ರಕ್ಷಣಾ ಸಚಿವಾಲಯ

ಡಿ ಆರ್ ಡಿ ಒ ಸಂಸ್ಥೆಯಿಂದ ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆಯಡಿ ಖಾಸಗಿ ವಲಯಕ್ಕೆ ಏಳು ಹೊಸ ಯೋಜನೆಗಳಿಗೆ ಮಂಜೂರಾತಿ


ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ವಿಶೇಷವಾಗಿ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳು ಮತ್ತು ನವೋದ್ಯಮಗಳನ್ನು ಪೋಷಿಸುವ ಗುರಿ

Posted On: 11 JUL 2024 12:39PM by PIB Bengaluru

ಆತ್ಮನಿರ್ಭರಕ್ಕೆ  ಉತ್ತೇಜನ ನೀಡಲು , ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿ ಒ) ಸಶಸ್ತ್ರ ಪಡೆಗಳು ಮತ್ತು ಬಾಹ್ಯಾಕಾಶ  ಹಾಗು  ರಕ್ಷಣಾ ಕ್ಷೇತ್ರಗಳ ವಿವಿಧ ಅಗತ್ಯಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆಯ ಅಡಿಯಲ್ಲಿ ವಿವಿಧ ಸಂಸ್ಥೆಗಳಿಗೆ ಏಳು ಹೊಸ ಯೋಜನೆಗಳನ್ನು ಅನುಮೋದಿಸಿದೆ. ಈ ಮಂಜೂರಾದ ಯೋಜನೆಗಳು ರಕ್ಷಣಾ ಮತ್ತು ಬಾಹ್ಯಾಕಾಶ ವಲಯಗಳಲ್ಲಿ ಕೈಗಾರಿಕೆಗಳನ್ನು ವಿಶೇಷವಾಗಿ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳು   (ಎಂಎಸ್ಎಂಇ) ಮತ್ತು ನವೋದ್ಯಮಗಳನ್ನು ಉತ್ತೇಜಿಸುವಲ್ಲಿ ಡಿಆರ್ ಡಿಒದ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಈ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಯು ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಂಜೂರಾದ ಯೋಜನೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ಥಳೀಯ ಸನ್ನಿವೇಶ ಮತ್ತು ಸಂವೇದಕ ಸಿಮ್ಯುಲೇಶನ್ ಟೂಲ್ ಕಿಟ್

ಈ ಯೋಜನೆಯು ನೈಜ ಸನ್ನಿವೇಶಗಳಲ್ಲಿ ಪೈಲಟ್ ಗಳ ಸಿಮ್ಯುಲೇಟರ್ ತರಬೇತಿಗಾಗಿ ಸ್ಥಳೀಯ ಟೂಲ್ಕಿಟ್ ನ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಇದು ಸಂಪೂರ್ಣ ಮಿಷನ್ ಯೋಜನೆಯಾಗಿದ್ದು ಮತ್ತು ಭಾರೀ ಬಲದ ಒಳಗೊಳ್ಳುವಿಕೆಯಲ್ಲಿ ಸಹಾಯ ಮಾಡುತ್ತದೆ. ಈ ಯೋಜನೆಯನ್ನು   ನೋಯ್ಡಾದ ನವೋದ್ಯಮವಾದ ಆಕ್ಸಿಜನ್ 2 ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಗೆ ನೀಡಲಾಗಿದೆ.

ನೀರೊಳಗಿನ ಮಾನವರಹಿತ ವೈಮಾನಿಕ ವಾಹನ

ಈ ಯೋಜನೆಯು ವಿವಿಧೋಪಯೋಗಿ  ಸಾಗರದ ಯುದ್ಧರಂಗದ ಪರಿಕರಗಳಿಗೆ ಸಂಬಂಧಿಸಿದೆ, ಇದನ್ನು ವಿವಿಧ ಕಾರ್ಯಕ್ಕೆ ನಿಯೋಜಿಸಬಹುದು. ಇದರ ಉದ್ದೇಶವು ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ (ಐಎಸ್ ಆರ್)  ಮತ್ತು ಸಮುದ್ರ  ಕ್ಷೇತ್ರದ ಜಾಗೃತಿ (ಎಂ ಡಿ ಎ) ಆಗಿದೆ. ಈ ಯೋಜನೆಯನ್ನು ಪುಣೆಯ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನೀಡಲಾಗಿದೆ.

ಪತ್ತೆ ಮತ್ತು ತಟಸ್ಥಗೊಳಿಸುವಿಕೆಗಾಗಿ ದೀರ್ಘ-ಶ್ರೇಣಿಯ ದೂರದಿಂದಲೇ ಕಾರ್ಯನಿರ್ವಹಿಸುವ ವಾಹನಗಳು

ವಾಹನಗಳು ದ್ವಿ-ಬಳಕೆಯ ವ್ಯವಸ್ಥೆಗಳಾಗಿದ್ದು, ಪ್ರಮುಖ ಸ್ವತ್ತುಗಳನ್ನು ಶಂಕಿತ ಕಾರ್ಯಾಚರಣೆಯ ಪ್ರದೇಶದಿಂದ ದೂರವಿರಿಸುವಾಗ ನೀರಿನೊಳಗಿನ ವಸ್ತುಗಳ ಪತ್ತೆ, ವರ್ಗೀಕರಣ, ಸ್ಥಳೀಕರಣ ಮತ್ತು ತಟಸ್ಥಗೊಳಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಈ ಯೋಜನೆಯನ್ನು ಕೊಚ್ಚಿಯಲ್ಲಿರುವ ನವೋದ್ಯಮವಾದ  ಐ.ಆರ್.ಒ.ವಿ  ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ಗೆ ನೀಡಲಾಗಿದೆ.

