ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಸರ್ಕಾರಿ ಇ-ಮಾರುಕಟ್ಟೆಗೆ 8ನೇ ಸ್ಥಾಪನಾ ದಿನ


ಜಿಇಎಂ ಪ್ಲಾಟ್ ಪಾರ್ಮ್‌ನಲ್ಲಿ ಮಾರಾಟಗಾರರು ಮತ್ತು ಖರೀದಿದಾರರಿಗೆ ಸಹಾಯಕ್ ಪ್ರೋಗ್ರಾಂ ಸಹಾಯ ಮಾಡುತ್ತದೆ: ಪಿಕೆ ಸಿಂಗ್, ಸಿಇಒ ಜಿಇಎಂ

ಸಾರ್ವಜನಿಕ ಖರೀದಿ ಕ್ಷೇತ್ರದಲ್ಲಿ ಬಳಕೆದಾರ ಅನುಭವವ  ಹೆಚ್ಚಿಸಲು ಜನರೇಟಿವ್ AI-ಆಧಾರಿತ ಚಾಟ್ ಬಾಕ್ಸ್ ಪರಿಚಯಿಸಿದ ಮೊದಲ ಸಂಸ್ಥೆ ಜಿಇಎಂ

ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ತನ್ನ 8ನೇ ಸ್ಥಾಪನಾ ದಿನವನ್ನು ಇಂದು ಆಚರಿಸಿಕೊಂಡಿತು

Posted On: 09 AUG 2024 8:18PM by PIB Bengaluru

2024-25ನೇ ಸಾಲಿನಲ್ಲಿ ಖರೀದಿ ಈಗಾಗಲೇ ₹1,92,433 ಕೋಟಿಯನ್ನು ತಲುಪಿದೆ. ಇದು ಕಳೆದ ಹಣಕಾಸು ವರ್ಷದ ಅದೇ ಅವಧಿಯಿಗೆ ಹೋಲಿಸಿದರೆ ಸುಮಾರು 136 ಪ್ರತಿಶತ (%) ಏರಿಕೆಯಾಗಿದೆ ಮತ್ತು 2024-25ನೇ ಸಾಲಿನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದೆ.

ಜಿಇಎಂನಲ್ಲಿ ಸೇವೆಗಳ ಖರೀದಿ ವೇಗವಾಗಿ ಹೆಚ್ಚುತ್ತಿದ್ದು, ಸೇವೆಗಳ ಒಟ್ಟು ಮಾರಾಟ ಮೌಲ್ಯ (ಜಿಎಂವಿ) ಆರಂಭದಿಂದಲೂ ₹3.91 ಲಕ್ಷ ಕೋಟಿ ತಲುಪಿದೆ. 2024-25ನೇ ಸಾಲಿನಲ್ಲಿ, ಜಿಇಎಂನಲ್ಲಿನ ಸೇವಾ ಖರೀದಿ ಈಗಾಗಲೇ ₹80,493 ಕೋಟಿ ತಲುಪಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 100 ರಷ್ಟು ಬೆಳವಣಿಗೆಯನ್ನು ದಾಖಲಿಸಿದ ಈ ವೇದಿಕೆಯು 2023-24ರಲ್ಲಿ ಸುಮಾರು ₹4.03 ಲಕ್ಷ ಕೋಟಿ ಮೌಲ್ಯದ 62.86 ಲಕ್ಷ ಆದೇಶಗಳನ್ನು ಪೂರೈಸಿದೆ. ಇಂದು, 1.5 ಲಕ್ಷಕ್ಕೂ ಹೆಚ್ಕೊ ಖರೀದಿದಾರರು 23 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರೊಂದಿಗೆ ದೇಶಾದ್ಯಂತ 11,523 ಉತ್ಪನ್ನ ಮತ್ತು 327 ಸೇವಾ ವಿಭಾಗಗಳಲ್ಲಿ ಮಧ್ಯವರ್ತಿಗಳಿಲ್ಲದೆ ಸರಕು ಮತ್ತು ಸೇವೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಜಿಇಎಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪಿ.ಕೆ. ಸಿಂಗ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಇಎಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪಿ.ಕೆ. ಸಿಂಗ್ ಅವರು ಜಿಇಎಂ ಸಹಾಯಕ ಕಾರ್ಯಕ್ರಮದ ಆರಂಭದ ಬಗ್ಗೆ ಪ್ರಸ್ತಾಪಿಸಿದರು. ಈ ಉಪಕ್ರಮವು ದೇಶಾದ್ಯಂತ 6-7 ಸಾವಿರ ತರಬೇತಿ ಪಡೆದ ಮತ್ತು ಪ್ರಮಾಣೀಕೃತ/ಅಧಿಕೃತ ತರಬೇತಿದಾರರ ಜಾಲವನ್ನು ನಿರ್ಮಿಸುವ ಗುರಿ ಹೊಂದಿದೆ, ಅವರು ಜಿಇಎಂ ವೇದಿಕೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರಿಗೆ ಸಮಗ್ರ ಬೆಂಬಲವನ್ನು ಒದಗಿಸುತ್ತಾರೆ ಎಂದು ತಿಳಿಸಿದರು.

