ಕಲ್ಲಿದ್ದಲು ಸಚಿವಾಲಯ
2015 ರಲ್ಲಿ ನಡೆದ ಕಲ್ಲಿದ್ದಲು ಹರಾಜಿನ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಕೇಂದ್ರ ಕಲ್ಲಿದ್ದಲು ಸಚಿವಾಲಯದ ಸ್ಪಷ್ಟೀಕರಣ
Posted On:
04 MAR 2024 8:27PM by PIB Bengaluru
ಇತ್ತೀಚೆಗೆ, ಕೇಂದ್ರ ಸರ್ಕಾರವು ಕಲ್ಲಿದ್ದಲು ಹರಾಜಿನಿಂದ ಪಶ್ಚಿಮ ಬಂಗಾಳವನ್ನು ಉದ್ದೇಶಪೂರ್ವಕವಾಗಿ, ಅಕ್ರಮರೂಪದಲ್ಲಿ ನಿರ್ಬಂಧಿಸಿದೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದಾಯಕವಾಗಿಸಿದೆ ಎಂದು ಆರೋಪಿಸಿ ಕೆಲವೊಂದು ಮಾಧ್ಯಮಗಳಲ್ಲಿ ಲೇಖನವನ್ನು ಪ್ರಕಟಿಸಲಾಗಿದೆ. ಇದು ತಪ್ಪು ಮಾಹಿತಿ. ಕೇಂದ್ರ ಕಲ್ಲಿದ್ದಲು ಸಚಿವಾಲಯವು ಪಶ್ಚಿಮ ಬಂಗಾಳ ಮೂಲದ ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳದ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಡಬ್ಲ್ಯುಬಿಪಿಡಿಸಿಎಲ್) ಅನ್ನು ಅನರ್ಹಗೊಳಿಸಿದೆ ಎಂದು ಆರೋಪಿಸಲಾಗಿದೆ ಮತ್ತು ಡಬ್ಲ್ಯುಬಿಪಿಡಿಸಿಎಲ್ ಅನ್ನು ಪೂರ್ವ ಹಂಚಿಕೆಯಾಗಿ ಪರಿಗಣಿಸಿ ನಿಗದಿತ ಸಮಯದೊಳಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂದು ಲೇಖನದಲ್ಲಿ ಮಾಡಿರುವ ಆರೋಪಗಳು ಸರಿಯಲ್ಲ ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿವೆ.
ಈ ಲೇಖನಗಳ ಮಾಹಿತಿಯು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮತ್ತು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆ) ಕಾಯಿದೆ, 2015 ರ ನಿಬಂಧನೆಗಳ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರುಸುತ್ತದೆ.
ಕಲ್ಲಿದ್ದಲು ಗಣಿಗಳನ್ನು ಹರಾಜಿನ ಮೂಲಕ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ವಿತರಿಸಲಾಗುತ್ತದೆ ಮತ್ತು ಹಂಚಿಕೆ ಮೂಲಕ ಸರ್ಕಾರಿ ಸಂಸ್ಥೆ/ಕಂಪನಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತದೆ. ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆ) ಕಾಯಿದೆಯ ಸೆಕ್ಷನ್ 4(4) ರ ಪ್ರಕಾರ, ಪೂರ್ವ ಮಂಜೂರಾತಿದಾರರು ಸಕಾಲಿಕವಾಗಿ ಹೆಚ್ಚುವರಿ ಸುಂಕವನ್ನು ಪಾವತಿಸದಿದ್ದಲ್ಲಿ, ಪೂರ್ವ ಹಂಚಿಕೆದಾರರು, ಅದರ ಪ್ರವರ್ತಕರು ಅಥವಾ ಅಂತಹ ಪೂರ್ವ ಹಂಚಿಕೆದಾರರ ಯಾವುದೇ ಕಂಪನಿಯು ಸ್ವತಃ ಅಥವಾ ಜಂಟಿ ಉದ್ಯಮದ ಮೂಲಕ ಬಿಡ್ ಮಾಡಲು ಹರಾಜಿಗೆ ಅರ್ಹರಾಗಿರುವುದಿಲ್ಲ. ಅದರಂತೆ, ಬೆಂಗಾಲ್ ಎಮ್ಟಾ ಕೋಲ್ ಮೈನ್ಸ್ ಲಿಮಿಟೆಡ್ ಸಂಸ್ಥೆಯ ಪ್ರವರ್ತಕರಲ್ಲಿ ಡಬ್ಲ್ಯುಬಿಪಿಡಿಸಿಎಲ್ ಸಂಸ್ಥೆ ಕೂಡಾ ಒಂದಾಗಿರುವ ಕಾರಣದಿಂದಾಗಿ (ಸಿಎಮ್‌ಎಸ್‌ಪಿ ಕಾಯಿದೆಯ ಪ್ರಕಾರ ಪೂರ್ವ ಹಂಚಿಕೆದಾರರು) ಈ ಸಂಸ್ಥೆಯನ್ನು ಹರಾಜಿನಲ್ಲಿ ಭಾಗವಹಿಸಲು ಅನರ್ಹಗೊಳಿಸಲಾಯಿತು.
