ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದ ಪ್ರಗತಿ ಮುಂದುವರಿಸಲು ಮೊದಲ 100 ದಿನಗಳ ಕ್ರಿಯಾಯೋಜನೆ; ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ (ಸ್ವತಂತ್ರ ಖಾತೆ) ಅಧಿಕಾರ ವಹಿಸಿಕೊಂಡ ಡಾ. ಜಿತೇಂದ್ರ ಸಿಂಗ್ ಹೇಳಿಕೆ


ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ನಾಯಕತ್ವ ನೀಡಲು ಪ್ರಧಾನಿ ಮೋದಿ ನೇತೃತ್ವದ ಭಾರತ ಮುಂಚೂಣಿ ರಾಷ್ಟ್ರವಾಗಿದೆ: ಡಾ. ಜಿತೇಂದ್ರ ಸಿಂಗ್

ನಾಗರಿಕರಿಗೆ ಸುಲಭವಾಗಿ ಬದುಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಾಸ್ತವವಾಗಿ ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾದರು: ಡಾ. ಸಿಂಗ್

ಜೈವಿಕ-ಆರ್ಥಿಕತೆ, ನೀಲಿ-ಆರ್ಥಿಕತೆ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ನಾವೀನ್ಯತೆ ಆದ್ಯತೆಯಾಗಿ ಉಳಿಯಲಿದೆ

Posted On: 11 JUN 2024 7:29PM by PIB Bengaluru

ಡಾ. ಜಿತೇಂದ್ರ ಸಿಂಗ್ ಅವರು ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್) ಕೇಂದ್ರ ಕಚೇರಿಯಲ್ಲಿಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ(ಸ್ವತಂತ್ರ ಖಾತೆ) ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಡಾ. ಜಿತೇಂದ್ರ ಸಿಂಗ್ ಅವರು 6 ವಿಜ್ಞಾನ ಸಚಿವಾಲಯಗಳು, ಇಲಾಖೆಗಳು ಮತ್ತು ಅವರ ಕಾರ್ಯದರ್ಶಿಗಳ ಜಂಟಿ ಸಭೆ ನಡೆಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮೊದಲ 100 ದಿನಗಳ ಕ್ರಿಯಾಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದರು.


"ಮೊದಲ 100 ದಿನಗಳ ಕ್ರಿಯಾಯೋಜನೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಪ್ರಗತಿಯನ್ನು ಮುಂದುವರಿಸುವ ಉದ್ದೇಶ ಹೊಂದಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.

ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, “ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತಿಗೆ ನಾಯಕತ್ವ ನೀಡಲು ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ ಎಂದರು.

"ಪ್ರಧಾನಿ ಮೋದಿ ನಾಯಕತ್ವದ ಅಡಿ, ಕಳೆದ 10 ವರ್ಷಗಳಲ್ಲಿ ಸ್ಟಾರ್ಟಪ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದು 2014ರಲ್ಲಿ ಇದ್ದ 350 ಸ್ಟಾರ್ಟಪ್‌(ನವೋದ್ಯಮ)ಗಳಿಂದ ಹಿಡಿದು 2024ರ ಹೊತ್ತಿಗೆ 1.5 ಲಕ್ಷಕ್ಕೆ ಏರಿಕೆ ಕಂಡಿದೆ. ಅದಲ್ಲದೆ, 110ಕ್ಕೂ ಹೆಚ್ಚು ಯುನಿಕಾರ್ನ್‌ಗಳ ಉದಯದೊಂದಿಗೆ ಸ್ಪಷ್ಟವಾಗಿದೆ" ಎಂದು ಡಾ. ಜಿತೇಂದ್ರ ಸಿಂಗ್ ಅವರು ಅಂಕಿ ಅಂಶಗಳನ್ನು ನೀಡಿದರು.

ಜೈವಿಕ ಆರ್ಥಿಕತೆಯು ಹಲವು ಪಟ್ಟು ಹೆಚ್ಚಾಗಿದ್ದು, ಈ ಅವಧಿಯಲ್ಲಿ ಪ್ರಗತಿ ಮುಂದುವರಿದಿದೆ.