ಪೋರ್ಟಲ್ನಲ್ಲಿ ಮಹಿಳೆಯರು, ಬುಡಕಟ್ಟು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಣ್ಣ ಮತ್ತು ಮಧ್ಯಮ ಉದ್ಯಮಗಳು,, ಸ್ಟಾರ್ಟ್ ಅಪ್ ಗಳು, ಕರಕುಶಲ ಕಲಾವಿದರು ಮತ್ತು ನೇಕಾರರು, ಒಡಿಒಪಿ/ಜಿಐ ಕರಕುಶಲ ಕಲಾವಿದರು, ಸ್ವಯಂ ಸಹಾಯ ಗುಂಪುಗಳು, ರೈತ ಉತ್ಪಾದಕ ಸಂಘಟನೆಗಳು (ಎಫ್ ಪಿಒ), ಮತ್ತು ಸಹಕಾರಿ ಸಂಘಗಳ ಸಾಮಾಜಿಕ ಸೇರ್ಪಡೆಯನ್ನು ಅದರ #ವೋಕಲ್ ಫಾರ್ ಲೋಕಲ್ ಜಿಇಎಂ ಔಟ್ ಲೆಟ್ ಅಂಗಡಿಗಳ ಮೂಲಕ ಮತ್ತು "ಮಾರುಕಟ್ಟೆಗೆ ಪ್ರವೇಶ", "ಹಣಕಾಸಿಗೆ ಪ್ರವೇಶ", ಮತ್ತು "ಮೌಲ್ಯ ಸೇರ್ಪಡೆಗೆ ಪ್ರವೇಶ" ಎಂಬ ಮಾರುಕಟ್ಟೆ ಮಧ್ಯಪ್ರವೇಶಗಳ ಮೂಲಕ ಉತ್ತೇಜಿಸಲಾಗಿದೆ. ಪ್ರಸ್ತುತ, 9,56,465 ಉದ್ಯಮ - ಪರಿಶೀಲಿತ ಎಂಎಸ್  ಇಗಳು ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟಿದ್ದು, ₹3,87,407 ಕೋಟಿ ಮೌಲ್ಯದ  ಆದೇಶಗಳನ್ನು ಪೂರೈಸಿವೆ. ಇದು ಒಟ್ಟು ಜಿಎಂವಿಯ ಸುಮಾರು 39.24% ಆಗಿದೆ. ಇದಲ್ಲದೆ, 1,63,996 ಮಹಿಳಾ ಎಂಎಸ್ ಇಗಳು ₹37,430 ಕೋಟಿ ಮೌಲ್ಯದ ಆದೇಶಗಳನ್ನು ಪೂರೈಸಿದೆ. ಸುಮಾರು 50,000 ಎಸ್ ಸಿ/ಎಸ್ ಟಿ ಎಂಎಸ್ ಇಗಳು ₹7,828 ಕೋಟಿ ಮೌಲ್ಯದ ಆದೇಶಗಳನ್ನು ಪೂರೈಸಿವೆ. 25,816 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಜಿಎಂವಿ ಮೂಲಕ ₹27,598 ಕೋಟಿಗೂ ಹೆಚ್ಚು ಮೌಲ್ಯದ  ಆದೇಶಗಳನ್ನು ಪಡೆದುಕೊಂಡಿವೆ.

