ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯ ಗತಿ ಶಕ್ತಿ ವಿಶ್ವವಿದ್ಯಾಲಯ (ಜಿಎಸ್ ವಿ) ವಡೋದರಾ ಮತ್ತು ಏರ್ ಬಸ್ ಏರೋಸ್ಪೇಸ್  ನಡುವೆ ಶಿಕ್ಷಣ ಮತ್ತು ಸಂಶೋಧನೆಗಾಗಿ ಒಪ್ಪಂದಕ್ಕೆ ಸಹಿ 


ಸಾರಿಗೆ ಮತ್ತು ಸಾಗಾಣಿಕೆ ಕ್ಷೇತ್ರಗಳ ಮೇಲೆ ವಿಶೇಷ ಗಮನಹರಿಸುವುದರೊಂದಿಗೆ ರೈಲ್ವೆ, ವಾಯುಯಾನ, ಹಡಗು, ಬಂದರುಗಳು, ಹೆದ್ದಾರಿಗಳು, ರಸ್ತೆಗಳು ಮತ್ತು ಜಲಮಾರ್ಗಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಕೆಲಸವನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿರುವ ಜಿ.ಎಸ್.ವಿ  “ಈ ರೀತಿಯ ಮೊದಲ” ವಿಶ್ವವಿದ್ಯಾನಿಲಯವಾಗಿದೆ

Posted On: 05 JUL 2024 5:47PM by PIB Bengaluru

ಭಾರತೀಯ ರೈಲ್ವೆಯ ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್.ವಿ) ವಡೋದರಾ ಮತ್ತು ಏರ್ ಬಸ್ ಇಂದು ಭಾರತೀಯ ವಾಯುಯಾನ ಕ್ಷೇತ್ರವನ್ನು ಗಮನಾರ್ಹವಾಗಿ ಬಲಪಡಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಸೆಪ್ಟೆಂಬರ್ 2023 ರಲ್ಲಿ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಅನುಸಾರವಾಗಿ,  ರೆಮಿ ಮೈಲಾರ್ಡ್ (ಏರ್ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ) ಮತ್ತು ಪ್ರೊ. ಮನೋಜ್ ಚೌಧರಿ (ಗತಿ ಶಕ್ತಿ ವಿಶ್ವವಿದ್ಯಾಲಯದ ಉಪಕುಲಪತಿ) ನಡುವೆ ನವದೆಹಲಿಯ ರೈಲ್ವೆ ಭವನದಲ್ಲಿ ಅಂತಿಮ ಒಪ್ಪಂದಕ್ಕೆ ಸಹಿ ಹಾಕಲಾಯಿತು. 

ಗತಿ ಶಕ್ತಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯೂ ಆಗಿರುವ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು, ರೈಲ್ವೇಯ ರಾಜ್ಯ ಸಚಿವ ಶ್ರೀ ರವನೀತ್ ಸಿಂಗ್,  ಶ್ರೀಮತಿ ಜಯ ವರ್ಮ ಸಿನ್ಹಾ, ಅಧ್ಯಕ್ಷರು ಮತ್ತು ಸಿಇಒ, ರೈಲ್ವೆ ಮಂಡಳಿ, ಶ್ರೀ ವುಮ್ಲುನ್ಮಾಂಗ್ ವುಲ್ನಮ್, ಕಾರ್ಯದರ್ಶಿ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಪ್ಪಂದವು ಸಂಪೂರ್ಣ ಕಾರ್ಯಕ್ರಮದ ಅವಧಿಗೆ 40 ಜಿಎಸ್ ವಿ ವಿದ್ಯಾರ್ಥಿಗಳಿಗೆ ಪೂರ್ಣ ವಿದ್ಯಾರ್ಥಿವೇತನ, ಜಿಎಸ್ ವಿ ಯಲ್ಲಿ ಉತ್ಕೃಷ್ಟತೆಯ ಕೇಂದ್ರದ ಸ್ಥಾಪನೆ ಮತ್ತು ಜಿಎಸ್ವಿ ಯಲ್ಲಿ ಏರ್ಬಸ್ ಏವಿಯೇಷನ್ ಚೇರ್ ಪ್ರೊಫೆಸರ್ ಸ್ಥಾನದ ಸೃಷ್ಟಿವನ್ನು ಸ್ಥಾಪನೆಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ವಾಯುಯಾನ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಕಾರ್ಯನಿರ್ವಾಹಕ ತರಬೇತಿಗಾಗಿ ಜಿಎಸ್ವಿ ಮತ್ತು ಏರ್ಬಸ್ ಪಾಲುದಾರರಾಗುತ್ತವೆ. 


