ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶದ ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಒಳಗೊಂಡಿರುವ ಅಂಬ್ರೆಲಾ ಮಿಷನ್

Posted On: 09 AUG 2024 4:46PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಕ್ಕಳಿಗೆ ಸುರಕ್ಷಿತ, ಪ್ರವೇಶಸಾಧ್ಯ, ಬೆಲೆಗೆ ತಕ್ಕುದಾದ, ವಿಶ್ವಾಸಾರ್ಹ ಮತ್ತು ತಾರತಮ್ಯ-ಮುಕ್ತ ವಾತಾವರಣವನ್ನು ಒದಗಿಸುವ ಮೂಲಕ ಅವರ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಶ್ರಮಿಸುತ್ತಿದೆ. ಈ ಉದ್ದೇಶಗಳನ್ನು ಸಾಧಿಸಲು , ಸಚಿವಾಲಯವು ದೇಶದ ಮಕ್ಕಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಒಳಗೊಂಡ ಮುಖ್ಯವಾದ ಅಂಬ್ರೆಲಾ ಮಿಷನ್ ಗಳನ್ನು ಪ್ರಾರಂಭಿಸಿದೆ. ಪೋಷಣೆ, ಆರೋಗ್ಯ, ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮಿಷನ್ಗಳ ಮೂಲಕ ಜಾರಿಗೊಳಿಸಲಾಗುತ್ತಿದ್ದರೆ, ಮಿಷನ್ ವಾತ್ಸಲ್ಯ ಮೂಲಕ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಲಿಂಗ ಸಮಾನತೆ ಮತ್ತು ಮಕ್ಕಳ ಕೇಂದ್ರಿತ ಕಾನೂನುಗಳು , ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಅಂತರ-ಸಚಿವಾಲಯ ಮತ್ತು ಅಂತರ-ವಲಯಗಳ ಸಮನ್ವಯವನ್ನು ಉತ್ತೇಜಿಸುವುದು ಈ ಕಾರ್ಯಾಚರಣೆಗಳ ಮುಖ್ಯ ಉದ್ದೇಶವಾಗಿದೆ .

ಮಿಷನ್ ಪೋಷಣ್ 2.0 ಒಂದು ಸಮಗ್ರ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮವಾಗಿದೆ. ಈ ಮಿಷನ್ ಅಡಿಯಲ್ಲಿ, ಪೌಷ್ಠಿಕಾಂಶ ಅಭಿಯಾನ , ಅಂಗನವಾಡಿ ಸೇವಾ ಯೋಜನೆ ಮತ್ತು ಹದಿಹರೆಯದ ಹೆಣ್ಣುಮಕ್ಕಳ ಯೋಜನೆಗಳನ್ನು ಸೇರಿಸಲಾಗಿದೆ. . ಆರು ವರ್ಷದೊಳಗಿನ ಮಕ್ಕಳು, ಹದಿನಾಲ್ಕರಿಂದ ಹದಿನೆಂಟು ವರ್ಷದ ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಪೌಷ್ಟಿಕಾಂಶದ ವಿಷಯ ಮತ್ತು ಹೆರಿಗೆಯಲ್ಲಿ ಕಾರ್ಯತಂತ್ರದ ಬದಲಾವಣೆಗಳ ಮೂಲಕ ಅಪೌಷ್ಟಿಕತೆಯ ಸವಾಲುಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಪೋಷನ್ 2.0 ಅಡಿಯಲ್ಲಿಆಹಾರದ ಗುಣಮಟ್ಟ ಮತ್ತು ವಿತರಣೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ . ಪಾರದರ್ಶಕತೆ , ಹೊಣೆಗಾರಿಕೆ , ಆಹಾರ ವೈವಿಧ್ಯತೆ ಮತ್ತು ಗುಣಮಟ್ಟ , ಆಹಾರ ಬಲವರ್ಧನೆ ಮತ್ತು ಕೊನೆಯ ಮೈಲಿ ಸೇವೆಗಳನ್ನು ಒದಗಿಸುವ ಮೂಲಕ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ . ಪೋಷನ್ 2.0 ಅಡಿಯಲ್ಲಿ , ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ರಾಗಿ ಬಳಕೆಯನ್ನು ಜನಪ್ರಿಯಗೊಳಿಸುವುದರ ಮೇಲೂ ಗಮನಹರಿಸಲಾಗಿದೆ. 

ಪೋಷನ್ 2.0 ರ ಪ್ರಮುಖ ಅಂಶಗಳಲ್ಲಿ ಒಂದಾದ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ಮತ್ತು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಪ್ರಚೋದನೆ ಮತ್ತು ಅಭಿವೃದ್ಧಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ವಯಸ್ಸಿಗೆ ಸೂಕ್ತವಾದ ಬೋಧನಾ ಕಾರ್ಯಕ್ರಮಗಳನ್ನು ಸಚಿವಾಲಯವು ಅಭಿವೃದ್ಧಿಪಡಿಸಿದೆ. ಇದರ ಜೊತೆಗೆ, ಮಿಷನ್ ಅಡಿಯಲ್ಲಿ, 5 ವರ್ಷಗಳಲ್ಲಿ ಪ್ರತಿ ವರ್ಷ 40,000 ಅಂಗನವಾಡಿ ಕೇಂದ್ರಗಳಂತೆ ಆಯ್ದ 2 ಲಕ್ಷ ಸರ್ಕಾರಿ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಲಾಗುವುದು, ನವೀಕರಿಸಲಾಗುವುದು ಮತ್ತು ಪುನರುಜ್ಜೀವನಗೊಳಿಸಲಾಗುವುದು, ಇದರಿಂದಾಗಿ ಪೋಷಣೆ ಮತ್ತು ECCE ವಿತರಣೆ ಸುಧಾರಿಸುತ್ತದೆ.

