ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕ್ರಾಂತಿಕಾರಿ 'ಸಂಗಮ್: ಡಿಜಿಟಲ್ ಅವಳಿ' ಉಪಕ್ರಮಕ್ಕಾಗಿ ದೆಹಲಿಯ ಐಐಟಿಯಲ್ಲಿ ತನ್ನ ಮೊದಲ ಜನಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಿದ ದೂರಸಂಪರ್ಕ ಇಲಾಖೆ, ʻಟಿಸಿಒಇʼ
ಜನಸಂಪರ್ಕ ಕಾರ್ಯಕ್ರಮವು ಸಂಭಾವ್ಯ ಭಾಗವಹಿಸುವವರಲ್ಲಿ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ
ಈ ತಿಂಗಳು ಐಐಟಿ ದೆಹಲಿ, ಐಐಐಟಿ ಬೆಂಗಳೂರು ಮತ್ತು ಐಐಐಟಿ ಹೈದರಾಬಾದ್‌ನಲ್ಲಿ ಮೂರು ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲು ದೂರಸಂಪರ್ಕ ಇಲಾಖೆ ಯೋಜಿಸಿದೆ
ಮೂಲಸೌಕರ್ಯವನ್ನು ಆಧುನೀಕರಿಸುವಲ್ಲಿ ಹಾಗೂ ನಾವೀನ್ಯತೆ, ಸಾಮೂಹಿಕ ಕ್ರಿಯೆ ಮತ್ತು ಸಹಯೋಗವನ್ನು ಉತ್ತೇಜಿಸುವಲ್ಲಿ ʻಡಿಜಿಟಲ್ ಅವಳಿʼಗಳ ಮುಖ್ಯ ಪಾತ್ರವನ್ನು ಡಾ. ನೀರಜ್ ಮಿತ್ತಲ್ ಅವರು ಒತ್ತಿ ಹೇಳಿದರು
Posted On:
05 MAR 2024 8:20PM by PIB Bengaluru
ದೂರಸಂಪರ್ಕ ಇಲಾಖೆಯು(ಡಿಒಟಿ) ʻಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ʼ(ಟಿಸಿಒಇ) ಮೂಲಕ ಇಂದು 'ಸಂಗಮ್: ಡಿಜಿಟಲ್ ಟ್ವಿನ್' ಉಪಕ್ರಮಕ್ಕಾಗಿ ತನ್ನ ಮೊದಲ ಜನಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಿತು. ʻಸಂಗಮ್: ಡಿಜಿಟಲ್ ಟ್ವಿನ್ʼ ಎಂಬುದು ಮೂಲಸೌಕರ್ಯ ಯೋಜನೆ ಮತ್ತು ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಯ ಗುರಿಯನ್ನು ಹೊಂದಿರುವ ಅದ್ಭುತ ಪ್ರಯತ್ನವಾಗಿದೆ. ಪ್ರತಿಷ್ಠಿತ ಐಐಟಿ ದೆಹಲಿಯಲ್ಲಿ ʻಸಂಗಮ್ ದೆಹಲಿʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, "ನಾವೀನ್ಯತೆ ಮತ್ತು ಯೋಜನೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು" ಎಂಬ ವಿಷಯಾಧಾರಿತವಾಗಿ ನಡೆದ ಈ ಕಾರ್ಯಕ್ರಮವು ನಗರ ಅಭಿವೃದ್ಧಿಯ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ ಅತ್ಯಾಧುನಿಕ ಒಳನೋಟಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಿತು.
