ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಉದಯಪುರದಲ್ಲಿ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ಒಂಬತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್ ಆರ್ ಬಿ) ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು


ವಿಶೇಷವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆರ್ ಆರ್ ಬಿಗಳಿಗೆ ಶ್ರೀಮತಿ ಸೀತಾರಾಮನ್ ಒತ್ತಾಯ

2022 ರಿಂದ ಪಶ್ಚಿಮ ಮಧ್ಯ ವಲಯದ  ಒಂಬತ್ತು ಆರ್ ಆರ್ ಬಿಗಳ  ತಂತ್ರಜ್ಞಾನದ ಉನ್ನತೀಕರಣದ ಸುಧಾರಣೆಗೆ ಕೇಂದ್ರ ಹಣಕಾಸು ಸಚಿವರ ಒಪ್ಪಿಗೆ

ಶ್ರೀಮತಿ ಸೀತಾರಾಮನ್, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಸಾಲವನ್ನು ಖಚಿತಪಡಿಸಿಕೊಳ್ಳಲು ಅತಿ ಸಣ್ಣ, ಸಣ್ಣ,ಮ ಮಧ್ಯಮ ಉದ್ಯಮಗಳ ಕ್ಲಸ್ಟರ್ ಗಳಲ್ಲಿ ನೆಲೆಗೊಂಡಿರುವ ಆರ್ ಆರ್ ಬಿ ಶಾಖೆಗಳ ಸೇವೆ ತಲುಪಿಸುವ ಸಕ್ರಿಯ ಕಾರ್ಯಕ್ರಮಗಳಿಗೆ ಒತ್ತು ನೀಡಿದರು

Posted On: 22 AUG 2024 6:13PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಉದಯಪುರದಲ್ಲಿ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನ ರಾಜ್ಯಗಳ ಒಂಬತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್ ಆರ್ ಬಿ) ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಎಂ. ನಾಗರಾಜು, ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್), ಹೆಚ್ಚುವರಿ ಕಾರ್ಯದರ್ಶಿ, ಇತರ ಹಿರಿಯ ಡಿಎಫ್ಎಸ್ ಅಧಿಕಾರಿಗಳು, ಆರ್ ಆರ್ ಬಿಗಳ ಅಧ್ಯಕ್ಷರು ಮತ್ತು ಪ್ರಾಯೋಜಕ ಬ್ಯಾಂಕುಗಳ ಸಿಇಒಗಳು, ಆರ್ ಬಿಐ, ಎಸ್ ಐಡಿಬಿಐ ಮತ್ತು ನಬಾರ್ಡ್ ಪ್ರತಿನಿಧಿಗಳು ಮತ್ತು 5 ರಾಜ್ಯಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಶೀಲನಾ ಸಭೆಯು ವ್ಯಾಪಾರದ ಕಾರ್ಯಕ್ಷಮತೆ, ಡಿಜಿಟಲ್ ತಂತ್ರಜ್ಞಾನ ಸೇವೆಗಳನ್ನು ಉನ್ನತೀಕರಿಸುವುದು, ಎಂಎಸ್ಎಂಇ ಕ್ಲಸ್ಟರ್ ಗಳಲ್ಲಿ ವ್ಯಾಪಾರ ವೃದ್ಧಿಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆಯನ್ನು ತೀವ್ರಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.

ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಆರ್ ಆರ್ ಬಿ ಗಳ ಪ್ರಮುಖ ಪಾತ್ರವನ್ನು ಗಮನಿಸಿದ ಕೇಂದ್ರ ಹಣಕಾಸು ಸಚಿವರು, ವಿಶೇಷವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆರ್ ಆರ್ ಬಿ ಗಳನ್ನು ಒತ್ತಾಯಿಸಿದರು.

ಶ್ರೀಮತಿ ಸೀತಾರಾಮನ್ ಅವರು ಬುಂದೇಲ್ ಖಂಡ್ ಪ್ರದೇಶದಲ್ಲಿ ಮುದ್ರಾ ಯೋಜನೆಯ ಕಡಿಮೆ ಬಳಕೆಯನ್ನು ಗಮನಿಸಿದರು ಮತ್ತು ಬುಂದೇಲ್ ಖಂಡ್ ಪ್ರದೇಶ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ, ಇತರ ಹಣಕಾಸು ಸೇರ್ಪಡೆ ಯೋಜನೆಗಳ ಜೊತೆಗೆ ಮುದ್ರಾ ಯೋಜನೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಾಯೋಜಕತ್ವದ ಬ್ಯಾಂಕುಗಳು ಮತ್ತು ಆರ್ ಆರ್ ಬಿಗಳೊಂದಿಗೆ ವಿಶೇಷ ಸಭೆಗಳನ್ನು ನಡೆಸಲು ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಗೆ (ಎಸ್ ಎಲ್‌ ಬಿಸಿ) ನಿರ್ದೇಶನ ನೀಡಿದರು.

