ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಂಐಎಫ್ಎಫ್ ಚಲನಚಿತ್ರೋತ್ಸವ-2024ರಲ್ಲಿ ಹೊಸ ಅಥವಾ ಚೊಚ್ಚಲ ಹೋರಾಟಗಳು ಮತ್ತು ವಿಜಯಗಳನ್ನು ಹಂಚಿಕೊಂಡ ಮಹಿಳಾ ಚಲನಚಿತ್ರ ನಿರ್ಮಾಪಕರು


'ಸಾಕ್ಷ್ಯಚಿತ್ರ ನಿರ್ಮಾಣದ ಮೂಲಕ ಮಹಿಳಾ ನಿರೂಪಣೆಗಳನ್ನು ಅನ್ವೇಷಿಸುವುದು' ವಿಷಯ ಕುರಿತು ಒಟ್ಟಾಗಿ ಚರ್ಚಿಸಿದ ಸೃಷ್ಟಿ ಲಖೇರಾ, ಫರಾ ಖಾತುನ್, ಪ್ರೇರಣಾ ಬಾರ್ಬರೂವಾ ಮತ್ತು ಇಸಾಬೆಲ್ಲೆ ಸಿಮಿಯೋನಿ

Posted On: 17 JUN 2024 8:17PM by PIB Bengaluru

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಎಂಐಎಫ್ಎಫ್)ವು 4 ಮೆಚ್ಚುಗೆ ಪಡೆದ ಮಹಿಳಾ ಚಲನಚಿತ್ರ ನಿರ್ಮಾಪಕರನ್ನು ಒಟ್ಟುಗೂಡಿಸಿ, ಒಳನೋಟವುಳ್ಳ ಸಂವಾದ ಕಲಾಪದಲ್ಲಿ "ಮಹಿಳಾ ನಿರ್ಮಾಪಕರ ಕಥೆ ಅನಾವರಣ: ಸಾಕ್ಷ್ಯಚಿತ್ರ ನಿರ್ಮಾಣದ ಮೂಲಕ ಮಹಿಳಾ ನಿರ್ಮಾಪಕರ ನಿರೂಪಣೆಗಳ ಅನ್ವೇಷಣೆ" ವಿಷಯ ಕುರಿತು ಚರ್ಚಿಸಿದರು. ಪ್ರಮುಖ ಸಾಕ್ಷ್ಯಚಿತ್ರ ನಿರೂಪಕಿ ಕ್ವೀನ್ ಹಜಾರಿಕಾ ಅವರು ನಡೆಸಿದ ಈ ಕಲಾಪದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ಸೃಷ್ಟಿ ಲಖೇರಾ, ಫರಾ ಖಾತುನ್, ಪ್ರೇರಣಾ ಬಾರ್ಬರೂವಾ ಮತ್ತು ನಿಪುಣ ಲೇಖಕಿ, ನಿರ್ಮಾಪಕಿ ಮತ್ತು ನಿರ್ದೇಶಕಿ ಇಸಾಬೆಲ್ಲೆ ಸಿಮಿಯೋನಿ ಭಾಗವಹಿಸಿದ್ದರು. ಸಂವಾದಕಾರರು ತಮ್ಮ ಕಲೆ, ಸಾಮಾಜಿಕ ಸಮಸ್ಯೆಗಳು ಮತ್ತು ಚಲನಚಿತ್ರೋದ್ಯಮದಲ್ಲಿ ಅವರು ಎದುರಿಸಿದ ಸವಾಲುಗಳು ಮತ್ತು ವಿಜಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಉತ್ತರಾಖಂಡ ಮೂಲದ ಸೃಷ್ಟಿ ಲಖೇರಾ, ಕಲ್ಲು ಒಡೆಯುವುದರಿಂದ ಹಿಡಿದು ಕವನ ಬರೆಯುವವರೆಗೆ ಮಹಿಳೆಯರಿಗೆ ಯಾವುದೂ ಅಸಾಧ್ಯವಲ್ಲ ಎಂದು ಒತ್ತಿ ಹೇಳಿದರು. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ಆಡಿಯೋಗ್ರಫಿ ಪ್ರಶಸ್ತಿಯನ್ನು ಗೆದ್ದ ಅವರ ಚೊಚ್ಚಲ ಸಾಕ್ಷ್ಯಚಿತ್ರ "ಏಕ್ ಥಾ ಗಾಂವ್", ಆಕೆಯ ತಂದೆಯ ಹಿಮಾಲಯದ ಹಳ್ಳಿಯ ಜೀವನವನ್ನು ಸೆರೆಹಿಡಿಯುತ್ತದೆ. ಅವರು ಚಿತ್ರೀಕರಣ ಪ್ರಾರಂಭಿಸಿದಾಗ ಕೇವಲ 7 ನಿವಾಸಿಗಳೊಂದಿಗೆ, ಸಾಕ್ಷ್ಯಚಿತ್ರವು 80 ವರ್ಷದ ಮಹಿಳೆ ಮತ್ತು 19 ವರ್ಷದ ಹುಡುಗಿಯ ಒಂಟಿ ಹಳ್ಳಿಯ ಜೀವನ ಮತ್ತು ದೂರವಾಗುತ್ತಿರುವ ನಗರ ಅಸ್ತಿತ್ವದ ನಡುವಿನ ಆಯ್ಕೆಯಲ್ಲಿ ಎದುರಿಸುತ್ತಿರುವ ಹೋರಾಟಗಳನ್ನು ಎತ್ತಿ ತೋರಿಸುತ್ತದೆ. ನಗರಕ್ಕೆ ತೆರಳುವ ಸವಲತ್ತು ಸಾಮಾನ್ಯವಾಗಿ ಪುರುಷರಿಗೆ ಸೇರುವುದರಿಂದ ಪರಿತ್ಯಕ್ತ ಹಳ್ಳಿಗಳಲ್ಲಿ ಹಿಂದುಳಿದವರು ಹೆಚ್ಚಾಗಿ ಮಹಿಳೆಯರು ಮತ್ತು ದಲಿತರೇ ಆಗಿದ್ದಾರೆ ಎಂದು ಲಖೇರಾ ಗಮನ ಸೆಳೆದರು. "ಮಹಿಳೆಯರು ತಮ್ಮ ಸ್ವಂತ ಹಣ ಸಂಪಾದಿಸಲು ಬಯಸುತ್ತಾರೆ, ಆದರೆ ಅವರಿಗೆ ಅಲ್ಲಿ ಆಯ್ಕೆಯಿಲ್ಲ" ಎಂದು ನಿರ್ಮಾಪಕಿ ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ವೇದಿಕೆಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯ ಕುರಿತು ಅವರು ಪ್ರಸ್ತಾಪಿಸಿದರು. ಸಂಗೀತ ಸಾಲು ಬರೆಯಲು, ರೆಕಾರ್ಡ್ ಮಾಡಲು ಮತ್ತು ಮಿಶ್ರಣ ಮಾಡಲು ಸ್ವಯಂ ಕಲಿಯುವ ದೂರದ ಹಳ್ಳಿಗಳಿಂದ ವಿನಮ್ರ ಹಿನ್ನೆಲೆಯಿಂದ ಬಂದ ಯುವ ಹಿಪ್ ಹಾಪ್ ಕಲಾವಿದರ ಸ್ಫೂರ್ತಿದಾಯಕ ಉದಯವನ್ನು ಅವರು ಪ್ರಸ್ತಾಪಿಸಿದರು.