ದೂರಸಂಪರ್ಕ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ ಮತ್ತು ಐಐಟಿ ದೆಹಲಿಯ ನಿರ್ದೇಶಕ ಪ್ರೊ.ರಂಗನ್ ಬ್ಯಾನರ್ಜಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಡಾ.ನೀರಜ್ ಮಿತ್ತಲ್ ಅವರು ಮೂಲಸೌಕರ್ಯವನ್ನು ಆಧುನೀಕರಿಸುವಲ್ಲಿ ಹಾಗೂ ನಾವೀನ್ಯತೆ, ಸಾಮೂಹಿಕ ಕ್ರಿಯೆ ಮತ್ತು ಸಹಯೋಗವನ್ನು ಉತ್ತೇಜಿಸುವಲ್ಲಿ ʻಡಿಜಿಟಲ್ ಅವಳಿʼಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಮೂಲಸೌಕರ್ಯ ಯೋಜನೆ ಮತ್ತು ಅಭಿವೃದ್ಧಿಗಾಗಿ ಡಿಜಿಟಲ್ ಅವಳಿಗಳು ಮತ್ತು ಸಮಗ್ರ ದತ್ತಾಂಶ ವ್ಯವಸ್ಥೆಗಳ ಬಳಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಮಿತ್ತಲ್ ಅವರು ʻಡಿಜಿಟಲ್ ಅವಳಿʼಯ ಕೆಲವು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಗಮನಸೆಳೆದರು. ಇದರಲ್ಲಿ ಭೌತಿಕ ಸ್ವತ್ತುಗಳನ್ನು ಡಿಜಿಟಲ್ ಆಗಿ ಮರುಸೃಷ್ಟಿಸುವ ಸಾಮರ್ಥ್ಯ, ವಿವಿಧ ಮೂಲಗಳಿಂದ ನೈಜ-ಸಮಯದ ಡೇಟಾವನ್ನು ಸಂಗ್ರಹಿಸುವ ಸಾಮರ್ಥ್ಯ ಮತ್ತು ಮಾದರಿ ಪ್ರಕ್ರಿಯೆ ನಡವಳಿಕೆಗಳು ಸೇರಿವೆ. "ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದು, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಾಧ್ಯವಾಗಿಸುವುದು ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಗಮನಾರ್ಹ ವೆಚ್ಚಗಳನ್ನು ಉಳಿಸುವುದು ನಮ್ಮ ಗುರಿಯಾಗಿದೆ," ಎಂದು ಅವರು ಹೇಳಿದರು. "ಡೇಟಾ ಅಡೆತಡೆಗಳನ್ನು ವಿಭಜಿಸುವುದು, ಇಲಾಖೆಗಳು ಮತ್ತು ವಲಯಗಳಾದ್ಯಂತ ಡೇಟಾವನ್ನು ಸಂಯೋಜಿಸುವುದು ಹಾಗೂ ಉತ್ತಮ ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳಲು ʻಎಐʼ ಮತ್ತು ಬೃಹತ್ ಭಾಷಾ ಮಾದರಿಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗುವುದು," ಎಂದು ಟೆಲಿಕಾಂ ಕಾರ್ಯದರ್ಶಿ ಹೇಳಿದರು. ಉದ್ಯಮದ ನಾಯಕರು, ನವೋದ್ಯಮಗಳು, ಆವಿಷ್ಕಾರಕರು ಮತ್ತು ಶಿಕ್ಷಣ ತಜ್ಞರ ಭಾಗವಹಿಸುವಿಕೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ಪ್ರೊಫೆಸರ್ ರಂಗನ್ ಬ್ಯಾನರ್ಜಿ ಅವರು ಮಾತನಾಡಿ, ಇಂತಹ ಪರಿಣಾಮಕಾರಿ ಉಪಕ್ರಮವನ್ನು ಮುನ್ನಡೆಸಿದ್ದಕ್ಕಾಗಿ ದೂರಸಂಪರ್ಕ ಇಲಾಖೆಯನ್ನು ಅಭಿನಂದಿಸಿದರು. ಈ ಉಪಕ್ರಮವು ಯಶಸ್ವಿಯಾಗಿ, ಅದು ನಮ್ಮ ಮೂಲಸೌಕರ್ಯ, ಸಾಮಾಜಿಕ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ತರಬಲ್ಲದೆಂದು ನಿರೀಕ್ಷಿಸುತ್ತಿರುವುದಾಗಿ ಹೇಳಿದರು.
