ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಭಾರತ ಮತ್ತು ಸೇಂಟ್ ಕ್ರಿಸ್ಟೋಫರ್ ಹಾಗೂ ನೆವಿಸ್, ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಒಡಂಬಡಿಕೆಗೆ ಸಹಿ ಹಾಕಿದರು

Posted On: 05 AUG 2024 7:20PM by PIB Bengaluru

ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ ಅವರು ಫೆಡರೇಶನ್ ಆಫ್ ಸೇಂಟ್ ಕ್ರಿಸ್ಟೋಫರ್ ಮತ್ತು ನೆವಿಸ್ ಸರ್ಕಾರದ ಗೌರವಾನ್ವಿತ ವಿದೇಶಾಂಗ ಸಚಿವರಾದ ಡಾ. ಡೆಂಜಿಲ್ ಡೌಗ್ಲಾಸ್ ಅವರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಇರುವ ಅವಕಾಶಗಳ ಕುರಿತು ಚರ್ಚಿಸಿದರು. ಇದೇ  ಸಂದರ್ಭದಲ್ಲಿ ಉಭಯ ಪಕ್ಷಗಳು ಕ್ರೀಡಾ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು. 

 

ಈ ತಿಳುವಳಿಕಾ ಒಪ್ಪಂದದ ಅಡಿಯಲ್ಲಿ ಪರಸ್ಪರ ಸಹಕಾರಕ್ಕಾಗಿ ಗುರುತಿಸಲಾಗಿರುವ ಪ್ರಮುಖ ಅಂಶಗಳು ಕೆಳಕಂಡಂತಿವೆ:

a.    ಕ್ರೀಡಾಪಟುಗಳು ಮತ್ತು ಅಥ್ಲೆಟಿಕ್ ತಂಡಗಳಿಗೆ ತರಬೇತಿ ಮತ್ತು ಪರಸ್ಪರರಲ್ಲಿ ಸ್ಪರ್ಧೆ
b.    ಕೋಚ್ ಗಳಿಗೆ ತರಬೇತಿ ಮತ್ತು ತಾಂತ್ರಿಕ ನೆರವು
c.    ಕ್ರೀಡಾಪಟುಗಳು, ಅಧಿಕಾರಿಗಳು, ಕ್ರೀಡಾ ನಿರ್ವಾಹಕರು, ವೃತ್ತಿಪರರು, ತಂತ್ರಜ್ಞರು ಮತ್ತು ಸಪೋರ್ಟ್ ಸ್ಟಾಫ್ ಗಳ ವಿನಿಮಯ ಕಾರ್ಯಕ್ರಮಗಳು ಮತ್ತು ಭೇಟಿಗಳು
d.    ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ, ಕಬಡ್ಡಿ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಯುವ ಮತ್ತು ಕಿರಿಯ ಆಟಗಾರರ ವಿನಿಮಯ ಕಾರ್ಯಕ್ರಮ 
e.    ಕ್ರೀಡಾ ವಿಜ್ಞಾನ ಸಿಬ್ಬಂದಿಗೆ ತರಬೇತಿ, ವಿನಿಮಯ ಮತ್ತು ಲಗತ್ತು ಕಾರ್ಯಕ್ರಮಗಳು ಮತ್ತು ಕ್ರೀಡಾ ವಿಜ್ಞಾನದಲ್ಲಿ ಇತರ ಅಭಿವೃದ್ಧಿ ನೆರವು
f.    ತರಬೇತುದಾರ ಶಿಕ್ಷಣ, ಪಠ್ಯಕ್ರಮ ಅಭಿವೃದ್ಧಿ, ಕ್ರೀಡಾ ಶಿಕ್ಷಣ, ಕ್ರೀಡಾ ನಿರ್ವಹಣೆ ಮತ್ತು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ತರಬೇತಿ, ವಿನಿಮಯ ಮತ್ತು ಲಗತ್ತು ಕಾರ್ಯಕ್ರಮಗಳು
g.    ತರಬೇತಿ, ಮೂಲಸೌಕರ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂಶೋಧನೆಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನದ ವಿನಿಮಯ
h.    ಕ್ರೀಡಾ ಸಂಶೋಧನೆ ಮತ್ತು ತರಬೇತಿಯಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಯೋಗ
i.    ಕ್ರೀಡಾ ವಿಜ್ಞಾನ, ಸಂಶೋಧನೆ ಮತ್ತು ಡೋಪಿಂಗ್ ವಿರೋಧಿ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಸಹಯೋಗ
j.    ಎರಡೂ ದೇಶಗಳ ವಿಶ್ವವಿದ್ಯಾನಿಲಯಗಳು ಅಥವಾ ದೈಹಿಕ ಶಿಕ್ಷಣ ಸಂಸ್ಥೆಗಳ ನಡುವೆ ದೈಹಿಕ ಶಿಕ್ಷಣ ಮತ್ತು ಫಿಟ್ನೆಸ್ ಅಭಿವೃದ್ಧಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಸಹಯೋಗ

 

*****



(Release ID: 2042006) Visitor Counter : 31


Read this release in: English , Urdu , Hindi , Hindi_MP