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ "ಇಂದು ಎಂಒಯು ಕಾರ್ಯರೂಪಕ್ಕೆ ಪರಿವರ್ತನೆಯಾದ ದಿನವಾಗಿದೆ. ಜಿ.ಎಸ್.ವಿ ಮತ್ತು ಏರ್ಬಸ್ಗೆ ಅಭಿನಂದನೆಗಳು. ಭರವಸೆಯನ್ನು ಈಡೇರಿಸುವುದೇ ಪ್ರಧಾನಮಂತ್ರಿ ಮೋದಿಯವರ ಸರ್ಕಾರದ ಶ್ರೇಷ್ಠ ಸಾಧನೆಯಾಗಿದೆ. ಮತ್ತೊಮ್ಮೆ ನಮ್ಮ ಪ್ರಧಾನಿಯ ಧ್ಯೇಯವಾಕ್ಯ ʼಸಬ್ಕಾ ಸಾಥ್ ಸಬ್ಕಾ ವಿಕಾಸ್ʼ ನಂತೆ ವಿಮಾನಯಾನ, ಹೆದ್ದಾರಿಗಳು, ರೈಲ್ವೆ, ರಸ್ತೆ ಸಾರಿಗೆ ಅಭಿವದ್ಧಿ ಆಗಬೇಕು ಎಂದರು. ವಾಸ್ತವವಾಗಿ  ನಾವು ಸಬ್ಕಾ ಸಾಥ್ ಸಬ್ಕಾ ವಿಕಾಸ್ ನ ಉತ್ಸಾಹದಲ್ಲಿ ಎಲ್ಲರೊಂದಿಗೆ ಸಹಕರಿಸುತ್ತೇವೆ. ಜಿ.ಎಸ್.ವಿ ಸ್ಥಾಪಿಸಲು ಕಾರಣವೆಂದರೆ ಸಾರಿಗೆಯ ಎಲ್ಲಾ ಕ್ಷೇತ್ರಗಳನ್ನು ಪೂರೈಸುವ ಕೇಂದ್ರೀಕೃತ ಮತ್ತು ವಿಶೇಷ ಸಂಸ್ಥೆಯನ್ನು ಹೊಂದುವುದಾಗಿದೆ. ನಾವು ರೈಲ್ವೆಯೊಂದಿಗೆ ಪ್ರಾರಂಭಿಸಿದ್ದೇವೆ, ನಾವು ಕ್ರಮೇಣ ಉತ್ಪಾದನೆಯತ್ತ, ನಂತರ ಮುಂದಿನ ವಲಯ ನಾಗರಿಕ ವಿಮಾನಯಾನಕ್ಕೆ ಸಾಗಿರುವೆವು. ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಸಚಿವಾಲಯವು ಮುಂದಿನ ಕ್ಷೇತ್ರವಾಗಿದೆ.  ಮತ್ತೊಮ್ಮೆ ನಾವು ಕೇಂದ್ರೀಕೃತ ರೀತಿಯಲ್ಲಿ ಪ್ರಾರಂಭಿಸುತ್ತೇವೆ, ನಂತರ ಸಾರಿಗೆಯ ಇತರ ಕ್ಷೇತ್ರಗಳಿಗೆ ಸಾಗುತ್ತೇವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು, "ಏರ್ ಬಸ್ನೊಂದಿಗೆ ಎಂಒಯು ಸಹಿ ಮಾಡಿರುವುದುನನಗೆ ಸಂತೋಷವನ್ನು ತಂದಿದೆ. ನಾಗರಿಕ ವಿಮಾನಯಾನವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ವಿಮಾನ ನಿಲ್ದಾಣಗಳು 74 ವಿಮಾನ ನಿಲ್ದಾಣಗಳಿಂದ ಹತ್ತಿರ ಹತ್ತಿರ ದ್ವಿಗುಣಗೊಂಡು 157 ವಿಮಾನ ನಿಲ್ದಾಣಗಳಾಗಿವೆ. ಈಗ, ಉಡಾನ್ ಯೋಜನೆಯು ಶ್ರೇಣಿ  2 ಮತ್ತು ಶ್ರೇಣಿ 3 ನಗರಗಳನ್ನು ವಾಯುಯಾನದ ಕ್ಷೇತ್ರಗಳಲ್ಲಿ  ಸೇರಿಸಿದೆ, ನಾವು ರೈಲ್ವೆಯ ಮಾರ್ಗದರ್ಶನವನ್ನು ಪಡೆಯುವುದನ್ನು ಮುಂದುವರಿಸುತ್ತೇವೆ. ವಾಯುಯಾನ ಕ್ಷೇತ್ರದ ಪ್ರಗತಿಗಾಗಿ ನಾಗರಿಕ ವಿಮಾನಯಾನ ಸಚಿವಾಲಯವು ಗತಿ ಶಕ್ತಿ ವಿಶ್ವವಿದ್ಯಾಲಯಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುತ್ತದೆ ಮತ್ತು ಜಿಎಸ್ ವಿ ಸ್ನಾತಕೋತ್ತರ ಮತ್ತು ಪಿಎಚ್ಡಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಬೇಕು ಎಂದು ಹೇಳಿದರು.