ಸಂಭಾವ್ಯ ಭಾಗವಹಿಸುವವರಲ್ಲಿ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಬೆಳೆಸುವ ಗುರಿಯನ್ನು ಜನಸಂಪರ್ಕ ಕಾರ್ಯಕ್ರಮಗಳು ಹೊಂದಿವೆ. ಜತನದಿಂದ ಸಿದ್ಧಪಡಿಸಿದ ಕಾರ್ಯಸೂಚಿಯ ಮೂಲಕ ಪ್ರಮುಖ ನಾಯಕರು ಮತ್ತು ವಿವಿಧ ಉದ್ಯಮಗಳ ಆವಿಷ್ಕಾರಕರು ಸೇರಿದಂತೆ ವೈವಿಧ್ಯಮಯ ಭಾಷಣಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಜ್ಞಾನ ಸಂಪತ್ತನ್ನು ಹೆಚ್ಚಿಸಿದರು. ಈ ಕಾರ್ಯಕ್ರಮವು ಸಂಪರ್ಕಜಾಲ, ಸಹಯೋಗ ಮತ್ತು ಸ್ಫೂರ್ತಿಗೆ ವೇದಿಕೆಯನ್ನು ಒದಗಿಸಿತು, ʻಡಿಜಿಟಲ್ ಅವಳಿʼ ಕ್ಷೇತ್ರದಲ್ಲಿ ಮುಂದಿನ ರೋಮಾಂಚಕಾರಿ ಪ್ರಯಾಣಕ್ಕೆ ವೇದಿಕೆಯನ್ನು ಒದಗಿಸಿತು.
ದಿನವಿಡೀ, ಕಾರ್ಯಕ್ರಮದಲ್ಲಿ ಭಾಗವಹಿದವರು ವೈವಿಧ್ಯಮಯ ವಿಷಯಾಧಾರಿತ ಸಂಕಿರಣಗಳಿಗೆ ಸಾಕ್ಷಿಯಾದರು. ನೈಜ-ಸಮಯದ ಡೇಟಾ ಸಂಯೋಜನೆ, ʻಬಿಲ್ಡಿಂಗ್ ಇನ್ಫಾರ್ಮೇಶನ್ ಮಾಡೆಲಿಂಗ್ʼನೊಂದಿಗೆ (ಬಿಐಎಂ) ಡಿಜಿಟಲ್ ನಿಖರತೆಯ ಸುಧಾರಣೆ ಹಾಗೂ ನಗರ ಯೋಜನೆ ಮತ್ತು ನಿರ್ವಹಣೆಯಲ್ಲಿ ನಾವೀನ್ಯತೆಯ ಬಗ್ಗೆ ಅರಿತರು.
ವಿಷಯ 1: ಭೌತಿಕ ಪ್ರಪಂಚದಿಂದ ʻರಿಯಲ್ ಟೈಮ್ ಇಂಟಲಿಜೆಂಟ್ ವರ್ಚುವಲ್ ಜಗತ್ತಿʼಗೆ ಪ್ರಯಾಣ
ʻಸಂಗಮ್ʼನಲ್ಲಿ ಡಿಜಿಟಲ್ ಅವಳಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮೂಲಕ ಭೌತಿಕ ಪ್ರಪಂಚದಿಂದ ರಿಯಲ್ ಟೈಮ್ ಇಂಟೆಲಿಜೆಂಟ್ ವರ್ಚುವಲ್ ಜಗತ್ತಿಗೆ ಪ್ರಯಾಣ. ಉದ್ಯಮವು ಎರೋಸ್‌ನ ಸ್ಮಾರ್ಟ್ ಮೂಲಸೌಕರ್ಯ, ಜೆನೆಸಿಸ್ ಮತ್ತು ʻಇಎಸ್‌ಆರ್‌ಐʼನ ಜಿಯೋಸ್ಪೇಷಿಯಲ್ ಮಾಸ್ಟರ್ ಮತ್ತು ʻಬೆಂಟ್ಲೆ ಸಿಸ್ಟಮ್ಸ್ʼನ ಬಿಐಎಂ ಅನ್ನು ಪ್ರದರ್ಶಿಸಿತು, ಪರಿವರ್ತಕ ತಂತ್ರಜ್ಞಾನ ಚರ್ಚೆಗಳನ್ನು ನಡೆಸಿತು.
ವಿಷಯ 2: ಡಿಜಿಟಲ್ ಅವಳಿಗಳಿಗೆ ಜೀವ ತುಂಬುವುದು: ಡೈನಾಮಿಕ್ ಡೇಟಾ ಸಂಯೋಜನೆ
ನಯನ್ ಅವರ ರಸ್ತೆ ಸಂಚಾರ ಒಳನೋಟಗಳು, ʻಏರ್ಟೆಲ್ ಇಂಡಿಯಾʼ ಮತ್ತು ʻರಿಲಯನ್ಸ್ ಜಿಯೋʼದ ಟೆಲಿಕಾಂ ಒಳನೋಟಗಳಿಂದ ಡೇಟಾ ಸ್ಟ್ರೀಮ್‌ಗಳನ್ನು ತುಂಬುವ ಬಗ್ಗೆ ಚರ್ಚಿಸಲಾಯಿತು. ಇದು ʻಸಂಗಮ್ ಜನಸಂಪರ್ಕʼ ಸಮಾವೇಶದಲ್ಲಿ ವೈವಿಧ್ಯಮಯ ಡೇಟಾಸೆಟ್‌ಗಳನ್ನು ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿತ್ತು.
