ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ತುರ್ತು ಪರಿಸ್ಥಿತಿಯ ಯುಗವನ್ನು ಸ್ವಾತಂತ್ರ್ಯದ ನಂತರದ ‘‘ಕರಾಳ ಅವಧಿ’’ ಎಂದು ಉಪರಾಷ್ಟ್ರಪತಿ ಬಣ್ಣಿಸಿದರು


ತುರ್ತು ಪರಿಸ್ಥಿತಿಯ ಸಮಯದಲ್ಲಿ ನ್ಯಾಯಾಂಗವು ‘‘ನಾಚಿಕೆಗೇಡಿನ ಸರ್ವಾಧಿಕಾರಿ ಆಡಳಿತಕ್ಕೆ’’ ಮಣಿದಿದೆ: ಧನಕರ್‌

ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿಯು ವಿಮೋಚನೆಗಾಗಿ ಇಟ್ಟುಕೊಂಡಿದ್ದರು ಎಂದು ಧನ್‌ಕರ್‌ ತುರ್ತು ಪರಿಸ್ಥಿತಿಯ ಕ್ರೂರ ಹಂತವನ್ನು ನೆನಪಿಸಿಕೊಳ್ಳುತ್ತಾ ನುಡಿದರು

ರಾಷ್ಟ್ರವನ್ನು ಒಳಗಿನಿಂದ ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ‘‘ಹಾನಿಕಾರಕ ಕಾರ್ಯಸೂಚಿ ಮತ್ತು ಕೆಟ್ಟ ಯೋಜನೆಗಳನ್ನು’’ ಹೊಂದಿರುವ ಶಕ್ತಿಗಳ ಉಪಸ್ಥಿತಿಯನ್ನು ಶ್ರೀ ಧನಕರ್‌ ಒತ್ತಿ ಹೇಳಿದರು

ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ಶೋಷಿಸುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಶ್ರೀ ಧನಕರ್‌ ಎಚ್ಚರಿಕೆ ನೀಡಿದರು

ಅಧಿಕಾರಗಳ ಪ್ರತ್ಯೇಕತೆಯ ಮೂಲವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಪರಾಷ್ಟ್ರಪತಿ ಅವರು ಒತ್ತಾಯಿಸಿದರು

ಜೋಧಪುರದಲ್ಲಿ ರಾಜಸ್ಥಾನ ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ(ವಜ್ರಮಹೋತ್ಸವ) ಆಚರಣೆ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ

Posted On: 10 AUG 2024 5:56PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್‌ ಧನಕರ್‌ ಅವರು ಇಂದು ಕಾನೂನಿನ ನಿಯಮಕ್ಕೆ ನ್ಯಾಯಾಂಗದ ದೃಢ ಬದ್ಧತೆಯನ್ನು ಶ್ಲಾಘಿಸಿದರು, ಜತೆಗೆ ಭಾರತದ ಇತಿಹಾಸದ ನೋವಿನ ಅಧ್ಯಾಯವಾದ 1975ರ ಜೂನ್‌ನಲ್ಲಿಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ಪ್ರತಿಬಿಂಬಿಸಿದರು. ತುರ್ತು ಪರಿಸ್ಥಿತಿಯ ಯುಗವನ್ನು ಸ್ವಾತಂತ್ರ್ಯದ ನಂತರದ ‘‘ಕರಾಳ ಅವಧಿ’’ ಎಂದು ಬಣ್ಣಿಸಿದ ಶ್ರೀ ಜಗದೀಪ್‌ ಧನ್‌ಕರ್‌, ಈ ಸಮಯದಲ್ಲಿ, ನ್ಯಾಯಾಂಗದ ಅತ್ಯುನ್ನತ ಮಟ್ಟಗಳು, ವಿಶಿಷ್ಟವಾಗಿ ‘‘ಮೂಲಭೂತ ಹಕ್ಕುಗಳ ಅಸಾಧಾರಣ ಕೋಟೆ’’ ಸಹ ‘‘ನಾಚಿಕೆಗೇಡಿನ ಸರ್ವಾಧಿಕಾರಿ ಆಡಳಿತಕ್ಕೆ’’ ಮಣಿದಿವೆ ಎಂದು ಕಳವಳ ವ್ಯಕ್ತಪಡಿಸಿದರು.

‘‘ತುರ್ತು ಪರಿಸ್ಥಿತಿ ಇರುವವರೆಗೂ ಹಕ್ಕುಗಳನ್ನು ಜಾರಿಗೊಳಿಸಲು ಯಾರೂ ಯಾವುದೇ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲಎಂದು ಉನ್ನತ ನ್ಯಾಯಾಲಯ ತೀರ್ಪು’’ ನೀಡಿದೆ ಎಂದು ಉಪರಾಷ್ಟ್ರಪತಿ ಅವರು ಅಸಂಖ್ಯಾತ ನಾಗರಿಕರ ಸ್ವಾತಂತ್ರ್ಯದ ಮೇಲೆ ಈ ತೀರ್ಪಿನ ತೀವ್ರ ಪರಿಣಾಮಗಳನ್ನು ಗಮನ ಸೆಳೆದರು. ‘‘ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿಯು ವಿಮೋಚನೆಗಾಗಿ ಇಟ್ಟುಕೊಂಡಿದ್ದನು, ಮತ್ತು ದೇಶಾದ್ಯಂತ ಸಾವಿರಾರು ಜನರನ್ನು ಯಾವುದೇ ತಪ್ಪಿಲ್ಲದೆ ಬಂಧಿಸಲಾಯಿತು, ಅವರು ಭಾರತ ಮಾತೆ ಮತ್ತು ರಾಷ್ಟ್ರೀಯತೆಯನ್ನು ಹೃದಯದಲ್ಲಿ ನಂಬಿದ್ದರು,’’ ಎಂದು ಅವರು ಹೇಳಿದರು.