ಶ್ರೀ ರವನೀತ್ ಸಿಂಗ್ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಎಂಒಯುಗೆ ಸಹಿ ಹಾಕಿದ್ದಕ್ಕಾಗಿ ಜಿಎಸ್ ವಿ ಮತ್ತು ಏರ್ ಬಸ್ ಅನ್ನು ಅಭಿನಂದಿಸಿದರು. ಈ ಉಪಕ್ರಮವು ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಮತ್ತು ನಮ್ಮ ದೇಶದಿಂದ   ಪ್ರತಿಭಾ ಪಲಾಯನವನ್ನು ತಡೆಯುತ್ತದೆ ಎಂದು ಅವರು ಹೇಳಿದರು.

"ಇಂದು ಭಾರತದಲ್ಲಿ  ಏರ್‌ ಬಸ್  ಸುಮಾರು 3,500 ಪೂರ್ಣಾವಧಿಯ ಉದ್ಯೋಗಿಗಳನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು ಇಂಜಿನಿಯರ್ಗಳು ಮತ್ತು ಡಿಜಿಟಲ್ ವೃತ್ತಿಪರರಾಗಿದ್ದಾರೆ. "ಇದು ಉದ್ಯಮ ಮತ್ತು ಶಿಕ್ಷಣದ ನಡುವಿನ ಅಭೂತಪೂರ್ವ ಪಾಲುದಾರಿಕೆಯಾಗಿದ್ದು, ಇದು ಭಾರತದ ಸಾರಿಗೆ ಕ್ಷೇತ್ರದ ಭವಿಷ್ಯಕ್ಕೆ ಶಕ್ತಿ ತುಂಬುವ ವೃತ್ತಿಪರರ ಸಮೂಹವನ್ನು ರಚಿಸಲು ಸಹಕರಿಸುತ್ತದೆ, ವಿಶೇಷವಾಗಿ ಇದು ಭಾರತ ಸರ್ಕಾರದ 'ಕೌಶಲ್ಯ ಭಾರತ' ಕಾರ್ಯಕ್ರಮದ ಭಾಗವಾಗಿದೆ ಒಪ್ಪಂದದ ಪ್ರಕಾರ, ನಾವು ಭಾರತದಲ್ಲಿನ ನಮ್ಮ ಪೂರೈಕೆ ಸರಪಳಿಯಾದ್ಯಂತ 15,000 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತೇವೆ ಎಂದು ಏರ್ ಬಸ್ನ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲಾರ್ಡ್ ಹೇಳಿದರು.