ವಿಷಯ 3: ಇನ್ನೋವೇಟಿವ್ ಫ್ರಾಂಟಿಯರ್ಸ್: ʻಡಿಜಿಟಲ್ ಅವಳಿʼ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಭವಿಷ್ಯವನ್ನು ರೂಪಿಸುವುದು
ಗೌಪ್ಯತೆ ಹೆಚ್ಚಿಸುವ ತಂತ್ರಜ್ಞಾನಗಳೊಂದಿಗೆ (ಪಿಇಟಿ) ಡೇಟಾ ಹಂಚಿಕೆಯಲ್ಲಿ ಮೈಕ್ರೋಸಾಫ್ಟ್ ಹೇಗೆ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ ಎಂಬುದನ್ನು ʻಸಂಗಮ್ʼನಲ್ಲಿ ಇನ್ನೋವೇಟಿವ್ ಫ್ರಾಂಟಿಯರ್ಸ್ ಪ್ರದರ್ಶಿಸಿತು. ನಾವೀನ್ಯತೆಯ ಮೊರೆ ಹೋದಾಗ ಗೌಪ್ಯತೆಯನ್ನು ರಕ್ಷಿಸುವ ʻಎಆರ್ʼ/ ʻವಿಆರ್ʼನಂತಹ ಸುಧಾರಿತ ದೃಶ್ಯೀಕರಣ ತಂತ್ರಜ್ಞಾನಗಳ ಬಗ್ಗೆ ʻಮೆಟಾʼ ಮತ್ತು ʻವಾಟ್ಸಾಪ್ʼನಿಂದ ಒಳನೋಟಗಳನ್ನೂ ಈ ಕಾರ್ಯಕ್ರಮ ಒಳಗೊಂಡಿತ್ತು.
ವಿಷಯ 4: ಒಟ್ಟಾಗಿ ಭವಿಷ್ಯವನ್ನು ನಿರ್ಮಿಸುವುದು - ಜಾಗತಿಕವಾಗಿ ಹೋಗುವುದು
ಐಂಗುರಾ ʻಐಐಒಟಿʼಯ ಸಿಟಿಒ ಡಾ. ಜೇವಿಯರ್ ಅವರು ಸ್ಪೇನ್‌ನಿಂದಲೇ ʻಸಂಗಮ್ʼನಲ್ಲಿ ವರ್ಚುವಲ್ ಆಗಿ ಭಾಗಿಯಾದರು. "ಜಾಗತಿಕ ಸಂಯೋಜನೆ: ಅಂತರ ಸಂಪರ್ಕಿತ ಡಿಜಿಟಲ್ ಅವಳಿ ಮತ್ತು ಅಂತಾರಾಷ್ಟ್ರೀಯ ಅತ್ಯುತ್ತಮ ಕಾರ್ಯವಿಧಾನಗಳ ಅನಾವರಣ" ಎಂಬ ಧ್ಯೇಯವಾಕ್ಯದೊಂದಿಗೆ ಅವರು ಡಿಜಿಟಲ್ ಅವಳಿಗಳ ಕ್ಷೇತ್ರದಲ್ಲಿ ಯಶಸ್ಸಿನ ಪ್ರಕರಣಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
"ಸಂಗಮ್ ಡಿಜಿಟಲ್ ಅವಳಿ ಉಪಕ್ರಮದ ಅನಾವರಣಕ್ಕೆ ಸಾಕ್ಷಿಯಾಗಲು ನಾವು ರೋಮಾಂಚನಗೊಂಡಿದ್ದೇವೆ," ಎಂದು ದೂರಸಂಪರ್ಕ ಇಲಾಖೆಯ ಡಿಡಿಜಿ ಅಸಿತ್ ಕಡಾಯನ್ ಹೇಳಿದರು. "ಈ ಉಪಕ್ರಮವು ನಾವು ಮೂಲಸೌಕರ್ಯವನ್ನು ಹೇಗೆ ಪರಿಕಲ್ಪಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ ಎಂಬುದರಲ್ಲಿ ಒಂದು ಮಾದರಿ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಇದು ಸ್ಮಾರ್ಟ್, ಹೆಚ್ಚು ಸ್ಥಿತಿಸ್ಥಾಪಕ ನಗರಗಳಿಗೆ ದಾರಿ ಮಾಡಿಕೊಡುತ್ತದೆ," ಎಂದು ಹೇಳಿದರು.
