ಸುಗಳು ಉದ್ದೇಶಪೂರ್ವಕವಾಗಿ ರಾಜಕೀಯ ಲಾಭ ಪಡೆಯಲು ಅಥವಾ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳುವ ಮೂಲಕ ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಿದಾಗ ಅದು ಧರ್ಮಕ್ಕೆ ವಿರುದ್ಧವಾಗಿರುತ್ತದೆ.

ಇದು ಸಮಾಜಕ್ಕೆ ಎಂತಹ ಗಂಭೀರ ಸವಾಲಾಗಿದೆ, ಜ್ಞಾನವುಳ್ಳ ವ್ಯಕ್ತಿ, ವಾಸ್ತವವನ್ನು ತಿಳಿದಿರುವ ತಿಳುವಳಿಕೆಯುಳ್ಳ ಮನಸ್ಸು, ರಾಜಕೀಯ ಲಾಭ ಪಡೆಯಲು ಜನರನ್ನು ತಪ್ಪುದಾರಿಗೆಳೆಯುವ ಕಲಿಸಲು ತನ್ನ ಶ್ರೇಷ್ಠ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ. ಅಂತಹ ಸಂದರ್ಭಗಳಲ್ಲಿ ಮೌನವನ್ನು ಕಾಪಾಡಿಕೊಳ್ಳುವುದು ಮತ್ತು ಅಂತಹ ಧೈರ್ಯವನ್ನು ಹೊಂದಿರುವುದು ಧರ್ಮವನ್ನು ಅಪವಿತ್ರಗೊಳಿಸುವುದಕ್ಕಿಂತ ಕಡಿಮೆಯಿಲ್ಲ. ನಮ್ಮ ರಾಷ್ಟ್ರೀಯತೆ ಮತ್ತು ಮಾನವೀಯತೆಯನ್ನು ಗುರಿಯಾಗಿಸುವ ಇಂತಹ ಹೇಯ ಪ್ರವೃತ್ತಿಗಳು ಮತ್ತು ದುರುದ್ದೇಶಪೂರಿತ ಉದ್ದೇಶಗಳಿಗೆ ನಮ್ಮ ಧರ್ಮಕ್ಕೆ ಗೌರವವಾಗಿ ಸರಿಯಾದ ಖಂಡನೆ ಅಗತ್ಯವಿದೆ.

ಇಂತಹ ಶಕ್ತಿಗಳನ್ನು ಸಹಿಸುವುದು ಧರ್ಮವಾಗುವುದಿಲ್ಲ. ಧರ್ಮವನ್ನು ಕೆಡಿಸಲು, ನಮ್ಮ ಸಂಸ್ಥೆಗಳನ್ನು ಕಳಂಕಗೊಳಿಸಲು ಮತ್ತು ನಮ್ಮ ರಾಷ್ಟ್ರೀಯತೆಯನ್ನು ಕೆಡಿಸಲು ಪ್ರಯತ್ನಿಸುವ ಅಂತಹ ಶಕ್ತಿಗಳನ್ನು ತಟಸ್ಥಗೊಳಿಸಲು ನಾನು ನನ್ನ ಎಲ್ಲಾ ಶಕ್ತಿಯನ್ನು ಬಳಸಬೇಕೆಂದು ಧರ್ಮವು ಒತ್ತಾಯಿಸುತ್ತದೆ.

ಒಮ್ಮೆ ಅಧಿಕಾರದಲ್ಲಿದ್ದ ಹಿರಿಯ ರಾಜಕಾರಣಿಯೊಬ್ಬರು ನೆರೆಹೊರೆಯಲ್ಲಿ ಸಾರ್ವಜನಿಕವಾಗಿ ಏನಾಗುತ್ತದೆಯೋ ಅದು ಭಾರತದಲ್ಲಿ ಕೂಡಾ ಸಂಭವಿಸುತ್ತದೆ ಎಂದು ಹೇಳುವುದು ಎಷ್ಟು ನೋವಿನ ಸಂಗತಿ. ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿ ಈ ರೀತಿ ವರ್ತಿಸುವುದು ಹೇಗೆ? ಅಂತಹ ಮಾತುಗಳು ಅಧರ್ಮವಾಗಿದೆ. ಅಂತಹ ಕ್ರಮಗಳನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ, ಅವರ ಕ್ರಿಯೆಯು ಅಧರ್ಮವಾಗಿದೆ..

ಸ್ನೇಹಿತರೇ ನಾನು ನಿಮಗೆ ನೆನಪಿಸುತ್ತೇನೆ, 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಧರ್ಮವನ್ನು ನಿರ್ಲಕ್ಷಿಸಿ ಮತ್ತು ಅತಿರೇಕದ ನಿರ್ಲಕ್ಷ್ಯದಿಂದ ಅಧಿಕಾರಕ್ಕೆ ಅಂಟಿಕೊಳ್ಳಲು ಮತ್ತು ಸ್ವಹಿತಾಸಕ್ತಿಗಾಗಿ  ಸರ್ವಾಧಿಕಾರಿಯಾಗಿ ವರ್ತಿಸಿದರು. ಅಧರ್ಮದ ಈ ಕಾರ್ಯವನ್ನು ಬೆಂಬಲಿಸಲಾಗುವುದಿಲ್ಲ, ನಿರ್ಲಕ್ಷಿಸಲಾಗುವುದಿಲ್ಲ ಮತ್ತು ಮರೆಯಲಾಗುವುದಿಲ್ಲ. ಒಬ್ಬರ ಆಶಯವನ್ನು ಪೂರೈಸುವುದಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.

ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ, ಅದು ಧರ್ಮಕ್ಕೆ ನಮ್ಮ ಬದ್ಧತೆಯನ್ನು ವಿವರಿಸುವ ಪವಿತ್ರ ಒಡಂಬಡಿಕೆಯಾಗಿದೆ. ನಮ್ಮ ಕರ್ತವ್ಯಗಳು ಧರ್ಮದಲ್ಲಿ ಬೇರೂರಿರುವುದರಿಂದ ಅದು ನಮ್ಮ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

 

*****


(Release ID: 2048586) Visitor Counter : 28


Read this release in: English , Urdu , Hindi , Gujarati