ಇಸಾಬೆಲ್ಲೆ ಸಿಮಿಯೋನಿ ಅವರು ಲಿಂಗ ಸಮಾನತೆ ಸಾಧಿಸುವ ಸವಾಲುಗಳ ಬಗ್ಗೆ ಮಾತನಾಡಿದರು, ಅವರ ಕಥಾ ಹಂದರದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಗಮನ ಸೆಳೆದರು. ಮಹಿಳಾ ಚಲನಚಿತ್ರ ನಿರ್ಮಾಪಕರು ಎದುರಿಸುತ್ತಿರುವ ತೊಂದರೆಗಳನ್ನು ಅವರು ಎತ್ತಿ ತೋರಿಸಿದರು. ಮಹಿಳೆಯರು ನಿರ್ಮಿಸಿದ ಚಲನಚಿತ್ರಗಳು ಪ್ರೇಕ್ಷಕರನ್ನು ತಲುಪುವುದಿಲ್ಲ ಎಂಬ ಭಯ ಮತ್ತು ಹಣಕಾಸಿನ ಪರಿಣಾಮಗಳ ಬಗ್ಗೆ ಪ್ರಸ್ತಾಪಿಸಿದ ಸಿಮಿಯೋನಿ, ಮುಂಬರುವ ಚಲನಚಿತ್ರ ನಿರ್ಮಾಪಕರಿಗೆ ಸಲಹೆ ನೀಡಿದಂತೆ, “ಸೆಟ್‌ನಲ್ಲಿಯೂ ಸಹ, ನೀವು ಸಿಬ್ಬಂದಿಗೆ ಆತ್ಮವಿಶ್ವಾಸ ಉಂಟುಮಾಡಬೇಕು. ನಾವು ವೃತ್ತಿಪರರಾಗಿರಬೇಕು, ನಾವು ಪರದೆಯ ಮೇಲೆ ನೋಡಲು ಬಯಸುವ ವಿಷಯಗಳಿಗಾಗಿ ಹೋರಾಡಬೇಕು” ಎಂದರು.

