ರಕ್ಷಣಾ ಸಚಿವಾಲಯ

ಎರಡನೇ ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಡಿ ಆರ್ ಡಿ ಒ

Posted On: 24 JUL 2024 8:24PM by PIB Bengaluru

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) 2024ರ ಜುಲೈ 24 ರಂದು ಎರಡನೇ ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಟಾರ್ಗೆಟ್ ಕ್ಷಿಪಣಿಯನ್ನು ಎಲ್ಸಿ-4 ಧಮ್ರಾದಿಂದ 1620 ಗಂಟೆಗೆ ಉಡಾವಣೆ ಮಾಡಲಾಯಿತು, ಇದು ಎದುರಾಳಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅನುಕರಿಸಿತು, ಇದನ್ನು ನೆಲ ಮತ್ತು ಸಮುದ್ರದಲ್ಲಿ ನಿಯೋಜಿಸಲಾದ ಶಸ್ತ್ರಾಸ್ತ್ರ ವ್ಯವಸ್ಥೆ ರಾಡಾರ್ ಗಳು ಪತ್ತೆಹಚ್ಚಿದವು ಮತ್ತು ಮಧ್ಯಪ್ರವೇಶ ವ್ಯವಸ್ಥೆಯಾದ ಎಡಿ ಇಂಟರ್ಸೆಪ್ಟರ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದವು.          

ಎರಡನೇ ಹಂತದ ಎಡಿ ಎಂಡೋ-ವಾತಾವರಣದ ಕ್ಷಿಪಣಿಯನ್ನು ಚಂಡಿಪುರದ ಐಟಿಆರ್ನಲ್ಲಿ ಎಲ್ಸಿ -3 ರಿಂದ 1624 ಗಂಟೆಗೆ ಉಡಾವಣೆ ಮಾಡಲಾಯಿತು. ಹಾರಾಟ ಪರೀಕ್ಷೆಯು ಲಾಂಗ್ ರೇಂಜ್ ಸೆನ್ಸರ್ಗಳು, ಕ್ಷಿಪ್ರ ಸಂವಹನ ವ್ಯವಸ್ಥೆ ಮತ್ತು ಎಂಸಿಸಿ ಮತ್ತು ಆಧುನಿಕ ಮಧ್ಯಪ್ರವೇಶ (ಅಡ್ವಾನ್ಸ್ ಇಂಟರ್ಸೆಪ್ಟರ್) ಕ್ಷಿಪಣಿಗಳನ್ನು ಒಳಗೊಂಡಿರುವ ಸಂಪೂರ್ಣ ಜಾಲ (ನೆಟ್ವರ್ಕ್) ಕೇಂದ್ರಿತ ಯುದ್ಧ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಮೌಲ್ಯೀಕರಿಸುವ ಎಲ್ಲಾ ಪ್ರಾಯೋಗಿಕ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿತು.

ಪರೀಕ್ಷೆಯು 5000 ಕಿ.ಮೀ ವರ್ಗದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ಎದುರಿಸಿ ರಕ್ಷಣೆ ನೀಡುವ  ದೇಶೀಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಚಂಡಿಪುರದ ಐಟಿಆರ್ ವಿವಿಧೆಡೆಗಳಲ್ಲಿ ನಿಯೋಜಿಸಿದ ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ಸ್, ರಾಡಾರ್ ಮತ್ತು ಟೆಲಿಮೆಟ್ರಿ ಕೇಂದ್ರಗಳಂತಹ ರೇಂಜ್ ಟ್ರ್ಯಾಕಿಂಗ್ ಉಪಕರಣಗಳು ಸೆರೆಹಿಡಿದ ಹಾರಾಟ ದತ್ತಾಂಶದಿಂದ ಕ್ಷಿಪಣಿಯ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಎರಡನೇ ಹಂತದ ಎಡಿ ಎಂಡೋ-ವಾತಾವರಣದ ಕ್ಷಿಪಣಿಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು ಹಂತದ ನೆಲದಿಂದ ಉಡಾವಣೆ ಮಾಡುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಎತ್ತರದಲ್ಲಿ ಮತ್ತು ಕೆಳಮಟ್ಟದಲ್ಲಿ ಅನೇಕ ರೀತಿಯ ಶತ್ರು ಬ್ಯಾಲಿಸ್ಟಿಕ್ ಕ್ಷಿಪಣಿ ಬೆದರಿಕೆಗಳನ್ನು ತಟಸ್ಥಗೊಳಿಸುವ ಉದ್ದೇಶವನ್ನು ಹೊಂದಿದೆ. ವಿವಿಧ ಡಿಆರ್ ಡಿಒ ಪ್ರಯೋಗಾಲಯಗಳು ಅಭಿವೃದ್ಧಿಪಡಿಸಿದ ಹಲವಾರು ಅತ್ಯಾಧುನಿಕ ದೇಶೀಯ ತಂತ್ರಜ್ಞಾನಗಳನ್ನು ಕ್ಷಿಪಣಿ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದಿನ ಯಶಸ್ವಿ ಹಾರಾಟ ಪರೀಕ್ಷೆಗಾಗಿ ಡಿಆರ್ ಡಿಒವನ್ನು ಶ್ಲಾಘಿಸಿದರು ಮತ್ತು ಇದು ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಹೇಳಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್ಡಿಒ ಅಧ್ಯಕ್ಷ ಡಾ.ಸಮೀರ್ ವಿ ಕಾಮತ್ ಅವರು ಇಂದಿನ ಯಶಸ್ವಿ ಹಾರಾಟ ಪರೀಕ್ಷೆಗೆ ಕಾರಣವಾದ ಇಡೀ ಡಿಆರ್ಡಿಒ ತಂಡವನ್ನು ಅದರ ಅವಿರತ ಪ್ರಯತ್ನ ಮತ್ತು ಕೊಡುಗೆಗಾಗಿ ಅಭಿನಂದಿಸಿದರು.

 

*****



(Release ID: 2036670) Visitor Counter : 15


Read this release in: English , Marathi , Hindi , Hindi_MP