ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನ್ಯಾಷನಲ್ ಏರೋಸ್ಪೇಸ್ ಲಿಮಿಟೆಡ್ (ಎನ್ಎಎಲ್) ಸೌಲಭ್ಯಗಳಿಗೆ ಭೇಟಿ ನೀಡಿದ ಮತ್ತು ಬೆಂಗಳೂರಿನಲ್ಲಿ ಕಾರ್ಬನ್ ಫೈಬರ್ ಮತ್ತು ಪ್ರಿಪ್ರೆಗ್ಸ್ ಕೇಂದ್ರದ ಶಂಕುಸ್ಥಾಪನೆ ಮಾಡಿದ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಮಾಡಿದ ಭಾಷಣದ ಆಯ್ದ ಭಾಗಗಳು 

Posted On: 27 MAY 2024 7:17PM by PIB Bengaluru

ನಿಮಗೆ ಅಭಿನಂದನೆಗಳು. ಕಳೆದ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ, ನಾನು ಉತ್ಸಾಹಭರಿತನಾಗಿದ್ದೇನೆ, ಹುರುಪುಗೊಂಡಿದ್ದೇನೆ ಮತ್ತು ಪ್ರೇರೇಪಿತನಾಗಿದ್ದೇನೆ. ಭಾರತವು ಭರವಸೆ ಮತ್ತು ಸಾಧ್ಯತೆಯ ತಾಣ ಎಂದು ನಾನು ವಾಸ್ತವವನ್ನು ಕಂಡು ಹೇಳುತ್ತಿದ್ದೇನೆ. ಹಾಗೆಯೇ, ಇಲ್ಲಿ ನಮ್ಮ ಭವಿಷ್ಯದ ದೃಷ್ಟಿಕೋನವು ರೂಪುಗೊಳ್ಳುತ್ತಿದೆ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಇದು ಪ್ರಯೋಗಾಲಯ, ಇಲ್ಲಿ ಅದ್ಭುತಗಳು ನಡೆಯುತ್ತಿರುವ ಮೂಸೆ. ಭೌತಶಾಸ್ತ್ರದ ವಿದ್ಯಾರ್ಥಿಯಾಗಿ, ನನಗೆ ತೀವ್ರ  ಸಂತೋಷವಾಗುತ್ತಿದೆ.

 


ಈ ಅಮೃತ ಕಾಲದಲ್ಲಿ ಭಾರತದ ನವೋದಯವನ್ನು ಕಾಣುತ್ತಿದ್ದೇವೆ. ಬೆಳವಣಿಗೆಯನ್ನು ತಡೆಯಲಾಗದು, ಬೆಳವಣಿಗೆಯು ಹೆಚ್ಚಾಗುತ್ತಿರುವುದು ಆದರೆ ನೀವು ಇಲ್ಲಿ ಸಾಧಿಸುತ್ತಿರುವ  ಬೆಳವಣಿಗೆಯು ಜಗತ್ತು ಗಮನಿಸುತ್ತಿರುವ ಬೆಳವಣಿಗೆಯಾಗಿದೆ. ನಾವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ  ಒಬ್ಬರಾಗಲಿದ್ದೇವೆ.

ಯಾವುದೇ ದೇಶ ಮಾಡದಂತಹ ನವೀನ ತಂತ್ರಜ್ಞಾನಗಳತ್ತ ಗಮನಹರಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಜಗತ್ತಿನ ಐದಾರು ದೇಶಗಳು ಮಾತ್ರ ಅದರತ್ತ ಗಮನ ಹರಿಸುತ್ತಿವೆ. ನಿಮಗೆಲ್ಲರಿಗೂ ಹೆಚ್ಚಿನ ಅರಿವನ್ನು ನೀಡುವ ನಮ್ಮ ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ.

ಸರ್ಕಾರ ಈಗಾಗಲೇ ಅನುದಾನ ನೀಡಿದೆ. ನಾವು ಇತರ ನವೀನ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಮತ್ತು ಅವುಗಳು ಇಲ್ಲಿಯೂ ಸಹ ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ. ಯಂತ್ರ ಕಲಿಕೆ, ಬ್ಲಾಕ್ ಚೈನ್, ಕೃತಕ ಬುದ್ಧಿಮತ್ತೆ,   ಇಂಟರ್ನೆಟ್ ಗೆ ಸಂಬಂಧಿಸಿದ ಉಪಕರಣಗಳು.

