ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಸಂಸತ್ತಿನ ಪ್ರಾಥಮಿಕ ಪಾತ್ರವಾಗಿದೆ - ಉಪರಾಷ್ಟ್ರಪತಿಗಳು


ಸರಿಯಾದ ವಿಧಾನಗಳನ್ನು ಅನುಸರಿಸಿದರೆ, ಪ್ರತಿಯೊಂದು ವಿಷಯವನ್ನೂ ಸಂಸತ್ತಿನಲ್ಲಿ ಚರ್ಚಿಸಬಹುದು

ಸಂಸತ್ತು ಅದರ ಕಾರ್ಯವಿಧಾನಕ್ಕೆ, ಅದರ ನಡಾವಳಿಗಳಿಗೆ ಸರ್ವೋಚ್ಚವಾಗಿದೆ; ಸಂಸತ್ತಿನಲ್ಲಿ ಯಾವುದೇ ಪ್ರಕ್ರಿಯೆಯು ಪರಿಶೀಲನೆಗೆ ಮೀರಿದೆ ಎಂದು ವಿಪಿ ಒತ್ತಿ ಹೇಳಿದರು

ಗಮನ ಸೆಳೆಯಲು ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಲು ಸದಸ್ಯರು ಅಳವಡಿಸಿಕೊಂಡ ವೈಯಕ್ತಿಕ ದಾಳಿ ಮತ್ತು ಹಿಟ್ ಮತ್ತು ರನ್ ತಂತ್ರಗಳು ಅತ್ಯಂತ ಕಳವಳಕಾರಿ – ಉಪರಾಷ್ಟ್ರಪತಿಗಳು

ತುರ್ತು ಪರಿಸ್ಥಿತಿಯು ನೋವಿನ, ಹೃದಯವಿದ್ರಾವಕ ಮತ್ತು ಭಾರತೀಯ ಪ್ರಜಾಪ್ರಭುತ್ವದ ಕರಾಳ ಅಧ್ಯಾಯವಾಗಿದೆ

ರಾಜಕೀಯ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಸಮಸ್ಯೆಗಳು ಮತ್ತು ಹಿತಾಸಕ್ತಿಗಳಿಗೆ ಪ್ರಾಧಾನ್ಯತೆ ನೀಡಬೇಕು

ಸಂವಿಧಾನ ರಚನಾ ಸಭೆಯ ನಡಾವಳಿಗಳು ಆಧುನಿಕ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರ್ಗದರ್ಶಕ ಬೆಳಕು

ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ರಕ್ಷಿಸಲು ಸಂಸತ್ತಿನಲ್ಲಿ ಸದಸ್ಯರಿಗೆ ವಾಕ್ ಸ್ವಾತಂತ್ರ್ಯವನ್ನು ನೀಡಲಾಗಿದೆ

ನಾಮನಿರ್ದೇಶಿತ ಸದಸ್ಯರು ಸಂಸತ್ತಿನ ಮೂಲಕ ಸಮಾಜಕ್ಕೆ ಪ್ರಬುದ್ಧತೆಯನ್ನು ನೀಡಬೇಕು 

Posted On: 27 JUL 2024 4:11PM by PIB Bengaluru

ಸಂವಿಧಾನವನ್ನು ಕಾಪಾಡುವುದು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಸಂಸತ್ತಿನ ಪ್ರಾಥಮಿಕ ಪಾತ್ರವಾಗಿದೆ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಹೇಳಿದರು. ಸದಸ್ಯನಿಗಿಂತ ದೊಡ್ದ ಪ್ರಜಾಪ್ರಭುತ್ವದ  ಕಾವಲುಗಾರ ಮತ್ತೊಬ್ಬರಿಲ್ಲ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಯಾವುದೇ ಬಿಕ್ಕಟ್ಟು ಉಂಟಾದರೆ, ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ದಾಳಿಯಾದರೆ, ನಿಮ್ಮ ಪಾತ್ರವು ನಿರ್ಣಾಯಕವಾಗಿದೆ" ಎಂದು ಅವರು ಹೇಳಿದರು.

