ಉಪರಾಷ್ಟ್ರಪತಿಗಳ ಕಾರ್ಯಾಲಯ

ಮುಂಬೈನ ಮೊಂಝೀ ಆಡಳಿತ ಅಧ್ಯಯನ ಸಂಸ್ಥೆಯ [ಎನ್.ಎಂ.ಐ.ಎಂ.ಎಸ್] ವಿದ್ಯಾರ್ಥಿಗಳನ್ನುದ್ದೇಶಿಸಿ  ಉಪರಾಷ್ಟ್ರಪತಿಯವರು ಮಾಡಿದ ಭಾಷಣದ ಪಠ್ಯ 

Posted On: 12 JUL 2024 4:51PM by PIB Bengaluru

ನಮಸ್ಕಾರ, ನಿಮಗೆಲ್ಲರಿಗೂ ಶುಭಾಶಯಗಳು.

ಗೌರವಾನ್ವಿತ ಬೋಧಕ ಸಿಬ್ಬಂದಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೇ. ಬೆನ್ನೆಲುಬಾಗಿರುವ ಅಮರೀಶ್ ಭಾಯಿ ಅವರ ಬಗ್ಗೆ ಯಾವುದೇ ಪರಿಚಯದ  ಅಗತ್ಯವಿಲ್ಲ. ಅವರು ಅತ್ಯಂತ ಗೌರವಾನ್ವಿತ ಮಾರ್ಗದಿಂದ ಬಂದವರಾಗಿದ್ದಾರೆ. ಸರ್ದಾರ್ ಪಟೇಲ್ ಜೀ ಅವರು ದೇಶದ ಅತಿ ದೊಡ್ಡ ನಾಯಕರಾಗಿದ್ದು, ಭಾರತಕ್ಕೆ ಗೌರವ ತಂದಿದ್ದಾರೆ. ಯುವ ಬಾಲಕರು ಮತ್ತು ಬಾಲಕಿಯರ ತಿಳಿದುಕೊಳ್ಳಬೇಕು, ಸರ್ದಾರ್ ಪಟೇಲ್ ಜೀ ಅವರು ಭಾರತದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿದರು. ಅವರು ಸಮರ್ಥವಾಗಿ ನಿರ್ಣಾಯಕವಾದ ಕೆಲಸ ಮಾಡಿದರು. ಆದರೆ ಒಂದು ರಾಜ್ಯ ಮಾತ್ರ ಹೊರಗುಳಿಯಿತು. ಅದು ಜಮ್ಮು ಮತ್ತು ಕಾಶ್ಮೀರ. ಅದು ಸಮಸ್ಯೆಯಾಗಿಯೂ ಪರಿಣಮಿಸಿತು. ಅಂದರೆ ಸರ್ದಾರ್ ಪಟೇಲ್ ಜೀ ಅವರು ಪರಿಹಾರಗಳನ್ನು ಸೂಚಿಸಿದರು. ತ್ವರಿತ ಪರಿಹಾರ, ಶಾಶ್ವತ ಪರಿಹಾರ, ಕಷ್ಟಕರವಾದ ಸಂದರ್ಭಗಳನ್ನು ಅವರು ಮನೋಸ್ಥೈರ್ಯದಿಂದ ನಿಭಾಯಿಸಿದರು.

ಮತ್ತೊಂದು ವಿಚಾರವೆಂದರೆ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದು, ಭಾರತದ ಸಂವಿಧಾನದ ಪಿತಾಮಹ. ಅವರು ನಿರ್ಣಾಯಕವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು 370 ವಿಧಿ ಹೊರತುಪಡಿಸಿದ ಸಂವಿಧಾನವನ್ನು ರಚಿಸಿದರು.  ಇವರಿಬ್ಬರು ಅತ್ಯಂತ ಪ್ರಮುಖ ವ್ಯಕ್ತಿಗಳು. ಡಾ. ಅಂಬೇಡ್ಕರ್ ಅವರು ಸಂವಿಧಾನದ 370 ಅನ್ನು ರಚಿಸಿದ್ದರೆ ಅಥವಾ ಸರ್ದಾರ್ ಪಟೇಲ್ ಜೀ ಅವರಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಏಕೀಕರಣದ ಕೆಲಸವನ್ನು ನೀಡಿದ್ದರೆ, ಈ ವಿಷಯಗಳು ತುಂಬಾ ವಿಭಿನ್ನವಾಗಿರುತ್ತಿದ್ದವು.

ನಿಮ್ಮನ್ನು ಐತಿಹಾಸಿಕ ದೃಷ್ಟಿಕೋನದತ್ತ ಕರೆದೊಯ್ಯುತ್ತೇನೆ. ನಂತರ ವಿಷಯಕ್ಕೆ ಬರುತ್ತೇನೆ. 1963 ರಲ್ಲಿ ಸಂಸತ್ತಿನಲ್ಲಿ ಮೊದಲ ಪ್ರಧಾನಮಂತ್ರಿಯವರಿಗೆ ಪ್ರಶ್ನೆಯೊಂದು ಎದುರಾಯಿತು.  ಸಂವಿಧಾನದ 370 ನೇ ವಿಧಿ ಎಷ್ಟು ಕಾಲ ಉಳಿಯುತ್ತದೆ? ಎಂದು. ಏಕೆಂದರೆ ಭಾರತೀಯ ಸಂವಿಧಾನದಲ್ಲಿ ತಾತ್ಕಾಲಿಕ ಎಂಬ ಹಣೆಪಟ್ಟಿ ಹೊಂದಿರುವ ಏಕೈಕ ವಿಧಿ ಇದಾಗಿತ್ತು. ಅನೇಕ, ವಿವಿಧ ಕಾರಣಗಳಿಗಾಗಿ, ಇದು ಶಾಶ್ವತ ಎಂದು ಜನ ನಂಬುತ್ತಾರೆ.

ನಮ್ಮ ಸಂವಿಧಾನದಲ್ಲಿ ಇದು ಈಗ ಇಲ್ಲವಾಗಿದೆ. ನಮ್ಮ ಸಂಸದರಿಗೆ ಧನ್ಯವಾದಗಳು. ಅವರೆಲ್ಲರೂ ಒಂದೇ ಧ್ವನಿಯಿಂದ ಮಾತನಾಡಿದರು. ಇಲ್ಲಿ ಪಂಡಿತ್ ಜೀ ಅವರು ಹೇಳಿದ್ದನ್ನು ಉಲ್ಲೇಖಿಸುತ್ತೇನೆ. “घिसते घिसते घिस जायेगा.” ನಾನು ಸಂವಿಧಾನದ 370 ನೇ ವಿಧಿಯನ್ನು ಉಲ್ಲೇಖಿಸುತ್ತಿದ್ದೇನೆ. ಸಂವಿಧಾನದ 370  ने हमको बहुत घिसाया, घिसाते गए 370 ನೇ ವಿಧಿಯನ್ನು ವಿನಿಯೋಗಿಸುವ ಒಂದು ಅವಧಿಯನ್ನು ನಾವು ಹೊಂದುವವರೆಗೆ ಇದು ಇರುತ್ತದೆ. ನಿಮ್ಮೆಲ್ಲರ ನಡುವೆ ಇರುವುದಕ್ಕೆ ನನಗೆ ಆಳವಾದ ಗೌರವವಿದೆ.

ಮತ್ತು ಇಂದಿನ ವಿಷಯವು ಸಮಕಾಲೀನ ಮತ್ತು ಪ್ರಸ್ತುತವಾಗಿದೆ. ಇದು ನಮ್ಮ ಮಹಾನ್ ರಾಷ್ಟ್ರದ ಭವಿಷ್ಯಕ್ಕೆ ಪ್ರಮುಖವಾಗಿದೆ, ಇದು ಭಾರತವನ್ನು ಸಶಕ್ತಗೊಳಿಸುತ್ತದೆ. 2047 ರ ಹೊತ್ತಿಗೆ ವಿಕಸಿತ ಭಾರತದಲ್ಲಿ ಉನ್ನತ ಶಿಕ್ಷಣದ ಪಾತ್ರ ಎಂಬುದಾಗಿದೆ.

ಈ ಶಿಕ್ಷಣ ಸಂಸ್ಥೆಯಲ್ಲಿ ನಾಳಿನ ನಾಯಕರನ್ನು ಪೋಷಿಸಲಾಗುತ್ತದೆ. ಇದನ್ನು ಉಪಕುಲಪತಿಯವರು ಸೂಚ್ಯವಾಗಿ ತಿಳಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಇಡೀ ಜಗತ್ತಿನಾದ್ಯಂತ ಹರಡಿದ್ದಾರೆ, ನಿರ್ವಹಣಾ ಅಧ್ಯಯನದಲ್ಲಿ ಮಾನದಂಡಗಳನ್ನು ಹೊಂದಿಸುತ್ತಾರೆ. ಈ ಸಂಸ್ಥೆ ಬಗ್ಗೆ ತಮಗೆ ಯಾವುದೇ ಸಂದೇಹವಿಲ್ಲ, ಇದು ಬದಲಾವಣೆಯ ಪ್ರತೀಕವಾಗಿದೆ.

ಇಂದು ವೇಗವಾಗಿ ಬದಲಾವಣೆಯಾಗುತ್ತಿದೆ. ನಮ್ಮ ಭಾರತವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಲಾಭವಾಗುತ್ತಿದೆ. ನಾವು ಮಾನವೀಯತೆಯ ಆರನೇ ಒಂದು ಭಾಗದಷ್ಟಿದ್ದೇವೆ. ಉಪಕುಲಪತಿಗಳು ಸೂಚಿಸಿದಂತೆ ಶೈಕ್ಷಣಿಕ ಕಠಿಣತೆ ಮತ್ತು ನಾವೀನ್ಯತೆಗೆ ನಿಮ್ಮ ಬದ್ಧತೆ ಶ್ಲಾಘನೀಯವಾಗಿದೆ. ನಿಮ್ಮೆಲ್ಲರ ನಡುವೆ ಇರಲು ನಾನು ರೋಮಾಂಚನಗೊಂಡಿದ್ದೇನೆ. ವೈದಿಕ ನಾಗರಿಕತೆಯ ಕಾಲದಿಂದಲೂ, ಭಾರತವು ಕೆಲವು ಅತ್ಯುತ್ತಮ, ವಿಶ್ವ-ಪ್ರಸಿದ್ಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ನೆಲೆಯಾಗಿದೆ: ನಳಂದ, ತಕ್ಷಶಿಲೆ, ವಿಕ್ರಮಶಿಲಾ, ವಲ್ಲಭಿ, ಹೀಗೆ ಕೆಲವನ್ನು ಹೆಸರಿಸಲು ಬಯಸುತ್ತೇನೆ.

ಈ ಶಿಕ್ಷಣ ಸಂಸ್ಥೆಗಳು ಭಾರತ ಜ್ಞಾನದ ಶಕ್ತಿ ಕೇಂದ್ರವಾಗಿರುವುದನ್ನು ಸೂಚಿಸುತ್ತವೆ. ಈ ಸಂಸ್ಥೆಗಳನ್ನು ನೋಡಿದರೆ ಭಾರತ ರಾಜತಾಂತ್ರಿಕತೆಯ ಲಘುಶಕ್ತಿಯಾಗಿತ್ತು. ಈ ಸಂಸ್ಥೆಗಳಿಂದ ನಮ್ಮ ವ್ಯಾಪಾರ ವಿಭಿನ್ನ ದಿಕ್ಕಿನತ್ತ ಸಾಗಿತ್ತು.

