ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಎಂಐಎಫ್ಎಫ್ ನಲ್ಲಿ “ಮಾನವ(ಆಂಥ್ರೊಪೊಸೀನ್) ಯುಗ ಮತ್ತು ಮಾನವ-ಪ್ರಕೃತಿ ಸಂಬಂಧದ ಒಳನೋಟ” ಕುರಿತು ಕಲಾಪ ಆಯೋಜನೆ


ಪ್ರಕೃತಿ ನಾಶವಾಗುತ್ತಿರುವಾಗ ನಾವು ಮುಳುಗಲು ಸಾಧ್ಯವಿಲ್ಲ: "ಮೈ ಮರ್ಕ್ಯುರಿ" ನಿರ್ದೇಶಕಿ ಜೊಯೆಲ್ಲೆ ಚೆಸ್ಸೆಲೆಟ್

ನಿಜವಾದ ಮಾನವ-ಪ್ರಕೃತಿ ಸಂಬಂಧ ಕಂಡುಹಿಡಿಯುವುದು ದೇವರನ್ನು ಕಂಡುಕೊಂಡಂತೆ: ಜೋಯೆಲ್ ಚೆಸ್ಸೆಲೆಟ್

Posted On: 17 JUN 2024 7:23PM by PIB Bengaluru

“ಪ್ರಕೃತಿ ನಾಶವಾಗುತ್ತಿರುವಾಗ ಅದರಿಂದ ನಾವು ಅಸ್ತವ್ಯಸ್ತರಾಗಲು ಸಾಧ್ಯವೇ ಇಲ್ಲ. ನಿಸರ್ಗವು ವಿನಾಶದ ಅಂಚಿನಲ್ಲಿರುವಾಗ, ಮಾನವನ ಅಸಡ್ಡೆ ಅಪಾಯಗಳಿಂದಾಗಿ ನಾವು ದುರ್ಬಲರಾಗಲು ಅಥವಾ ಕ್ಷೀಣಿಸಲು ಸಾಧ್ಯವಿಲ್ಲ" ಎಂದು 'ಮೈ ಮರ್ಕ್ಯುರಿ' ನಿರ್ದೇಶಕಿ ಜೊಯೆಲ್ಲೆ ಚೆಸ್ಸೆಲೆಟ್ ತಿಳಿಸಿದರು. "ಮಾನವ ಯುಗದಲ್ಲಿ ಪ್ರಕೃತಿ ವಿನಾಶದಲ್ಲಿರುವಾಗ, ಕ್ಷೀಣಿಸಲು ಇನ್ನೂ ಸಮಯವಿದೆಯೇ" ಎಂಬ ವಿಷಯದ ಮೇಲಿನ ಸಂವಾದ ಕಲಾಪದಲ್ಲಿ ಅವರು ಮಾತನಾಡಿದರು. 18ನೇ ಮುಂಬೈ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌(ಎಂಐಎಫ್ಎಪ್)ನಲ್ಲಿ ಚೊಚ್ಚಲ ಪ್ರದರ್ಶನ ಕಂಡ ಆಕೆಯ ಪರಿಸರ-ಮಾನಸಿಕ ಸಾಕ್ಷ್ಯಚಿತ್ರ ಆಧರಿಸಿದ ಸಂವಾದ ಕಲಾಪ ಉದ್ದೇಶಿಸಿ ಅವರು ಮಾತನಾಡಿದರು.

 