ಸಾಮಾನ್ಯವಾಗಿ ಕಾಣುವಾಗ, ಈ ತಂತ್ರಜ್ಞಾನಗಳು ಸವಾಲನ್ನು ಒಡ್ಡುತ್ತವೆ. ಆದರೆ ನಿಮಗೆ, ಈ ಸವಾಲುಗಳೇ ಅವಕಾಶಗಳಾಗಿವೆ. ನೀವು ನಮ್ಮ ಪ್ರಭಾವಶಾಲಿ ಮನಸ್ಸಿನ ನಮ್ಮ ಯುವಕರುಗಳಿಗೆ ಅವಕಾಶಗಳನ್ನು    ಹೆಚ್ಚಿಸುತ್ತಿದ್ದೀರಿ.

ಸ್ನೇಹಿತರೇ, ಈ ಸಂಸ್ಥೆಯು ವಿಮಾನಯಾನ ಕ್ಷೇತ್ರಕ್ಕೆ ಮತ್ತು ಅದರಾಚೆಗೂ ಗಣನೀಯವಾಗಿ ಕೊಡುಗೆ ನೀಡುವ ಸಂಶೋಧನೆ ಮತ್ತು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಕಳೆದ ಎರಡು ವರ್ಷಗಳಲ್ಲಿ, ಭಾರತದ ಬಾಹ್ಯಾಕಾಶ ಸಾಧನೆಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ರಕ್ಷಣಾ ಕ್ಷೇತ್ರದಲ್ಲಿ ಮತ್ತು ಚಂದ್ರಯಾನ-3 ನಂತಹ ಯೋಜನೆಗಳಲ್ಲಿಯೂ ಸಹ. ಇದೆಲ್ಲವೂ ಒಂದು ಸಂಸ್ಥೆಯ ಕೆಲಸವಲ್ಲ, ಹಲವಾರು ಸಂಸ್ಥೆಗಳು ಒಟ್ಟಾಗಿ ಇದಕ್ಕೆ ಕೊಡುಗೆ ನೀಡಿದೆ ಎಂದು ನಾನು ಈಗ ಅರಿತುಕೊಂಡೆ.

ವಿಂಡ್ ಟನಲ್ ಸೌಲಭ್ಯ... ನನಗೆ ಅದರ ಬಗ್ಗೆ ಸ್ವಲ್ಪ ಸಾಧಾರಣ ತಿಳುವಳಿಕೆ ಇರುವುದರಿಂದ, ನಾನು ಪುಳಕಿತಗೊಂಡೆ. ಏನಾಗಲಿದೆ ಎಂದು ನಾನು ಕಾಣಬಲ್ಲೆ. ನಾನು ನಿರ್ದೇಶಕರನ್ನು ಕೇಳಿದೆ, ನಾವು ಉನ್ನತ ಗುಂಪಿನಲ್ಲಿರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?  ಎಂದು . ಸರಿ, ಹಲವು ವರ್ಷಗಳಲ್ಲ. 

ಆರಂಭದಿಂದಲೂ, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ದೂರದೃಷ್ಟಿಯ ನಾಯಕತ್ವವು ಭವಿಷ್ಯದ ಆಡಳಿತ ನೀತಿಗಳನ್ನು ಒದಗಿಸಿದೆ. ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದ ಬಗ್ಗೆ ಜಾಗತಿಕ ಜ್ಞಾನವನ್ನು ಹೊಂದಿದ್ದ  ಭಾರತವು ತನ್ನ ಗತ ವೈಭವವನ್ನು ಮರಳಿ ಪಡೆಯಲಿದೆ.

ವಿಂಡ್ ಟನಲ್ ಸೌಲಭ್ಯ, ಅದೊಂದು ಇಂಜಿನಿಯರಿಂಗ್ ವಿಸ್ಮಯ, ನೀವು ನೋಡಿದಾಗ ಸರಳವಾಗಿ ಕಾಣುತ್ತದೆ, ಆದರೆ ಅದು ಕಾರ್ಯನಿರ್ವಹಿಸುತ್ತಿದ್ದಾಗ, ಇಡೀ ದೇಹವು ರೋಮಾಂಚನಗೊಳ್ಳುತ್ತದೆ, ಕೆಲಸ ಎಷ್ಟು ಸವಾಲಿನದ್ದಾಗಿದೆ, ಅವು ಹೇಗೆ ಜೊತೆಯಾಗಿವೆ, ನಾವು ನೋಡುತ್ತಿರುವ ಚಂದ್ರಯಾನ-3 ಸೇರಿದಂತೆ ಎಲ್ಲ ಯೋಜನೆಗಳ ಯಶಸ್ಸಿನಲ್ಲಿ ಗಮನಾರ್ಹ ಪಾಲುದಾರರಾಗಿದ್ದಾರೆ ಎಂಬುದನ್ನು ಊಹಿಸಬಹುದು.  