ವಿಮಾನಕ್ಕಾಗಿ ಐಸ್ ಡಿಟೆಕ್ಷನ್ ಸೆನ್ಸರ್ ಅಭಿವೃದ್ಧಿ

ವಿಮಾನದ ಬಾಹ್ಯ ಮೇಲ್ಮೈಗಳನ್ನು ಹೊಡೆದ ನಂತರ ಘನೀಕರಿಸುವ ಅತಿ ಶೀತವಾದ ನೀರಿನ ಹನಿಗಳಿಂದ ಉಂಟಾಗುವ ಇನ್-ಫ್ಲೈಟ್ ಐಸಿಂಗ್ ವಿದ್ಯಮಾನವನ್ನು ತನಿಖೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ವಿಮಾನದಲ್ಲಿ ಆಂಟಿ-ಐಸಿಂಗ್ ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸಲು ಇವುಗಳನ್ನು ವಿಮಾನಗಳು ಬಳಸುತ್ತವೆ. ಈ ಯೋಜನೆಯನ್ನು ಬೆಂಗಳೂರಿನ ಕ್ರಾಫ್ಟ್‌ ಲಾಜಿಕ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಗೆ ನೀಡಲಾಗಿದೆ.

ಸಕ್ರಿಯ ಆಂಟೆನಾ ಅರೇ ಸಿಮ್ಯುಲೇಟರ್ನೊಂದಿಗೆ ರಾಡಾರ್ ಸಿಗ್ನಲ್ ಪ್ರೊಸೆಸರ್ ನ ಅಭಿವೃದ್ಧಿ

ಈ ಯೋಜನೆಯು ಅಲ್ಪ-ಶ್ರೇಣಿಯ ವೈಮಾನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕಾಗಿ ವೈವಿಧ್ಯಮಯ ಗುರಿ ವ್ಯವಸ್ಥೆಗಳ ನಿಯೋಜನೆಯನ್ನು ಸಕ್ರಿಯಗೊಳಿಸುತ್ತದೆ. ಇದು ದೊಡ್ಡ ರಾಡಾರ್ ವ್ಯವಸ್ಥೆಗಳಿಗೆ ಮೂಲ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯನ್ನು ಡಾಟಾ ಪ್ಯಾಟರ್ನ್ (ಇಂಡಿಯಾ) ಲಿಮಿಟೆಡ್, ಚೆನ್ನೈಗೆ ನಿಯೋಜಿಸಲಾಗಿದೆ.

ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಆಧಾರಿತ ಸಮಯ ಸ್ವಾಧೀನ ಮತ್ತು ಪ್ರಸರಣ ವ್ಯವಸ್ಥೆಯ ಅಭಿವೃದ್ಧಿ

ಈ ಯೋಜನೆಯನ್ನು ಬೆಂಗಳೂರಿನ  ಅಕಾರ್ಡ್ ಸಾಫ್ಟ್ವೇರ್ & ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಗೆ ಮಂಜೂರು ಮಾಡಲಾಗಿದೆ.  ಸಮಯದ ಸ್ವಾಧೀನ ಮತ್ತು ಪ್ರಸರಣ ವ್ಯವಸ್ಥೆಯ ಸ್ವದೇಶೀಕರಣವನ್ನು ಸಕ್ರಿಯಗೊಳಿಸುವುದು, ಸಮಯದ ಸ್ವಾಧೀನಕ್ಕಾಗಿ ಭಾರತೀಯ ನಕ್ಷತ್ರಪುಂಜದ ಬಳಕೆ ಮತ್ತು ಶ್ರೇಣಿಯ ಅವಶ್ಯಕತೆಗಳಿಗೆ ಅನುಗುಣವಾಗಿ ತಯಾರು ಮಾಡಿದ ಮತ್ತು ಹೊಂದಿಕೊಳ್ಳುವ ಸಮಯದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.

ಬಹುಕ್ರಿಯಾತ್ಮಕ ಧರಿಸಬಹುದಾದ ಅಪ್ಲಿಕೇಶನ್ ಗಳಿಗಾಗಿ ಗ್ರ್ಯಾಫೀನ್ ಆಧಾರಿತ ಸ್ಮಾರ್ಟ್ ಮತ್ತು ಇ-ಜವಳಿಗಳ ಅಭಿವೃದ್ಧಿ

ಕೊಯಮತ್ತೂರಿನ ನವೋದ್ಯಮ   ಅಲೋಹಟೆಕ್ ಪ್ರೈವೇಟ್ ಲಿಮಿಟೆಡ್ ಗೆ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು ಗ್ರ್ಯಾಫೀನ್ ನ್ಯಾನೊಮೆಟೀರಿಯಲ್ ಮತ್ತು ವಾಹಕ ಶಾಯಿಯನ್ನು ಬಳಸಿಕೊಂಡು ವಾಹಕ ನೂಲು ಮತ್ತು ಬಟ್ಟೆಯನ್ನು ತಯಾರಿಸುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತದೆ.  ಇವುಗಳ ಫಲಿತಾಂಶವು ಸುಧಾರಿತ ನ್ಯಾನೊಕಾಂಪೊಸಿಟ್ ವಸ್ತು-ಆಧಾರಿತ ಇ-ಜವಳಿಗಳಾಗಿದ್ದು, ಪ್ರಾಯೋಗಿಕ ಬಟ್ಟೆ ಅನ್ವಯಗಳಿಗೆ ಬಳಸಲಾಗುವ ಮೂಲಭೂತ ಪ್ರಯೋಜನಗಳನ್ನು ಹೊಂದಿದೆ.

 

*****



(Release ID: 2032657) Visitor Counter : 17