 

ಇಂದು ಸಂಸತ್ ಭವನದಲ್ಲಿ ನೂತನವಾಗಿ ಚುನಾಯಿತರಾದ ರಾಜ್ಯಸಭಾ ಸದಸ್ಯರಿಗೆ ಆಯೋಜಿಸಲಾದ ಒರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಶ್ರೀ ಧನಕರ್ ಅವರು, ಸಂಸತ್ತಿನಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಿದರೆ ಯಾವುದೇ ವಿಷಯದ ಚರ್ಚೆಗೆ ಮಿತಿಯಿಲ್ಲ ಎಂದು ಪ್ರತಿಪಾದಿಸಿದರು. ಸಭಾಧ್ಯಕ್ಷರ ಕಾರ್ಯವೈಖರಿ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಸದನ ರೂಪಿಸಿದ ವಿಧಾನ ಅನುಸರಿಸಿದರೆ ಯಾವುದೇ ವ್ಯಕ್ತಿ , ಯಾವುದೇ ಸದಸ್ಯರು ಚರ್ಚೆ ನಡೆಸಬಹುದು ಎಂದು ಹೇಳಿದರು.

ಸಂಸತ್ತಿನ ಸ್ವಾಯತ್ತತೆ ಮತ್ತು ಅಧಿಕಾರಕ್ಕೆ ಒತ್ತು ನೀಡಿದ ಅವರು, "ಸಂಸತ್ತು ಅದರ ಕಾರ್ಯನಿರ್ವಹಣೆ ಮತ್ತು ಕಾರ್ಯವಿಧಾನಗಳಿಗೆ ಸರ್ವೋಚ್ಚವಾಗಿದೆ. ಸದನದಲ್ಲಿ, ಸಂಸತ್ತಿನಲ್ಲಿನ ಯಾವುದೇ ಪ್ರಕ್ರಿಯೆಯು ಕಾರ್ಯಾಂಗ ಅಥವಾ ಯಾವುದೇ ಇತರ ಪ್ರಾಧಿಕಾರದ ಪರಿಶೀಲನೆಗೆ ಮೀರಿದೆ. ಸಂಸತ್ತಿನ ಒಳಗೆ ಏನೇ ನಡೆದರೂ ಸ್ಪೀಕರ್ ಹೊರತುಪಡಿಸಿ ಯಾರಿಗೂ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಯಾವುದೇ ಕಾರ್ಯಾಂಗ ಅಥವಾ ಯಾವುದೇ ಸಂಸ್ಥೆಗೆ ಆ ಹಕ್ಕು ಇಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಸಂಸದರು ಸಂಸತ್ತಿನಲ್ಲಿ ಮಾತನಾಡುವ ಮೊದಲು ಮಾಧ್ಯಮಗಳಿಗೆ ಬೈಟ್ ನೀಡಿ, ಸಂಸತ್ತಿಗೆ ಬರುವುದು, ಗಮನ ಸೆಳೆಯಲು ಮತ್ತು ಮಾಧ್ಯಮ ಪ್ರಚಾರಕ್ಕಾಗಿ ಮಾತ್ರ ಸಂಸತ್ತಿನಲ್ಲಿ ಮಾತನಾಡುವ ಮತ್ತು  ಇತರ ಸದಸ್ಯರ ಮಾತನ್ನು ಕೇಳದೆ ಸದನದಿಂದ ಹೊರನಡೆಯುವುದು, ಮತ್ತೆ ಮಾಧ್ಯಮಗಳಿಗೆ ಬೈಟ್ ನೀಡುವುದು ಸೇರಿದಂತೆ ಸಂಸದರು ಅನುಸರಿಸುತ್ತಿರುವ ಈ ರೀತಿಯ ಹಿಟ್ ಅಂಡ್-ರನ್ ವಿಧಾನದ ಬಗ್ಗೆ ಧನಕರ್ ಕಳವಳ ವ್ಯಕ್ತಪಡಿಸಿದರು.  ಸದಸ್ಯರಲ್ಲಿ ವಿವಿಧ ವಿಷಯಗಳನ್ನು ಚರ್ಚಿಸುವ ಬದಲು ವೈಯಕ್ತಿಕ ಟೀಕೆಗಳನ್ನು ಮಾಡುವ  ಮತ್ತು ಕೆಲವು ವ್ಯಕ್ತಿಗಳನ್ನು ಮೆಚ್ಚಿಸಲು ಘೋಷಣೆಗಳನ್ನು ಕೂಗುವ ಪ್ರವೃ ಬಗ್ಗೆ ಅವರು ಗಮನ ಸೆಳೆದರು.  ಇದಕ್ಕಿಂತ ಒಡೆದು ಆಳುವ ಧೋರಣೆ ಮತ್ತೊಂದಿಲ್ಲ ಎಂದರು.