ಆಧುನಿಕ ಯುಗವು ಪರಿವರ್ತನೆಯ ಕ್ರಾಂತಿಕಾರಿ ಬದಲಾವಣೆಗಳಿಂದ ಗುರುತಿಸಲ್ಪಟ್ಟಿದೆ. ಶಿಕ್ಷಣವು ಬದಲಾವಣೆಯ ಅತ್ಯಂತ ಪ್ರಭಾವಶಾಲಿ ವಹಿವಾಟು ಕಾರ್ಯವಿಧಾನವಾಗಿದೆ ಎಂಬ ನಮ್ಮ ಆಲೋಚನಾ ಪ್ರಕ್ರಿಯೆಗೆ ನಾನು ದೃಢವಾಗಿ ಬದ್ಧನಾಗಿದ್ದೇನೆ. ಇದು ಸಮಾನತೆಯನ್ನು ಗೌರವಿಸುವ ಬದಲಾವಣೆಯನ್ನು ತರುತ್ತದೆ, ಅಸಮಾನತೆಗಳನ್ನು ನಿವಾರಿಸುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ, ಮತ್ತು ಅದಕ್ಕೂ ಮೀರಿ, ಮತ್ತು ಈ ಸಮಯದ ಅವಶ್ಯಕತೆ ಏನೆಂದರೆ, ಅದು ತಾಂತ್ರಿಕ ಪ್ರಗತಿ.
 

 


 
ಇಂದು ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲಿಮಿಟೆಡ್ ನಲ್ಲಿರುವ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್.

ತಾಂತ್ರಿಕ ಪ್ರಗತಿಯಲ್ಲಿ ಹೂಡಿಕೆ ಮಾಡುವ ದೇಶವು ಸುರಕ್ಷಿತ ಗಡಿಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಯುದ್ಧದ ದಿನಗಳು ಎಂದೋ ಹೋಗಿವೆ. ನನ್ನ ಮುಂದೆ ಸೈನಿಕರು ಇದ್ದಾರೆ. ಯುದ್ಧದ ಬದಲಾಗುತ್ತಿರುವ ತಂತ್ರಗಾರಿಕೆ  ಅವರಿಗೆ ತಿಳಿದಿದೆ. ಇದು ಸಾಂಪ್ರದಾಯಿಕ ಯುದ್ಧವನ್ನು ಮೀರಿದೆ. ನಮ್ಮ ಸ್ಥಾನ ಹೇಗಿರುತ್ತದೆ, ನಾವು ಎಷ್ಟು ಬಲಶಾಲಿಯಾಗುತ್ತೇವೆ ಎನ್ನುವುದು ಈ ರೀತಿಯ ಪ್ರಯೋಗಾಲಯಗಳಲ್ಲಿ ನಿರ್ಧರಿಸಲ್ಪಡುತ್ತದೆ. ಮತ್ತು ಒಳ್ಳೆಯ ವಿಷಯವೇನೆಂದರೆ, ನಮ್ಮ ಭವಿಷ್ಯವು ಉಜ್ವಲವಾಗಿದೆ ಏಕೆಂದರೆ ನೀವು ಜಗತ್ತಿನಲ್ಲಿ ಅಪ್ರತಿಮವಾದ ಆ ಬುದ್ಧಿಶಕ್ತಿ, ಶಿಕ್ಷಣದಿಂದ ಕೆಲಸ ಮಾಡುತ್ತಿದ್ದೀರಿ.

ಸುಧಾರಿತ ವಾಯುಯಾನ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಸ್ವದೇಶಿ ವಿಮಾನವು ನಿಜವಾಗಿಯೂ ಆತ್ಮನಿರ್ಭರ ಭಾರತದ ಸಂಕೇತವಾಗಿದೆ.

