ಸಂಸ್ಕೃತಿ ಸಚಿವಾಲಯ
ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್ ಮ್ಯೂಸಿಯಂನಲ್ಲಿ ಬೆಲೆಬಾಳುವ ತ್ರಿವರ್ಣ
Posted On:
12 AUG 2024 6:57PM by PIB Bengaluru
12 ಅಡಿ ಉದ್ದ ಮತ್ತು 8 ಅಡಿ ಅಗಲದ ಧ್ವಜವೊಂದನ್ನು ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ನಮ್ಮ ಈ ಅಮೂಲ್ಯ ರಾಷ್ಟ್ರೀಯ ಸಂಪತ್ತು ಆಗಸ್ಟ್ 15, 1947 ರಂದು ಹಾರಿಸಿದ ಮೊದಲ ಧ್ವಜಗಳಲ್ಲಿ ಒಂದಾಗಿದೆ. 1947ರಲ್ಲಿ ಹಾರಿಸಲಾದ ಭಾರತದ ಧ್ವಜಗಳಲ್ಲಿ ಇದು ಪ್ರದರ್ಶನಕ್ಕಿರುವ ಏಕೈಕ ಉಳಿದಿರುವ ಧ್ವಜವಾಗಿದೆ. ಈ ಧ್ವಜವು ಸ್ವಾತಂತ್ರ್ಯ ಪಡೆಯಲು ಭಾರತದ ಜನರು ನಡೆಸಿದ ಒಟ್ಟಾರೆ ಹೋರಾಟಕ್ಕೆ ಸಾಕ್ಷಿಯಾಗಿದೆ. ಇದು ಶುದ್ಧ ರೇಷ್ಮೆಯಿಂದ ತಯಾರಿಸಲ್ಪಟ್ಟಿದೆ ಮತ್ತು ಸುಮಾರು 3.50 ಮೀಟರ್ ಉದ್ದ ಮತ್ತು 2.40 ಮೀಟರ್ ಅಗಲವನ್ನು ಹೊಂದಿದೆ. ಈ ಧ್ವಜವನ್ನು ಆಗಸ್ಟ್ 15, 1947 ರಂದು ಬೆಳಿಗ್ಗೆ 5.30 ಕ್ಕೆ ಸೇಂಟ್ ಜಾರ್ಜ್ ಕೋಟೆಯಲ್ಲಿ ಹಾರಿಸಲಾಯಿತು. ಮ್ಯೂಸಿಯಂನಲ್ಲಿರುವ ಇಂಡಿಯನ್ ಇಂಡಿಪೆಂಡೆನ್ಸ್ ಗ್ಯಾಲರಿಯು ಭಾರತೀಯ ಧ್ವಜದ ವಿಕಾಸ ಮತ್ತು ತ್ರಿವರ್ಣ ಧ್ವಜದ ಹಿಂದಿನ ಕಥೆಗಳನ್ನು ಸಹ ಪ್ರದರ್ಶಿಸುತ್ತದೆ.
ಫೋರ್ಟ್ ಸೇಂಟ್ ಜಾರ್ಜ್ ಮ್ಯೂಸಿಯಂ
ಆಧುನಿಕ "ಚೆನ್ನೈ" ನಗರವು ಫೋರ್ಟ್ ಸೇಂಟ್ ಜಾರ್ಜ್ನ ಬ್ರಿಟಿಷ್ ವಸಾಹತುವಿನಿಂದ ಉದಯವಾಯಿತು. ನಂತರ ಫೋರ್ಟ್ ಸೇಂಟ್ ಜಾರ್ಜ್ ಕೋಟೆಯ ಸುತ್ತಮುತ್ತಲಿನ ಅನೇಕ ಸ್ಥಳೀಯ ಗ್ರಾಮಗಳು ಮತ್ತು ಯುರೋಪಿಯನ್ ವಸಾಹತುಗಳನ್ನು ವಿಲೀನಗೊಳಿಸುವ ಮೂಲಕ ಮದ್ರಾಸ್ ನಗರವಾಗಿ ವಿಸ್ತರಣೆಗೊಂಡಿತು.
ಫೋರ್ಟ್ ಸೇಂಟ್ ಜಾರ್ಜ್ ಮ್ಯೂಸಿಯಂ ಅನ್ನು ಜನವರಿ 31 , 1948 ರಂದು ಸಾರ್ವಜನಿಕರಿಗೆ ತೆರೆಯಲಾಯಿತು .ಕೋಟೆಯಲ್ಲಿ ಹರಡಿದ್ದ ರಾಜಮನೆತನದ ಅವಶೇಷಗಳನ್ನು ಸಂರಕ್ಷಿಸಲು ಈ ಕಟ್ಟಡದಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಆಲೋಚನೆಯನ್ನು 1946 ರಲ್ಲಿ ಹಳೆಯ ಮದ್ರಾಸ್ ಗಾರ್ಡ್ಸ್ ನ ಕರ್ನಲ್ ಟಿ ಎಂ ರೀಡ್ ಪ್ರಸ್ತಾಪಿಸಿದರು . ವಸ್ತುಸಂಗ್ರಹಾಲಯದ ಸ್ವಾಗತ ಕೊಠಡಿಯಲ್ಲಿ, 1640 ರಿಂದ ಕೋಟೆಯ ವಿಕಾಸ ಮತ್ತು ನಿರ್ಮಾಣವನ್ನು ತೋರಿಸುವ ಚಿತ್ರವೊಂದಿದೆ. ಈ ವಸ್ತುಸಂಗ್ರಹಾಲಯವು ಈಗ ವಸಾಹತುಶಾಹಿ ಕಾಲದ ಮೂರು ಸಾವಿರದ ಐನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ; ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ಒಂಬತ್ತು ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗಿದೆ.
*****
(Release ID: 2044732)
Visitor Counter : 56