ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಯು.ಪಿ.ಎಸ್.ಸಿ. ಸಿವಿಲ್ ಸರ್ವಿಸ್ ಪರೀಕ್ಷೆ 2022 ರ ಫಲಿತಾಂಶದ ಬಗ್ಗೆ ಹಕ್ಕುಗಳನ್ನು ಪ್ರತಿಪಾದಿಸಿ ತಪ್ಪು ಮಾಹಿತಿ ನೀಡಿ ಅಡ್ಡದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಶ್ರೀರಾಮ್ಸ್ ಐಎಎಸ್ ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ₹ 3 ಲಕ್ಷ ದಂಡವನ್ನು ವಿಧಿಸಿದೆ
ಸಂಸ್ಥೆಯು ಜಾಹೀರಾತಿನಲ್ಲಿ ಹಕ್ಕು ಪ್ರತಿಪಾದಿಸಿ ಹೇಳಿದ 200 ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆಗಳಲ್ಲಿ, ಕೇವಲ 171 ಅಭ್ಯರ್ಥಿಗಳ ನಿಜವಾದ ಆಯ್ಕೆಗಳನ್ನು ಸಿಸಿಪಿಎ ಕಂಡುಹಿಡಿದಿದೆ
ದಾರಿತಪ್ಪಿಸುವ ಜಾಹೀರಾತನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ಸಿಸಿಪಿಎಯು ರಾಮ್ಸ್ ಐಎಎಸ್ ಸಂಸ್ಥೆ ವಿರುದ್ಧ ಆದೇಶ ಹೊರಡಿಸಿದೆ
Posted On:
18 AUG 2024 9:28AM by PIB Bengaluru
ತಪ್ಪು ಮಾಹಿತಿಯ ಅಡ್ಡದಾರಿಗೆಳೆಯುವ ಜಾಹೀರಾತಿಗಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಶ್ರೀರಾಮ್ಸ್ ಐಎಎಸ್ ಸಂಸ್ಥೆಗೆ ₹ 3 ಲಕ್ಷ ದಂಡ ವಿಧಿಸಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ವರ್ಗವಾಗಿ ಗ್ರಾಹಕರ ಹಕ್ಕನ್ನು ಉತ್ತೇಜಿಸಲು ಹಾಗೂ ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ನಿಬಂಧನೆಗಳಿಗೆ ವಿರುದ್ಧವಾದ ಯಾವುದೇ ಸರಕು ಅಥವಾ ಸೇವೆಗಳ ಸುಳ್ಳು ಮಾಹಿತಿ ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡದಂತೆ ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಉಲ್ಲಂಘನೆಯ ದೃಷ್ಟಿಯಿಂದ, ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ, ಮತ್ತು ಕಮಿಷನರ್, ಶ್ರೀ ಅನುಪಮ್ ಮಿಶ್ರಾ ಅವರ ನೇತೃತ್ವದ ಸಿಸಿಪಿಎಯು ಯು.ಪಿ.ಎಸ್.ಸಿ. ಸಿವಿಲ್ ಸರ್ವಿಸ್ ಪರೀಕ್ಷೆ 2022 ರ ಫಲಿತಾಂಶದ ಬಗ್ಗೆ ಹಕ್ಕುಗಳನ್ನು ಪ್ರತಿಪಾದಿಸಿ ತಪ್ಪು ಮಾಹಿತಿ ನೀಡಿ ಅಡ್ಡದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಶ್ರೀರಾಮ್ಸ್ ಐಎಎಸ್ ಸಂಸ್ಥೆ ವಿರುದ್ಧ ಆದೇಶವನ್ನು ಹೊರಡಿಸಿದೆ.