ದೇಶದ ಅಭಿವೃದ್ಧಿಗೆ ಮತ್ತು ಅದರ ಸಬಲೀಕರಣಕ್ಕೆ ಉನ್ನತ ಶಿಕ್ಷಣ ಸಂಕಿರ್ಣದಾಯಕ ಪ್ರಸ್ತುತತೆಯನ್ನು ಒಳಗೊಂಡಿದೆ. ನಳಂದ, ತಕ್ಷಶಿಲಾ, ವಿಶ್ವವಿದ್ಯಾಲಯಗಳು ನಮ್ಮ ಪುರಾತನ ಮೌಲ್ಯಗಳ ಬಂಢಾರವಾಗಿವೆ. ಬುದ್ದಿವಂತಿಕೆ ಮತ್ತು ಸಮಾಜದ ಸುಧಾರಣೆಗೆ ಮಾರ್ಗದರ್ಶಿಯಾಗಿದ್ದವು. ಸಮಾಜಕ್ಕೆ ಪೂರಕವಾಗಿ, ಒಟ್ಟಾರೆ ಪರಿಸರ ವ್ಯವಸ್ಥೆಗೆ ಹಿತಕರವಾಗಿ, ಸಂಪೂರ್ಣ ಸಕಾರಾತ್ಮಕವಾಗಿವೆ.

ನೀವು ಇದರಿಂದ ವಿಶ್ವಾಸ ಮತ್ತು ಸಾಧ್ಯತೆಗಳನ್ನು ಹೊಂದುವಿರಿ. ಈ ಸಂಪನ್ಮೂಲ ಕೇಂದ್ರಗಳು ಅತ್ಯುನ್ನತ ಆದರ್ಶಗಳು ಮತ್ತು ಜೀವನದ ಪ್ರಾಯೋಗಿಕ ಅಗತ್ಯತೆಗಳ ನಡುವೆ, ಅಚ್ಚುಕಟ್ಟಾಗಿ ಸಮತೋಲನವನ್ನು ಹೊಂದಿವೆ. ಈಗ, ಹೊಸ ಶಿಕ್ಷಣ ನೀತಿಯು ಮೂರು ದಶಕಗಳ ನಂತರ ಬಂದಿದೆ. ಹಲವಾರು ಲಕ್ಷ ಪಾಲುದಾರರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮತ್ತು ಇದು ಪದವಿ ಆಧಾರಿತವಾಗಿರಬಾರದು ಎಂದು ಒತ್ತಿಹೇಳಲಾಗಿದೆ. ಒಬ್ಬ ವ್ಯಕ್ತಿಯನ್ನು ತನ್ನ ಮನೋಭಾವದ ಪ್ರಕಾರ ಕೊಡುಗೆ ನೀಡಲು ನಿಜವಾಗಿಯೂ ತೃಪ್ತಿಯ ಕ್ರಮದಲ್ಲಿ ಮಾಡುವ ಹೆಚ್ಚಿನದನ್ನು ಇದು ಪ್ರತಿಬಿಂಬಿಸಬೇಕು. ಸ್ನೇಹಿತರೇ, ನಾನು ದೃಢವಾಗಿ ನಂಬಿದ್ದೇನೆ ಮತ್ತು ನಾನು ಅದನ್ನು ಅನುಭವಿಸಿದೆ, ಏಕೆಂದರೆ ನನ್ನ ಶಿಕ್ಷಣವು ವಿದ್ಯಾರ್ಥಿವೇತನದಿಂದ ಸಾಗಿತು.

ಸಣ್ಣ ಹಳ್ಳಿಯಿಂದ ಬಂದ ನಾನು ವಿದ್ಯಾರ್ಥಿ ವೇತನದಿಂದಾಗಿ ಯಾವುದೇ ಶಾಲೆಗಳಿಗೆ ದಾಖಲಾಗುವ ಸಾಮರ್ಥ್ಯ ಹೊಂದಿದ್ದೆ. ಮೊದಲನೆಯದಾಗಿ ಶಿಕ್ಷಣ ಸಮಾನತೆ, ಭದ್ರತೆಗಾಗಿ ರೂಪಾಂತರ ಹೊಂದುವ ಪರಿಣಾಮಗಳನ್ನು ಹೊಂದಿವೆ ಎಂದು ಭಾವಿಸುತ್ತೇನೆ. ಎರಡನೆಯದಾಗಿ ಇದು ಅಸಮಾನತೆಯನ್ನು ನಿವಾರಿಸುತ್ತದೆ. ಶಿಕ್ಷಣ ಅಚ್ಚರಿಗಳನ್ನು ತರುತ್ತದೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ದೊರೆಯಬೇಕಾಗುತ್ತದೆ. ಶಿಕ್ಷಣವೆಂದರೆ ಅಂಕಗಣಿತವಲ್ಲ, ಇದು ಭೌಗೋಳಿಕತೆಯನ್ನು ಒಳಗೊಂಡಿದೆ.  

ಸಬಲೀಕರಣದ ಶಕ್ತಿಯು ಶಿಕ್ಷಣದಿಂದ ಹೊರಹೊಮ್ಮುತ್ತದೆ ಮತ್ತು ಆ ಶಕ್ತಿಯು ಸಮಾಜ ಮತ್ತು ವ್ಯಕ್ತಿಯ ಹೊರತಾಗಿ ರಾಷ್ಟ್ರದದ್ದಾಗಿದೆ. ಶಿಕ್ಷಣವು ನಿಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು, ನಿಮ್ಮ ಪ್ರತಿಭೆಯ ಪೋಷಣೆಯನ್ನು ಸುಗಮಗೊಳಿಸುತ್ತದೆ ಮತ್ತು ಅದು ನಿಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ನನಸಾಗಿಸಲು ಒಂದು ಸಾಧನವಾಗಿದೆ.

ಶಿಕ್ಷಣ ಪರಿವರ್ತಕ ಶಕ್ತಿ. ವ್ಯಕ್ತಿಗಳನ್ನು ಸಶಕ್ತಗೊಳಿಸುವ, ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸುವ, ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಗತಿಗೆ ಗಣನೀಯವಾಗಿ ಕೊಡುಗೆ ನೀಡುವ ಚಾಲನಾ ಶಕ್ತಿ. ಶಿಕ್ಷಣ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಜೊತೆಗೆ ಸಮುದಾಯದ ಅಭಿವೃದ್ಧಿಗೂ ಕಾರಣವಾಗುತ್ತದೆ. ತ್ವರಿತವಾಗಿ ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ ಮತ್ತು ಸಾಮಾಜಿಕ ಸಾಮರಸ್ಯವನ್ನು ತರುತ್ತದೆ. ನಿಮ್ಮ ಬಳಿ ಹಲವಾರು ಹುದ್ದೆಗಳು, ಸಂಪತ್ತು, ಮನೆ, ಕಾರುಗಳಿರಬಹುದು. ಅದು ಸ್ವಭಾವತಃ ವ್ಯಕ್ತಿಗತವಾದದ್ದು. ಆದರೆ ಶಿಕ್ಷಣ ಹಾಗಲ್ಲ. ಜೊತೆ ಜೊತೆಗೆ ನಿಮ್ಮನ್ನು ಸಬಲೀಕರಣಗೊಳಿಸುತ್ತದೆ. ಇದರಿಂದ ಪ್ರತಿಯೊಬ್ಬರಿಗೂ ಲಾಭವಾಗುತ್ತದೆ. ನೀವು ಶಿಕ್ಷಣ ಪಡೆದರೆ ನಿಮ್ಮ ಸುತ್ತ ಇರುವ ಜನ ಮತ್ತು ಸಮಾಜಕ್ಕೆ ಲಾಭವಾಗುತ್ತದೆ. ಶಿಕ್ಷಣ ಎಂದರೆ ಅದು ಗುಣಮಟ್ಟದ ಶಿಕ್ಷಣ, ಈ ವಿಷಯದಲ್ಲಿ ಭಿನ್ನತೆ ಇದೆ.

ನಂತರ ಯಾವುದೇ ಸವಾಲುಗಳನ್ನು ಎದುರಿಸಲು ಮತ್ತು ಸವಾಲುಗಳನ್ನು ದೊಡ್ಡ ಕಲ್ಯಾಣಕ್ಕಾಗಿ ಅವಕಾಶಗಳಾಗಿ ಪರಿವರ್ತಿಸಲು ಮಾನವ ಸಂಪನ್ಮೂಲವನ್ನು ಚುರುಕುಗೊಳಿಸಲಾಗುತ್ತದೆ. ಮತ್ತು ನನ್ನ ಪ್ರಕಾರ ಉನ್ನತ ಶಿಕ್ಷಣವು ನಮ್ಮ ಆರ್ಥಿಕ ಉನ್ನತಿಯನ್ನು ಉಳಿಸಿಕೊಳ್ಳಲು, ನಾವು ಬಯಸುವ ರೀತಿಯ ಸಾಮಾಜಿಕ ಪ್ರಗತಿಯನ್ನು ನೋಂದಾಯಿಸಲು, ಯುಟೋಪಿಯನ್ ಸಮಾಜದಂತೆ ಏನನ್ನಾದರೂ ಸಾಧಿಸಲು ಮೂಲಭೂತವಾಗಿ ಬೇಕಾಗಿದೆ. ಗುಣಮಟ್ಟದ ಶಿಕ್ಷಣವು ಎಂಜಿನ್‌ನ ಎಲ್ಲಾ ಸಿಲಿಂಡರ್‌ಗಳನ್ನು ಹೊತ್ತಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಉತ್ಪಾದಕತೆ ಇರುತ್ತದೆ.

ನಮ್ಮಲ್ಲಿ ಸಾಮರ್ಥ್ಯವಿದೆ. ಭಾರತ ಮಲಗುವ ದೈತ್ಯ ಶಕ್ತಿಯಲ್ಲ. ನಾವು ಮುನ್ನಡೆಯುತ್ತಿದ್ದೇವೆ. ನಮ್ಮ ಬೆಳವಣಿಗೆ ಹೆಚ್ಚುತ್ತಿದ್ದು, ತಡೆಯಲು ಸಾಧ್ಯವಿಲ್ಲ. ಜಾಗತಿಕವಾಗಿ ಶಿಕ್ಷಣ ಸಂಸ್ಥೆಗಳಿಂದ ನಾವು ಪುರಸ್ಕಾರಗಳನ್ನು ಪಡೆಯುತ್ತಿದ್ದೇವೆ. ಆದರೆ ನಮ್ಮ ಯುವ ಸಮೂಹಕ್ಕೆ ಬೇಕಾಗಿರುವುದು ಗುಣಮಟ್ಟದ ಶಿಕ್ಷಣ. 