ಟೆಲಿಕಾಂ ಉದ್ಯಮವು ಡಿಜಿಟಲ್ ರೂಪಾಂತರದ ಅಳವಡಿಕೆಯನ್ನು ಮುಂದುವರಿಸುತ್ತಿರುವ ಸಮಯದಲ್ಲಿ, ʻಸಂಗಮ್ʼನಂತಹ ಉಪಕ್ರಮಗಳ ಮೂಲಕ ನಾವೀನ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು, ಹೆಚ್ಚು ಸಂಪರ್ಕಿತ ಮತ್ತು ಸುಸ್ಥಿರ ಭವಿಷ್ಯವನ್ನು ರೂಪಿಸಲು ದೂರಸಂಪರ್ಕ ಇಲಾಖೆ ಸಜ್ಜಾಗಿದೆ.
ಹಿನ್ನೆಲೆ:
ದೂರಸಂಪರ್ಕ ಇಲಾಖೆಯು(ಡಿಒಟಿ) 'ಸಂಗಮ್: ಡಿಜಿಟಲ್ ಅವಳಿ' ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಉದ್ಯಮದ ನಾಯಕರು, ನವೋದ್ಯಮಗಳು, ʻಎಂಎಸ್ಎಂಇʼಗಳು, ಶಿಕ್ಷಣ ತಜ್ಞರು, ಆವಿಷ್ಕಾರಕರು ಮತ್ತು ಮುಂದಾಲೋಚಕರಿಂದ ಆಸಕ್ತಿಯ ಅಭಿವ್ಯಕ್ತಿಗಳನ್ನು (ಇಒಐ) ಸ್ವಾಗತಿಸುವ ಪ್ರಯತ್ನವಾಗಿದೆ. ʻಡಿಜಿಟಲ್ ಅವಳಿʼ ತಂತ್ರಜ್ಞಾನವು ಭೌತಿಕ ಸ್ವತ್ತುಗಳ ವರ್ಚುವಲ್ ಪ್ರತಿಕೃತಿಗಳನ್ನು ರಚಿಸುವ ಮೂಲಕ ಪರಿಹಾರವನ್ನು ನೀಡುತ್ತದೆ, ನೈಜ ಸಮಯದ ಮೇಲ್ವಿಚಾರಣೆ, ಸಿಮ್ಯುಲೇಶನ್ ಮತ್ತು ವಿಶ್ಲೇಷಣೆಯನ್ನು ಸಕ್ರಿಯಗೊಳಿಸುತ್ತದೆ.
ಮಾರ್ಚ್ 9 ರಂದು ಐಐಐಟಿ ಬೆಂಗಳೂರು ಮತ್ತು ಮಾರ್ಚ್ 12ರಂದು ಐಐಐಟಿ ಹೈದರಾಬಾದ್‌ನಲ್ಲಿ ಮುಂದಿನ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲು ದೂರಸಂಪರ್ಕ ಇಲಾಖೆ ಯೋಜಿಸಿದೆ.
ಟಿಸಿಒಇ ಬಗ್ಗೆ:
ʻಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ʼ(ಟಿಸಿಒಇ) – ಇದು ಟೆಲಿಕಾಂ ಉದ್ಯಮದಲ್ಲಿ ನಾವೀನ್ಯತೆ ಮತ್ತು ಸಹಯೋಗಕ್ಕೆ ಪ್ರಮುಖ ವೇದಿಕೆಯಾಗಿದ್ದು, ಡಿಜಿಟಲ್ ರೂಪಾಂತರವನ್ನು ಸಶಕ್ತಗೊಳಿಸಲು ಮತ್ತು ತಾಂತ್ರಿಕ ಪ್ರಗತಿಯನ್ನು ವೇಗಗೊಳಿಸಲು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.
****
(Release ID: 2012687)
Visitor Counter : 104