ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಇ-ಮೊಬಿಲಿಟಿ, ಕ್ಯಾಪಿಟಲ್ ಗೂಡ್ಸ್ ಮತ್ತು ವೇ ಫಾರ್ವರ್ಡ್ ಕುರಿತು ಬಜೆಟ್ ನಂತರದ ವೆಬ್ನಾರ್ ಅನ್ನು ಆಯೋಜಿಸಿತು



ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಮುನ್ನಡೆಸಲು, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರಚುರಪಡಿಸಲು ಬದ್ಧವಾಗಿದೆ: ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಆಟೋಮೊಬೈಲ್ಸ್ ಮತ್ತು ಆಟೋ ಘಟಕಗಳಿಗೆ ಪಿ.ಎಲ್.ಐ. ಯೋಜನೆಯಂತಹ ಉಪಕ್ರಮಗಳ ಮೂಲಕ ನಾವೀನ್ಯತೆ ಮತ್ತು ಸ್ವಾವಲಂಬನೆಯನ್ನು ನಡೆಸುತ್ತಿದೆ: ಕೇಂದ್ರ ರಾಜ್ಯ ಖಾತೆ ಸಚಿವರಾದ  ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ

Posted On: 22 AUG 2024 6:16PM by PIB Bengaluru

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂ.ಹೆಚ್.ಐ) ಹೊಸದಿಲ್ಲಿಯ ಉದ್ಯೋಗ್ ಭವನದಲ್ಲಿ "ಇ-ಮೊಬಿಲಿಟಿ, ಕ್ಯಾಪಿಟಲ್ ಗೂಡ್ಸ್ ಮತ್ತು ವೇ ಫಾರ್ವರ್ಡ್" ಕುರಿತು ಬಜೆಟ್ ನಂತರದ ವೆಬ್ನಾರ್ ಅನ್ನು ಆಯೋಜಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ವಹಿಸಿದ್ದರು.  ರಾಜ್ಯ ಖಾತೆ ಸಚಿವ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ, ಕಾರ್ಯದರ್ಶಿ ಎಂಎಚ್ಐ ಶ್ರೀ ಕಮ್ರಾನ್ ರಿಜ್ವಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಎಂಎಚ್ಐ ಶ್ರೀಮತಿ ಆರ್ತಿ ಭಟ್ನಾಗರ್, ಹೆಚ್ಚುವರಿ ಕಾರ್ಯದರ್ಶಿ ಎಂಎಚ್ಐ ಡಾ. ಹನೀಫ್ ಖುರೇಷಿ, ಎಂಎಚ್ಐನ ಹಿರಿಯ ಅಧಿಕಾರಿಗಳು, ಎಂಎಚ್ಐ ಅಡಿಯಲ್ಲಿ ಸಿಪಿಎಸ್ಇಗಳು ಮತ್ತು ವಾಹನ ಕ್ಷೇತ್ರದ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. 