ಆದರೆ ನೀವು ಕೆಲವು ನ್ಯೂನತೆಗಳನ್ನು ಅನುಭವಿಸುತ್ತೀರಿ, ಮತ್ತು ನ್ಯೂನತೆಗಳೆಂದರೆ, ನೀವು ನಿಜವಾಗಿಯೂ ಅರ್ಹರು, ಆದರೆ ವ್ಯವಸ್ಥೆಯು ಪ್ರೋತ್ಸಾಹ, ಒಲವು, ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತದೆ ಮತ್ತು ಭ್ರಷ್ಟಾಚಾರವು ಉದ್ಯೋಗ, ನೇಮಕಾತಿ ಅಥವಾ ಅವಕಾಶವನ್ನು ಪಡೆಯಲು ಪಾಸ್‌ವರ್ಡ್ ಆಗುತ್ತದೆ. ಸುಪ್ರಸಿದ್ಧವಾದ ನಿಮ್ಮ ರುಜುವಾತುಗಳೊಂದಿಗೆ ನೀವು ಹೊರನಡೆದಾಗ, ಸವಲತ್ತು ಪಡೆದ ವಂಶಾವಳಿಯು ಮುಂದೆ ಸಾಗುತ್ತಿರುವುದನ್ನು ನೀವು ಕಾಣುತ್ತೀರಿ. ಮುಂದೆ ಸಾಗುವಂತೆ ಮಾಡಲಾಗುತ್ತಿದೆ, ಮತ್ತು ನೀವು ನೋಡುತ್ತೀರಿ, ಇದು ಹತಾಶೆಯನ್ನು ಉಂಟುಮಾಡುತ್ತದೆ.

ಇದು ರಾಷ್ಟ್ರವನ್ನು ಮುಚ್ಚುತ್ತದೆ. ಆ ವ್ಯವಸ್ಥೆ ಬಹಳ ಹಿಂದೆ ಇರಲಿಲ್ಲ. ನಮ್ಮ ಶಕ್ತಿ ಕೇಂದ್ರಗಳು ಸುಳ್ಳು ಮತ್ತು ದಲ್ಲಾಳಿಗಳ ಭ್ರಷ್ಟ ಅಂಶಗಳಿಂದ ಮುತ್ತಿಕೊಂಡಿವೆ.

ಅವರು ಹೆಚ್ಚುವರಿ ಕಾನೂನುಬದ್ಧವಾಗಿ ನಿರ್ಧರಿಸುವುದನ್ನು  ನಿಯಂತ್ರಿಸುತ್ತಾರೆ. ಒಂದು ಅವಕಾಶ, ಕೆಲಸ, ಒಪ್ಪಂದ, ಒಂದು ಮಾರ್ಗದ ಮೂಲಕ ಬರುತ್ತಿತ್ತು. ಅದು ಭ್ರಷ್ಟವಾಗಿತ್ತು.

ಸಂಪರ್ಕಾಧಿಕಾರಿ ಮತ್ತು ದಲ್ಲಾಳಿಗಳು ಇದ್ದರು. ಇನ್ನೊಂದು ವಿಷಯ, ಭರವಸೆಯ, ಪ್ರತಿಭಾವಂತ ಹುಡುಗರು ಮತ್ತು ಹುಡುಗಿಯರು ಅವರಿಗೆ ಏನು ಬೇಕು?, ಅವರು ಕಾನೂನಿನ ಮುಂದೆ ಸಮಾನತೆಯನ್ನು ಬಯಸುತ್ತಾರೆ. ಕೆಲವರು ಕಾನೂನಿಗಿಂತ ಮೇಲಿರಲು, ಕಾನೂನಿಗೆ ಬದ್ಧರಾಗಿರಲು ತುಂಬಾ ಸವಲತ್ತುಗಳನ್ನು ಹೊಂದಿರುವಾಗ ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ತೀವ್ರ ನೋವಿನಲ್ಲಿದ್ದಾರೆ.

ಕಾನೂನಿನ ಬಲಿಷ್ಟ ಬಾಹುಗಳು ಅವರನ್ನು ತಲುಪಲು ಸಾಧ್ಯವಿಲ್ಲ. ಈ ಅಂಶಗಳು ಹಿನ್ನೆಡೆಗೆ ಕಾರಣವಾಗಿದ್ದವು. ಆದರೆ ಇದೀಗ ನಾವು ಕಳೆದ ದಶಕವನ್ನು ಅಥವಾ ಈಗಿನ ಪರಿಸ್ಥಿತಿ ನೋಡುವುದಾದರೆ ಸರ್ಕಾರದ ನೀತಿಗಳು, ಉಪಕ್ರಮಗಳು ಮತ್ತು ನಾವೀನ್ಯತೆಯ ಹೆಜ್ಜೆಗಳು, ಯುವಕರಲ್ಲಿ ಆಟ ಆಡುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು. ಏಕೆಂದರೆ ಈಗ ನಮ್ಮ ಶಕ್ತಿ ಕೇಂದ್ರಗಳು  ಭ್ರಷ್ಟ ಅಂಶಗಳಿಂದ ನಿರ್ಮಲಗೊಂಡಿವೆ. ನಾವು ಆಗ ನೋಡಿದ್ದನ್ನು ಈಗಿನ ಯುವಕರು ನೋಡುವ ಸಂದರ್ಭವಿಲ್ಲ ಎಂದು ನನಗೆ ಖಾತ್ರಿಯಿದೆ.

ಅನಿವಾರ್ಯವಾಗಿದ್ದ ಸಂಪರ್ಕ ಮತ್ತು ದಲ್ಲಾಳಿಗಳ ಸಂಸ್ಥೆಯು ಈಗ ಪುನರುಜ್ಜೀವನಗೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಅಳಿವಿನಂಚಿನಲ್ಲಿದೆ. ಕಾನೂನಿನ ಮುಂದೆ ಸಮಾನತೆ, ಬಹಳ ಕಾಲ ನಮ್ಮಿಂದ ದೂರವಿರಿಸಲಾಗಿತ್ತು. ಇದು ನಮ್ಮ ವ್ಯವಸ್ಥೆಯ ಶಾಪವಾಗಿತ್ತು, ಇದು ನೆಲದ ವಾಸ್ತವವಾಗಿದೆ. ತಾವು ಕಾನೂನಿಗೆ ನಿಲುಕದ್ದು, ಕಾನೂನು ಪ್ರಕ್ರಿಯೆಯಿಂದ ಮುಕ್ತರಾಗಿದ್ದೇವೆ, ಕಾನೂನಿನ ಬೇಗೆ ಅನುಭವಿಸುತ್ತಿರುವವರು, ವ್ಯವಸ್ಥೆಯ ಬಿಸಿಯನ್ನು ಅನುಭವಿಸುತ್ತಿರುವವರು ಎಂಬ ಕಲ್ಪನೆಯನ್ನು ಬಿಂಬಿಸುವ ಜನರನ್ನು ನಾವು ದಿನವೂ ನೋಡುತ್ತೇವೆ.

ನಂತರ, ಈ ಪರಿಸರ ವ್ಯವಸ್ಥೆಯೊಂದಿಗೆ, ನೀವು ಜಗತ್ತಿನೊಟ್ಟಿಗೆ ಸಾಗುತ್ತೀರಿ. ನೀವು ದೊಡ್ಡ ಜಿಗಿತವನ್ನು ತೆಗೆದುಕೊಂಡಿದ್ದೀರಿ.  ಗುಣಮಟ್ಟದ ಶಿಕ್ಷಣದೊಂದಿಗೆ, ಈ ರುಜುವಾತುಗಳೊಂದಿಗೆ, ಸಂಸ್ಥೆಯೊಂದರ ಖ್ಯಾತಿ ಮತ್ತು ಹೊರಗಿನ ವ್ಯವಸ್ಥೆಯೊಂದಿಗೆ, ಯಾವುದೂ ನಿಮಗೆ ಹಿತಕರವಾಗಿರುವುದಿಲ್ಲ ಎಂದು ಊಹಿಸಿ.

ಇಡೀ ಜಗತ್ತು ನಿಮ್ಮ ಮುಂದೆ ಇದೆ. ಹಲವಾರು ಅವಕಾಶಗಳನ್ನು ಹೊಂದಿದ್ದೀರಿ. ಆದ್ದರಿಂದ ನಿಮಗೆಲ್ಲರಿಗೂ ಮನವಿ ಮಾಡುತ್ತಿದ್ದೇನೆ. ನಮ್ಮ ಯುವ ಜನಾಂಗಕ್ಕೆ ಲಭ್ಯವಿರುವ ರೀತಿಯ ಅವಕಾಶಗಳಿಗೆ ನಾವು ಸಂಪೂರ್ಣವಾಗಿ ತೆರೆದುಕೊಳ್ಳುವುದಿಲ್ಲ. ನಾವಿನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದಿಯಲ್ಲಿದ್ದೇವೆ. ಮತ್ತು ಯಾವುದು ಸಾಂಪ್ರದಾಯಿಕವಾಗಿತ್ತು? ಶಕ್ತಿ ಬದಲಾದಂತೆ ವಿಷಯಗಳೂ ಬದಲಾಗುತ್ತಿವೆ. ಈಗ ಸಾಂಪ್ರದಾಯಿಕವಲ್ಲದ ಶಕ್ತಿಯ ಮೂಲಗಳು ನಮ್ಮ ಯುವ ಜನಾಂಗಕ್ಕೆ ಅವಕಾಶಗಳ ಅಸಾಂಪ್ರದಾಯಿಕ ಮೂಲಗಳಿಗೆ ಹೊಂದಿಕೆಯಾಗುತ್ತಿವೆ.

ಬಾಹ್ಯಾಕಾಶ ಒಳಗೊಂಡಂತೆ ಜೀವನದ ಪ್ರತಿಯೊಂದು ಹಂತದಲ್ಲಿ,  ಪ್ರತಿಯೊಂದು ವಲಯದಲ್ಲೂ ನಿಮಗೆ ಅವಕಾಶಗಳು ಕಣ್ಣಿಗೆ ಕಾಣುತ್ತಿವೆ. ಅಡೆತಡೆಗಳ ತಂತ್ರಜ್ಞಾನಗಳ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ. ನಂಬಲಾಗದ ಆಯಾಮದ ಅಭಿವೃದ್ಧಿಯ ಅವಕಾಶಗಳನ್ನು ನಿಮಗೆ ಒದಗಿಸಲಾಗಿದೆ.

ನನ್ನ ಯುವ ಸ್ನೇಹಿತರೇ, ಕಾನೂನಿಗೆ ಗೌರವ ನೀಡಿದರೆ ಅದು ದೇಶಕ್ಕೆ ಗೌರವ ನೀಡಿದಂತಾಗುತ್ತದೆ. ಕಾನೂನಿಗೆ ಗೌರವ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಟ್ಟಂತಾಗುತ್ತದೆ. ಆದ್ದರಿಂದ ನಾವು ಕಾನೂನಿನ ಮಾರ್ಗದಲ್ಲಿ ನಂಬಿಕೆ ಇಡಬೇಕು.

ಶಾರ್ಟ್‌ಕಟ್ ಎನ್ನುವುದು ಎರಡು ಬಿಂದುಗಳ ನಡುವಿನ ಭೌತಿಕವಾಗಿ ಕಡಿಮೆ ಅಂತರವಾಗಿದೆ. ಆದರೆ ಎದ್ದೇಳಲುವ ದಿನದಂದು ಅಡ್ಡದಾರಿ ಕಾನೂನುಬದ್ಧವಾಗಿಲ್ಲದಿದ್ದರೆ, ಅದು ನೋವಿನಿಂದ ಕೂಡಿರುತ್ತದೆ ಮತ್ತು ಅತಿ ಹೆಚ್ಚು ದೂರಕ್ಕೆ ತಿರುಗುತ್ತದೆ. ಹಾಗಾಗಿ ಜೀವನದಲ್ಲಿ ಅಡ್ಡದಾರಿಗಳನ್ನು ತೆಗೆದುಕೊಳ್ಳಬೇಡಿ.

