ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ನಾಡಾ(NADA) ಇಂಡಿಯಾದಿಂದ ಸ್ವಚ್ಛ ಕ್ರೀಡೆ ಜಾಗೃತಿಗೆ #PlayTrue (#ಪ್ಲೇ ಟ್ರೂ)ಅಭಿಯಾನ

Posted On: 02 MAY 2024 5:43PM by PIB Bengaluru

ರಾಷ್ಟ್ರೀಯ ಡೋಪಿಂಗ್‌ ನಿಗ್ರಹ ಸಂಸ್ಥೆ (ಎನ್‌ಎಡಿಎ - ನಾಡಾ), ಇಂಡಿಯಾದ #ಪ್ಲೇಟ್ರೂ (ಪ್ರಾಮಾಣಿಕವಾಗಿ ಆಟವಾಡಿ) ಅಭಿಯಾನ  ಸಂಪನ್ನಗೊಂಡಿದೆ. ಭಾರತದಲ್ಲಿ ಸ್ವಚ್ಛ ಕ್ರೀಡೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ, ಡೋಪಿಂಗ್ ನಿಗ್ರಹ (ಡ್ರಗ್‌ ಸೇವನೆ ಮಾಡದ) ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಈ ಅಭಿಯಾನದಲ್ಲಿ ದೇಶಾದ್ಯಂತ ಅನೇಕ ಕ್ರೀಡಾಪಟುಗಳು, ತರಬೇತುದಾರರು ಮತ್ತು ಕ್ರೀಡೋತ್ಸಾಹಿಗಳು ಸೇರಿ 12,133 ಜನರು ಪಾಲ್ಗೊಂಡಿದ್ದರು. ವಿಶ್ವ ಡೋಪಿಂಗ್‌ ನಿಗ್ರಹ ಸಂಸ್ಥೆ (ವಾಡಾ) ದ (#PlayTrue) #ಪ್ಲೇ ಟ್ರೂ ದಿನಾಚರಣೆಗೂ ಈ ಅಭಿಯಾನ ಸಾಕ್ಷಿಯಾಯಿತು. 

ಕ್ರೀಡಾಪಟುಗಳು, ತರಬೇತುದಾರರು ಮತ್ತು ಇಡೀ ಕ್ರೀಡಾ ಸಮುದಾಯಕ್ಕೆ ಡೋಪಿಂಗ್‌ ನಿಗ್ರಹ ನಿಯಮಗಳನ್ನು ತಿಳಿಸಿ, ಮಾದಕದ್ರವ್ಯ ಸೇವನೆ ಅಭ್ಯಾಸಗಳಿಂದ ದೂರವಿರುವ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ, ಭಾರತದಲ್ಲಿ ಸ್ಚಚ್ಛ ಕ್ರೀಡೆಗೆ ಅವರನ್ನು ತಯಾರು ಮಾಡುವ ಬದ್ಧತೆಯನ್ನು ನಾಡಾ ಇಂಡಿಯಾದ ಈ (#PlayTrue) ಪ್ರಮಾಣಿಕವಾಗಿ ಆಟವಾಡಿ ಅಭಿಯಾನ ಪ್ರಧಾನವಾಗಿ ಹೊಂದಿತ್ತು. ಈ ಅಭಿಯಾನ 2024ರ ಏಪ್ರಿಲ್‌ 15 ರಿಂದ 30ರವರೆಗ ಜರುಗಿತು.