ಕೋಚಿಂಗ್ ಇನ್ಸ್ಟಿಟ್ಯೂಟ್ ಗಳು ಮತ್ತು ಆನ್ ಲೈನ್ ಎಡ್ ಟೆಕ್ ಪ್ಲಾಟ್ ಫಾರ್ಮ್ ಗಳು ಯಶಸ್ವಿ ಅಭ್ಯರ್ಥಿಗಳ ಅದೇ ಚಿತ್ರಗಳು ಮತ್ತು ಹೆಸರುಗಳನ್ನು “ತಮ್ಮದೆಂದು” ಬಳಸಿಕೊಂಡು, ಅಂತಹ ಅಭ್ಯರ್ಥಿಗಳು ಆಯ್ಕೆಮಾಡಿದ ಕೋರ್ಸ್ಗಳನ್ನು ಮತ್ತು ಅವರು ಭಾಗವಹಿಸಿದ ಕೋರ್ಸ್ ನ ಅವಧಿಯನ್ನು ಬಹಿರಂಗಪಡಿಸದೆ, ನಿರೀಕ್ಷಿತ ಆಕಾಂಕ್ಷಿಗಳ (ನೂತನ ಗ್ರಾಹಕರ) ಮೇಲೆ ಪ್ರಭಾವ ಬೀರಲು ಬಳಸುತ್ತವೆ.
ಶ್ರೀರಾಮ್ಸ್ ಐಎಎಸ್ ತನ್ನ ಜಾಹೀರಾತಿನಲ್ಲಿ ಈ ಕೆಳಗಿನ ಹಕ್ಕುಗಳನ್ನು ಪ್ರತಿಪಾದನೆ ಮಾಡಿದೆ-
i. "ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆ 2022 ರಲ್ಲಿ ನಮ್ಮ 200 ಅಧಿಕ ಮಂದಿ ಆಯ್ಕೆಯಾಗಿದ್ದಾರೆ"
ii. "ನಾವು ಭಾರತದ ನಂ.1 ಪ್ರತಿಷ್ಠಿತ ಯು.ಪಿ.ಎಸ್.ಸಿ./ ಐಎಎಸ್ ತರಬೇತಿ ಸಂಸ್ಥೆ"
ಶ್ರೀರಾಮ್ಸ್ ಐಎಎಸ್ ವಿವಿಧ ರೀತಿಯ ಕೋರ್ಸ್ಗಳನ್ನು ಈ ರೀತಿ ಜಾಹೀರಾತು ಮಾಡಿದೆ ಎಂದು ಸಿಸಿಪಿಎ ಕಂಡುಹಿಡಿದಿದೆ. ಮೇಲೆ ತಿಳಿಸಲಾದ ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶಗಳ ಕುರಿತಾಗಿ ಜಾಹೀರಾತು ಮಾಡಿದ ಯಶಸ್ವಿ ಅಭ್ಯರ್ಥಿಗಳು ಯಥಾರ್ಥವಾಗಿ ಆಯ್ಕೆ ಮಾಡಿಕೊಂಡ ಕೋರ್ಸ್ ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸಂಸ್ಥೆ ತನ್ನ ಜಾಹೀರಾತಿನಲ್ಲಿ ಮರೆಮಾಚಿದೆ. ಸಂಸ್ಥೆಯು ತನ್ನ ವೆಬ್ಸೈಟ್ ನಲ್ಲಿ ಜಾಹೀರಾತು ನೀಡಿದ, ಪಾವತಿಸಿದ ಕೋರ್ಸ್ಗಳನ್ನು ಎಲ್ಲಾ ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆಯು ಕ್ಲೈಮ್ ಮಾಡಿದ್ದು, ಇದು ಗ್ರಾಹಕರು ತಪ್ಪಾಗಿ ನಂಬುವ ಪರಿಣಾಮವನ್ನು ಹೊಂದಿದೆ.
ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಸಂಬಂಧದಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತಿನ ಬಗ್ಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್- 2(28) (iv) ತಿಳಿಸುತ್ತದೆ. ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸ್ಗಳಿಗೆ ಸಂಬಂಧಿಸಿದ ಮಾಹಿತಿಯು ಗ್ರಾಹಕರು ತಿಳಿದುಕೊಳ್ಳುವುದು ಮುಖ್ಯವಾಗಿದೆ, ಇದರಿಂದ ಅವರು ಯಾವ ಕೋರ್ಸ್ ಮತ್ತು ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಸೇರಬೇಕೆಂದು ನಿರ್ಧರಿಸುವಾಗ ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಬಹುದು.