ನಿಮಗೊಂದು ವಿಷಯ ಹೇಳುತ್ತೇನೆ. ವೇದಿಕೆ ಮೇಲೆ ಇರುವವರಿಗೆ ಇದು ಗೊತ್ತಿದೆ. 1989 ರಲ್ಲಿ ತಾವು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು, ಇದೇ ಸಮಯಕ್ಕೆ ಸರಿಯಾಗಿ ಲೋಕಸಭಾ ಚುನಾವಣೆ ಬಂತು. ಇಲ್ಲಿ ಗೌವಾನ್ವಿತ ರಾಜ್ಯಪಾಲರಿದ್ದಾರೆ. 1990 ರಲ್ಲಿಅಮ್ರೀಶ್ ಜೀ ಅವರು ರಾಜಕೀಯ ಜೀವನ ಪ್ರಾರಂಭಿಸಿದರು. 1991 ರಲ್ಲಿ ಶ್ರೀ ಫ್ರಫುಲ್ ಪಟೇಲ್ ಜೀ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಆದರೆ ಸದನದಲ್ಲಿ ತಾವು ಎಂಥಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ ಎಂದರೆ, ನೋಡಿ 1990 ರಲ್ಲಿ ತಾವು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದೇನೆ.

ಆಗಿನ ಆರ್ಥಿಕತೆ ಪ್ಯಾರೀಸ್ ಮತ್ತು ಲಂಡನ್ ನಗರಗಳಿಗಿಂತ ಕಡಿಮೆ ಇತ್ತು. ನಾವು ಈಗ ಎಲ್ಲಿದ್ದೇವೆ. ಕಳೆದ ಶತಮಾನದಲ್ಲಿ 11 ನೇ ಸ್ಥಾನದಿಂದ ಜಾಗತಿಕವಾಗಿ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದ್ದೇವೆ. ನಾವು ಬ್ರಿಟನ್ ಮತ್ತು ಫ್ರಾನ್ಸ್ ಗಿಂತ ದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದ್ದೇವೆ. ಇದು ಅತಿದೊಡ್ಡ ಬದಲಾವಣೆಯಾಗಿದೆ.

ಆ ಸಮಯದಲ್ಲಿ, ನಮ್ಮ ಚಿನ್ನ, ಭಾರತದ ಚಿನ್ನ, ಈ ದೇಶದ ಚಿನ್ನ, ಮೊದಲು ಸೋನೆ ಕಿ ಚಿಡಿಯಾ ಎಂದು ಕರೆಯಲಾಗುತ್ತಿತ್ತು, ಇದನ್ನು ವಿಮಾನದಲ್ಲಿ ಭೌತಿಕವಾಗಿ ಸ್ವಿಟ್ಜರ್‌ಲ್ಯಾಂಡ್‌ನ ಎರಡು ಬ್ಯಾಂಕ್‌ಗಳಲ್ಲಿ ಇರಿಸಲು ಕೊಂಡೊಯ್ಯಲಾಯಿತು, ಏಕೆಂದರೆ ನಮ್ಮ ವಿದೇಶಿ ವಿನಿಮಯವು ಸುಮಾರು ಒಂದು ಶತಕೋಟಿ ಡಾಲರ್ ಆಗಿತ್ತು. ಈಗ, ಇದು 650 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ. ನಾನು ಸಚಿವನಾಗಿದ್ದಾಗ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿ ಮಾರಣಾಂತಿಕ ಮೌನವಿತ್ತು. ನಮ್ಮ ಸಂವಿಧಾನದಲ್ಲಿ ತಾತ್ಕಾಲಿಕವಾಗಿದ್ದ 370 ವಿಧಿಯನ್ನು ತೆಗೆದುಹಾಕಿದ ನಂತರ, ನಾವು ಲಕ್ಷಗಟ್ಟಲೆ ಪ್ರವಾಸಿಗರನ್ನು ಹೊಂದಿದ್ದೇವೆ. ಈಗ, ಇಲ್ಲಿ ಒಂದು ಪ್ರಕರಣ ಪತ್ತೆಯಾದರೆ ಮಾಧ್ಯಮಗಳು ಘಟನೆಯನ್ನು ವರದಿ ಮಾಡುತ್ತವೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ – ಐಎಂಎಫ್ ಪ್ರಕಾರ ಭಾರತವು ಈ ಸಮಯದಲ್ಲಿ ಜಾಗತಿಕವಾಗಿ ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ತಾಣವಾಗಿದೆ ಎಂದು ಜನರು ಏಕೆ ಮೆಚ್ಚುವುದಿಲ್ಲ ಎಂದು ನನಗೆ ತಿಳಿದಿಲ್ಲ. ವಿಶ್ವ ಬ್ಯಾಂಕ್ ಪ್ರಕಾರ, ನಮ್ಮ ಡಿಜಿಟಲೀಕರಣವು ಇತರರು ಅನುಕರಿಸಲು ಯೋಗ್ಯವಾಗಿದೆ, ಇದು ಒಂದು ಮಾದರಿಯಾಗಿದೆ. ನಾವು ಹತಾಶೆಯಿಲ್ಲದ ವಾತಾವರಣದಲ್ಲಿ ಉಸಿರಾಡುತ್ತಿದ್ದೇವೆ, ನಮ್ಮ ಕಾಲು ಎಳೆಯುವುದಿಲ್ಲ, ಇದು ಭರವಸೆ ಮತ್ತು ಸಾಧ್ಯತೆಯಲ್ಲಿ ಒಂದಾಗಿದೆ.

ನಾವು ಮಾಡಿರುವ ಗಮನಾರ್ಹ ಸಾಧನೆಯತ್ತ ಒಮ್ಮೆ ನೋಡಿಬರಬೇಕು. ಪ್ರತಿ ವಲಯದಲ್ಲಿ ನಿರ್ಣಾಯಕ, ಅಸಾಧಾರಣ ಏರಿಕೆ ಕಂಡಿದ್ದೇವೆ. ನಮ್ಮ ಭಾರತದಲ್ಲಿ ಪ್ರತಿ ಮನೆಗೂ ಶೌಚಾಲಯ ಇರುತ್ತದೆ ಎಂದು ನಾವು ಎಂದಾದರೂ ಊಹಿಸಬಹುದಿತ್ತೆ? ಆ ಅಳತೆಯಲ್ಲಿ ಅಡುಗೆ ಅನಿಲ ಲಭ್ಯವಾಗುತ್ತದೆ ಎಂದು ನಾವು ಊಹಿಸಬಹುದಾಗಿತ್ತೆ?. ಸಂಸತ್ತಿನ ಸದಸ್ಯರಾದ ನಾವು ವರ್ಷಕ್ಕೆ 50 ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಿದ್ದೇವೆ ಮತ್ತು ನಾವು ದೊಡ್ಡ ಶಕ್ತಿ ಎಂದು ಭಾವಿಸಿದ್ದೇವೆ. ನಾವು ಆ 50 ಸಂಪರ್ಕಗಳನ್ನು ವಿತರಿಸಬಹುದು ಮತ್ತು 25 ದೂರವಾಣಿ ಸಂಪರ್ಕಗಳು ನಮ್ಮಲ್ಲಿವೆ. ನಾವು ಈಗ ಎಲ್ಲಿಗೆ ಬಂದಿದ್ದೇವೆ? ಲಕ್ಷಾಂತರ ಮಂದಿ, ಅಗತ್ಯವಿರುವ ಮನೆಗಳಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗಿದೆ. ಮತ್ತು ದೂರವಾಣಿ? ಸರಿ, ಅವರು ಸ್ಥಿರ ದೂರವಾಣಿಯನ್ನು ಹೊಂದಲು ನಿಮ್ಮನ್ನು ಮನವೊಲಿಸುತ್ತಾರೆ. ನಾವೆಲ್ಲರೂ ಒಟಿಟಿ ವಿಭಾಗದಲ್ಲಿ ದೂರವಾಣಿಗಳನ್ನು ಹೊಂದಿದ್ದೇವೆ. ನಂತರ, 80 ರ ದಶಕದ ಕೊನೆಯಲ್ಲಿ, ಇದು 5000 ರೂ. ಈಗ ಇದು ಒಂದು ದೊಡ್ಡ ಬದಲಾವಣೆಯಾಗಿದೆ.

ಈ ಹಿಂದೆ ನಮಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದ ಜಾಗತಿಕ ಸಂಸ್ಥೆಗಳು ಈಗ ನಮ್ಮ ಸಲಹೆಯನ್ನು ಪಡೆಯುವ ಮಟ್ಟಕ್ಕೆ ನಾವು ನಿಜವಾಗಿಯೂ ಬಂದಿದ್ದೇವೆ. ಇದೆಲ್ಲ ನಡೆದದ್ದು ಇತ್ತೀಚೆಗೆ ಒಂದು ದಶಕದಲ್ಲಿ. ನೀವು ರಾಜಕೀಯ ಪ್ರಯಾಣವನ್ನು ಹೊಂದಿರುವಾಗ, ಆ ಪ್ರಯಾಣವು ಕೆಲವೊಮ್ಮೆ ಅಲ್ಲಿ ಇಲ್ಲಿ ಏರ್ ಪಾಕೆಟ್ ಹೊಂದಿರಬಹುದು. ಆ ಏರ್ ಪಾಕೆಟ್ ಗಮ್ಯಸ್ಥಾನ ಅಥವಾ ಹಾರಾಟದ ಪಥವನ್ನು ತೊಂದರೆಗೊಳಿಸುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ, ಭಾರತದ ಉದಯವು ರಾಕೆಟ್ ಗುರುತ್ವಾಕರ್ಷಣೆಯನ್ನು ಮೀರಿದಂತೆಯೇ ಇರುತ್ತದೆ. ರಾಕೆಟ್ ಹಾರಿತು. ಮತ್ತು ನಿಮಗೆ ಗೊತ್ತಾ, ರಾಕೆಟ್ ಟೇಕಾಫ್ ಮಾಡಿದಾಗ, ದೊಡ್ಡ ಶಕ್ತಿಯ ಅಗತ್ಯವಿರುತ್ತದೆ. ಅದೊಂದು ದಶಕದ ಹಿಂದೆ ಇತ್ತು.

ಐದು ವರ್ಷಗಳ ನಂತರ, ರಾಕೆಟ್ ಗುರುತ್ವಾಕರ್ಷಣೆಯನ್ನು ಬಿಟ್ಟಿತು. ಮತ್ತು ಈಗ ರಾಕೆಟ್ ಬಾಹ್ಯಾಕಾಶದಲ್ಲಿದೆ. ಅದಕ್ಕಾಗಿಯೇ ಇಡೀ ಜಗತ್ತು ಭಾರತದತ್ತ ನೋಡಿ ಎಂದು ಹೇಳುತ್ತದೆ. ನನ್ನ ಯುವ ಸ್ನೇಹಿತರೇ, ಜಿ20 ಯಲ್ಲಿ ಏನಾಯಿತು ಎಂಬುದನ್ನು ನೋಡಿ. ಪ್ರತಿ ರಾಜ್ಯ ಮತ್ತು ಪ್ರತಿ ಕೇಂದ್ರಾಡಳಿತ ಪ್ರದೇಶದಲ್ಲಿ ಜಿ20 ಕಾರ್ಯಕ್ರಮಗಳು ನಡೆದವು. ಪ್ರಧಾನ ಕಾರ್ಯಕ್ರಮ ಭಾರತ ಮಂಟಪದಲ್ಲಿ ಜರುಗಿತು.