 

ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ನೋವಿನ , ಹೃದಯ ವಿದ್ರಾವಕ ಮತ್ತು ಕರಾಳ ಅವಧಿ ಎಂದು ಬಣ್ಣಿಸಿದ ಶ್ರೀ ಧನಕರ್, ಆ ಸಮಯದಲ್ಲಿ ನಮ್ಮ ಸಂವಿಧಾನವನ್ನು ಕೇವಲ ಕಾಗದಕ್ಕೆ ಇಳಿಸಲಾಯಿತು, ಮೂಲಭೂತ ಹಕ್ಕುಗಳನ್ನು ಸಂಪೂರ್ಣ ಉಲ್ಲಂಘಿಸಲಾಯಿತು,  ನಾಯಕರನ್ನು ಅನ್ಯಾಯವಾಗಿ ಜೈಲಿನಲ್ಲಿಡಲಾಯಿತು ಎಂದು ಹೇಳಿದರು. ಸಂಸತ್ತಿನ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ಶ್ರೀ ಧನಕರ್ ಹೆಮ್ಮೆ ವ್ಯಕ್ತಪಡಿಸಿದರು, ನಮ್ಮ ಸಂಸತ್ತಿನ ಸದಸ್ಯರು ಮೊದಲಿನಿಂದಲೂ ಜನರಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಈ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

 

ದೇಶದ ಸಂಸದೀಯ ವ್ಯವಸ್ಥೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವಿಷಾದಿಸಿದ ಅವರು, ರಾಜಕೀಯ ವಿಚಾರಗಳಿಗಿಂತ ರಾಷ್ಟ್ರೀಯ ವಿಷಯಗಳು ಮತ್ತು ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಿದೆ ಎಂದು ಅವರು  ಹೇಳಿದರು. ಇಂದಿನ ಪರಿಸ್ಥಿತಿ ಚಿಂತಾಜನಕವಾಗಿದ್ದು,ಸಂಸತ್ತಿನ ಕಲಾಪ, ಗಲಾಟೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

 

ಇದು ಪ್ರಜಾಪ್ರಭುತ್ವದ ಮೂಲ ಚೇತನದ ಮೇಲಿನ ದಾಳಿಯಾಗಿದೆ. ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತರುವುದು  ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸಿದಂತೆ. ಸಂಸತ್ತು ಮತ್ತು ದೇಶಕ್ಕೆ ಹಾನಿಯಾಗುವ ರೀತಿಯಲ್ಲಿ ಗಲಾಟೆ ಮಾಡಿ ರಾಜಕೀಯ ಲಾಭ ಪಡೆಯುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಎಂದು ಅವರು ಹೇಳಿದರು.

 

ಚರ್ಚಾ ವೇದಿಕೆಯೂ ಸಂವಿಧಾನಿಕ ಮೌಲ್ಯಗಳು ಮತ್ತು ಸ್ವಾತಂತ್ರ್ಯದ ಕೋಟೆಯೂ ಆದ ಸಂಸತ್ತಿನ ಗೌರವಾನ್ವಿತ ಪಾತ್ರವನ್ನು ಪರಿಗಣಿಸಿ, ಸಂಪೂರ್ಣ ರಾಜಕೀಯ ದೃಷ್ಟಿಕೋನದಿಂದ ದೇಶಪ್ರೇಮ ಮತ್ತು ದೇಶದ ಸಮಗ್ರ ಕಲ್ಯಾಣದ ಕಡೆಗೆ ಗಮನ ಹರಿಸುವುದಕ್ಕೆ ಶ್ರೀ ಧನಕರ್  ಕರೆ ನೀಡಿದರು