ಪೋಷಣ್  ಅಭಿಯಾನದ ಅಡಿಯಲ್ಲಿ, ಮೊದಲ ಬಾರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ಫೋನ್ಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಬೆಳವಣಿಗೆಯನ್ನು ಅಳೆಯುವ ಸಾಧನಗಳನ್ನು ಒದಗಿಸಲಾಗಿದೆ. ಅಲ್ಲದೆ, ಅಭಿಯಾನದ ಅಡಿಯಲ್ಲಿ ನ್ಯೂಟ್ರಿಷನ್ ಟ್ರ್ಯಾಕರ್ ಮೂಲಕ ಪೋಷಣಾ ಸೇವೆಗಳ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆಗೆ ಐಟಿ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಿಷನ್ ಶಕ್ತಿಯ ಅಡಿಯಲ್ಲಿ 'ಪಾಲ್ನಾ' ಎಂಬ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಪ್ರಾರಂಭಿಸಿದೆ. ಇದು ಮಕ್ಕಳಿಗೆ ದಿನನಿತ್ಯದ ಆರೈಕೆ (ಡೇ ಕೇರ್)  ಸೌಲಭ್ಯಗಳು ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಪಾಲ್ನಾ ಯೋಜನೆಯ ಅಡಿಯಲ್ಲಿ, ಸಚಿವಾಲಯವು ಅಂಗನವಾಡಿ-ಕಮ್-ಕ್ರೆಶ್ (AWCC) (ಅಂಗನವಾಡಿ ಮತ್ತು ಶಿಶುವಿಹಾರ)  ಮೂಲಕ ಮಕ್ಕಳಿಗೆ ಉಚಿತ ಆರೈಕೆ ಸೇವೆಗಳನ್ನು ವಿಸ್ತರಿಸಿದೆ. 6 ತಿಂಗಳು ಮತ್ತು 6 ವರ್ಷದ ನಡುವಿನ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆ ಪೂರ್ಣ ವಾತಾವರಣದಲ್ಲಿ ಗುಣಮಟ್ಟದ ಶಿಶುಪಾಲನಾ ಸೌಲಭ್ಯಗಳು, ಪೌಷ್ಟಿಕಾಂಶದ ಬೆಂಬಲ, ಮಕ್ಕಳ ಆರೋಗ್ಯ ಮತ್ತು ಅರಿವಿನ ಅಭಿವೃದ್ಧಿ, ಅಭಿವೃದ್ಧಿಯ ಮೇಲ್ವಿಚಾರಣೆ, ಲಸಿಕೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು ಪಾಲ್ನಾ ಘಟಕದ ಉದ್ದೇಶವಾಗಿದೆ.

ಭಾರತದ ಪ್ರತಿಯೊಬ್ಬ ಮಗುವಿಗೂ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಒದಗಿಸುವುದು, ಮಕ್ಕಳ ಅಭಿವೃದ್ಧಿಗೆ ಸೂಕ್ಷ್ಮ, ಬೆಂಬಲಕಾರಿ ಮತ್ತು ಸಮನ್ವಯಗೊಂಡ ಪರಿಸರವನ್ನು ಬೆಳೆಸುವುದು, ದೇಶಾದ್ಯಂತ ತೊಂದರೆಗೊಳಗಾದ ಮತ್ತು ಕಷ್ಟಕರ ಸಂದರ್ಭಗಳಲ್ಲಿರುವ ಮಕ್ಕಳಿಗೆ ಸೇವೆಗಳನ್ನು ಒದಗಿಸಲು ಬೆಂಬಲ ನೀಡುವುದು, ವಿವಿಧ ಹಿನ್ನೆಲೆಗಳ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಂದರ್ಭ-ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 2015ರ ಜುವೆನೈಲ್ ಜಸ್ಟಿಸ್  (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಆದೇಶವನ್ನು ಜಾರಿಗೊಳಿಸಲು ಸಹಾಯ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಮಿಷನ್ ವಾತ್ಸಲ್ಯದ  ಉದ್ದೇಶವಾಗಿದೆ. 

ಮಿಷನ್ ವಾತ್ಸಲ್ಯ ಅಡಿಯಲ್ಲಿನ ಘಟಕಗಳು ಕಾನೂನುಬದ್ಧ ಸಂಸ್ಥೆಗಳನ್ನು ಒಳಗೊಂಡಿವೆ, ಅವುಗಳು ಯಾವುದು ಅಂದರೆ; ಸೇವಾ ವಿತರಣಾ ರಚನೆಗಳು ; ಸಾಂಸ್ಥಿಕ ಆರೈಕೆ ಸೇವೆಗಳು ; ಸಾಂಸ್ಥಿಕವಲ್ಲದ ಸಮುದಾಯ ಆಧಾರಿತ ಆರೈಕೆ ; ತುರ್ತು ಸಂಪರ್ಕ ಸೇವೆಗಳು ; ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣವನ್ನು ಒಳಗೊಂಡಿದೆ.


ಇಂದು  ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಈ ಮಾಹಿತಿ ನೀಡಿದ್ದಾರೆ.


*****


(Release ID: 2044039)
Read this release in: Tamil , English , Urdu , Hindi