ಈ ಕರಾಳ ಅಧ್ಯಾಯದಲ್ಲಿಒಂಬತ್ತು ಹೈಕೋರ್ಟ್‌ಗಳ, ವಿಶೇಷವಾಗಿ ರಾಜಸ್ಥಾನದ ಹೈಕೋರ್ಟ್‌ನ ಧೈರ್ಯವನ್ನು  ಶ್ಲಾಘಿಸಿದ ಶ್ರೀ ಜಗದೀಪ್‌ ಧನ್‌ಕರ್‌,  ‘‘ತುರ್ತು ಪರಿಸ್ಥಿತಿ ಹೇರಿಕೆಯ ಹೊರತಾಗಿಯೂ, ಒಬ್ಬ ವ್ಯಕ್ತಿಯು ತನ್ನ ಬಂಧನ ಅಥವಾ ಬಂಧನವು ಕಾನೂನಿನ ನಿಯಮಕ್ಕೆ  ಅನುಗುಣವಾಗಿಲ್ಲಎಂದು ಸಾಬೀತುಪಡಿಸಬಹುದು ಎಂದು ಪ್ರತಿಪಾದಿಸಿದ ದೇಶದ ಒಂಬತ್ತು ಹೈಕೋಟ್‌ಗಳಲ್ಲಿ ರಾಜಸ್ಥಾನದ ಹೈಕೋರ್ಟ್‌ ಹೆಮ್ಮೆಯ ಸ್ಥಾನವನ್ನು ಹೊಂದಿದೆ,’’ ಎಂದರು.

ತುರ್ತು ಪರಿಸ್ಥಿತಿಯ ದೀರ್ಘಕಾಲೀನ ಪರಿಣಾಮವನ್ನು ಪ್ರತಿಬಿಂಬಿಸಿದ ಉಪರಾಷ್ಟ್ರಪತಿ ಅವರು, ಇದು ಭಾರತದ ಅಭಿವೃದ್ಧಿ ಪಥದ ಮೇಲೆ ಬೀರಿದ ಹಾನಿಕಾರಕ ಪರಿಣಾಮವನ್ನು ಒತ್ತಿ ಹೇಳಿದರು. ‘‘ಒಂದು ಕ್ಷ ಣ ಊಹಿಸಿಕೊಳ್ಳಿ, ಅತ್ಯುನ್ನತ ಮಟ್ಟದ ನ್ಯಾಯಾಂಗವು ಮಣಿಯದಿದ್ದರೆ, ಅಸಂವಿಧಾನಿಕ ಕಾರ್ಯವಿಧಾನಗಳಿಗೆ ಶರಣಾಗದಿದ್ದರೆ, ಶ್ರೀಮತಿ ಇಂದಿರಾ ಗಾಂಧಿಯವರ ಸರ್ವಾಧಿಕಾರಕ್ಕೆ ಮಣಿಯದಿದ್ದರೆ, ತುರ್ತು ಪರಿಸ್ಥಿತಿ ಇರುತ್ತಿರಲಿಲ್ಲ. ನಮ್ಮ ರಾಷ್ಟ್ರವು ಬಹಳ ಬೇಗನೆ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿತ್ತು. ನಾವು ದಶಕಗಳ ಕಾಲ ಕಾಯಬೇಕಾಗಿಲ್ಲ,’’ ಎಂದು ಅವರು ಹೇಳಿದರು.

ಭಾರತದ ಸಂವಿಧಾನವನ್ನು ಒಬ್ಬ ವ್ಯಕ್ತಿಯು ಅಜಾಗರೂಕತೆಯಿಂದ ತುಳಿದುಹಾಕಿದ ದಿನದ ಗಂಭೀರ ನೆನಪಿಗಾಗಿ ಜೂನ್‌ 25 ಅನ್ನು ‘‘ಸಂವಿಧಾನ್‌ ಹತ್ಯಾ ದಿವಸ್‌’’ ಎಂದು ಆಚರಿಸಿದ್ದಕ್ಕಾಗಿ ಉಪರಾಷ್ಟ್ರಪತಿ ಅವರು ಸರ್ಕಾರವನ್ನು ಶ್ಲಾಘಿಸಿದರು.

