ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ದಿಂದ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಕಂಪನಿಗಳೊಂದಿಗೆ ವಾರಂಟಿ ಸಂಬಂಧಿತ  ಸಮಸ್ಯೆಗಳ ಕುರಿತು ಚರ್ಚೆ


ಅಳವಡಿಕೆಯ ಅಗತ್ಯವಿರುವ ಉತ್ಪನ್ನಗಳಿಗೆ ಅಳವಡಿಸಿದ ದಿನಾಂಕ ಅಥವಾ ಖರೀದಿಯ ದಿನಾಂಕದಿಂದ ವಾರಂಟಿ ಎನ್ನುವುದು ಸಭೆಯ ಮುಖ್ಯ ಕಾರ್ಯಸೂಚಿಯಾಗಿತ್ತು.

ಎಲ್ಲಾ ಕಂಪನಿಗಳಿಂದ ಜಾಗತಿಕ ಉತ್ತಮ ಅಭ್ಯಾಸಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರಿಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಲು ಮುಖ್ಯ ಕಮಿಷನರ್, ಸಿಸಿಪಿಎ  ವಿಶೇಷ ಒತ್ತು ನೀಡಿದರು 

Posted On: 22 JUN 2024 4:52PM by PIB Bengaluru

ಖರೀದಿಯ ದಿನಾಂಕದ ಬದಲಿಗೆ ಅಳವಡಿಸಿದ ದಿನಾಂಕದಿಂದ ವಾರಂಟಿ ಅವಧಿಯನ್ನು ಪ್ರಾರಂಭಿಸುವ ವಿಷಯದ ಬಗ್ಗೆ ಚರ್ಚಿಸಲು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಎಲೆಕ್ಟ್ರಾನಿಕ್ ಉಪಕರಣ ತಯಾರಿಕಾ ಕಂಪನಿಗಳೊಂದಿಗೆ ಸಭೆ ನಡೆಸಿದ್ದು, ತಯಾರಕರು ನಿಗದಿಪಡಿಸಿದ ನೀತಿಗಳ ಪ್ರಕಾರ ವಾರಂಟಿ ಅವಧಿಯು ಖರೀದಿಯ ದಿನಾಂಕದಿಂದ ಪ್ರಾರಂಭವಾಗುತ್ತದೆ ಮತ್ತು ಅಳವಡಿಸಿದ ದಿನಾಂಕದಿಂದಲ್ಲ, ಗ್ರಾಹಕರು ತಮ್ಮ ಆವರಣದಲ್ಲಿ ಸ್ಥಾಪಿಸಿದ ಅಥವಾ ಅಳವಡಿಸಿದ ನಂತರ ಮಾತ್ರವೇ ಉತ್ಪನ್ನವನ್ನು ಬಳಸಲು ಪ್ರಾರಂಭಿಸುವುದರಿಂದ ವಾರಂಟಿ ಅವಧಿಯು ಕಡಿಮೆಯಾಗುತ್ತದೆ.

ಸಭೆಯ ಅಧ್ಯಕ್ಷತೆಯನ್ನು ಸಿಸಿಪಿಎ ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ ಅವರು ವಹಿಸಿದ್ದು ರಿಲಯನ್ಸ್ ರಿಟೇಲ್, ಎಲ್ ಜಿ,, ಪ್ಯಾನಾಸೋನಿಕ್, ಹೈಯರ್, ಕ್ರೋಮಾ ಮತ್ತು ಬಾಷ್ ಸೇರಿದಂತೆ ಪ್ರಮುಖ ಎಲೆಕ್ಟ್ರಾನಿಕ್ ಉಪಕರಣ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುಖ್ಯ ಆಯುಕ್ತ ಶ್ರೀಮತಿ ಖರೆ ಅವರ ಭಾಷಣದೊಂದಿಗೆ ಸಭೆಯು ಪ್ರಾರಂಭವಾಯಿತು. ಈ ವಿಷಯದ ಕುರಿತು ಮೂರು ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು, ಮೊದಲನೆಯದಾಗಿ, ಗ್ರಾಹಕರಿಗೆ ವಾರಂಟಿ ಅವಧಿಯ ಆರಂಭಿಕ ಹಂತದ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು, ಗ್ರಾಹಕರು ಉತ್ಪನ್ನವನ್ನು ಖರೀದಿಸಿದ ನಂತರ ವಾರಂಟಿ ವಿವರಗಳ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಬರಬಾರದು. ಎರಡನೆಯದಾಗಿ, ಭಾರತದಲ್ಲಿ ಜಾಗತಿಕ ಉತ್ತಮ ಅಭ್ಯಾಸಗಳನ್ನು ಅನುಸರಿಸಲಾಗಿದೆ ಎಂದು ಕಂಪನಿಗಳು ಖಚಿತಪಡಿಸಿಕೊಳ್ಳಬೇಕು. ಮೂರನೆಯದಾಗಿ, ವಾರಂಟಿ ಅವಧಿಗೆ ಸಂಬಂಧಿಸಿದ ಗ್ರಾಹಕರ ಕುಂದುಕೊರತೆಗಳನ್ನು ಪೂರ್ವಭಾವಿಯಾಗಿ ಮತ್ತು ತ್ವರಿತ ಗತಿಯಲ್ಲಿ ಪರಿಹರಿಸಬೇಕು.

ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಗಳ ವಿರುದ್ಧ ಗ್ರಾಹಕರನ್ನು ರಕ್ಷಿಸಲು,ಕಾಯಿದೆಯ ಸೆಕ್ಷನ್ 2(9) ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಗ್ರಾಹಕ ಹಕ್ಕುಗಳು, ಸರಕುಗಳು, ಉತ್ಪನ್ನಗಳು ಅಥವಾ ಸೇವೆಗಳ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಪರಿಶುದ್ಧತೆ, ಮಾನದಂಡ ಮತ್ತು ಬೆಲೆಯ ಬಗ್ಗೆ ಗ್ರಾಹಕರು ತಿಳಿದುಕೊಳ್ಳುವ ಹಕ್ಕನ್ನು ಒಳಗೊಂಡಿರುತ್ತದೆ. 

ಸಭೆಯಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳು ಸಾಮಾನ್ಯವಾಗಿ ಎರಡು ವರ್ಗಗಳಾಗಿರುತ್ತವೆ ಎಂದು ಚರ್ಚಿಸಲಾಯಿತು – ಉದಾಹರಣೆಗೆ ಯಾವುದೇ ಅಳವಡಿಕೆ ಅಥವಾ ಸ್ಥಾಪನೆಯ ಅಗತ್ಯವಿಲ್ಲದ ಇಸ್ಟ್ರೀ ಪೆಟ್ಟಿಗೆ, ಮೈಕ್ರೋವೇವ್ ಮುಂತಾದ 'ಪ್ಲಗ್-ಎನ್-ಪ್ಲೇ' ಉತ್ಪನ್ನಗಳು ಮತ್ತು ಹವಾನಿಯಂತ್ರಣಗಳು, ರೆಫ್ರಿಜರೇಟರ್ಗಳಂತಹ  ಅಳವಡಿಕೆ ಅಥವಾ ಸ್ಥಾಪನೆಯ ಅಗತ್ಯವಿರುವ ಉತ್ಪನ್ನಗಳು.

ವಾರಂಟಿ ಅವಧಿಯನ್ನು ಲೆಕ್ಕ ಹಾಕಬೇಕಾದ ದಿನಾಂಕವಾಗಿ ಅನುಸ್ಥಾಪನೆಯ ದಿನಾಂಕವನ್ನು ಹೊಂದುವ ಕಾರ್ಯಸಾಧ್ಯತೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಇದಲ್ಲದೆ, ಈ ಕಾರ್ಯವಿಧಾನದ ದುರುಪಯೋಗವನ್ನು ತಡೆಗಟ್ಟಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮರ್ಪಕವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಅನ್ವೇಷಿಸಬಹುದು ಎಂದು ಚರ್ಚಿಸಲಾಯಿತು.

ಸಭೆಯಲ್ಲಿ ಸ್ಥಾಪನೆಯ ದಿನಾಂಕವನ್ನು ವಾರಂಟಿ ಅವಧಿಯ ಪ್ರಾರಂಭದ ದಿನವನ್ನಾಗಿ ಪರಿಗಣಿಸುವ ಕಾರ್ಯಸಾಧ್ಯತೆಯ ಬಗ್ಗೆ ಚರ್ಚಿಸಲಾಯಿತು. ಜೊತೆಗೆ, ಈ ವ್ಯವಸ್ಥೆಯ ದುರುಪಯೋಗವನ್ನು ತಡೆಗಟ್ಟಲು ಮತ್ತು ಗ್ರಾಹಕರ ಹಿತಾಸಕ್ತಿಗಳ ಸಾಕಷ್ಟು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕಂಡುಹಿಡಿಯಬಹುದು ಎಂದು ಚರ್ಚಿಸಲಾಯಿತು.

ಗ್ರಾಹಕರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಪೂರ್ವಭಾವಿ ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಕಂಪನಿಗಳ ನಡುವೆ ಸಾಮಾನ್ಯ ಒಮ್ಮತವಿತ್ತು. ಎಲ್ಲಾ ಕಂಪನಿಗಳು ತಮ್ಮ ಅಭಿಪ್ರಾಯಗಳನ್ನು 15 ದಿನಗಳಲ್ಲಿ ಕಳುಹಿಸಲು ಕೋರಲಾಗಿದೆ.

 

*****

 



(Release ID: 2027961) Visitor Counter : 18