ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಅಂತರಸಂಪರ್ಕ (ವಿಳಾಸ ವ್ಯವಸ್ಥೆಗಳು) ನಿಯಮಗಳು, 2017' ಮತ್ತು 'ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಡಿಜಿಟಲ್ ವಿಳಾಸ ವ್ಯವಸ್ಥೆಗಳ ಲೆಕ್ಕಪರಿಶೋಧನಾ ಕೈಪಿಡಿ' ಕುರಿತಾದ ಸಮಾಲೋಚನಾ ಪತ್ರವನ್ನು ಟ್ರಾಯ್ ಬಿಡುಗಡೆ ಮಾಡಿದೆ
Posted On:
09 AUG 2024 4:37PM by PIB Bengaluru
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇಂದು 'ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಅಂತರಸಂಪರ್ಕ (ವಿಳಾಸ ವ್ಯವಸ್ಥೆಗಳು) ನಿಯಮಗಳು, 2017 ಮತ್ತು ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಡಿಜಿಟಲ್ ವಿಳಾಸ ವ್ಯವಸ್ಥೆಗಳ ಲೆಕ್ಕಪರಿಶೋಧನಾ ಕೈಪಿಡಿ, ಲೆಕ್ಕಪರಿಶೋಧನೆಗೆ ಸಂಬಂಧಿತ ನಿಬಂಧನೆಗಳ' ಕುರಿತಾದ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ.
ಕೇಬಲ್ ಟಿವಿ ವಲಯದ ಸಂಪೂರ್ಣ ಡಿಜಿಟಲೀಕರಣಕ್ಕೆ ಅನುಗುಣವಾಗಿ, ಟ್ರಾಯ್ ಮಾರ್ಚ್ 3, 2017 ರಂದು ಪ್ರಸಾರ ಮತ್ತು ಕೇಬಲ್ ಸೇವೆಗಳ ನಿಯಂತ್ರಣ ಚೌಕಟ್ಟಿನ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಅಂತರಸಂಪರ್ಕ (ವಿಳಾಸ ವ್ಯವಸ್ಥೆಗಳು) ನಿಯಮಗಳು, 2017 ಸೇರಿವೆ. (ಇನ್ನು ಮುಂದೆ ಇದನ್ನು 'ಇಂಟರ್ಕನೆಕ್ಷನ್ ರೆಗ್ಯುಲೇಷನ್' ಎಂದು ಕರೆಯಲಾಗುವುದು).
ಟ್ರಾಯ್ 2019ರ ನವೆಂಬರ್ 8 ರಂದು ದೂರಸಂಪರ್ಕ (ಪ್ರಸಾರ ಮತ್ತು ಕೇಬಲ್) ಸೇವೆಗಳ ಡಿಜಿಟಲ್ ಅಡ್ರೆಸ್ಸಬಲ್ ಸಿಸ್ಟಮ್ಸ್ ಆಡಿಟ್ ಕೈಪಿಡಿಯನ್ನು ಬಿಡುಗಡೆ ಮಾಡಿದೆ. (ಇನ್ನು ಮುಂದೆ ಇದನ್ನು 'ಲೆಕ್ಕಪರಿಶೋಧನಾ ಕೈಪಿಡಿ' ಎಂದು ಕರೆಯಲಾಗುವುದು).
