ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಕರ್ನಾಟಕದಲ್ಲಿ ಎಂ.ಎಸ್.ಎಂ.ಇ ಮಾರಾಟಗಾರರ ನೆಲೆಯನ್ನು ಹೆಚ್ಚಿಸಲು ಜಿ.ಇ.ಎಂ.ನಿಂದ ನೋಂದಣಿ ಅಭಿಯಾನ
ಪ್ರಕಟಣಾ ದಿನಾಂಕ:
23 FEB 2024 5:28PM by PIB Bengaluru
ಕೇಂದ್ರ ಸರ್ಕಾರದ ಇ ಮಾರ್ಕೆಟ್ ಪ್ಲೇಸ್ (ಜಿ.ಇ.ಎಂ), ಲಘು ಉದ್ಯೋಗ ಭಾರತಿ- ಕರ್ನಾಟಕ ಸಹಯೋಗದೊಂದಿಗೆ, ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ಕ್ಷೇತ್ರದ ಘಟಕಗಳ ಖರೀದಿದಾರರನ್ನು ಮತ್ತು ಕರ್ನಾಟಕ ಮೂಲದವರನ್ನು ಒಟ್ಟುಗೂಡಿಸುವ ದೃಷ್ಟಿಯಿಂದ ಎಂ.ಎಸ್.ಎಂ.ಇ ಮಾರಾಟಗಾರರ ಸಭೆಯನ್ನು ಆಯೋಜಿಸಿದೆ. ಒಂದೇ ಸೂರಿನಡಿ ಎಂ.ಎಸ್.ಎಂ.ಇ ಮಾರಾಟಗಾರರು. ಜಿ.ಇ.ಎಂ. ನೀಡುವ ಅನಿಯಮಿತ ಮಾರುಕಟ್ಟೆ ಅವಕಾಶಗಳನ್ನು ಒದಗಿಸಲು ಫೆಬ್ರವರಿ 23, 2024 ರಂದು ಬೆಂಗಳೂರಿನ ವಿ ಒನ್ ಹೋಟೆಲ್ - ಅಂಬರ ಎಲೈಟ್ನಲ್ಲಿ ಕೇಂದ್ರೀಕೃತ ನೋಂದಣಿ ಅಭಿಯಾನವನ್ನು ನಡೆಸಲಾಯಿತು. ಜಿಇಎಂ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕರ್ನಾಟಕ ಮೂಲದ ಎಂ.ಎಸ್.ಎಂ.ಇ.ಗಳಲ್ಲಿ ಜಿಇಎಂ ಅಳವಡಿಕೆಗೆ ಚಾಲನೆ ನೀಡಲು ಭಾಗವಹಿಸಿದ ಸಂಸ್ಥೆಗಳು ಸಹಕರಿಸಿದವು.
ಜಿಇಎಂ ಎಂಬುದು ಒಂದು ಕೇಂದ್ರ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಆಗಿದೆ. ಎಲ್ಲಾ ಕೇಂದ್ರ/ರಾಜ್ಯ ಸರ್ಕಾರದ ಸಚಿವಾಲಯಗಳು/ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು (ಪಿಎಸ್ಯುಗಳು), ಪಂಚಾಯತ್ಗಳು, ಸಹಕಾರಿ ಸಂಸ್ಥೆಗಳು ಇತ್ಯಾದಿಗಳಿಂದ ಈ ಜಾಲತಾಣ ಸರಕು ಮತ್ತು ಸೇವೆಗಳ ಸಂಗ್ರಹಣೆಯನ್ನು ಸುಗಮಗೊಳಿಸುತ್ತದೆ. ಅದರ ಮಧ್ಯಸ್ಥಗಾರರಿಗೆ ಏಕೀಕೃತ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸುವ ಮೂಲಕ, ಜಿಇಎಂ ಸಾರ್ವಜನಿಕಗೊಳಿಸಲು ಪ್ರಯತ್ನಿಸುತ್ತದೆ. ಸಂಗ್ರಹಣೆ ಪ್ರಕ್ರಿಯೆಯು ಪಾರದರ್ಶಕ, ಪರಿಣಾಮಕಾರಿ ಮತ್ತು ಅಂತರ್ಗತವಾಗಿರುತ್ತದೆ. ಲಘು ಉದ್ಯೋಗ ಭಾರತಿ, ದೇಶದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸಲು 1994 ರಲ್ಲಿ ಸ್ಥಾಪಿಸಲಾದ ಲಾಭರಹಿತ ಪ್ಯಾನ್-ಇಂಡಿಯಾ ಸಂಸ್ಥೆಯಾಗಿದೆ.