“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ 2047’ ಮತ್ತು ʼ2070 ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವುದುʼ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂ.ಹೆಚ್.ಐ) ಗುರಿಯಾಗಿದೆ. ಪಿ.ಎಲ್.ಐ., ಫಾಮೆ, ಇ.ಎಂ.ಪಿ.ಎಸ್. ಮತ್ತು ಸುಧಾರಿತ ಬಂಡವಾಳ ಸರಕುಗಳ ಯೋಜನೆಗಳಂತಹ ಪ್ರಮುಖ ಉಪಕ್ರಮಗಳ ಮೂಲಕ ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಮುನ್ನಡೆಸಲು, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ. ಈ ಪ್ರಯತ್ನಗಳು ಹೆಚ್ಚಿನ ಸ್ವಾವಲಂಬನೆ ಮತ್ತು ವರ್ಧಿತ ಆತ್ಮನಿರ್ಭರ್ತದ ಕಡೆಗೆ ಭಾರತದ ಪ್ರಯಾಣವನ್ನು ವೇಗಗೊಳಿಸುತ್ತವೆ” ಎಂದು ಕೇಂದ್ರ ಸಚಿವ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ರಾಜ್ಯ ಖಾತೆ ಸಚಿವ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಮಾತನಾಡಿ, “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ, ಆಟೋಮೋಟಿವ್ ಕ್ಷೇತ್ರವು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರೀ ಕೈಗಾರಿಕೆಗಳ ಸಚಿವಾಲಯವು ಆಟೋಮೊಬೈಲ್ಗಳು ಮತ್ತು ಆಟೋ ಕಾಂಪೊನೆಂಟ್ಗಳಿಗಾಗಿ ಪಿ.ಎಲ್.ಐ ಸ್ಕೀಮ್ನಂತಹ ಉಪಕ್ರಮಗಳ ಮೂಲಕ ನಾವೀನ್ಯತೆ ಮತ್ತು ಸ್ವಾವಲಂಬನೆಯನ್ನು ನಡೆಸುತ್ತಿದೆ. ಒಟ್ಟಾಗಿ, ನಾವು ಭಾರತಕ್ಕೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ರಚಿಸಬಹುದು” ಎಂದು ಹೇಳಿದರು.

ವೆಬಿನಾರ್ ಯೂನಿಯನ್ ಬಜೆಟ್ 2024-25 ಕುರಿತು ಸಮಗ್ರ ಚರ್ಚೆಗಳನ್ನು ಒಳಗೊಂಡಿತ್ತು, ಉತ್ಪಾದನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಸೇರಿದಂತೆ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಮತ್ತು ಬಲಪಡಿಸುವ ಮೇಲೆ ಕೇಂದ್ರೀಕರಿಸಿದೆ. ಪಾವತಿ ಭದ್ರತಾ ಕಾರ್ಯ ವಿಧಾನಗಳ ಮೂಲಕ ಸಾರ್ವಜನಿಕ ಸಾರಿಗೆ ನೆಟ್ವರ್ಕ್ ಗಳಲ್ಲಿ ಇ-ಬಸ್ ಗಳ ಹೆಚ್ಚಿನ ಅಳವಡಿಕೆಗೆ ಈ ಅಧಿವೇಶನವು ಒತ್ತಿಹೇಳಿತು.

ವೆಬ್ನಾರ್ ಸಮಯದಲ್ಲಿ ಚರ್ಚಿಸಲಾದ ಮಹತ್ವದ ಬೆಳವಣಿಗೆಯೆಂದರೆ ಅಡ್ವಾನ್ಸ್ಡ್ ಅಲ್ಟ್ರಾ ಸೂಪರ್ ಕ್ರಿಟಿಕಲ್ (ಎ.ಯು.ಎಸ್.ಸಿ) ಥರ್ಮಲ್ ಪವರ್ ಪ್ಲಾಂಟ್ಗಳಿಗೆ ಸ್ವದೇಶಿ ತಂತ್ರಜ್ಞಾನವನ್ನು ಪೂರ್ಣಗೊಳಿಸುವುದು, ಇದು ಹೆಚ್ಚಿನ ದಕ್ಷತೆಯನ್ನು ನೀಡುತ್ತದೆ. ಎನ್.ಟಿ.ಪಿ.ಸಿ ಮತ್ತು ಬಿ.ಹೆಚ್.ಇ.ಎಲ್. ನಡುವಿನ ಜಂಟಿ ಉದ್ಯಮವು ಎ.ಯು.ಎಸ್.ಸಿ ತಂತ್ರಜ್ಞಾನವನ್ನು ಬಳಸಿಕೊಂಡು 800 ಮೆಗಾವ್ಯಾಟ್ ವಾಣಿಜ್ಯ ಸ್ಥಾವರವನ್ನು ಸ್ಥಾಪಿಸುತ್ತದೆ, ಸರ್ಕಾರವು ಅಗತ್ಯ ಹಣಕಾಸಿನ ಬೆಂಬಲವನ್ನು ನೀಡುತ್ತದೆ.