ಭಾರತೀಯ ಸಂಸತ್ತಿನ ಮೂಲ ಉದ್ದೇಶವನ್ನು ವಿವರಿಸಿದ ಶ್ರೀ ಧನಕರ್ ಅವರು ರಾಜಕೀಯ ಪಕ್ಷಗಳ ಗಡಿಗಳನ್ನು ಮೀರಿ ಸಂಸದೀಯ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುವ ಮಹತ್ವವನ್ನು ಎತ್ತಿ ತೋರಿಸಿದರು. ಸಂವಿಧಾನ ಸಭೆಯ ಕಾರ್ಯವೈಖರಿಯನ್ನು ಆಧುನಿಕ ಭಾರತೀಯ ಪ್ರಜಾಪ್ರಭುತ್ವಕ್ಕೆ ದಾರಿದೀಪ ಮತ್ತು ಮಾರ್ಗದರ್ಶಕ ಎಂದು ಶ್ಲಾಘಿಸಿದರು. ಸಂವಿಧಾನ ಸಭೆಯ ಗಮನಾರ್ಹ ಮೂರು ವರ್ಷಗಳ ಪ್ರಯಾಣ, 11 ಅಧಿವೇಶನಗಳನ್ನು ಒಳಗೊಂಡಿದೆ, ಈ ಸಮಯದಲ್ಲಿ ಅದು ಆಳವಾದ ವಿವಾದಾತ್ಮಕ ಸಮಸ್ಯೆಗಳನ್ನು ಅಲಂಕಾರಿಕ ಅಥವಾ ಸಂವಾದದಲ್ಲಿ ರಾಜಿ ಮಾಡಿಕೊಳ್ಳದೆ ಪರಿಹರಿಸಿತು. ನಾಗರಿಕತೆ ಮತ್ತು ಪರಿಣಾಮಕಾರಿ ಚರ್ಚೆಗೆ ಉನ್ನತ ಗುಣಮಟ್ಟವನ್ನು ಹೊಂದಿಸುವ ಮುಖಾಮುಖಿಯ ಬದಲು ಸಹಕಾರದ ಮೂಲಕ ಪರಿಹಾರಗಳನ್ನು ಸಾಧಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

 


ಸದನದಲ್ಲಿ ಮಾತನಾಡಿದ ಸದಸ್ಯರಿಗೆ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಧನಕರ್, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಸದಸ್ಯರಿಗೆ ಈ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿದರು. ಯಾವುದೇ ದುರುಪಯೋಗ ನಡೆದಲ್ಲಿ ಸಂಸದೀಯ ನಿಯಮಾವಳಿಗಳ ಅನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು  ಮತ್ತು ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂತೋಷಪಡುವುದಿಲ್ಲ ಎಂದು ಹೇಳಿದರು.

 

ಆರು ದಶಕಗಳಲ್ಲಿ ಮೊದಲ ಬಾರಿಗೆ ಪ್ರಧಾನಿಯವರು ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಿದ ಧನಕಡ್, ಪ್ರಧಾನಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ , ಪ್ರಧಾನಿಯನ್ನು ಸದನದ ನಾಯಕ ಎಂದು ಕರೆಯಲಾಗುತ್ತದೆ ಎಂದು  ಪ್ರಧಾನಿ ಪಾತ್ರದ ಬಗ್ಗೆ ಗಮನ ಸೆಳೆದರು.  ಅಲ್ಲದೆ  ರಾಜ್ಯಸಭೆಯಲ್ಲಿ ಇತ್ತೀಚೆಗೆ ಉಂಟಾಗಿರುವ ಅಡ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು , ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರ ನೀಡುತ್ತಿರುವಾಗ ತೋರಿದ ಅಗೌರವವನ್ನು ಟೀಕಿಸಿದರು.

ಉಪರಾಷ್ಟ್ರಪತಿಯವರು ಪಕ್ಷಪಾತದ ಆರೋಪಗಳನ್ನು ಬಲವಾಗಿ ತಿರಸ್ಕರಿಸಿದರು ಮತ್ತು ಸಂವಿಧಾನ , ಕಾನೂನು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು . ಈ ಮೂಲಭೂತ ತತ್ವಗಳನ್ನು ಪ್ರತಿಬಿಂಬಿಸಲು ಮತ್ತು ಸಂಸತ್ತಿನ ಕಲಾಪಗಳ ಘನತೆಯನ್ನು ಎತ್ತಿಹಿಡಿಯಲು ಅವರು ಎಲ್ಲ ಸದಸ್ಯರನ್ನು ಒತ್ತಾಯಿಸಿದರು.

ಸಂಸದೀಯ ನಡವಳಿಕೆಗೆ ಮಾರ್ಗದರ್ಶನ ನೀಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ , ಸಂಸದೀಯ ಶಿಷ್ಟಾಚಾರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪೀಠ ಇಲ್ಲಿಯವರೆಗೆ ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಧನಕರ್ ಸದಸ್ಯರನ್ನು ಪ್ರೋತ್ಸಾಹಿಸಿದರು.