ಕೇಂದ್ರ ಹಣಕಾಸು ಸಚಿವರು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಸೂರ್ಯ ಗೃಹ ಉಚಿತ ವಿದ್ಯುತ್ ಯೋಜನೆಯ ನೈಸರ್ಗಿಕ ಸಾಮರ್ಥ್ಯವನ್ನು ಗಮನಿಸಿದರು ಮತ್ತು ಈ ಯೋಜನೆಗಾಗಿ ಜಾಗೃತಿ ಮೂಡಿಸಲು ಮತ್ತು ಸಾಲವನ್ನು ಒದಗಿಸುವಂತೆ ಆರ್ ಆರ್ ಬಿ ಗಳನ್ನು ಒತ್ತಾಯಿಸಿದರು. ಆರ್ ಆರ್ ಬಿ ಗಳಿಂದ ಕ್ರೆಡಿಟ್ (ಸಾಲ) ತಲುಪಿಸುವಿಕೆಯನ್ನು ಹೆಚ್ಚಿಸಲು ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಕಾರ್ಯಕ್ರಮದ ಸಾಮರ್ಥ್ಯವನ್ನು ಸಹ ಎತ್ತಿ ತೋರಿಸಲಾಗಿದೆ. ಅದೇ ರೀತಿ, ಆರ್ ಆರ್ ಬಿ ಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಂಭಾವ್ಯ ವ್ಯವಹಾರಗಳನ್ನು ಗುರುತಿಸಲು ತಮ್ಮ ಕಾರ್ಯದ ಕ್ಷೇತ್ರಗಳಲ್ಲಿ ಸಾಲವನ್ನು ಒದಗಿಸಲು ನಿರ್ದೇಶಿಸಲಾಯಿತು. ಆರ್ ಆರ್ ಬಿ ಗಳು ತಳಮಟ್ಟದಲ್ಲಿ ಕೃಷಿ ಸಾಲ ವಿತರಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಮತ್ತು ಆದ್ಯತೆಯ ವಲಯದ ಸಾಲದ ಉದ್ದೇಶಗಳನ್ನು ಸಾಧಿಸಲು ನಿರ್ದೇಶಿಸಲಾಯಿತು.

ಆರ್ ಆರ್ ಬಿಗಳ ಕ್ರೋಢೀಕರಿಸಲಾದ ಬಂಡವಾಳ ಮತ್ತು ಅಪಾಯ (ಅಂದಾಜು) ಆಸ್ತಿ ಅನುಪಾತವು (Consolidated Capital to Risk (Weighted) Assets Ratio – ಸಿ ಆರ್‌ ಎ ಆರ್) ಹಣಕಾಸು ವರ್ಷ 2021 ರಲ್ಲಿ ಶೇಕಡಾ 7.8 ರಿಂದ ಹಣಕಾಸು ವರ್ಷ 2024 ರಲ್ಲಿ ಶೇಕಡಾ 13.7 ಕ್ಕೆ ಏರಿಕೆಯಾಗಿದೆ ಮತ್ತು ಹಣಕಾಸು ವರ್ಷ 2021 ರಲ್ಲಿ 41 ಕೋಟಿ ರೂಪಾಯಿಗಳ ನಷ್ಟದಿಂದ ಲಾಭದಾಯಕತೆಯು 2,018 ಕೋಟಿ ರೂಪಾಯಿಗಳ ನಿವ್ವಳ ಲಾಭಕ್ಕೆ ಸುಧಾರಿಸಿದೆ ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್ ಪಿ ಎ) 3.9% ಅನುಪಾತದೊಂದಿಗೆ ತುಲನಾತ್ಮಕವಾಗಿ ಕಡಿಮೆ ಮಟ್ಟದಲ್ಲಿವೆ. ಶ್ರೀಮತಿ ಸೀತಾರಾಮನ್ ಅವರು 2022 ರಿಂದ ಪಶ್ಚಿಮ ಮಧ್ಯ ವಲಯದ ಒಂಬತ್ತು ಆರ್ ಆರ್ ಬಿಗಳ ತಂತ್ರಜ್ಞಾನದ ಉನ್ನತೀಕರಣದಲ್ಲಿನ ತೃಪ್ತಿಕರ ಸುಧಾರಣೆಯನ್ನು ಮೆಚ್ಚಿಕೊಂಡರು - ಆರ್ ಆರ್ ಬಿಗಳ ನಿಯಮಿತ ಪರಿಶೀಲನೆಯನ್ನು ಪ್ರಾರಂಭಿಸಿದ ವರ್ಷ  ಮತ್ತು ಭವಿಷ್ಯದಲ್ಲಿ ಇದೇ  ವೇಗವನ್ನು ಮುಂದುವರಿಸಲು ಈ ಆರ್ ಆರ್ ಬಿಗಳನ್ನು ಒತ್ತಾಯಿಸಿದರು.