ಜಿಎಸ್ವಿ ಉಪಕುಲಪತಿ ಪ್ರೊ. ಮನೋಜ್ ಚೌಧರಿ, “ಏರ್ ‌ಬಸ್‌ ನೊಂದಿಗಿನ ಈ ಪ್ರವರ್ತಕ ಸಹಭಾಗಿತ್ವವು ಉದ್ಯಮ-ಚಾಲಿತ ಮತ್ತು ನಾವೀನ್ಯತೆ-ನೇತೃತ್ವದ ವಿಶ್ವವಿದ್ಯಾನಿಲಯವಾಗುವ ಜಿಎಸ್ವಿಯ ದೃಷ್ಟಿಯನ್ನು ಗಣನೀಯವಾಗಿ ಮುನ್ನಡೆಸುತ್ತದೆ ಮತ್ತು ಭಾರತದಲ್ಲಿನ ಉದ್ಯಮ- ಶಿಕ್ಷಣ ಸಂಸ್ಥೆಯ  ಸಹಯೋಗಕ್ಕೆ ನಾವು ಜಿಎಸ್ವಿಯಲ್ಲಿ ನಿಯಮಿತ ಸಹಯೋಗವನ್ನು ಎದುರು ನೋಡುತ್ತೇವೆ ಉನ್ನತ ಮಾನವ ಸಂಪನ್ಮೂಲಗಳು, ಕೌಶಲ್ಯಗಳು ಮತ್ತು ಅತ್ಯಾಧುನಿಕ ಸಂಶೋಧನೆಗಳ ಮೂಲಕ ಭಾರತದಲ್ಲಿ ವಾಯುಯಾನ ಕ್ಷೇತ್ರದ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಶಿಕ್ಷಣ ಮತ್ತು ಕಾರ್ಯನಿರ್ವಾಹಕ ಶಿಕ್ಷಣ ಕಾರ್ಯಕ್ರಮಗಳಿಗೆ ಏರ್ಬಸ್ ತನ್ನ ಅತ್ಯಂತ ಮಹತ್ವದ ಕೊಡುಗೆಗಾಗಿ ಕೃತಜ್ಞರಾಗಿರುತ್ತೇವೆ."ಎಂದು ಹೇಳಿದರು. 
 
ಗತಿ ಶಕ್ತಿ ವಿಶ್ವವಿದ್ಯಾನಿಲಯ (ಜಿಎಸ್ ವಿ) ವಡೋದರಾವನ್ನು 2022 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಸ್ಥಾಪಿಸಲಾಯಿತು, ಇದು ಸಂಪೂರ್ಣ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ಉತ್ತಮ  ಮಾನವಶಕ್ತಿ ಮತ್ತು ಪ್ರತಿಭೆಯನ್ನು ಸೃಷ್ಟಿಸುವ ಉದ್ದೇಶವಾಗಿದೆ. ಈ ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಭಾರತ ಸರ್ಕಾರದ ರೈಲ್ವೇ ಸಚಿವಾಲಯ ಪ್ರಾಯೋಜಿಸಿದೆ ಮತ್ತು ಶ್ರೀ ಅಶ್ವಿನಿ ವೈಷ್ಣವ್, ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಇದರ ಮೊದಲ ಕುಲಪತಿಯಾಗಿದ್ದಾರೆ.

ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಮೇಲೆ ವಿಶೇಷವಾಗಿ ಕೇಂದ್ರೀಕರಿಸುವ ಜಿಎಸ್ ವಿ "ಈ ರೀತಿಯ ಮೊದಲನೆಯ" ವಿಶ್ವವಿದ್ಯಾನಿಲಯವಾಗಿದೆ, ಇದು ರೈಲ್ವೆ, ಹಡಗು, ಬಂದರುಗಳು, ಹೆದ್ದಾರಿಗಳು, ರಸ್ತೆಗಳು, ಜಲಮಾರ್ಗಗಳು ಮತ್ತು ವಾಯುಯಾನ ಇತ್ಯಾದಿಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳನ್ನು  ( ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ 2021 ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ 2022)  ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. 
 

*****


(Release ID: 2031302) Visitor Counter : 61