ರಾಜಕೀಯ ಪಕ್ಷಗಳಿಂದ ಅಡ್ಡಿಪಡಿಸುವ ಅಭ್ಯಾಸದ ಬಗ್ಗೆ ಮಾತನಾಡುತ್ತಾ , ಅಂತಹ ಕ್ರಮಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದರು ಮತ್ತು ಇತರ ದೇಶಗಳಲ್ಲಿನ ಪ್ರಬಲ ಪ್ರಜಾಪ್ರಭುತ್ವಗಳಿಗೆ ಹೋಲಿಸಿ, ಭಾರತದಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿಲ್ಲದಿದ್ದರೂ, ಅಲ್ಲಿ ಇದು ಸಂಭವಿಸುವುದಿಲ್ಲ, ಸಂಸತ್ತಿನ ಕಾರ್ಯಚಟುವಟಿಕೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತದೆ ಅಂತ ಗಮನ ಸೆಳೆದರು. 

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸ್ತಂಭಗಳಾದ ಕಾರ್ಯಾಂಗ , ನ್ಯಾಯಾಂಗ ಮತ್ತು ಶಾಸಕಾಂಗ ದುರ್ಬಲವಾಗುತ್ತಿರುವುದು ಸಾಮಾನ್ಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಧನಕರ್ ತಿಳಿಸಿದರು. ಅವರು ಸದನದಲ್ಲಿ ಗೌರವ ಮತ್ತು ರಚನಾತ್ಮಕ ಸಂವಾದವನ್ನು ಪುನಃಸ್ಥಾಪಿಸಲು ಕರೆ ನೀಡಿದರು ಮತ್ತು ಪ್ರಸ್ತುತ ಸರ್ಕಾರದಿಂದ ಪಾರದರ್ಶಕತೆ , ಹೊಣೆಗಾರಿಕೆ ಮತ್ತು ದೂರದೃಷ್ಟಿಯ ಯೋಜನೆಗಳ ಅಗತ್ಯವನ್ನು ಪ್ರತಿಪಾದಿಸಿದರು.

 ಪ್ರತಿ ಪ್ರಶ್ನೆಗೂ ಪೂರಕ ಪ್ರಶ್ನೆಗಳನ್ನು ಕೇಳುವ ಪರಿಪಾಠವನ್ನು ರದ್ದುಪಡಿಸಿದ ಅವರು, ಸಚಿವರು ನೀಡುವ ಉತ್ತರಗಳನ್ನು ಎಚ್ಚರಿಕೆಯಿಂದ ಓದಿ ನಂತರ ಸಂಬಂಧಿತ ಪೂರಕ ಪ್ರಶ್ನೆಗಳನ್ನು ಕೇಳಲು ಸದಸ್ಯರಿಗೆ ಕರೆ ನೀಡಿದರು. ಪ್ರಶ್ನೆಗಳನ್ನು ಆಯ್ಕೆಮಾಡುವಾಗ ನಾವು ಲಿಂಗ ಮತ್ತು ಪಕ್ಷದ ಸಮತೋಲನದ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಹೇಳುವ ಮೂಲಕ ಹಿರಿಯ ನಾಯಕರು ತಮ್ಮ ನಡವಳಿಕೆಯಿಂದ ಉದಾಹರಣೆಯಾಗುವಂತೆ ಒತ್ತಾಯಿಸಿದರು.

ಸಮಾಜವನ್ನು ಪ್ರಬುದ್ಧಗೊಳಿಸುವಲ್ಲಿ ರಾಷ್ಟ್ರಪತಿಗಳಿಂದ ನೇಮಕಗೊಂಡ ನಾಮನಿರ್ದೇಶಿತ ಸದಸ್ಯರ ಪ್ರಮುಖ ಪಾತ್ರದ ಬಗೆ ಮಾತನಾಡಿದ ಶ್ರೀ ಧನಕರ್,  ಅವರ ಕೊಡುಗೆಯನ್ನು ದಾಖಲಿಸಲು ವಾರ್ಷಿಕ ಪುಸ್ತಕವನ್ನು ಸಿದ್ಧಪಡಿಸಲು ಸೂಚಿಸಿದರು. ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿಶೇಷ ಉಲ್ಲೇಖಗಳನ್ನು ಪರಿಣಾಮಕಾರಿಯಾಗಿ ಬಳಸಬೇಕೆಂದು ಸದಸ್ಯರನ್ನು ಒತ್ತಾಯಿಸಿದರು.   ಇವುಗಳು ಕೇವಲ ಔಪಚಾರಿಕತೆಗಳಲ್ಲ ಆದರೆ ಉಪಕ್ರಮಗಳನ್ನು ತೆಗೆದುಕೊಳ್ಳುವ ಸಾಧನಗಳಾಗಿವೆ ಎಂದು ಒತ್ತಿ ಹೇಳಿದರು.

 

 

*****


(Release ID: 2038089) Visitor Counter : 87