ಭಾರತ್ ಮಂಟಪಂನ ಸಮಾವೇಶ ಕೇಂದ್ರಕ್ಕೆ ಜಗತ್ತಿನ ಮಾನ್ಯತೆ ದೊರೆತಿದೆ. ನಾವು ಪಿ20 ಸಂಸತ್ ನಡೆಸಿದೆವು. ನಮ್ಮ ಯಶೋಭೂಮಿಯಲ್ಲಿ ಜಗತ್ತಿನ ಸಂಸದೀಯ ಪಟುಗಳು ಸಮಾವೇಶಗೊಂಡಿದ್ದರು. ನಾವು ಮೂಲ ಸೌಕರ್ಯ ಮತ್ತಿತರೆ ವಲಯಗಳಲ್ಲಿ  ದೊಡ್ಡದಾಗಿ ರಾಕೆಟ್ ಮಾದರಿಯಲ್ಲಿ ಸಾಧನೆ ಮಾಡುತ್ತಿದ್ದೇವೆ.

ಸ್ನೇಹಿತರೇ, ಇವೆಲ್ಲವುಗಳ ನಡುವೆಯೂ, ವಿನಾಶಕಾರಿ ವಿನ್ಯಾಸವನ್ನು ಹೊಂದಿರುವ ನೀಚ ಶಕ್ತಿಗಳು ನಮ್ಮ ಸಂಸ್ಥೆಗಳನ್ನು ಕೀಳಾಗಿ, ಕಳಂಕಿತಗೊಳಿಸಲು, ನಮ್ಮ ಬೆಳವಣಿಗೆಯ ಪಥವನ್ನು ಕೆಳಗೆ ಓಡಿಸಲು ನಿರೂಪಣೆಯನ್ನು ಹೊಂದಿಸಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈಗ ಯುವಕರಿಗೆ ತಿಳಿದಿದೆ. ನಿಮ್ಮ ಮೌನವು ಸೂಕ್ತವಲ್ಲದಿರಬಹುದು ಏಕೆಂದರೆ ಅದು ಈ ಸುಳ್ಳು ನಿರೂಪಣೆಗಳಿಗೆ ರೆಕ್ಕೆಗಳನ್ನು ನೀಡುತ್ತದೆ.

ನಾವು ಈ ನಿರೂಪಣೆಗಳನ್ನು ತಟಸ್ಥಗೊಳಿಸಬೇಕು ಏಕೆಂದರೆ ನೆಲದ ವಾಸ್ತವವು ತುಂಬಾ ವಿಭಿನ್ನವಾಗಿದೆ. ಕೆಲವೊಮ್ಮೆ ಜನರು ಸಿಕ್ಕಿಬಿದ್ದಿದ್ದಾರೆ ಮತ್ತು ಅದು ವೇಗವಾಗಿ ತೆಗೆದುಕೊಳ್ಳುತ್ತದೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಜಗತ್ತಿನ ಕೆಲವು ಸಂಸ್ಥೆಗಳು ಭಾರತದ ಹಸಿವಿನ ಸ್ಥಿತಿಯ ಬಗ್ಗೆ ಹೇಳಿವೆ. ನಾನು ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲನಾಗಿದ್ದೆ. ನಾವು ಕೋವಿಡ್ ಅನ್ನು ಎದುರಿಸಿದ ರೀತಿಯಲ್ಲಿ, ನಾವು 100 ರಾಷ್ಟ್ರಗಳಿಗೆ ಸಹಾಯ ಮಾಡಿದ್ದೇವೆ. ತಪ್ಪಾಗಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸುವವರು ದೇಶದಲ್ಲಿ ಕೆಲವರು ಇದ್ದರು.

ದೇಶದ ನಾಯಕತ್ವವು ಉಪಕ್ರಮಗಳನ್ನು, ನವೀನ ಕ್ರಮಗಳನ್ನು ತೆಗೆದುಕೊಂಡಿತು. ಡಿಜಿಟಲ್ ಪ್ರಮಾಣಪತ್ರ ನೀಡಿದ ಏಕೈಕ ದೇಶ ನಮ್ಮದು. ಅದೇ ರೀತಿ, 2020 ರ ಏಪ್ರಿಲ್ 1 ರಿಂದ ನಿಖರವಾಗಿ ಹೇಳಬೇಕೆಂದರೆ, ಈ ದೇಶದ 850 ದಶಲಕ್ಷ ಜನರು ಉಚಿತ ಆಹಾರ, ಪಡಿತರ ಮತ್ತು ಬೇಳೆ ಪಡೆಯುತ್ತಿದ್ದಾರೆ ಎಂದು ನಾವು ಎಚ್ಚರದಿಂದಿರಬೇಕು.

ನೆನಪಿಟ್ಟುಕೊಳ್ಳಿ, ಇದು ಇನ್ನೂ 5 ವರ್ಷಗಳವರೆಗೆ ಮುಂದುವರಿಯುತ್ತದೆ. ಈ ದೇಶದಲ್ಲಿ ಸವಾಲು ಹೇಗೆ ಸಾಧ್ಯ? ಈಗ ಯಾವಾಗಲೂ ನಕಾರಾತ್ಮಕತೆಯನ್ನು ಹುಡುಕುವ ಕೆಲವರು ಹೇಳುತ್ತಾರೆ, ಓಹ್, 850 ದಶಲಕ್ಷ ಜನರಿಗೆ ಆಹಾರವನ್ನು ನೀಡಲಾಗುತ್ತಿದೆ, ಆದ್ದರಿಂದ ದೇಶವು ಬಡವಾಗಿರಬೇಕು. ಇಲ್ಲ. ಇದು ಕೈ ಹಿಡಿಯುವುದು. ಇದು ಕೈಯಿಂದ ಹಿಡಿದುಕೊಳ್ಳುವುದರಿಂದ ಅವರು ಮೇಲಿನ ಹಂತಕ್ಕೆ  ಸಾಗುತ್ತಾರೆ ಎಂದು ಹೇಳುತ್ತಿರುತ್ತಾರೆ.

ಆದರೆ ಹಾಗೆ ಮಾತನಾಡುವುದು ಕೂಡ ನಮ್ಮ ಒಂದು ಶಕ್ತಿಯಾಗಿದೆ. ಈ ಸಮಯದಲ್ಲಿ ನಮ್ಮ ಪ್ರಗತಿಯು ನಾಗಾಲೋಟದಲ್ಲಿದೆ. ಉನ್ನತ ಶಿಕ್ಷಣದಿಂದ ಮಾತ್ರ ಅತ್ಯಾಧುನಿಕತೆಯನ್ನು ನೀಡಬಹುದು. ರಾಷ್ಟ್ರದ ಶಕ್ತಿಯನ್ನು ಅದರ ತಾಂತ್ರಿಕ ಆವಿಷ್ಕಾರಗಳ ಪ್ರಗತಿಯಿಂದ ನಿರ್ಧರಿಸಲಾಗುತ್ತದೆ.

ಮತ್ತು ಅದು ನಿಮ್ಮಂತಹ ಶ್ರೇಷ್ಠ ಸಂಸ್ಥೆಗಳಲ್ಲಿ ನಡೆಯುತ್ತದೆ. ನಾನು ವೇದಿಕೆಯಿಂದ ಮನವಿ ಮಾಡುತ್ತೇನೆ. ನಮ್ಮ ಸಾಂಸ್ಥಿಕ ಸಂಸ್ಥೆಗಳು ಮುಂದೆ ಬರಬೇಕು. ಅವರು ಸಂಸ್ಥೆಗಳನ್ನು ಕೈ ಹಿಡಿಯಬೇಕು. ಆವಿಷ್ಕಾರ ಮತ್ತು ಸಂಶೋಧನೆ ನಡೆಯುವಂತೆ ಅವುಗಳನ್ನು ಪೋಷಿಸಬೇಕು. ಈ ಸಂಸ್ಥೆಗಳು ನಾವೀನ್ಯತೆ ಮತ್ತು ಸಂಶೋಧನೆಗೆ ಪ್ರಯೋಗಾಲಯ ಮಾದರಿಯಂತಾಗಬೇಕು. ಮತ್ತು ಮೂಲಕ ಅವರು ಬದಲಾವಣೆಯ ಪ್ರತೀಕವಾಗುತ್ತಾರೆ.

2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ನಮ್ಮ ಗುರಿಯಾಗಿದೆ. ಆದರೆ ನಾವು ಅದನ್ನು ಸಾಧಿಸುತ್ತೇವೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಈ ಕೊಠಡಿಯಲ್ಲಿರುವ ಪ್ರತಿಯೊಬ್ಬರೂ, ವಿಶೇಷವಾಗಿ ಯುವ ಸಮೂಹ, ನೀವು 2047 ರ ದೀರ್ಘ ಪಯಣದಲ್ಲಿ ಉತ್ತಮ ಭಾಗವಾಗಿದ್ದೀರಿ. ನೀವು ರಾಷ್ಟ್ರದ ಪ್ರಜಾಪ್ರಭುತ್ವದ ಆಡಳಿತದಲ್ಲಿ ಪ್ರಮುಖ ಪಾಲುದಾರರು. 2047 ರ ಹೊತ್ತಿಗೆ, ನೀವು ಚಾಲಕನ ಸ್ಥಾನದಲ್ಲಿರುತ್ತೀರಿ. ಹಾಗಾಗಿ ಭಾರತವು ಯುಗಯುಗಗಳ ಹಿಂದೆ ಇದ್ದುದನ್ನು ಮರಳಿ ಪಡೆಯುವುದರಲ್ಲಿ ನನಗೆ ಸಂದೇಹವಿಲ್ಲ.

ವಿಕಸಿತ ಭಾರತ ಪರಿಕಲ್ಪನೆಯು ಕೇವಲ ಗುರಿಯಾಗದೇ ಪವಿತ್ರ ಅಭಿಯಾನವಾಗಿದೆ. ಪ್ರತಿಯೊಬ್ಬ ನಾಗರಿಕರು ಈ ಬಗ್ಗೆ ಜಾಗೃತರಾಗಿರಬೇಕು ಮತ್ತು ಬದ್ಧರಾಗಿರಬೇಕು.  यह एक ऐसा हवन है इस हवन में हर किसी को आहुति देनी है| हर किसी का सहयोग होना है| पूर्ण आहुति होगी उसमें सब की भागीदारी होगी| यह हमने कर कर भी दिखाया है|

ನೀವು ನಿಮ್ಮ ದೇಶದ ಬಗ್ಗೆ ಕಲ್ಪನೆ ಹೊಂದಿದ್ದೀರಾ?. ಬ್ಯಾಂಕಿಂಗ್ ಹಂತಗಳ ಪರಿಸ್ಥಿತಿ ಬಗ್ಗೆ ನಿಮಗೆ ಪರಿಕಲ್ಪನೆ ಇದೆಯೇ?. ತಾವು ಬ್ಯಾಂಕಿಗೆ ಹೋಗುವ ಮೂಲಕ ತಮ್ಮ ವೃತ್ತಿ ಆರಂಭಿಸಿದೆ ಮತ್ತು 6000 ರೂಪಾಯಿ ಸಾಲ ಪಡೆದೆ. ಆಗ ಬ್ಯಾಂಕ್ ಖಾತೆ ತೆರೆಯುವುದು ಕಷ್ಟದಾಯಕವಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ 500 ದಶಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದು ಎಲ್ಲರನ್ನೊಳಗೊಳ್ಳುವ ಸಮಾಜದ ಪರಿಸ್ಥಿತಿಯಾಗಿದೆ.