 

 

ಈಶಾನ್ಯದ ಜನಪ್ರಿಯ ನಿರ್ದೇಶಕಿ, ಲೇಖಕಿ, ನಟಿ ಮತ್ತು ರೂಪದರ್ಶಿ ಪ್ರೇರಣಾ ಬಾರ್ಬರೂಹ್ ಅವರು 50ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಮೇಘಾಲಯದ ಮಾತೃಪ್ರಧಾನ ಸಮಾಜದಿಂದ ಪ್ರೇರಿತವಾದ ಆಕೆಯ ಮೊದಲ ಚಿತ್ರವು ಆಕೆಯ ಪಿತೃಪ್ರಭುತ್ವದ ಪಾಲನೆಗೆ ವ್ಯತಿರಿಕ್ತವಾಗಿದೆ. ಅವರ ಸಾಕ್ಷ್ಯಚಿತ್ರದಲ್ಲಿ, ಮಾತೃಪ್ರಧಾನ ಬುಡಕಟ್ಟು ಜನಾಂಗಗಳಲ್ಲಿ ವಿಶಿಷ್ಟವಾದ ಸಾಮಾಜಿಕ ಪಾತ್ರಗಳನ್ನು ಪರಿಶೋಧಿಸಿದ್ದಾರೆ. 36 ನಿಮಿಷಗಳ ಚಲನಚಿತ್ರದಲ್ಲಿ 36 ಗಂಟೆಗಳ ತುಣುಕನ್ನು ಸೆರೆಹಿಡಿದಿದ್ದಾರೆ. ಮೇಘಾಲಯದ ಬುಡಕಟ್ಟು ಸಮಾಜದಲ್ಲಿ ರೂಢಿಯಲ್ಲಿರುವ ಪತ್ನಿಯರ ಮನೆಗಳಲ್ಲಿ ವಾಸಿಸುವ ಪುರುಷರ ಅಥವಾ ಗಂಡಂದಿರ ಬಗ್ಗೆ ಬಾರ್ಬರೂವಾ ತನ್ನ ಆಕರ್ಷಣೆಯನ್ನು ವ್ಯಕ್ತಪಡಿಸಿದ್ದಾರೆ.

ಚಲನಚಿತ್ರ ನಿರ್ಮಾಪಕಿ ಮತ್ತು ಸಂಪಾದಕಿ ಫರಾ ಖಾತುನ್ ಅವರು ತಮ್ಮ ಸಾಕ್ಷ್ಯಚಿತ್ರಗಳಲ್ಲಿ ಲಿಂಗ, ಪಿತೃಪ್ರಭುತ್ವ ಮತ್ತು ಧಾರ್ಮಿಕ ಕೋಮುವಾದದ ವಿಷಯಗಳನ್ನು ಪರಿಶೀಲಿಸಿದ್ದಾರೆ. ಭಾರತದಲ್ಲಿ ಮಹಿಳಾ ಸಾಕ್ಷ್ಯಚಿತ್ರ ನಿರ್ಮಾಪಕರ ಗಮನಾರ್ಹ ಉಪಸ್ಥಿತಿಯನ್ನು ಅವರು ಎತ್ತಿ ತೋರಿಸಿದರು. ಹಿಂದಿನ ಚಲನಚಿತ್ರ ವಿಭಾಗ ಮತ್ತು ಪ್ರಸ್ತುತ ಎನ್ ಡಿಎಫ್ ಸಿ ಒದಗಿಸಿದ ಬೆಂಬಲವನ್ನು ಅವರು ಶ್ಲಾಘಿಸಿದರು. ಈ ಸರ್ಕಾರಿ ಬೆಂಬಲವು ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ಪ್ರಮುಖವಾದ ಪ್ರೋತ್ಸಾಹ ಮತ್ತು ವಿಶ್ವಾಸವನ್ನು ನೀಡುತ್ತದೆ, ವೃತ್ತಿಜೀವನ ಪ್ರಾರಂಭಿಸಲು ಮತ್ತು ಉಳಿಸಿಕೊಳ್ಳಲು ನಿರ್ಮಾಪಕಿಯರಿಗೆ ಇದು ಸಹಾಯ ಮಾಡುತ್ತದೆ ಎಂದರು.

 

*****



(Release ID: 2026383) Visitor Counter : 15