ರಾಷ್ಟ್ರವನ್ನು ಒಳಗಿನಿಂದ ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ‘‘ಹಾನಿಕಾರಕ ಕಾರ್ಯಸೂಚಿ ಮತ್ತು ಕೆಟ್ಟ ಯೋಜನೆಗಳನ್ನು’’ ಹೊಂದಿರುವ ಶಕ್ತಿಗಳ ಉಪಸ್ಥಿತಿಯನ್ನು ಶ್ರೀ ಜಗದೀಪ್‌ ಧನ್‌ಕರ್‌ ಒತ್ತಿಹೇಳಿದರು . ಈ ಶಕ್ತಿಗಳು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂರು ಸಂಸ್ಥೆಗಳಿಗೆ ನುಸುಳಬಹುದು, ಅವುಗಳ ನಿಜವಾದ ಉದ್ದೇಶಗಳು ನಮಗೆ ತಿಳಿದಿಲ್ಲಎಂದು ಉಪರಾಷ್ಟ್ರಪತಿ ಎಚ್ಚರಿಕೆ ನೀಡಿದರು. ನೆರೆಯ ದೇಶದಲ್ಲಿನಡೆದ ಘಟನೆಗಳು ಶೀಘ್ರದಲ್ಲೇ ಭಾರತದಲ್ಲಿಅನಾವರಣಗೊಳ್ಳಬಹುದು ಎಂದು ಸೂಚಿಸುವ ನಿರೂಪಣೆಯನ್ನು ತುಂಬುವ ಪ್ರಯತ್ನಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಅಂತಹ ಪ್ರತಿಪಾದನೆಗಳನ್ನು ಮಾಡಿದ ಕೆಲವು ವ್ಯಕ್ತಿಗಳನ್ನು ಪ್ರಶ್ನಿಸಿದ ಅವರು, ಅಂತಹ ನಿರೂಪಣೆಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ನಾಗರಿಕರನ್ನು ವಿನಂತಿಸಿದರು.

ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಧನಕರ್‌ ಅವರು, ರಾಷ್ಟ್ರದ ಪ್ರಜಾಪ್ರಭುತ್ವದ ಚೌಕಟ್ಟಿನ ಬಲ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅನಿವಾರ್ಯ ಪಾತ್ರವನ್ನು ಬಿಂಬಿಸಿದರು.

ರಾಷ್ಟ್ರ ವಿರೋಧಿ ಶಕ್ತಿಗಳು ತಮ್ಮ ಕ್ರಮಗಳನ್ನು ಕಾನೂನುಬದ್ಧಗೊಳಿಸಲು ನಮ್ಮ ಮೂಲಭೂತ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುವುದರ ವಿರುದ್ಧ ಶ್ರೀ ಧನಕರ್‌ ಎಚ್ಚರಿಕೆ ನೀಡಿದರು. ಈ ಶಕ್ತಿಗಳು ನಮ್ಮ ಪ್ರಜಾಪ್ರಭುತ್ವವನ್ನು ಹಳಿ ತಪ್ಪಿಸುವ ಗುರಿಯನ್ನು ಹೊಂದಿವೆ ಎಂದು ಒತ್ತಿ ಹೇಳಿದ ಅವರು, ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವಂತೆ ನಾಗರಿಕರನ್ನು ಒತ್ತಾಯಿಸಿದರು. ಈ ದುಷ್ಕೃತ್ಯಗಳಿಂದ ನಮ್ಮ ಸಂಸ್ಥೆಗಳನ್ನು ರಕ್ಷಿಸಲು ಸಕ್ರಿಯ ಪ್ರಯತ್ನಗಳಿಗೆ ಕರೆ ನೀಡಿದ ಉಪರಾಷ್ಟ್ರಪತಿ ಅವರು, ಇಂತಹ ಬೆದರಿಕೆಗಳ ಎದುರಿನಲ್ಲಿ ಮೌನವನ್ನು ಭವಿಷ್ಯದ ಪೀಳಿಗೆಯು ಕಠಿಣವಾಗಿ ನಿರ್ಣಯಿಸುತ್ತದೆ ಎಂದು ಒತ್ತಿ ಹೇಳಿದರು.

ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎ.ಜಿ. ಮಾಸಿಹ್‌, ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ; ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂದೀಪ್‌ ಮೆಹ್ತಾ, ನ್ಯಾಯಾಧೀಶರು, ಭಾರತದ ಸುಪ್ರೀಂ ಕೋರ್ಟ್‌; ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಅರುಣ್‌ ಬನ್ಸಾಲಿ, ಅಲಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ; ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ.ಎಂ.ಶ್ರೀವಾಸ್ತವ, ಮುಖ್ಯ ನ್ಯಾಯಮೂರ್ತಿ, ರಾಜಸ್ಥಾನ ಹೈಕೋರ್ಟ್‌; ಮತ್ತು ರಾಜಸ್ಥಾನ ಸರ್ಕಾರದ ಗೌರವಾನ್ವಿತ ಕಾನೂನು ಸಚಿವರಾದ ಶ್ರೀ ಜೋಗ ರಾಮ್‌ ಪಟೇಲ್‌ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(Release ID: 2044256) Visitor Counter : 43