ರಕ್ಷಣಾ ಸಚಿವಾಲಯ
ಸರ್ಕಾರಿ ಸ್ವಾಮ್ಯಗಳ (ಪಿಎಸ್‌ಯು) ಸಾಮರ್ಥ್ಯ ವೃದ್ಧಿಗೆ ಸರ್ಕಾರ ಬದ್ಧ: ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್
Posted On:
16 JUL 2024 6:33PM by PIB Bengaluru
ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್‌ಯು) ಸಾಮರ್ಥ್ಯ ವೃದ್ಧಿಗೆ ಹೆಚ್ಚು ಆದ್ಯತೆ ನೀಡಲು ಎಲ್ಲಾ ಅಗತ್ಯ ಬೆಂಬಲ ಮತ್ತು ಇತರೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್ ಪುನರುಚ್ಚರಿಸಿದ್ದಾರೆ.
ಜುಲೈ 16, 2024 ರಂದು ಬೆಂಗಳೂರು ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಧಿಕಾರಿಗಳನ್ನು ಉದ್ದೇಶಿಸಿ ಸಚಿವರು ಮಾತನಾಡಿದರು. ಸರ್ಕಾರಿ ಸ್ವಾಮ್ಯದ ಉದ್ಯಮಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಉಳಿಯಬೇಕಾಗಿದೆ ಎಂದು ಹೇಳಿದರು.
BEL ನ ಸಾಧನೆಗಳು ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವ ಶ್ರೀ ಸಂಜಯ್ ಸೇಠ್, ಮೇಕ್ ಇನ್ ಇಂಡಿಯಾ ಉಪಕ್ರಮ ಮತ್ತು ಆತ್ಮನಿರ್ಭರ ಅಭಿಯಾನಕ್ಕೆ ಪಿಎಸ್‌ಯುಗಳು ಗಣನೀಯ ಕೊಡುಗೆಗಳನ್ನು ನೀಡುತ್ತಿದೆ ಎಂದು ಹೇಳಿದರು. ಇದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಸಹಭಾಗಿತ್ವದಲ್ಲಿ ಅನೇಕ ದೇಶೀಯ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಆತ್ಮನಿರ್ಭರವನ್ನು ಬಲಪಡಿಸುವ ಮೂಲಕ ಈ ವರ್ಷ 150 ವಸ್ತುಗಳ ಪೇಟೆಂಟ್‌ಗಳನ್ನು ಪಡೆದುಕೊಂಡಿದೆ ಎಂದು ಸಚಿವರು ಹೇಳಿದರು.
ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನೇವಿ (ADSN) ಸ್ಟ್ರಾಟೆಜಿಕ್ ಬ್ಯುಸಿನೆಸ್ ಯುನಿಟ್ (SBU), ಮಿಲಿಟರಿ ರಾಡಾರ್‌ಗಳು SBU ಮತ್ತು ಅತ್ಯಾಧುನಿಕ EMI / EMC ಲ್ಯಾಬ್‌ನಲ್ಲಿನ ನಿಖರ ಉತ್ಪಾದನಾ ಘಟಕಕ್ಕೆ ಸಚಿವರು ಭೇಟಿ ನೀಡಿದರು. ಕರಾವಳಿ ಕಣ್ಗಾವಲು ವ್ಯವಸ್ಥೆ ಮತ್ತು ಪರಿಧಿಯ ಭದ್ರತಾ ವ್ಯವಸ್ಥೆಯ ಪ್ರಾತ್ಯಕ್ಷಿಕೆ (ಡೆಮೊ) ನೀಡಲಾಯಿತು. ಸ್ಮಾರ್ಟ್ ಸಿಟಿ ಅನುಭವ ಕೇಂದ್ರ ಮತ್ತು ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC) ಕ್ಕೆ ಭೇಟಿ ನೀಡಿದರು, ಇದು ಅತ್ಯಾಧುನಿಕ ರಕ್ಷಣಾ ಮತ್ತು ಭದ್ರತಾ ಪರಿಹಾರಗಳ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಮುಂದಿನ ಪೀಳಿಗೆಯ ಯೋಜನೆಗಳಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ಸಚಿವರಾದ ಸಂಜಯ್ ಸೇಠ್ ಸಂವಾದ ನಡೆಸಿದರು.
BELಗೆ ಅವರ ಮೊದಲ ಭೇಟಿ ನೀಡಿದ ಸ್ಮರಣಾರ್ಥವಾಗಿ ಸಚಿವರು PDIC ನಲ್ಲಿ ಸಸಿಯನ್ನು ನೆಟ್ಟರು. ಇದಕ್ಕೂ ಮುನ್ನ ಸಿಎಂಡಿ ಶ್ರೀ ಮನೋಜ್ ಜೈನ್, ನಿರ್ದೇಶಕ (ಇತರೆ ಘಟಕಗಳು), ಶ್ರೀ ದಾಮೋದರ್ ಭಟ್ಟದ್, ನಿರ್ದೇಶಕ (ಹಣಕಾಸು), ಶ್ರೀ ಕೆ ವಿ ಸುರೇಶ್ ಕುಮಾರ್, ನಿರ್ದೇಶಕ (ಮಾರ್ಕೆಟಿಂಗ್), ಶ್ರೀ ಭಾನು ಪ್ರಕಾಶ್ ಶ್ರೀವಾಸ್ತವ ಹಾಗೂ ಇತರ ಹಿರಿಯ ಅಧಿಕಾರಿಗಳು ಸಚಿವರನ್ನು ಬರಮಾಡಿಕೊಂಡರು.
*****
(Release ID: 2033865)
Visitor Counter : 41