ಸರ್ಕಾರದ ಎರಡನೇ ಸುಗ್ರೀವಾಜ್ಞೆ ಹಾಗೂ ಸಿಎಮ್‌ಎಸ್‌ಪಿ ಕಾಯಿದೆಯ ಸೆಕ್ಷನ್-5 ರ ಅಡಿಯಲ್ಲಿ ಸರ್ಕಾರಿ ಕಂಪನಿಗಳು ಅಥವಾ ನಿಗಮಗಳಿಗೆ ಕಲ್ಲಿದ್ದಲು ಗಣಿ ಹಂಚಿಕೆಗೆ ಅವಕಾಶ ನೀಡಲಾಗಿದೆ. ಎರಡನೇ ಸುಗ್ರೀವಾಜ್ಞೆ ಹಾಗೂ ಸಿಎಮ್‌ಎಸ್‌ಪಿ ಕಾಯಿದೆಯ ಸೆಕ್ಷನ್ 5(2) ರ ಪ್ರಕಾರ, ನಿಗದಿತ ಅವಧಿಯೊಳಗೆ ಹೆಚ್ಚುವರಿ ಶುಲ್ಕ (ಲೆವಿ) ವನ್ನು ಸಕಾಲಿಕವಾಗಿ ಪಾವತಿಸದಿದ್ದಲ್ಲಿ, ಪೂರ್ವ ಹಂಚಿಕೆದಾರರಿಗೆ ಯಾವುದೇ ಹಂಚಿಕೆಯನ್ನು ಮಾಡಲಾಗುವುದಿಲ್ಲ. ಡಬ್ಲ್ಯುಬಿಪಿಡಿಸಿಎಲ್ ಸಂಸ್ಥೆಗೆ ಪೂರ್ವ ಹಂಚಿಕೆಯಾಗಿಲ್ಲದ ಕಾರಣ, ಸಿಎಮ್‌ಎಸ್‌ಪಿ ಕಾಯಿದೆಯ ಸೆಕ್ಷನ್ 5(2) ರ ಪ್ರಕಾರ ನಡೆಯುವ ಹಂಚಿಕೆ ಮೂಲಕ ಗಣಿಗಳನ್ನು ಪಡೆಯಲು ಡಬ್ಲ್ಯುಬಿಪಿಡಿಸಿಎಲ್ ಅರ್ಹವಾಗಿದೆ. ಅದರಂತೆ ಸಿಎಮ್‌ಎಸ್‌ಪಿ ಕಾಯಿದೆಯ ಸೆಕ್ಷನ್ 5(2) ರ ಪ್ರಕಾರ ಮಾತ್ರ ಡಬ್ಲ್ಯುಬಿಪಿಡಿಸಿಎಲ್ ಗೆ ಗಣಿಗಳನ್ನು ಮಂಜೂರು ಮಾಡಲಾಗಿತ್ತು.
ಸರಿಸಟೊಳ್ಳಿ ಗಣಿ ಹರಾಜಿಗೆ ಬಿಡ್ ಮಾಡುವಾಗ ಒಂದು ಗುಂಪಿನ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ ಮತ್ತು ಪಶ್ಚಿಮ ಬಂಗಾಳ ಸರ್ಕಾರವು ಬ್ಲಾಕ್ ಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಉದ್ದೇಶಪೂರ್ವಕವಾಗಿ, ಹಾಗೂ ಅಕ್ರಮವಾಗಿ ತಡೆಯುವ ಮೂಲಕ ಕೇಂದ್ರ ಸರ್ಕಾರವು ಖಾಸಗಿ ಕಂಪನಿಗಳಿಗೆ ಆಗುತ್ತಿದ್ದ ಸಂಭಾವ್ಯ ಪೈಪೋಟಿಗೆ ಕಡಿವಾಣ ಹಾಕಿದೆ.