ವಿಶ್ವ ಡೋಪಿಂಗ್ ನಿಗ್ರಹ ಸಂಸ್ಥೆ (ವಾಡಾ)ದ ಮುನ್ನೋಟಗಳಿಗೆ ಹೊಂದಿಕೆಯಾಗುವ ಈ # PlayTrue ಅಭಿಯಾನವು ನ್ಯಾಯಸಮ್ಮತ್ತ ಸ್ಪರ್ಧಾತ್ಮಕತೆಯ ಭಾವ ಉತ್ತೇಜಿಸುತ್ತಾ, ಮುಕ್ತ ಮತ್ತು ನ್ಯಾಯೋಚಿತ ಆಟ, ಡ್ರಗ್ಸ್‌ ಗಳಿಂದ ಮುಕ್ತವಾದ ಆಟಕ್ಕೆ ಆದ್ಯತೆ ನೀಡುತ್ತಾ ಕ್ರೀಡೆಯಲ್ಲಿ ಸಮಗ್ರತೆ ತರುವ ಪ್ರಯತ್ನ ಮಾಡಿದೆ.  ಪರಸ್ಪರ ಸಂವಹನಾತ್ಮಕ ಚಟುವಟಿಕೆಗಳಾದ #PlayTrue ರಸಪ್ರಶ್ನೆ, ನಾನು #PlayTrue ರಾಯಭಾರಿ, # PlayTrue ಸಂಕಲ್ಪ ಮತ್ತು ಮಸ್ಕಟ್‌ ಚಿತ್ರಬಿಡಿಸುವ ಸ್ಪರ್ಧೆ, ಮೊದಲಾದವುಗಳ ಮೂಲಕ ನಾಡಾ ಇಂಡಿಯಾ, ಅಭಿಯಾನದಲ್ಲಿ ಪಾಲ್ಗೊಂಡವರಲ್ಲಿ ಸ್ವಚ್ಛತೆ ಮತ್ತು ನೈತಿಕ ಸ್ಪರ್ಧಾತ್ಮಕತೆಗೆ ಉತ್ತೇಜನ ನೀಡಿತು. 

ಈ ಅಭಿಯಾನದಲ್ಲಿ ಡೋಪಿಂಗ್‌ ನಿಗ್ರಹ ನಿಯಮಾವಳಿಗಳ ಎಲ್ಲಾ ಆಯಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿದ್ದವು. ಕ್ರೀಡೆಯಲ್ಲಿ ಡೋಪಿಂಗ್‌ ಪರಿಣಾಮಗಳ ಬಗ್ಗೆ , ಪೂರಕಗಳ ಬಗ್ಗೆ ಮತ್ತು ಡೋಪಿಂಗ್‌ ನಿಗ್ರಹದಲ್ಲಿ ಕಾನೂನು ಜಾರಿ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಅಭಿಯಾನದಲ್ಲಿ ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಸಲಾಗಿತ್ತು. ಭಾರತದ ಕ್ರೀಡಾ ಸಮುದಾಯದ ಪ್ರತಿ ವಲಯವನ್ನು ತಲುಪುವ ಪ್ರಯತ್ನದ ಭಾಗವಾಗಿ, ಕ್ರೀಡಾಪಟು, ಬೆಂಬಲ ಸಿಬ್ಬಂದಿ, ವೈದ್ಯಕೀಯ  ವೃತ್ತಿಪರರು, ಶಿಕ್ಷಣ ತಜ್ಞರು, ಕಾನೂನು ತಜ್ಞರು ಮತ್ತು ಪೌಷ್ಠಿಕಾಂಶ ಪೂರಕಗಳ ತಯಾರಕರಿಗೆ ಅವರ ಸೇವೆಗನುಗುಣವಾಗಿ ಅವರವರಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿರುವವರನ್ನು ಸಮಗ್ರವಾಗಿ ತಲುಪುವ ಕಾರ್ಯ ಮಾಡಲಾಗಿತ್ತು. 

ಕ್ರೀಡಾಪಟುಗಳು ಮತ್ತು ಭಾಗಿದಾರರಿಗೆ ಪರಸ್ಪರ ಸಹಕಾರ, ಅಭಿಪ್ರಾಯ ಹಂಚಿಕೆ ಮತ್ತು ತಂತ್ರಗಾರಿಕೆಗಳ ವಿನಿಯಮಕ್ಕೆ ಹಾಗೂ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ 2024ಕ್ಕೆ ಡೋಪಿಂಗ್‌ ನಿಗ್ರಹ ಚೌಕಟ್ಟನ್ನು ಸ್ಥಾಪಿಸಲು ಈ ಅಭಿಯಾನವು ಮಹತ್ವದ್ದಾಗಿತ್ತು. ಜಾಗತಿಕ ವೇದಿಕೆಯಲ್ಲಿ ನ್ಯಾಯೋಚಿತ ಆಟ, ಸಮಗ್ರತೆ ಮತ್ತು ಸ್ವಚ್ಛ ಕ್ರೀಡೆಯ ತತ್ವಗಳನ್ನು ಎತ್ತಿಹಿಡಿಯುವ ಭಾರತದ ಬದ್ಧತೆಯನ್ನು ಇಡೀ ಕಾರ್ಯಕ್ರಮದಲ್ಲಿ ಸಾರಲಾಯಿತು.

*****



(Release ID: 2019513) Visitor Counter : 52