ಸ್ನೇಹಿತರೇ, ನಾನು ಮೂರು ವಿಷಯಗಳನ್ನು ನೋಡಿದೆ ಮತ್ತು ಮೂರೂ ನಮ್ಮ ಕ್ಷೇತ್ರವಾದ ನಮ್ಮ ವಾಯುಪ್ರದೇಶವನ್ನು ಬದಲಾಯಿಸುತ್ತದೆ. ಒಂದು, ನಾನು ಹೇಳಿದ ಒಂದು, ತರಬೇತಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಇದು ವಿಮಾನಯಾನ ಮತ್ತು ಪೈಲಟ್ ಗಳಲ್ಲಿ ಆಸಕ್ತಿ ಹೊಂದಿರುವ ಜನರ ಸಮೂಹವನ್ನು ರಚಿಸುತ್ತದೆ, ಎರಡನೆಯದು, ಸಾರಿಗೆ, ಅದು ಅದ್ಭುತವಾಗಿದೆ. ಮತ್ತು ಮೂರನೆಯದು, ಅದಕ್ಕೆ ಪೈಲಟ್ ಅಗತ್ಯವಿಲ್ಲ. ಇದು 90 ದಿನಗಳವರೆಗೆ ಆಕಾಶದಲ್ಲಿ ಇರಬಹುದು ಮತ್ತು ಅದು ಸೌರ ಶಕ್ತಿಯನ್ನು ತನ್ನ ಸ್ವತಃ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈಗ, ಇವು ಮಹತ್ತರ ಬದಲಾವಣೆಗಳಾಗಿವೆ.

ಹಳ್ಳಿಗಳಲ್ಲಿನ ಮಹಿಳೆಯರು ಡ್ರೋನ್ ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಪ್ರಧಾನಮಂತ್ರಿಯವರು ಘೋಷಿಸಿದಾಗ ಈ ದೇಶದ ಇಡೀ ಗ್ರಾಮೀಣ ಪರಿಸರವು ಚೈತನ್ಯಗೊಂಡಿತು, ಅದು ಅವರಿಗೆ ಕೈಗೆಟುಕುವಂತಿದೆ. ನೀವು ಮಾಡುತ್ತಿರುವುದು ವಾಣಿಜ್ಯದ ದೃಷ್ಟಿಯಿಂದ  ಮಹತ್ವವನ್ನು ಹೊಂದಿರುತ್ತದೆ.

ಇದರಿಂದ ಕೈಗಾರಿಕೆಯ ಬೆಳವಣಿಗೆಯಾಗುತ್ತದೆ.   ನಾನು ನಿರ್ದೇಶಕರಲ್ಲಿ ವಿಚಾರಿಸಿದೆ... ಬೃಹತ್ತಾದ ಉತ್ಪಾದನೆ, ನೀವು ಖಾಸಗಿ ವಲಯ, ಸಾರ್ವಜನಿಕ ವಲಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತೀರಿ, ಇದರ ಉಪಯುಕ್ತತೆ ಇದೆ.  ಮೊದಲು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಮತ್ತು 100% ಆಮದು ಮಾಡಿಕೊಳ್ಳುತ್ತಿದ್ದ ದೇಶವು ಈಗ ರಕ್ಷಣಾ ಸಾಧನಗಳನ್ನು ಶತಕೋಟಿ ಡಾಲರುಗಳಷ್ಟು ರಫ್ತು ಮಾಡುತ್ತಿದೆ.

ಸ್ನೇಹಿತರೆ ಈ ಸಮಯದಲ್ಲಿ ನಾನು ಏನು ಹೇಳಬಲ್ಲೆನೆಂದರೆ, ಈ ದೇಶದ 1.4 ಶತಕೋಟಿ ಜನರು ಸಂಪೂರ್ಣ ಸಮರ್ಪಣೆಯೊಂದಿಗೆ ಮ್ಯಾರಥಾನ್ ಮೆರವಣಿಗೆಯ ಭಾಗವಾಗಿದ್ದಾರೆ. 

ಈಗ ಉದ್ದೇಶವೆಂದರೆ, 2047ರಲ್ಲಿ ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ  ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು. ಈ ಮಹಾ ಯಜ್ಞ ಮತ್ತು ಹವನದಲ್ಲಿ, ನಿಮ್ಮ ಸಮರ್ಪಣೆ ಬಹಳ ಮಹತ್ವಪೂರ್ಣವಾಗಿದೆ. ಭಾರತದ ವಿಕಾಸ ಯಾತ್ರೆಯಲ್ಲಿ, ವಿಕಾಸ ಯಾತ್ರೆಯಲ್ಲಿ  ತಂತ್ರಜ್ಞಾನದ ಸಮರ್ಪಣೆಯಾಗುವುದೋ ಅದು ನಿಮ್ಮದಾಗಿರುತ್ತದೆ ಮತ್ತು ಬಹಳ  ಮಹತ್ವಪೂರ್ಣವಾಗಿರುತ್ತದೆ.