ಖಾಸಗಿ ಕಂಪನಿಗಳ ಜೊತೆಗೆ ಹೊಂದಾಣಿಕೆ ಮತ್ತು ಕಡಿಮೆ ಸ್ಪರ್ಧೆಯ ಆರೋಪಗಳು ಆಧಾರರಹಿತವಾಗಿವೆ. ಬಿಡ್ಡಿಂಗ್ ಡಾಕ್ಯುಮೆಂಟ್ ಪ್ರಕಾರ, ಎರಡು ಅಥವಾ ಅದಕ್ಕಿಂತ ಹೆಚ್ಚು ಕಂಪನಿಗಳಿಂದ ರಚಿಸಲ್ಪಟ್ಟ ಜಾಯಿಂಟ್ ವೆಂಚರ್ (ಜೆ.ವಿ) ಕಂಪನಿಯು ಸಾಮಾನ್ಯ ನಿರ್ದಿಷ್ಟ ಅಂತಿಮ ಬಳಕೆಯನ್ನು (ಎಸ್.ಇ.ಯು) ಹೊಂದಿದ್ದು, ಇ-ಹರಾಜಿನಲ್ಲಿ ಬಿಡ್ ಮಾಡಲು ಸ್ವತಂತ್ರವಾಗಿ ಅರ್ಹವಾಗಿದೆ. ಆರಂಭಿಕ ಹಂತದಿಂದ ಆತುರಾತುರದ ಆಕ್ರಮಣಕಾರಿ ಬಿಡ್ ಮಾಡಲು ಬಿಡ್‌ದಾರರನ್ನು ಉತ್ತೇಜಿಸಲು ವ್ಯವಸ್ಥೆಗೊಳಿಸಲಾಗಿದೆ. ಮತ್ತು ಬಿಡ್‌ದಾರರು ತಮ್ಮೊಳಗೆ ಒಪ್ಪಂದ ಮೂಲಕ ಗುಂಪು ಕಟ್ಟಿಕೊಳ್ಳುವ ಹಾಗೂ ಕಾರ್ಟೆಲ್ ಅನ್ನು ರೂಪಿಸಲು ಸಾಧ್ಯವಾಗದಂತೆ ಮಾಡಲು ಅದೇ ಕಂಪನಿಯ ಬಿಡ್‌ದಾರರನ್ನು ಇತರಡೆ ನಿರ್ಬಂಧಿಸಲು ಕೆಲವು ನಿಬಂಧನೆಗಳನ್ನು ಇರಿಸಲಾಗಿದೆ. ಹೀಗಾಗಿ ಸ್ಪರ್ಧೆಯನ್ನು ಕಡಿಮೆ ಮಾಡುತ್ತದೆ. ಈ ಹರಾಜು ಪ್ರಕ್ರಿಯೆ ವಿಧಾನವನ್ನು ದೆಹಲಿಯ ಗೌರವಾನ್ವಿತ ಹೈಕೋರ್ಟ್ ಎತ್ತಿಹಿಡಿದಿದೆ. ಸರಿಸಟೊಳ್ಳಿ ಕಲ್ಲಿದ್ದಲು ಗಣಿಯಲ್ಲಿ, 5 ಬಿಡ್ಡರ್‌ಗಳು ಇ-ಹರಾಜಿನಲ್ಲಿ (ಎಫ್‌ಪಿಒ) ಭಾಗವಹಿಸಲು ತಾಂತ್ರಿಕವಾಗಿ ಅರ್ಹತೆ ಪಡೆದಿದ್ದರು ಮತ್ತು ಹರಾಜಿನ ಸಮಯದಲ್ಲಿ ಒಟ್ಟು 167 ಪ್ರಸ್ತಾವ(ಕೋಟ್ಸ್ ) ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಇದು ಪ್ರಬಲ ಪೈಪೋಟಿಯ ಸ್ಪಷ್ಟ ಸೂಚನೆಯಾಗಿದೆ.
*******
(Release ID: 2011606)