ಹೀಗಾಗಿಯೇ ತಾವು ರೈತ ಕುಟುಂಬದಿಂದ ಬಂದಿದ್ದು, 100 ದಶಲಕ್ಷ ರೈತರು ವರ್ಷದಲ್ಲಿ ಮೂರು ಬಾರಿ ತಮ್ಮ ಖಾತೆಗಳಿಗೆ ನೇರವಾಗಿ ಹಣ ಪಡೆಯುತ್ತಾರೆ. ತಾವು ಸರ್ಕಾರದ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಅದು ರೈತರ ಖಾತೆ. ರೈತರು ನೇರವಾಗಿ ತಮ್ಮ ಖಾತೆಗಳಿಗೆ ಹಣ ಪಡೆಯುತ್ತಿದ್ದು, ಇದು ನಮ್ಮ ಭಾರತ ಸಾಗುತ್ತಿರುವ ಹಾದಿಯಾಗಿದೆ. ಇಂತಹ ಬದಲಾವಣೆಯಾಗುತ್ತಿರುವುದನ್ನು ರೈತರು ಗಮನಿಸಬೇಕು. ಪ್ರಸ್ತುತ ಇತರೆ ಹಲವಾರು ವಿರೋಧಿ ವಾತಾವರಣವಿದೆ.

ನಮ್ಮ ಭಾರತ ಮುನ್ನಡೆಯುತ್ತಿದೆ ಎಂಬ ಬಗ್ಗೆ ತಮಗೆ ಅರಿವಿಲ್ಲ. ಪ್ರಭುಪಾದಜಿ ಸೂಚಿಸಿದಂತೆ ಯಾವುದೇ ಹಳ್ಳಿಗೆ ಹೋಗಿ, ನೀವು ಡಿಜಿಟಲ್ ಸಂಪರ್ಕ, ರಸ್ತೆ ಸಂಪರ್ಕ, ಕೊಳವೆ ಮೂಲಕ ನೀರು, ವಿದ್ಯುತ್ ಕಾಣಬಹುದು. ಇವು ದೊಡ್ಡ ಬದಲಾವಣೆಗಳಾಗಿವೆ.  ನೀವು ಮನೆಯಿಂದಲೇ ಕೆಲಸ ಮಾಡಬೇಕಾದರೆ, ಹಳ್ಳಿಯಲ್ಲೂ ನಿಮ್ಮ ಮನೆಯಿಂದಲೇ ಕೆಲಸ ಮಾಡಬಹುದು. ಏಕೆಂದರೆ ನಾವು ತಾಂತ್ರಿಕವಾಗಿ ಶಕ್ತರಾಗಿದ್ದೇವೆ. ಸ್ನೇಹಿತರೇ, ನಾವು ಉತ್ತಮ ಆರಂಭ ಪಡೆದಿದ್ದೇವೆ. ನಾವು ಚೇತರಿಸಿಕೊಳ್ಳುವ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಇದು ಯೋಜನೆಗಳಿಂದ ಉತ್ತೇಜಿಸಲ್ಪಟ್ಟಿದೆ. ಮುದ್ರಾ ಯೋಜನೆ ಇದಕ್ಕೆ ಮೂಲ ಕಾರಣವಾಗಿದೆ.

ನೀವು ಆಲೋಚಿಸಿ ನಮ್ಮ ಮಹಿಳೆಯರು ಮತ್ತು ಬಾಲಕಿಯರು ವ್ಯಾಪಕವಾಗಿ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ 60% ಪಾಲು ಪಡೆದಿದ್ದಾರೆ. ಇವರಿಗೆ ಹೆಚ್ಚಿನ ಹಣ ದೊರೆಯುತ್ತಿದೆ. ಈ ಗ್ರಹದ ಮೇಲೆ ಮಹಿಳಾ ಸಬಲೀಕರಣವಾಗುತ್ತಿದ್ದು, ಸಮಾಜದಲ್ಲಿ ಮೂಲಭೂತ ಪ್ರಗತಿಯಾಗುತ್ತಿದೆ. ಆದರೆ ಭಾರತ ಪ್ರಮುಖ ಹೆಜ್ಜೆ ಇಟ್ಟಿದೆ. 2023 ರಲ್ಲಿ ಲೋಕಸಭೆ ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಸಂಸತ್ ಅನುಮೋದನೆ ನೀಡಿದೆ. ನೀವು 2024 ರಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದ ಪರೇಡ್ ಗೆ ಸಾಕ್ಷಿಯಾಗಿರುತ್ತೀರಿ. ನಮ್ಮ ಮಹಿಳಾ ಸಬಲೀಕರಣ ಅರಳುತ್ತಿದೆ. ಇಡೀ ಜಗತ್ತಿನಾದ್ಯಂತ ಮಹಿಳಾ ಆಧಾರಿತ ಸಬಲೀಕರಣವಾಗುತ್ತಿದೆ ಮತ್ತು ಭಾರತವೂ ಕೂಡ ಮಹಿಳಾ ಸಬಲೀಕರಣದ ವ್ಯಾಖ್ಯಾನಕ್ಕೆ ಹೆಸರಾಗಿದೆ.  ನಮ್ಮ ದೇಶದ ಮೊದಲ ಪ್ರಜೆ ಬುಡಕಟ್ಟು ಮಹಿಳೆಯಾಗಿದ್ದಾರೆ. ನೋಡಿ ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು, ನಾವು ಅಸಾಧಾರಣ ಬುದ್ದಿವಂತರು. ಇದು ನಾವು ಪರಮೋಚ್ಛ ಅನುಭವಕ್ಕೆ ಕಾರಣವಾಗಿದ್ದು, ಇದು ವಾಸ್ತವವಾಗಿದೆ. ಆಕೆ ಉನ್ನತ ಹುದ್ದೆಯಲ್ಲಿದ್ದಾರೆ. ಇದು ಬರುವ ದಿನಗಳಲ್ಲಿ ಅತಿ ದೊಡ್ಡ ಬದಲಾವಣೆ ಕಾಣಲಿದ್ದೇವೆ.

ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುತ್ತೇನೆ, ಉನ್ನತ ಸಾಂಸ್ಥಿಕ ವಲಯದಲ್ಲಿಯೂ ನಾವು ಉನ್ನತ ಸ್ಥಾನ ಪಡೆದಿದ್ದೇವೆ. ನಾವು ಕ್ವಾಂಟಮ್ ಕಂಪ್ಯೂಟಿಂಗ್‌ಗೆ ಹೋದರೆ, ನಿಮಗೆ ಹೆಚ್ಚು ಉತ್ತಮವಾದ ಕಲ್ಪನೆ ಇರುತ್ತದೆ.

ನಮ್ಮ ಜಲಜನಕ ಅಭಿಯಾನ ಅತ್ಯಂತ ವಿಭಿನ್ನವಾಗಿದೆ. 6ಜಿ ತಂತ್ರಜ್ಞಾನದ ವಾಣಿಜ್ಯ ಚಟುವಟಿಕೆ 2025 ರಲ್ಲಿ ಆರಂಭವಾಗಲಿದೆ. ಇವೆಲ್ಲವೂ ಮಹತ್ವದ್ದು, ನಮ್ಮ ಯುವ ಸ್ನೇಹಿತರು ಈ ಸಂಖ್ಯೆಯ ಭಾಗವಾಗಿದ್ದಾರೆ. ನೀವು ಕಾರ್ಪೋರೇಟ್ ವಲಯಕ್ಕೆ ಸೇರುತ್ತೀರಿ ಇಲ್ಲವೆ ನವೋದ್ಯಮಗಳನ್ನು ಆರಂಭಿಸುತ್ತೀರಿ. ಆದರೆ ನೀವೆಲ್ಲರೂ ದೇಶಕ್ಕೆ ಹೆಚ್ಚಿನ ರೀತಿಯಲ್ಲಿ ನೆರವಾಗಬೇಕು. ನೀವು ನನ್ನ ಕೆಲವು ಸಲಹೆಗಳನ್ನು ಸ್ವೀಕರಿಸಬೇಕು. 

ಸಂಸದರಿಗೆ ನಾನು ಹಲವು ಬಾರಿ ಒತ್ತಾಯಿಸಿದ್ದೇನೆ. ಆರ್ಥಿಕ ರಾಷ್ಟ್ರೀಯಯತೆ ಎಂಬುದು ಮೂಲಭೂತ ಅಂಶವಾಗಿದೆ. ಇವೆಲ್ಲವೂ ನಮಗೆ ನೋವು ತರುತ್ತದೆ. ವೈಯಕ್ತಿಕ ಲಾಭಕ್ಕಾಗಿ ನಾವು ಕಿಟ್ ಗಳು, ಪೀಠೋಪಕರಣಗಳು, ಅಟಿಕೆಗಳು, ಪರದೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಲಭ್ಯವಿರುವ ವಸ್ತುಗಳನ್ನು ನಾವು ಆಮದು ಮಾಡಿಕೊಳ್ಳಬಹುದೇ?. ನಾವು ವೋಕಲ್ ಫಾರ್ ಲೋಕಲ್ ನೀತಿ ಅನುಸರಿಸಬೇಕು. ಇದರಿಂದ ನಾವು 100 ಶತಕೋಟಿ ಡಾಲರ್ ಗೂ ಹೆಚ್ಚಿನ ಮೊತ್ತವನ್ನು ವಿದೇಶಿ ವಿನಿಮಯದ ಮೂಲಕ ಉಳಿಸುತ್ತೇವೆ. ಇದು ಉತ್ತಮ ಅಭ್ಯಾಸ ಎಂದು ಹೇಳಿದರು.

ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ವಲಯದಲ್ಲಿರುವವರು ತಮ್ಮ ಲಾಭ ಹೆಚ್ಚಾಗುವುದನ್ನು ನೋಡಲು ಮಾತ್ರ ಆಮದು ಮಾಡಿಕೊಳ್ಳುತ್ತಾರೆ ಎಂಬುದನ್ನು ನೀವು ಅದರ ಮೂಲದಲ್ಲಿ ಕಾಣಬಹುದು. ಈ ಪ್ರಕ್ರಿಯೆಯಲ್ಲಿ ಅವರು ಗಳಿಸುತ್ತಿರುವ ಲಾಭವು ಸ್ವದೇಶಿ ಕಾರ್ಮಿಕರು, ಸ್ವದೇಶಿ ಉದ್ಯಮಶೀಲತೆ ಮತ್ತು ನಮ್ಮ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಬರಿದುಮಾಡುತ್ತದೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಇಲ್ಲಿನ ನಾಯಕನಿಗೆ, ನಾನು ವಿಶೇಷವಾಗಿ ಮನವಿ ಮಾಡುತ್ತೇನೆ.