ಭಾರತದ ಯಾತ್ರೆ ಆರಂಭವಾಗಿದೆ. 

ಈ ದೇಶದ ಬೆಳವಣಿಗೆಯನ್ನು ತಡೆಯಲಾಗದು. ಅದು ಹೆಚ್ಚಾಗುತ್ತಲೆ ಇದೆ. 

ಯಾವ  ಕಠಿಣ ಸವಾಲುಗಳಿದ್ದರೂ, ಯಾವ ಅಡೆತಡೆಗಳಿದ್ದರೂ  ನಮ್ಮ ಪ್ರಗತಿಯು ಎಷ್ಟು ಉತ್ತಮವಾಗಿದೆ ಎನ್ನುವುದನ್ನು ನೀವು ಭವಿಷ್ಯದಲ್ಲಿ ಅಂದಾಜು ಮಾಡಬಹುದು. ನಾವು ಸಂಪೂರ್ಣ ವಿಶ್ವಾಸದಿಂದ ಒಟ್ಟಾಗಿ ಸಾಗುವ ಸ್ನೇಹಿತರಾಗಿದ್ದೇವೆ. ಈಗಾಗಲೇ 2047ರ ಭಾರತವು ವಿಶ್ವ ನಾಯಕರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಆರ್ಥಿಕ ಶಕ್ತಿಯಾಗಲಿದೆ.ನನಗೆ ಇಲ್ಲಿ ಬಂದು ಬಹಳ ಸಂತೋಷವಾಯಿತು.

ನಾನು ಹುರುಪುಗೊಂಡಿದ್ದೇನೆ, ನನಗೆ ಬಹಳ ಬಲ ಬಂದಿದೆ ಮತ್ತು ಇದೇ ರೀತಿ ರಾಷ್ಟ್ರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ನಿಮ್ಮೆಲ್ಲರಿಗೂ ಅಭಿನಂದನೆಗಳು, ನಿಮಗೆ ಶುಭಾಶಯಗಳು, ನೀವು ಮಾಡುತ್ತಿರುವ ಕಾರ್ಯಕ್ಕಾಗಿ ನಿಮ್ಮೆಲ್ಲರಿಗೂ ವಂದನೆಗಳು ಮತ್ತು ನೀವು ಮಾಡುತ್ತಿರುವ ಕೆಲಸವು ಹೆಚ್ಚು ಸಾರ್ವಜನಿಕವಾಗಿಲ್ಲ .

ನೀವು ತರುವ ಈ ಮೌನ ಕ್ರಾಂತಿ, ಮತ್ತು ಇದರ ಬಗ್ಗೆ ಜನರು  ತಿಳಿದುಕೊಂಡಾಗ ಅವರ ವಿಶ್ವಾಸವು ಅಪರಿಮಿತವಾಗುತ್ತದೆ, ಲೆಕ್ಕಕ್ಕೆ ಸಿಗುವುದಿಲ್ಲ.

ಧನ್ಯವಾದಗಳು.

 


 
ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲಿಮಿಟೆಡ್ ನಲ್ಲಿ ಕಾರ್ಬನ್ ಫೈಬರ್ ಮತ್ತು ಪ್ರಿಪ್ರೆಗ್ಸ್ ಸೆಂಟರ್ (ಸಿಸಿಎಫ್‌ ಪಿ) ಗೆ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರು ಇಂದು ಶಂಕುಸ್ಥಾಪನೆ ಮಾಡಿದರು.

 


ಇಂದು ಬೆಂಗಳೂರಿನ ಎಚ್‌ ಎ ಎಲ್ ವಿಮಾನ ನಿಲ್ದಾಣದಲ್ಲಿ ಹಂಸ ಎನ್‌ ಜಿ / ಎಚ್‌ ಎಪಿಎಸ್ ನ ಹಾರುವ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್.


*****


(Release ID: 2021877) Visitor Counter : 84


Read this release in: English , Urdu , Hindi , Tamil