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂ.ಹೆಚ್.ಐ) ಇದರ ಪ್ರಮುಖ ಉಪಕ್ರಮಗಳನ್ನು ಸಹ ವಿವರಿಸಲಾಗಿದೆ, ಅವುಗಳೆಂದರೆ:

* ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸ್ಥಳೀಕರಣವನ್ನು ಉತ್ತೇಜಿಸಲು ₹25,938 ಕೋಟಿಗಳ ಅನುಮೋದಿತ ವೆಚ್ಚದೊಂದಿಗೆ ಪಿ.ಎಲ್.ಐ ಅಟೋ ಯೋಜನೆ.
* ಭಾರತದ ಎಸಿಸಿ ಉತ್ಪಾದನೆಯನ್ನು ಹೆಚ್ಚಿಸಲು 50  ಜಿ.ಡಬ್ಲ್ಯೂ.ಹೆಚ್ ಗೆ ₹18,100 ಕೋಟಿಗಳ ಅನುಮೋದಿತ ವೆಚ್ಚದೊಂದಿಗೆ ಪಿ.ಎಲ್.ಐ ಎಸಿಸಿ ಯೋಜನೆ.
* ಇವಿ ತಯಾರಿಕೆಯನ್ನು ಬೆಂಬಲಿಸಲು ₹778 ಕೋಟಿ ವೆಚ್ಚದಲ್ಲಿ ಇ.ಎಂ.ಪಿ.ಎಸ್. ಯೋಜನೆ, ವಿಶೇಷವಾಗಿ 2ಡಬ್ಲ್ಯೂ ಮತ್ತು 3ಡಬ್ಲ್ಯೂ.
* ಎಸ್.ಎಂ.ಇ.ಸಿ. ಉಪಕ್ರಮವು ಕನಿಷ್ಠ ₹4,150 ಕೋಟಿ ಬದ್ಧತೆಯೊಂದಿಗೆ ಜಾಗತಿಕ ಇವಿ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
* ಬಂಡವಾಳ ಸರಕುಗಳ ಯೋಜನೆಯು ಅದರ ಎರಡು ಹಂತಗಳಲ್ಲಿ ₹2,203 ಕೋಟಿಗಳ ಸಂಯೋಜಿತ ವೆಚ್ಚವನ್ನು ಹೊಂದಿದೆ, ಹೂಡಿಕೆಯನ್ನು ಉತ್ತೇಜಿಸಲು, ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.

ವೆಬ್ನಾರ್ನಲ್ಲಿ ನೀತಿ ಆಯೋಗದ  ಸಲಹೆಗಾರ ಶ್ರೀ ಸುಧೇಂದು ಜೆ. ಸಿನ್ಹಾ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧಿಕಾರಿಗಳು, ಪ್ರತಿನಿಧಿಗಳು, ಚಾರ್ಜ್ ಮಾಡುವ ಮೂಲಸೌಕರ್ಯ ಪೂರೈಕೆದಾರರಾದ ರಿಲಯನ್ಸ್‌  ಜಿಯೊ, ಬಿಪಿ. ಅಡಾನಿ, ಪವರ್, ಸ್ಟ್ಯಾಟಿಕ್, ಮತ್ತು ಟಾಟಾ ಪವರ್, ಹಾಗೆಯೇ ಮಾರುತಿ, ಮಹೀಂದ್ರಾ, ವೋಕ್ಸ್ವ್ಯಾಗನ್, ಅಥರ್, ಐಇಎಸ್ಎ, ಟಾಟಾ ಮೋಟಾರ್ಸ್, ಎಲ್&ಟಿ, ಐಇಇಎಂಎ ಸಂಸ್ಥೆಗಳ ಅಧಿಕಾರಿಗಳು ಮತ್ತು ಇತರ ಉದ್ಯಮದ ಪ್ರಮುಖರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

 

*****


(Release ID: 2048059) Visitor Counter : 36


Read this release in: English , Urdu , Hindi , Tamil