ದಯವಿಟ್ಟು ಅಭಿಪ್ರಾಯದ ಸುಂಟರಗಾಳಿಯನ್ನು ವೇಗಗೊಳಿಸಿ. ನಮ್ಮ ಕಚ್ಚಾ ವಸ್ತುಗಳು ಮೌಲ್ಯವರ್ಧನೆಯಿಲ್ಲದೆ ನಮ್ಮ ತೀರವನ್ನು ಏಕೆ ಬಿಡಬೇಕು?. ಕಬ್ಬಿಣದ ಅದಿರು ಇಷ್ಟೊಂದು ರಫ್ತಾಗುತ್ತಿರುವುದು ಒಳ್ಳೆಯ ಪ್ರತಿಬಿಂಬವಲ್ಲ. ನಾವು ನಮ್ಮ ಉತ್ಪನ್ನಕ್ಕೆ ಮೌಲ್ಯವನ್ನು ಸೇರಿಸಬೇಕು. ನಾವು ನಮ್ಮ ರಾಷ್ಟ್ರವನ್ನು ಸಶಕ್ತಗೊಳಿಸಬೇಕಾದರೆ ನಾವು ನಮ್ಮ ಉತ್ಪನ್ನಗಳಿಗೆ ಗಮನಾರ್ಹವಾಗಿ ಮೌಲ್ಯವನ್ನು ಹೆಚ್ಚಿಸಬೇಕು. ಮತ್ತು ಆ ದೃಷ್ಟಿಕೋನದಿಂದ, ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ನಿಮ್ಮ ಜೀವನದಲ್ಲಿ ನೀವು ಸಹ ಕೊಡುಗೆ ನೀಡಬಹುದು. ಏಕೆಂದರೆ ಆರ್ಥಿಕ ರಾಷ್ಟ್ರೀಯತೆಯ ವಿಷಯಕ್ಕೆ ಬಂದಾಗ ಅದು ಎರಡಾಗುತ್ತದೆ. ಅದರಲ್ಲಿ ಒಂದು, ಆಮದುದಾರ. ಎರಡನೆಯದಾಗಿ, ಗ್ರಾಹಕ.

ನಾವು ಸಂಪೂರ್ಣವಾಗಿ ಸರಿಯಾಗಿದ್ದೇವೆ ಮತ್ತು ನನಗೆ ಗೊತ್ತಿದೆ ಇದು ನಿಶ್ಚಿತವಾಗಿಯೂ ಅತಿ ದೊಡ್ಡ ಬದಲಾವಣೆಯಾಗಲಿದೆ. ಸ್ನೇಹಿತರೇ ನಾವು ಇದನ್ನು ಇಷ್ಟಪಡುತ್ತೇವೆಯೋ ಇಲ್ಲವೋ, ಆದರೆ ನಮ್ಮ ಜೊತೆ ಅಡ್ಡಿಪಡಿಸುವ ತಂತ್ರಜ್ಞಾನವಿದೆ. ಅವರಿಗೆ ನಮ್ಮ ಮನೆಗಳು ಬೇಕು. ನಮ್ಮ ಕೆಲಸದ ಸ್ಥಳಗಳು ಬೇಕು.

ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಗಿಂತ ಕಡಿಮೆಯಿಲ್ಲ. ಈ ತಂತ್ರಜ್ಞಾನಗಳ ಕಾರಣದಿಂದಾಗಿ, ನಾವು ದೊಡ್ಡ ಬದಲಾವಣೆಯ ತುದಿಯಲ್ಲಿದ್ದೇವೆ. ನಮ್ಮನ್ನು ಬೆಚ್ಚಿ ಬೀಳಿಸುವ ಬದಲಾವಣೆಗಳಾಗಲಿವೆ.

ನಮಗೆ ಸವಾಲುಗಳು ಮತ್ತು ಅವಕಾಶಗಳಿವೆ. ನಿಮ್ಮಂತಹ ಪ್ರಭಾವಶಾಲಿಗಳು ಸವಾಲುಗಳನ್ನು ಅವಕಾಶಗಳನ್ನಾಗಿ ಬಳಸಿಕೊಳ್ಳುವಂತಾಗಬೇಕು. ಕೃತಕ ಬುದ್ದಿಮತ್ತೆ, ಇಂಟರ್ ನೆಟ್ ಥಿಂಗ್ಸ್, ಮಿಷನ್ ಲರ್ನಿಂಗ್, ಬ್ಲ್ಯಾಕ್ ಚೈನ್ ಎಂಬುದು ಕೇವಲ ಹೆಸರುಗಳಲ್ಲ.

ನೀವು ಅದರೊಳಗೆ ಆಳವಾಗಿ ಹೋಗಬೇಕು. ಅಲ್ಲಿರುವ ಅಗಾಧ ಸಾಮರ್ಥ್ಯವನ್ನು ನೋಡಿ ನಾನೇ ಬೆಚ್ಚಿಬಿದ್ದೆ. ನಾನು ತಜ್ಞರಿಂದ ಮಾಹಿತಿ ಪಡೆದಾಗ. ನೀವು ಅದನ್ನು ನಿಭಾಯಿಸಬಹುದು. ಏಕೆಂದರೆ ನೀವು ಜೀವನದ ಯಾವುದೇ ಹಾದಿಯಲ್ಲಿ ಹೋದರೂ, ನೀವು ಬೃಹತ್ ಪ್ರಮಾಣದಲ್ಲಿ ಕೊಡುಗೆ ನೀಡುತ್ತೀರಿ. ಆದ್ದರಿಂದ, ನೀವು ಈ ಸಂಸ್ಥೆಯಿಂದ ಹೊರಬಂದ ನಂತರ ನಿಮ್ಮ ಕಲಿಕೆ ನಿಲ್ಲುವುದಿಲ್ಲ.

ನಿಮ್ಮ ಕಲಿಕೆಯು ಜೀವನಪೂರ್ತಿ. ಮತ್ತು ಪ್ರಜಾಪ್ರಭುತ್ವದ ಅತಿದೊಡ್ಡ ತಾಯಿಯ ಮಾನವ ಸಂಪನ್ಮೂಲವಾಗಿ, ನೀವು ಪ್ರಪಂಚದ ಇತರರಿಗಿಂತ ಮುಂದಿರಬೇಕು. 5,000 ವರ್ಷಗಳ ನಮ್ಮ ಇತಿಹಾಸ ಮತ್ತು ನಾಗರಿಕತೆಯಿಂದ ನಮ್ಮ ಪ್ರತಿಭೆಯನ್ನು ವ್ಯಾಖ್ಯಾನಿಸಲಾಗಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ.  

ಈ ಶತಮಾನ ಭಾರತಕ್ಕೆ ಸೇರಿದ್ದಾಗಿದೆ. ಜಿ20 ಯಲ್ಲಿ ನಾವು ಏನು ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಾವು ಅಲ್ಲಿ ಕೈಗೊಂಡ ನಿರ್ಧಾರಗಳ ಬಳಿಗೆ ಕೊಂಡೊಯ್ಯುತ್ತೇವೆ. ಅವು ಮೂಲಭೂತವಾಗಿವೆ.

ಮೊದಲನೆಯದಾಗಿ ಜಿ20 ಐರೋಪ್ಯ ಒಕ್ಕೂಟದ ಭಾಗವಾಗಿದೆ. ಮತ್ತು ಐರೋಪ್ಯ  ಒಕ್ಕೂಟದ ದೇಶಗಳು ಇತರ ದೇಶಗಳನ್ನು ದೊಡ್ಡದಾಗಿ ವಸಾಹತುವನ್ನಾಗಿ ಮಾಡಿಕೊಂಡವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಪಕ್ರಮದಲ್ಲಿ ಭಾರತ್‌ನಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ನ ಭಾಗವಾಗಿ ಮಾಡಲಾಯಿತು.  ಒಂದು ದೊಡ್ಡ ವಿಷಯ. ಮತ್ತೊಂದು ಮಹತ್ವದ ನಿರ್ಧಾರ. ಜಾಗತಿಕ ದಕ್ಷಿಣ ವಿಶ್ವದ ಜನಸಂಖ್ಯೆ ಮತ್ತು ಜಿಡಿಪಿಯ ಒಂದು ದೊಡ್ಡ ಭಾಗವನ್ನು ಹೊಂದಿದೆ. ಅದು ಜಗತ್ತಿಗೆ ಗೊತ್ತಿರಲಿಲ್ಲ. ಪ್ರಧಾನಿ ಮೋದಿ ಈ ಕ್ರಮ ಕೈಗೊಂಡಿದ್ದಾರೆ. ಮತ್ತು ಭಾರತ್ ಜಾಗತಿಕ ದಕ್ಷಿಣದ ಧ್ವನಿಯಾಯಿತು. ಮತ್ತು ಮೂರನೆಯದಾಗಿ, ಯುಗಗಳ ಹಿಂದೆ, ಶತಮಾನಗಳ ಹಿಂದೆ, ನಾವು ಭೂಮಿ ಮತ್ತು ಸಮುದ್ರದ ಮೂಲಕ ಇತರ ದೇಶಗಳೊಂದಿಗೆ ವ್ಯಾಪಾರವನ್ನು ಹೊಂದಿದ್ದೇವೆ. ಆ ಮಾರ್ಗವನ್ನು ಔಪಚಾರಿಕಗೊಳಿಸಲಾಗಿದೆ. ಇದು ಕಾರ್ಯಗತವಾಗುವುದು ಸಮಯದ ವಿಷಯವಾಗಿದೆ. ನಿಮ್ಮೆಲ್ಲರಿಗೂ ಅಗಾಧ ಅವಕಾಶಗಳಿವೆ.

ಸ್ನೇಹಿತರೇ, ನೀವು ಸವಲತ್ತು ಪಡೆದ ವಂಶಾವಳಿಯ ಭಾಗವಾಗಿಲ್ಲ. ನೀವು ಸವಲತ್ತು ಪಡೆದವರು. ನಿಮ್ಮ ಅರ್ಹತೆಯಿಂದ, ನಿಮ್ಮ ಕೌಶಲ್ಯದ ಸಾಧನೆಯಿಂದ ನೀವು ಸವಲತ್ತು ಹೊಂದಿದ್ದೀರಿ. ಮತ್ತು ಆದ್ದರಿಂದ ನೀವು ನಿಮಗಾಗಿ ಮಾತ್ರ ಕೆಲಸ ಮಾಡುವುದಿಲ್ಲ, ಆದರೆ ನೀವು ಇತರರನ್ನು ಸಹ ಹಿಡಿದಿಟ್ಟುಕೊಳ್ಳುತ್ತೀರಿ.