ರಸ್ತೆ ನಿರ್ಮಾಣ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಚಾಲಿತ ಹೆಲ್ತ್‌ಕೇರ್‌ನಂತಹ ಆವಿಷ್ಕಾರದ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಪ್ರಧಾನಿ ಮೋದಿ ಅವರ ಪ್ರೋತ್ಸಾಹವು ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿದೆ ಎಂದು ಡಾ. ಸಿಂಗ್ ಪ್ರಸ್ತಾಪಿಸಿದರು.

2047 ಪ್ರಾರಂಭವಾದಾಗ ಭಾರತವು ಮುಂದಿನ 20 ವರ್ಷಗಳ ಕಾಲ ಈ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ನಾವೀನ್ಯತೆಗಳು ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಲಿವೆ.

ಸರ್ಕಾರವು ತನ್ನ 2ನೇ ಆಡಳಿತ ಅವಧಿಯ ಅಂತ್ಯದ ವೇಳೆಗೆ ಅನುಸೂಧನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್(ಎನ್‌ಆರ್‌ಎಫ್) ಕಾನೂನು ಅಥವಾ ಶಾಸನವನ್ನು ಪರಿಚಯಿಸಿತು, ಇದು ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಸಚಿವರು ಸ್ಪಷ್ಟವಾಗಿ ಉಲ್ಲೇಖಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದ ಸಚಿವರು, "ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವೀ ಲ್ಯಾಂಡಿಂಗ್ ಮತ್ತು ಬಾಹ್ಯಾಕಾಶಕ್ಕೆ ಚೊಚ್ಚಲ ಮಾನವ ನೌಕೆ “ಗಗನಯಾನ ಮಿಷನ್” ಕಳಿಸಿದ ಬಾಹ್ಯಾಕಾಶದಲ್ಲಿನ ಸಾಧನೆಗಳಿಂದಾಗಿ ಭಾರತದ ಸ್ಥಿರವಾದ ಪ್ರಗತಿಯಿಂದ ದೇಶದ ಗೌರವ ಹೆಚ್ಚಿದೆ" ಎಂದು ಹೇಳಿದರು.

ನಮಗೆ ದೇಶದಲ್ಲಿ ವೈಜ್ಞಾನಿಕ ಕುಶಾಗ್ರಮತಿಗೆ ಕೊರತೆಯಿಲ್ಲ, ಸರ್ಕಾರದ ಗಮನಕ್ಕೆ ಒತ್ತು ನೀಡುವ ನೀತಿ ರೂಪಿಸುವ ಕಡೆಯಿಂದ ಬದ್ಧತೆಯ ಕೊರತೆಯಿದೆ ಎಂದು ಸಚಿವರು ತಿಳಿಸಿದರು.

ಜೈವಿಕ ಆರ್ಥಿಕತೆ, ನೀಲಿ ಆರ್ಥಿಕತೆ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ನಾವೀನ್ಯತೆಯೇ ನಮಗೆ ಆದ್ಯತೆಯಾಗಿ ಉಳಿಯುತ್ತದೆ ಎಂದು ಡಾ. ಸಿಂಗ್ ವಿವರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಕೇಂದ್ರ ಸಚಿವರು ಪರಾಮರ್ಶೆ ಸಭೆ ನಡೆಸಿದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಅಜಯ್ ಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ್ ಕರಂಡಿಕರ್, ಇಸ್ರೋ ಮತ್ತು ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿಗಳೊಂದಿಗೆ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ ಉಪಸ್ಥಿತರಿದ್ದರು.

ಡಾ. ಜಿತೇಂದ್ರ ಸಿಂಗ್ ಅವರು 100 ದಿನಗಳ ಪ್ರಧಾನ ಮಂತ್ರಿ ಕ್ರಿಯಾಯೋಜನೆ ಕುರಿತು ಹಿರಿಯ ಅಧಿಕಾರಿಗಳಿಗೆ ಜಾಗೃತಿ ಮೂಡಿಸಿದರು. ದೇಶದ ಪ್ರಗತಿಯಲ್ಲಿ ಅದರ ದಕ್ಷತೆ ಮತ್ತು ಕೊಡುಗೆಯನ್ನು ಹೆಚ್ಚಿಸಲು ಸಿಎಸ್‌ಐಆರ್ ನವೀಕರಿಸುವ ಯೋಜನೆಗಳ ಕುರಿತು ಅವರು ಚರ್ಚಿಸಿದರು.

*****



(Release ID: 2024714) Visitor Counter : 30