ಶ್ರೀರಾಮ್ಸ್ ಐಎಎಸ್ ತನ್ನ ಪ್ರತಿಕ್ರಿಯೆಯಲ್ಲಿ ಯು.ಪಿ.ಎಸ್.ಸಿ. ಸಿ.ಎಸ್.ಇ. 2022 ರಲ್ಲಿ ಪ್ರತಿಪಾದಿಸಿದ 200ಕ್ಕೂ ಅಧಿಕ ಅಭ್ಯರ್ಥಿಗಳ ಆಯ್ಕೆಗಳ ಹಕ್ಕುಗಳ ವಿರುದ್ಧ ಕೇವಲ 171 ಯಶಸ್ವಿ ಅಭ್ಯರ್ಥಿಗಳ ವಿವರಗಳನ್ನು ಮಾತ್ರ ಸಲ್ಲಿಸಿದೆ. ಈ ಒಟ್ಟು 171 ಅಭ್ಯರ್ಥಿಗಳಲ್ಲಿ 102 ಅಭ್ಯರ್ಥಿಗಳು ಉಚಿತ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಿಂದ (ಐಜಿಪಿ), 55 ಉಚಿತ ಪರೀಕ್ಷಾ ಸರಣಿಯಿಂದ ಬಂದವರು, 9 ಜಿಎಸ್ ಕ್ಲಾಸ್ ರೂಮ್ ಕೋರ್ಸ್ನಿಂದ ಬಂದವರು ಮತ್ತು 5 ಅಭ್ಯರ್ಥಿಗಳು ಉಚಿತ ಕೋಚಿಂಗ್ ನೀಡಲು ರಾಜ್ಯ ಸರ್ಕಾರ ಮತ್ತು ಸಂಸ್ಥೆಯ ನಡುವೆ ಸಹಿ ಮಾಡಿದ ತಿಳುವಳಿಕಾ ಒಪ್ಪಂದದ ಅಡಿಯಲ್ಲಿ ವಿವಿಧ ರಾಜ್ಯಗಳಿಂದ ಬಂದವರು. ಈ ಅಂಶವನ್ನು ತನ್ನ ಜಾಹೀರಾತಿನಲ್ಲಿ ಸಂಸ್ಥೆ ಬಹಿರಂಗಪಡಿಸಲಿಲ್ಲ, ಇದರಿಂದಾಗಿ ಗ್ರಾಹಕರನ್ನು ಉದ್ಧೇಶಪೂರ್ವಕವಾಗಿ ವಂಚಿಸಲಾಗಿದೆ.
ನಾಗರಿಕ ಸೇವಾ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳು ಎಲ್ಲಾ 3 ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಪೂರ್ವಪ್ರಾರಂಭಿಕ(ಪ್ರಿಲಿಮ್ಸ್), ಮುಖ್ಯ ಪರೀಕ್ಷೆಗಳು ಮತ್ತು ವ್ಯಕ್ತಿತ್ವ ಪರೀಕ್ಷೆ (ಪಿಟಿ). ಪ್ರಿಲಿಮ್ಸ್ ಸ್ಕ್ರೀನಿಂಗ್ ಪರೀಕ್ಷೆಯಾಗಿದ್ದರೂ, ಮುಖ್ಯ ಪರೀಕ್ಷೆಗಳು ಮತ್ತು ವ್ಯಕ್ತಿತ್ವ ಪರೀಕ್ಷೆ ಎರಡರಲ್ಲೂ ಪಡೆದ ಅಂಕಗಳನ್ನು ಅಂತಿಮವಾಗಿ ಆಯ್ಕೆ ಮಾಡಲು ಎಣಿಕೆ ಮಾಡಲಾಗುತ್ತದೆ. ಮುಖ್ಯ ಪರೀಕ್ಷೆಗಳು ಮತ್ತು ಪಿಟಿಗೆ ಒಟ್ಟು ಅಂಕಗಳು ಕ್ರಮವಾಗಿ 1750 ಮತ್ತು 275 ಇರುತ್ತದೆ. ಹೀಗಾಗಿ ವ್ಯಕ್ತಿತ್ವ ಪರೀಕ್ಷೆಯ ಕೊಡುಗೆಯು ಒಟ್ಟು ಅಂಕಗಳಲ್ಲಿ 13.5% ಆಗಿದೆ. ಬಹುಪಾಲು ಅಭ್ಯರ್ಥಿಗಳು ಈಗಾಗಲೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಸ್ವತಃ ಉತ್ತೀರ್ಣರಾಗಿದ್ದರು, ಶ್ರೀರಾಮ್ಸ್ ಐಎಎಸ್ ಇದರಲ್ಲಿ ಸಂಸ್ಥೆಯ ಏನೇನೂ ಕೊಡುಗೆಯಿಲ್ಲ. ಈ ಪ್ರಮುಖ ಸತ್ಯವನ್ನು ಮರೆಮಾಚುವ ಮೂಲಕ, ಇಂತಹ ಸುಳ್ಳು ಮಾಹಿತಿ ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳು ಯು.