ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜುಲೈ 6 ರಿಂದ 9, 2024 ರವರೆಗೆ ಒಡಿಶಾಗೆ ಭಾರತದ ರಾಷ್ಟ್ರಪತಿ ಅವರು ಭೇಟಿ ನೀಡಲಿದ್ದಾರೆ

Posted On: 05 JUL 2024 6:59PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಜುಲೈ 6 ರಿಂದ 9, 2024 ರವರೆಗೆ ಒಡಿಶಾಗೆ ಭೇಟಿ ನೀಡಲಿದ್ದಾರೆ.

ಜುಲೈ 6 ರಂದು, ರಾಷ್ಟ್ರಪತಿಯವರು ಭುವನೇಶ್ವರದಲ್ಲಿ ನಡೆಯುವ ಉತ್ಕಲಾಮಣಿ ಪಂಡಿತ್ ಗೋಪಬಂಧು ದಾಸ್ ಅವರ 96 ನೇ ಪುಣ್ಯತಿಥಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

 ಜುಲೈ 7 ರಂದು, ಪುರಿಯಲ್ಲಿ ಭಗವಾನ್ ಜಗನ್ನಾಥ ದೇವರ ಗುಂಡಿಚಾ ಜಾತ್ರೆಯಲ್ಲಿ (ರಥ ಉತ್ಸವ) ರಾಷ್ಟ್ರಪತಿಯವರು ಭಾಗವಹಿಸಲಿದ್ದಾರೆ 

ಜುಲೈ 8 , 2024 ರಂದು ರಾಷ್ಟ್ರಪತಿಯವರು ಉದಯಗಿರಿ ಗುಹೆಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಬಿಭೂತಿ ಕನುಂಗೋ ಕಾಲೇಜ್ ಆಫ್ ಆರ್ಟ್ ಅಂಡ್ ಕ್ರಾಫ್ಟ್ಸ್ ಮತ್ತು ಉತ್ಕಲ್ ಸಂಸ್ಕೃತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.  ಅದೇ ದಿನ, ಅವರು ಭುವನೇಶ್ವರ ಸಮೀಪದ ಹರಿದಮಾಡ ಗ್ರಾಮದಲ್ಲಿ ಬ್ರಹ್ಮ ಕುಮಾರಿಯರ ಡಿವೈನ್ ರಿಟ್ರೀಟ್ ಸೆಂಟರ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ‘ಸುಸ್ಥಿರತೆಗಾಗಿ ಜೀವನಶೈಲಿ’ ಅಭಿಯಾನವನ್ನು ಕೂಡಾ ಪ್ರಾರಂಭಿಸಲಿದ್ದಾರೆ.

ಜುಲೈ 9 , 2024 ರಂದು, ರಾಷ್ಟ್ರಪತಿಯವರು ಭುವನೇಶ್ವರದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಯ 13 ನೇ ಪದವಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

 

*****


(Release ID: 2031297) Visitor Counter : 91