ಎಲ್ಲಾ ಪಾಲುದಾರರಿಗೆ ನ್ಯಾಯಯುತ ಮತ್ತು ಸಮಾನ ವಾತಾವರಣವನ್ನು ಸೃಷ್ಟಿಸುವುದು ಟ್ರಾಯ್ ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದ್ದು, ಇಂಟರ್ಕನೆಕ್ಷನ್ ರೆಗ್ಯುಲೇಷನ್ ಪ್ರಸಾರಕರು ಮತ್ತು ವಿತರಕರು ಸೇರಿದಂತೆ ವಿವಿಧ ಸೇವಾ ಪೂರೈಕೆದಾರರ ವೈವಿಧ್ಯಮಯ ಹಿತಾಸಕ್ತಿಗಳ ಸಮತೋಲನಕ್ಕಾಗಿ ಮೂರನೇ ಪಕ್ಷದ ಲೆಕ್ಕಪರಿಶೋಧಕರ ಮೂಲಕ ವಿಶ್ವಾಸ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಸ್ವತಂತ್ರ ಲೆಕ್ಕಪರಿಶೋಧನೆಯು ಅಂತರಸಂಪರ್ಕ ನಿಬಂಧನೆಗಳ ಪ್ರಮುಖ ತತ್ವಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ, ಅಂತರಸಂಪರ್ಕ ನಿಯಂತ್ರಣ 2017ರಲ್ಲಿ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಕೆಲವು ತಿದ್ದುಪಡಿಗಳ ಅಗತ್ಯವಿದೆ ಎಂದು ಕೆಲವು ಮಧ್ಯಸ್ಥಗಾರರು ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್ 29, 2017ರ "ದೂರದರ್ಶನ ಪ್ರಸಾರ ವಿತರಣಾ ವಲಯದಲ್ಲಿ ಮೂಲಸೌಕರ್ಯ ಹಂಚಿಕೆ" ಕುರಿತಾದ ಟ್ರಾಯ್ ನ ಶಿಫಾರಸುಗಳನ್ನು ಒಪ್ಪಿಕೊಂಡು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮೂಲಸೌಕರ್ಯ ಹಂಚಿಕೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರಂತೆ, ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಪರಿಶೀಲಿಸಿ, ಅಂತರಸಂಪರ್ಕ ನಿಯಂತ್ರಣ 2017 ಮತ್ತು ಲೆಕ್ಕಪರಿಶೋಧನಾ ಕೈಪಿಡಿಯಲ್ಲಿ ಸಕ್ರಿಯ ನಿಬಂಧನೆಗಳನ್ನು ಸಂಯೋಜಿಸುವುದು ಸೂಕ್ತವಾಗಿದೆ.
ಈ ನಿಟ್ಟಿನಲ್ಲಿ, ಸಮಾಲೋಚನಾ ಪತ್ರದಲ್ಲಿ ವ್ಯವಹರಿಸಲಾದ ವಿಸ್ತಾರವಾದ ವಿಷಯಗಳು ಈ ಕೆಳಗಿನಂತಿವೆ:
a. ಅಂತರಸಂಪರ್ಕ ನಿಯಂತ್ರಣ 2017ರಲ್ಲಿ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ನಿಬಂಧನೆಗಳಿಗೆ ಅಗತ್ಯವಾದ ತಿದ್ದುಪಡಿಗಳು (ತಿದ್ದುಪಡಿಗೊಂಡಂತೆ)
b. ಲೆಕ್ಕಪರಿಶೋಧನಾ ಕೈಪಿಡಿಗೆ ತಿದ್ದುಪಡಿಗಳು
c. ಅಂತರಸಂಪರ್ಕ ನಿಯಂತ್ರಣ 2017 ಮತ್ತು ಲೆಕ್ಕಪರಿಶೋಧನಾ ಕೈಪಿಡಿಯಲ್ಲಿ ಮೂಲಸೌಕರ್ಯ ಹಂಚಿಕೆಗೆ ಅವಕಾಶಗಳ ಸಕ್ರಿಯಗೊಳಿಸುವಿಕೆ.
ಸಮಾಲೋಚನಾ ಪತ್ರದ ಬಗ್ಗೆ ಲಿಖಿತ ಅಭಿಪ್ರಾಯಗಳನ್ನು 6/9/2024 ರೊಳಗೆ ಮಧ್ಯಸ್ಥಗಾರರಿಂದ ಆಹ್ವಾನಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ 20/9/2024 ರೊಳಗೆ ಅವುಗಳನ್ನು ಸಲ್ಲಿಸಬಹುದು. ಕಾಮೆಂಟ್ ಗಳು ಮತ್ತು ಪ್ರತಿ-ಕಾಮೆಂಟ್ ಗಳನ್ನು ಇಮೇಲ್ ಐಡಿ advbcs-2@trai.gov.in ಮತ್ತು jtadv-bcs@trai.gov.in ಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸಬಹುದು.
ಯಾವುದೇ ಸ್ಪಷ್ಟೀಕರಣ/ ಮಾಹಿತಿಗಾಗಿ, ಸಲಹೆಗಾರ (ಬಿ & ಸಿಎಸ್) ಶ್ರೀ ದೀಪಕ್ ಶರ್ಮಾ ಅವರನ್ನು ದೂರವಾಣಿ ಸಂಖ್ಯೆ: +91-11-20907774 ನಲ್ಲಿ ಸಂಪರ್ಕಿಸಬಹುದು.
*****
(Release ID: 2044132)