ಕೇಂದ್ರ ಹಣಕಾಸು ಸಚಿವರು ಆರ್ ಆರ್ ಬಿಗಳಿಗೆ ತಮ್ಮ ಆರೋಗ್ಯಕರ ಸಿಎಎಸ್ ಎ (ಚಾಲ್ತಿ ಮತ್ತು ಉಳಿತಾಯ ಖಾತೆ ಅನುಪಾತ) ಅನುಪಾತವನ್ನು ಹೆಚ್ಚು ಸಾಲಗಳನ್ನು ವಿತರಿಸಲು ಮತ್ತು ರಾಜ್ಯ ಸರ್ಕಾರಗಳಿಂದ ಆರ್ ಆರ್ ಬಿಗಳ ಬಾಕಿಯನ್ನು  ಪಡೆಯಲು ಸರ್ಕಾರ ಮತ್ತು ಪ್ರಾಯೋಜಕ ಬ್ಯಾಂಕ್ ಗಳ  ಪ್ರಯತ್ನಗಳ ಜೊತೆಗೆ  ಆರ್ ಬಿ ಐ ಮಧ್ಯಸ್ಥಿಕೆಗಾಗಿ  ಒತ್ತಾಯಿಸಿದರು.  

ಪರಿಶೀಲನಾ ಸಭೆಯಲ್ಲಿ, ಹಣಕಾಸು ಸಚಿವರು ಆರ್ ಆರ್ ಬಿಗಳಿಗೆ ಹೆಚ್ಚು ಗ್ರಾಹಕ ಸ್ನೇಹಿಯಾಗಲು ಮತ್ತು ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ತಮ್ಮ ಸ್ಥಳೀಯ ಸಂಪರ್ಕವನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಪ್ರಾಯೋಜಕ ಬ್ಯಾಂಕುಗಳು ತಾಂತ್ರಿಕ ಸಹಾಯವನ್ನು ಒದಗಿಸುವ ಮೂಲಕ, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಆರ್ಆರ್ಬಿ ಗಳು ಯಶಸ್ವಿಯಾಗಲು ಅಗತ್ಯವಿರುವ ಸಂಪನ್ಮೂಲಗಳಿಗೆ ಪ್ರವೇಶಾವಕಾಶವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಶ್ರೀಮತಿ ಸೀತಾರಾಮನ್ ಅವರು ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಸಾಲವನ್ನು ಖಚಿತಪಡಿಸಿಕೊಳ್ಳಲು ಎಂಎಸ್ಎಂಇ ಕ್ಲಸ್ಟರ್ ಗಳಲ್ಲಿರುವ ಆರ್ಆರ್ಬಿ ಶಾಖೆಗಳ ಸೇವೆ ತಲುಪಿಸುವ ಸಕ್ರಿಯ ಕಾರ್ಯಕ್ರಮಗಳಿಗೆ ಒತ್ತು ನೀಡಿದರು. ಎಲ್ಲಾ ಆರ್ಆರ್ಬಿ ಗಳು ಕ್ಲಸ್ಟರ್ ಚಟುವಟಿಕೆಗಳಿಗೆ ಅನುಗುಣವಾಗಿ ಎಂಎಸ್ಎಂಇ ಉತ್ಪನ್ನಗಳನ್ನು ಮಾಡಿವೆ. ಆದಾಗ್ಯೂ, ಅವರು ಆ ವಿಭಾಗದಲ್ಲಿ ತಮ್ಮ ಸಾಲದ ವಿಭಾಗವನ್ನು( ಕ್ರೆಡಿಟ್ ಪೋರ್ಟ್ಫೋಲಿಯೊ) ನಿಯಮಿತವಾಗಿ ಪರಿಶೀಲಿಸಬೇಕಾಗುತ್ತದೆ.

ಪ್ರಾಯೋಜಕ ಬ್ಯಾಂಕುಗಳು ಮತ್ತು ಆರ್ ಆರ್ ಬಿಗಳು ಮುಂಬರುವ ಸವಾಲುಗಳನ್ನು ಗುರುತಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಆಸ್ತಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಡಿಜಿಟಲ್ ಸೇವೆಗಳನ್ನು ವಿಸ್ತರಿಸುವುದು ಮತ್ತು ಬಲವಾದ ಸಾಂಸ್ಥಿಕ ಆಡಳಿತವನ್ನು ಖಚಿತಪಡಿಸಿಕೊಳ್ಳುವುದು ನಿರಂತರ ಗಮನ ಅಗತ್ಯವಿರುವ ಕ್ಷೇತ್ರಗಳಾಗಿವೆ ಎಂದು ಕೇಂದ್ರ ಹಣಕಾಸು ಸಚಿವರು ಒತ್ತಿ ಹೇಳಿದರು.

 

*****


(Release ID: 2048061) Visitor Counter : 32