ಕೃತಕ ಬುದ್ಧಿವಂತಿಕೆಯು ಸರ್ಕಾರಿ ಖರೀದಿ ಪ್ರಕ್ರಿಯೆಗೆ ಗಮನಾರ್ಹ ಪರಿಣಾಮ ಬೀರಿದ್ದು, ಉತ್ಪನ್ನ ಹೋಲಿಕೆ ಮತ್ತು ಬೆಲೆ ನಿರ್ಧಾರಣೆಯನ್ನು ಸುಧಾರಿಸಿದೆ. ಸರ್ಕಾರಿ ಖರೀದಿದಾರರಿಗೆ ಮಾರುಕಟ್ಟೆ ಬುದ್ಧಿವಂತಿಕೆ, ಉತ್ಪನ್ನ ಸಾಮ್ಯತೆ ವಿಶ್ಲೇಷಣೆ, ಬೆಲೆ ವ್ಯತ್ಯಾಸ ಮೌಲ್ಯಮಾಪನ, ವೈಪರೀತ್ಯ ಪತ್ತೆ ಹಾಗೂ ಇತರ ವೈಶಿಷ್ಟ್ಯಗಳ ಮೂಲಕ ಅಸಾಮಾನ್ಯ ಚಟುವಟಿಕೆಗಳನ್ನು ತಕ್ಷಣ ಗುರುತಿಸಲು ಅನುವು ಮಾಡಿಕೊಡುತ್ತದೆ.  ಇದರಿಂದ ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಸಂಭಾವ್ಯ ಒಳಸಂಚನ್ನು ತಡೆಗಟ್ಟುವ ಸಾಮರ್ಥ್ಯವನ್ನು ನೀಡುತ್ತಿದೆ.  ಜಿಇಎಂ ಸಾರ್ವಜನಿಕ ಖರೀದಿ ಕ್ಷೇತ್ರದಲ್ಲಿ ಬಳಕೆದಾರ ಅನುಭವವನ್ನು ಹೆಚ್ಚಿಸಲು ಜನರೇಟಿವ್ ಕೃತಕ ಬುದ್ಧಿವಂತಿಕೆ (AI) ಆಧಾರಿತ ಚಾಟ್ ಬಾಕ್ಸ್ ಪರಿಚಯಿಸಿದ ಮೊದಲ ಸಂಸ್ಥೆಯಾಗಿದೆ.

2016ರ ಆಗಸ್ಟ್ 9 ರಂದು ಆರಂಭಗೊಂಡ ಜಿಇಎಂ ವೇದಿಕೆಯು ವಿವಿಧ ಕೇಂದ್ರ/ರಾಜ್ಯ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಪಂಚಾಯತ್ ಗಳು ಮತ್ತು ಸಹಕಾರಿ ಸಂಘಗಳಿಗೆ ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಖರೀದಿಗೆ ಅನುಕೂಲ ಮಾಡಿಕೊಟ್ಟಿದೆ. ನಗದುರಹಿತ, ಸಂಪರ್ಕರಹಿತ ಮತ್ತು ಕಾಗದರಹಿತ ಏಕೀಕೃತ ರಾಷ್ಟ್ರೀಯ ಖರೀದಿ ವೇದಿಕೆಯನ್ನು ಸ್ಥಾಪಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಕಾರಣದಿಂದ  ಜಿಇಎಂ ಹುಟ್ಟಿಕೊಂಡಿತು.

ಜಿಇಎಂ ಬಗ್ಗೆ:

ಸರ್ಕಾರಿ ಇ ಮಾರುಕಟ್ಟೆ ಸ್ಥಳ (GeM) - ಕೇಂದ್ರ ಸಚಿವಾಲಯಗಳು, ರಾಜ್ಯ ಇಲಾಖೆಗಳು, ಪಿಎಸ್‌ಇಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಸರಕು ಮತ್ತು ಸೇವೆಗಳ ಸಂಗ್ರಹಣೆಗಾಗಿ ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆಡಳಿತ ನಿಯಂತ್ರಣದ ಅಡಿಯಲ್ಲಿ ಜಿಇಎಂ ಸೆಕ್ಷನ್ 8 ಕಂಪನಿಯಾಗಿದೆ.

 

*****



(Release ID: 2044038) Visitor Counter : 26


Read this release in: English , Urdu , Hindi , Hindi_MP