ತನ್ನ ಚಲನಚಿತ್ರ ಕುರಿತು ಮಾತನಾಡಿದ ಅವರು, 104-ನಿಮಿಷಗಳ ಸಾಕ್ಷ್ಯಚಿತ್ರವು ಯೆವ್ಸ್ ಚೆಸ್ಸೆಲೆಟ್, ಆಕೆಯ ಸಹೋದರ ಮತ್ತು ಮರ್ಕ್ಯುರಿ ದ್ವೀಪದ ಸಂರಕ್ಷಣೆಯ ಅವನ ಪ್ರಯತ್ನಗಳ ಅಸಾಮಾನ್ಯ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತದೆ. ಅಲ್ಲಿ ಸಮುದ್ರ ಪಕ್ಷಿಗಳು ಮತ್ತು ನೀರು ನಾಯಿ(ಸೀಲು)ಗಳು ಅವನ ಏಕೈಕ ಸಹಚರರಾಗಿರುತ್ತವೆ. ಚಲನಚಿತ್ರವು ಅಳಿವಿನಂಚಿನಲ್ಲಿರುವ ಕಡಲ ಪಕ್ಷಿಗಳು ಮತ್ತು ಇತರ ವನ್ಯಜೀವಿಗಳು ನೀರು ನಾಯಿಗಳಿಂದ ಅಸ್ತಿತ್ವವಾದದ ಬೆದರಿಕೆಗಳನ್ನು ಎದುರಿಸುತ್ತಿದೆ. "ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ದ್ವೀಪವನ್ನು ಮರುಪಡೆಯಲು ಆತನ ಧೈರ್ಯಶಾಲಿ ಕಾರ್ಯಾಚರಣೆಯ ತ್ಯಾಗ, ವಿಜಯ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಬೆಸೆದ ಆಳವಾದ ಬಂಧಗಳ ಆಕರ್ಷಕ ಕಥೆಯಾಗಿ ತೆರೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.

ಇದು ಮಾನವರ ಸಂಕೀರ್ಣ ಮನೋವಿಜ್ಞಾನ ಮತ್ತು ಪ್ರಕೃತಿಯೊಂದಿಗೆ ನಮ್ಮ ಉಲ್ಲಾಸಕರ ಸಂಬಂಧವನ್ನು ಪರಿಶೋಧಿಸುತ್ತದೆ. "ನಿಜವಾದ ಮಾನವ-ಪ್ರಕೃತಿಯ ಸಂಬಂಧವನ್ನು ಕಂಡುಹಿಡಿಯುವುದು ದೇವರನ್ನು ಕಂಡುಕೊಂಡಂತೆ" ಎಂದು ಜೋಯೆಲ್ ಭಾವನಾತ್ಮಕವಾಗಿ ತಿಳಿಸಿದರು.

ಫಿಲ್ಮ್ ನಲ್ಲಿ ಚಿತ್ರಿಸಿದಂತೆ ಪರಿಸರ ಸಮತೋಲನದಲ್ಲಿ ಮಾನವ ಮತ್ತು ಮಾನವೇತರ ಪರಸ್ಪರ ಕ್ರಿಯೆಗಳ ನಡುವಿನ ಸಂಕೀರ್ಣ ಸಂಬಂಧವನ್ನು ಒತ್ತಿ ಹೇಳಿದ ಅವರು, "ಇದು ಭರವಸೆ, ತ್ಯಾಗ ಮತ್ತು ರೂಪಾಂತರದ ಕಥೆ. ಈ ಚಿತ್ರಗಳಲ್ಲಿರುವುದೆಲ್ಲವೂ ನೈಜ ಘಟನೆಗಳಾಗಿವೆ” ಎಂದು ಪ್ರತಿಪಾದಿಸಿದರು.

ಚಲನಚಿತ್ರದ ದಕ್ಷಿಣ ಆಫ್ರಿಕಾ ನಿರ್ದೇಶಕ, ಸಂಗೀತ ನಿರ್ಮಾಪಕ ಮತ್ತು ಛಾಯಾಗ್ರಾಹಕ ಲಾಯ್ಡ್ ರಾಸ್ ಚಿತ್ರದ ಸುದೀರ್ಘ ಶೂಟಿಂಗ್ ಅವಧಿಯಲ್ಲಿ ಎದುರಿಸಿದ ಸವಾಲುಗಳ ಒಳನೋಟಗಳನ್ನು ಹಂಚಿಕೊಂಡರು.

ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಕಥೆಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟ ಶಂಕರ್ ರಾಮಕೃಷ್ಣನ್ ಅವರು ಸಂವಾದ ಕಲಾಪ ನಿರ್ವಹಿಸಿದರು.

ಚರ್ಚೆಯು ಮಾನವ ಯುಗದಲ್ಲಿ ಕಾಡುವ ಸಮಸ್ಯೆಗಳು, ಮಾನವರು ಮತ್ತು ಪ್ರಕೃತಿಯ ನಡುವಿನ ಗಾಢವಾದ ಸಂಪರ್ಕಗಳ ಚಿಂತನೆ-ಪ್ರಚೋದಕ ಪರೀಕ್ಷೆಯನ್ನು ಒಡ್ಡಿತು.

 

*****

 



(Release ID: 2026382) Visitor Counter : 13