ಪಿ.ಎಸ್.ಸಿ. ಆಕಾಂಕ್ಷಿಗಳಾಗಿರುವ ವಿದ್ಯಾರ್ಥಿಗಳ (ನೂತನ ಗ್ರಾಹಕರ) ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತವೆ, ಆದರೆ ಶ್ರೀರಾಮ್ಸ್ ಐಎಎಸ್ ಸಂಸ್ಥೆ ಈಗಾಗಲೇ ಯು.ಪಿ.ಎಸ್.ಸಿ. ಪರೀಕ್ಷೆಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂತಹ ಯಶಸ್ವಿ ಅಭ್ಯರ್ಥಿಗಳಿಗೆ ಮಾತ್ರ ಮಾರ್ಗದರ್ಶನವನ್ನು ನೀಡಿದೆ ಎಂದು ಅವರಿಗೆ ( ಆಕಾಂಕ್ಷಿಗಳಾಗಿರುವ ವಿದ್ಯಾರ್ಥಿಗಳು / ನೂತನ ಗ್ರಾಹಕರು) ತಮ್ಮ ಜಾಹೀರಾತಿನಲ್ಲಿ ತಿಳಿಸುವುದಿಲ್ಲ. ಹೀಗಾಗಿ, ಅನ್ಯಾಯದ ವ್ಯಾಪಾರದ ಅಭ್ಯಾಸದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಖರೀದಿ ಪೂರ್ವ ಮಾಹಿತಿ ಪಡೆಯುವ ಗ್ರಾಹಕರ ಹಕ್ಕನ್ನು ಶ್ರೀರಾಮ್ಸ್ ಐಎಎಸ್ ಸಂಸ್ಥೆ ಜಾಹೀರಾತು ಸಂಪೂರ್ಣವಾಗಿ ಉಲ್ಲಂಘಿಸಿದೆ.
“ಒಂದು ಜಾಹೀರಾತು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಸತ್ಯ ಮತ್ತು ಪ್ರಾಮಾಣಿಕ ಪ್ರಾತಿನಿಧ್ಯವನ್ನು ಸಂಪೂರ್ಣವಾಗಿ ಒಳಗೊಂಡಿರಬೇಕು. ಅವುಗಳು ಸ್ಪಷ್ಟವಾದ, ಪ್ರಮುಖವಾದ ಮತ್ತು ಗ್ರಾಹಕರಿಗೆ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟಕರವಾದ ರೀತಿಯಲ್ಲಿ ಇರಬೇಕು.“ ಎಂದು ಸಿಸಿಪಿಎಯ ಮುಖ್ಯ ಕಮಿಷನರ್ ಶ್ರೀಮತಿ. ನಿಧಿ ಖರೆ ಹೇಳಿದ್ದಾರೆ. ಗ್ರಾಹಕರ ಹಕ್ಕುಗಳ ಪ್ರಾಮುಖ್ಯತೆ ಮತ್ತು ಗ್ರಾಹಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವ ಜಾಹೀರಾತುದಾರರ ಬಾಧ್ಯತೆಯನ್ನು ಸಿಸಿಪಿಎಯ ಮುಖ್ಯ ಕಮಿಷನರ್ ಶ್ರೀಮತಿ. ನಿಧಿ ಖರೆ ಅವರು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
*****
(Release ID: 2046517)
Visitor Counter : 43