ಭಾರೀ ಕೈಗಾರಿಕೆಗಳ ಸಚಿವಾಲಯ

2024-25ರ ಕೇಂದ್ರ ಬಜೆಟ್ ಕುರಿತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕಿನ ಸಚಿವರ ಹೇಳಿಕೆ


"ವಿಕಸಿತ ಭಾರತಕ್ಕಾಗಿ ಬಜೆಟ್" ಮತ್ತು ಬಲವಾದ ಅಭಿವೃದ್ಧಿ ಮತ್ತು ಸರ್ವತೋಮುಖ ಸಮೃದ್ಧಿಯ ಹಾದಿ ತೋರುವ ಮುಂಗಡಪತ್ರ

ನಾರಿ ಶಕ್ತಿ ಬಜೆಟ್ ಪ್ರಧಾನಮಂತ್ರಿಯವರ 'ಅಭಿವೃದ್ಧಿ ಹೊಂದಿದ ಭಾರತ'ದ ದೃಷ್ಟಿಕೋನವನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಮಹಿಳೆಯರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ

ಬಜೆಟ್ ಸಂಶೋಧನೆ ಮತ್ತು ನಾವೀನ್ಯತೆಗೆ ಬಲವಾದ ಒತ್ತು ನೀಡುತ್ತದೆ

Posted On: 24 JUL 2024 2:53PM by PIB Bengaluru

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು. ಈ ಬಜೆಟ್ ಅನ್ನು "ವಿಕಸಿತ ಭಾರತಕ್ಕಾಗಿ ಬಜೆಟ್" ಮತ್ತು ಬಲವಾದ ಅಭಿವೃದ್ಧಿ ಮತ್ತು ಸರ್ವತೋಮುಖ ಸಮೃದ್ಧಿಯ ಹಾದಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಈ ಬಜೆಟ್ ಎಲ್ಲರಿಗೂ ನಿರಂತರ ಪ್ರಯತ್ನಗಳು ಮತ್ತು ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತದೆ.

'ಅಭಿವೃದ್ಧಿ ಹೊಂದಿದ ಭಾರತ'ದ ಪ್ರಧಾನಮಂತ್ರಿಯವರ ದೃಷ್ಟಿಯನ್ನು ಸಶಕ್ತಗೊಳಿಸಲು ಮತ್ತು ಮಹಿಳೆಯರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುವ ಗುರಿಯನ್ನು ನಾರಿ ಶಕ್ತಿ ಬಜೆಟ್ ಹೊಂದಿದೆ ಎಂದು ಶ್ರೀ ಕುಮಾರಸ್ವಾಮಿ ಹೇಳಿದ್ದಾರೆ. ಒಂಬತ್ತು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ₹1.48 ಲಕ್ಷ ಕೋಟಿ ಮೀಸಲಿಡಲಾಗಿದೆ. 4 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು, ಮಾನವ ಸಂಪನ್ಮೂಲದ ಉತ್ತಮ ಬಳಕೆಯನ್ನು ಖಾತರಿಪಡಿಸುವುದು ಇದರ ಗುರಿಯಾಗಿದೆ. ಈ ಬಜೆಟ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಉಪಕ್ರಮಗಳನ್ನು ಒಳಗೊಂಡಿದೆ, ಇದು ಉದ್ಯೋಗವನ್ನು ಸೃಷ್ಟಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  ಇದು ದೂರದೃಷ್ಟಿಯ ಮತ್ತು ದೂರಗಾಮಿ ಬಜೆಟ್ ಆಗಿದೆ.

ಕೃಷಿ, ಕೈಗಾರಿಕೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆ ಕೂಡ ಒಂದು ಪ್ರಮುಖ ಕೇಂದ್ರವಾಗಿದೆ. ಬೆಂಗಳೂರು-ಚೆನ್ನೈ ಮತ್ತು ಹೈದರಾಬಾದ್-ಬೆಂಗಳೂರು ಸೇರಿದಂತೆ 12 ಕೈಗಾರಿಕಾ ಕಾರಿಡಾರ್‌ಗಳ ಘೋಷಣೆಯು ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಕೃಷಿಯನ್ನು ಪುನಶ್ಚೇತನಗೊಳಿಸಲು, ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಕೃಷಿ ಬೆಳೆಗಳ ಡಿಜಿಟಲ್ ಸಮೀಕ್ಷೆಯನ್ನು ದೇಶಾದ್ಯಂತ 400 ಜಿಲ್ಲೆಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಹೆಚ್ಚುವರಿಯಾಗಿ, ಹಣಕಾಸು ಸಚಿವರು ನೈಸರ್ಗಿಕ ಕೃಷಿಯ ಮಹತ್ವದ ಬಗ್ಗೆ  ಹೇಳಿದ್ದಾರೆ. ಬಜೆಟ್ ಸಂಶೋಧನೆ ಮತ್ತು ನಾವೀನ್ಯತೆಗೆ ಬಲವಾದ ಒತ್ತು ನೀಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಮೂಲಕ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡುವುದು ಮುಂದಾಲೋಚನೆಯ ಉಪಕ್ರಮವಾಗಿದ್ದು ಅದು ಒಟ್ಟಾರೆ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡುತ್ತದೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಘೋಷಣೆ ಮಾಡಿರುವುದು ಶ್ಲಾಘನೀಯ. ಇದು ಅಮೃತ ಕಾಲ ಒಳಗೊಳ್ಳುವ ಬಜೆಟ್ ಆಗಿದೆ ಎಂದು ಸಚಿವರು ವಿವರಿಸಿದ್ದಾರೆ.

 

*****
 



(Release ID: 2036454) Visitor Counter : 11


Read this release in: English , Urdu , Tamil