ನಿಮ್ಮ ಸ್ವಂತ ಜೀವನದಲ್ಲಿ, ನೀವು ಅದನ್ನು ಒಂದು ಧ್ಯೇಯವನ್ನಾಗಿ ಮಾಡಿಕೊಂಡರೆ, ನೀವು ಖಂಡಿತವಾಗಿಯೂ ಅಲೆಯನ್ನು ಸೃಷ್ಟಿಸಬಹುದು, ಹೌದು, ನಾನು ಕನಿಷ್ಟ ಇಬ್ಬರು ವ್ಯಕ್ತಿಗಳನ್ನು ಪ್ರೇರೇಪಿಸಲು, ಉತ್ತೇಜಿಸಲು, ಶಕ್ತಿ ತುಂಬಲು ಕ್ರಮ ಕೈಗೊಳ್ಳುತ್ತೇನೆ. ಅದು ಬಹಳ ದೂರ ಹೋಗುತ್ತದೆ. ಆತ್ಮೀಯ ಸ್ನೇಹಿತರೇ, ನಾನು ಯುವಕರನ್ನು, ವಿಶೇಷವಾಗಿ ನಿಮ್ಮ ವರ್ಗದ ಸಂಸ್ಥೆಗಳನ್ನು ನೋಡಿದಾಗ, ಇಲ್ಲಿ ನಾನು ನಿಮ್ಮೊಂದಿಗೆ ಒಂದು ರೀತಿಯಲ್ಲಿ ಸಂವಹನ ನಡೆಸುತ್ತಿದ್ದೇನೆ.

ನಾವು ನಮ್ಮ ಪ್ರಗತಿಯನ್ನು ಆರ್ಥಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕಾಗಿಲ್ಲ. ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೇ, ಆದರೆ ಭಾರತದ ಉದಯ ಪ್ರಸ್ಥಭೂಮಿಯಂತಿದೆ. ಗ್ರಾಮಗಳಿಗೆ ರಸ್ತೆ ಸಂಪರ್ಕ, ಶೌಚಾಲಯಗಳು, ಹಳ್ಳಿಯ ಡಿಜಿಟಲೀಕರಣ, ಎಲ್ಲಾ ವಿದ್ಯುತ್‌ನಿಂದಾಗಿ ಆ ಪ್ರಸ್ಥಭೂಮಿಯನ್ನು ವ್ಯಾಖ್ಯಾನಿಸಲಾಗಿದೆ.

ಮತ್ತು ಈಗ ಹೊಸ ಪರಿಕಲ್ಪನೆ ಬಂದಿದೆ. ಸರ್ಕಾರವು ಎಲ್ಲರಿಗೂ ಸೌರಶಕ್ತಿಯ ಯೋಜನೆಯನ್ನು ಹೊರತಂದಿರುವ ಕಾರಣ ನೀವೇ ಅಧಿಕಾರ ಮಾಡಿಕೊಳ್ಳಿ. ಹಾಗಾಗಿ ಕೈಗಾರಿಕೆ, ವ್ಯಾಪಾರ, ವಹಿವಾಟು ಮತ್ತು ವಾಣಿಜ್ಯ, ಅವರ ನಾಯಕತ್ವ, ಅವರ ಸಂಘಗಳು, ಶಿಕ್ಷಣ ಸಂಸ್ಥೆಗಳು, ನಾವೀನ್ಯತೆ, ಸಂಶೋಧನೆ, ಆರ್ಥಿಕ ರಾಷ್ಟ್ರೀಯತೆಯ ಮನೋಭಾವವನ್ನು ಪೋಷಿಸಲು ನಾನು ಕರೆ ನೀಡುತ್ತೇನೆ.

ಸಂಸ್ಥೆಗಳು ತಮ್ಮ ಸಾಮಾನ್ಯ ಕೆಲಸವನ್ನು ಮೀರಿ ಯೋಚಿಸಬೇಕು. ಹಳೆಯ ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ, ನಾನು ಒಂದು ಕಲ್ಪನೆಯನ್ನು ಬದಲಾಯಿಸಿದ್ದೇನೆ. ಮತ್ತು ಅದನ್ನು ಸರಿಪಡಿಸುವ ಜನರನ್ನು ನಾವು ಇಲ್ಲಿ ಹೊಂದಿದ್ದೇವೆ.

ನಾವು ಹಳೆಯ ವಿದ್ಯಾರ್ಥಿಗಳ ಸಂಘಗಳ ಒಕ್ಕೂಟಗಳನ್ನು ಹೊಂದಿರಬೇಕು. ನಿಮ್ಮಂತಹ ಪ್ರತಿಷ್ಠಿತ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಸಂಘಗಳು, ಐಐಟಿಗಳು, ಐಐಎಂಗಳನ್ನು ಹೊಂದಿದ್ದರೆ, ನಮ್ಮಲ್ಲಿ ವಿಶ್ವದಲ್ಲೇ ಸಾಟಿಯಿಲ್ಲದ ಚಿಂತಕರ ಚಾವಡಿ  ಇರುತ್ತದೆ, ಅದು ನಮಗೆ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಇದು ಬಹಳಷ್ಟು ತೆಗೆದುಕೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ, ಸೋಲಿಗೆ ಹೆದರಬೇಡಿ ಒತ್ತಡಕ್ಕೆ ಒಳಗಾಗಬೇಡಿ. ಆತಂಕ  ಬೇಡ. ಚಂದ್ರಯಾನ 3 ಯಶಸ್ವಿಯಾಗುತ್ತಿರಲಿಲ್ಲ ಆದರೆ ಚಂದ್ರಯಾನ 2 ಪ್ರಯತ್ನ ಇದಕ್ಕೆ ಕಾರಣವಾಗಿದೆ. ನಾನು ಪಶ್ಚಿಮ ಬಂಗಾಳ ರಾಜ್ಯದ ರಾಜ್ಯಪಾಲನಾಗಿದ್ದೆ. ಚಂದ್ರಯಾನ 2 ನಸುಕಿನ 2 ಗಂಟೆ ಸುಮಾರಿಗೆ ಇಳಿಯಬೇಕಿತ್ತು, ನನ್ನ ಹೆಂಡತಿಯೊಂದಿಗೆ ನಾವು ಕೋಲ್ಕತ್ತಾದ ಸಾಯಿ ನಗರಕ್ಕೆ ಹೋದೆವು. 500 ಬಾಲಕರು ಮತ್ತು ಬಾಲಕಿಯರು ನಮ್ಮ ಮುಂದೆ ಇದ್ದರು. ಇದು ಚಂದ್ರನ ಮೇಲ್ಮೈಗೆ ಸಾಕಷ್ಟು ಹತ್ತಿರ ತಲುಪಿತು. ಲ್ಯಾಂಡಿಂಗ್ ಮೃದುವಾಗಿರಲಿಲ್ಲ. ಕೆಲವರು ಇದು ವೈಫಲ್ಯ ಎಂದು ಭಾವಿಸಿದ್ದರು. ಇಲ್ಲ. ಇದು ಬಹುಮಟ್ಟಿಗೆ ಯಶಸ್ವಿಯಾಗಿತ್ತು.

ಚಂದ್ರಯಾನ 3 ರ ಯಶಸ್ಸನ್ನು ಚಂದ್ರಯಾನ 2 ರಿಂದ  ದೃಢಪಡಿಸಲಾಗಿದೆ. ಆದ್ದರಿಂದ, ನಿಮಗೆ ಒಂದು ಆಲೋಚನೆ ಬಂದರೆ, ನಿಮ್ಮ ಮನಸ್ಸು ಕಲ್ಪನೆಯಲ್ಲಿ ನಿಲುಗಡೆ ಸ್ಥಳವಾಗಲು ಬಿಡಬೇಡಿ. ನೀವು ಅದ್ಭುತವಾದ ಕಲ್ಪನೆಯನ್ನು ಹೊಂದಿದ್ದರೆ, ಅದು ನಿಮ್ಮ ಮನಸ್ಸಿನಲ್ಲಿ ನಿಲುಗಡೆಯಾಗುತ್ತದೆ, ನೀವು ಅದರಂತೆ ವರ್ತಿಸುವುದಿಲ್ಲ, ನೀವು ನಿಮ್ಮ ಬಗ್ಗೆ ಅಪವಾದವನ್ನು ಮಾಡುತ್ತಿದ್ದೀರಿ ಮತ್ತು ಸಮಾಜಕ್ಕೆ ಒಲವು ತೋರುವುದಿಲ್ಲ. ಆದ್ದರಿಂದ ಎಂದಿಗೂ ಸೋಲಿನ ಭಯ ಬೇಡ.

ಸ್ನೇಹಿತರೇ, ದೊಡ್ಡ ಕನಸುಗಳನ್ನು ಕಾಣಿರಿ, ಚೌಕಟ್ಟಿನ ಹೊರಗೆ ಯೋಚಿಸಿ, ಏಕೆಂದರೆ ನೀವು ಏನನ್ನಾದರೂ ಸಾಧಿಸುವ ಸಮಯದಲ್ಲಿ ನೀವು ಜೀವಿಸುತ್ತಿದ್ದೀರಿ.

ನಿಮಗೆ ಒಂದು ಮಾತು ಹೇಳಿ ಮುಗಿಸುತ್ತೇನೆ. ನವೋದ್ಯಮಗಳು ಕಾರ್ಪೊರೇಟ್ ದೈತ್ಯರ ಗಮನ ಸೆಳೆಯುತ್ತವೆ. ನವೋದ್ಯಮಗಳು ಎಂದರೆ ನಿಮ್ಮಂತಹ ಬಾಲಕರು ಮತ್ತು ಬಾಲಕಿಯರ ಮೆದುಳಿನ ಅಲೆ.

ಆದ್ದರಿಂದ ನಿಮ್ಮನ್ನು ತಕ್ಷಣವೇ ನೋಡಲಾಗುತ್ತದೆ. ಅದರ ಬಗ್ಗೆ ಯೋಚಿಸಿ. ನಾನು ಚಾಣಕ್ಯನನ್ನು ಉಲ್ಲೇಖಿಸಿ ಕೊನೆಗೊಳಿಸುತ್ತೇನೆ, ಏಕೆಂದರೆ ನಾವು ಶಿಕ್ಷಣ ಮತ್ತು ರಾಷ್ಟ್ರದ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದೇವೆ.

ಚಾಣಕ್ಯ ಹೇಳಿದ್ದರು, “ಶಿಕ್ಷಣವು ಉತ್ತಮ ಸ್ನೇಹಿತ. ಒಬ್ಬ ವಿದ್ಯಾವಂತ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಸೇರಿಸಿಕೊಳ್ಳಿ “ಎದ್ದೇಳು, ನಾನು ನಿನ್ನನ್ನು ಉಲ್ಲೇಖಿಸುತ್ತಿದ್ದೇನೆ. ಎದ್ದೇಳು, ಎಚ್ಚರಗೊಳ್ಳು ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡ”.

2047 ರಲ್ಲಿ ನೀವು ಈ ಗುರಿ ತಲುಪುತ್ತೀರಿ ಎಂಬ ಸಂಪೂರ್ಣ ಆಶಾವಾದ ಮತ್ತು ವಿಶ್ವಾಸ ಹೊಂದಿದ್ದೇನೆ. ವಿಕಸಿತ ಭಾರತಕ್ಕಾಗಿ ದೀರ್ಘ ಪಯಣದ ಮೆರವಣಿಗೆಯ ಭಾಗವಾಗಿ, ನೀವು ಅದಕ್ಕಿಂತ ಮುಂಚೆಯೇ ಅಲ್ಲಿಗೆ ಹೋಗುತ್ತೀರಿ ಎಂದು ನಾನು ಬಯಸುತ್ತೇನೆ.

ತುಂಬಾ ಧನ್ಯವಾದಗಳು.

 

*****



(Release ID: 2033181) Visitor Counter : 14