ಉಪರಾಷ್ಟ್ರಪತಿಗಳ ಕಾರ್ಯಾಲಯ

ಮೇ 27 ರಂದು ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿರುವ ಉಪ ರಾಷ್ಟ್ರಪತಿಗಳು 


ಬೆಳಗಾವಿಯ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (NITM) ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಉಪ ರಾಷ್ಟ್ರಪತಿಗಳು 

ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಉಪ ರಾಷ್ಟ್ರಪತಿಗಳು ಭಾಗಿ

ಬೆಂಗಳೂರಿನ ಸಿಎಸ್‌ಐಆರ್-ನ್ಯಾಶನಲ್ ಏರೋನಾಟಿಕ್ಸ್ ಲಿಮಿಟೆಡ್ (NAL) ಗೆ ಭೇಟಿ ನೀಡಲಿರುವ ಉಪ-ರಾಷ್ಟ್ರಪತಿಗಳು 

Posted On: 25 MAY 2024 6:22PM by PIB Bengaluru

ಉಪ ರಾಷ್ಟ್ರಪತಿಗಳಾದ  ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರು ಮೇ 27 ರಂದು ಬೆಳಗಾವಿ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ತಮ್ಮ ಒಂದು ದಿನದ ಪ್ರವಾಸದ ಸಮಯದಲ್ಲಿ, ಉಪ ರಾಷ್ಟ್ರಪತಿಗಳು ಬೆಳಗಾವಿಗೆ ಆಗಮಿಸಿ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (NITM) ಸಂಸ್ಥಾಪನಾ ದಿನಾಚರಣೆ ಮತ್ತು ಕೆಎಲ್‌ಇ ವಿಶ್ವ ವಿದ್ಯಾಲಯದ 14 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಂತರ, ಉಪ ರಾಷ್ಟ್ರಪತಿಗಳು ಸಿಎಸ್ಐಆರ್-ಎನ್ಎಎಲ್ ಬೇಲೂರು ಕ್ಯಾಂಪಸ್‌ಗೆ ಭೇಟಿ ನೀಡಿ ಎಲ್ ಸಿಎ ಘಟಕಗಳು ಮತ್ತು  ಸರಸ್ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.

ನಂತರ ಉಪ ರಾಷ್ಟ್ರಪತಿಗಳು ಬೆಂಗಳೂರಿನಲ್ಲಿ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ(NAL) ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕುತ್ತಾರೆ. ತಮ್ಮ ಪ್ರವಾಸದ ವೇಳೆ ಬೆಂಗಳೂರಿನ ರಾಜಭವನಕ್ಕೂ ಭೇಟಿ ನೀಡಲಿದ್ದಾರೆ.

*****
 



(Release ID: 2021674) Visitor Counter : 29


Read this release in: English , Urdu , Hindi , Tamil