ಭಾರತ ಸರ್ಕಾರದ ಹೆಚ್ಚುವರಿ ಸಿಇಒ- ಜಿಇಎಂ ಶ್ರೀ ಅಜಿತ್ ಬಿ ಚವಾಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಮತ್ತು ಕರ್ನಾಟಕ ಸರ್ಕಾರದ ಡಿಐಸಿ ಹೆಚ್ಚುವರಿ ನಿರ್ದೇಶಕರಾದ ಶ್ರೀ ಶ್ರೀನಿವಾಸ ಅವರು ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕದಾದ್ಯಂತದ ಎಂಎಸ್ಇಗಳ ಪ್ರತಿನಿಧಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಪಿಎಸ್ಯುಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಇಎಂಯ ಹೆಚ್ಚುವರಿ ಸಿಇಒ ಮತ್ತು ಮುಖ್ಯ ಮಾರಾಟ ಅಧಿಕಾರಿ ಶ್ರೀ ಅಜಿತ್ ಬಿ. ಚವಾಣ್, ಜಿಇಎಂ ಮೂಲಕ ಖರೀದಿ ಆದೇಶಗಳನ್ನು ಪೂರೈಸುವಲ್ಲಿ ಎಂಎಸ್ಇಗಳು ವಹಿಸಿದ ಪ್ರಮುಖ ಪಾತ್ರವನ್ನು ತಿಳಿಸಿದರು. ಜಿಇಎಂನಲ್ಲಿ ವಹಿವಾಟು ನಡೆಸಿದ ರೂ 3.47 ಲಕ್ಷ ಕೋಟಿಯ ಒಟ್ಟು ಆರ್ಡರ್ ಮೌಲ್ಯದ ಸುಮಾರು 50% ರಷ್ಟು ಎಂಎಸ್ಇಗಳಿಗೆ ನೀಡಲಾಗಿದೆ. ಕರ್ನಾಟಕದ ಎಂಎಸ್ಇಗಳಿಗೆ ಜಿಇಎಂ ನೀಡುವ ಬೃಹತ್ ವ್ಯಾಪಾರ ಅವಕಾಶಗಳನ್ನು ಅವರು ವಿವರಿಸಿದರು. ಅಂಚಿನಲ್ಲಿರುವ ಮಾರಾಟಗಾರರಲ್ಲಿ ಹಣಕಾಸಿನ ಸೀಮಿತ ಪ್ರವೇಶದ ಸವಾಲನ್ನು ಎದುರಿಸಲು 10 ನಿಮಿಷಗಳಲ್ಲಿ ಉಪ 10% ಬಡ್ಡಿ ದರದಲ್ಲಿ ರೂ 10 ಲಕ್ಷದವರೆಗೆ ಮೇಲಾಧಾರ ರಹಿತ ಉಚಿತ ಸಾಲವನ್ನು ಒದಗಿಸುವ ನೂತನ ಜಿಇಎಂ ಸಹಾಯ 2.0 ಅನ್ನು ಪ್ರಾರಂಭಿಸುವ ಜಿಇಎಂ ಯೋಜನೆಯನ್ನು ಕೂಡಾ ಅವರು ಘೋಷಿಸಿದರು. ಇದರಿಂದಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಎಂಎಸ್ಇಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀನಿವಾಸ ಅವರು, "ಜಿಇಎಂ ಕರ್ನಾಟಕದ ಎಂಎಸ್ಇಗಳಿಗೆ ಯಾವುದೇ ಸಮಯದಲ್ಲಿ ಎಲ್ಲಿಂದಲಾದರೂ ರಾಷ್ಟ್ರೀಯ ಸಾರ್ವಜನಿಕ ಸಂಗ್ರಹಣೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಸಾಧ್ಯತೆಗಳನ್ನು ಒದಗಿಸುವ ಮೂಲಕ ಹೊಸ ವ್ಯಾಪಾರ ಅವಕಾಶಗಳನ್ನು ತೆರೆಯುತ್ತಿದೆ" ಎಂದು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಪಿಎಸ್ಯುಗಳ ಪ್ರತಿನಿಧಿಗಳು ಎಂಎಸ್ಇ ಮಾರಾಟಗಾರರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಸಾರ್ವಜನಿಕ ಸಂಗ್ರಹಣೆಯ ಅಗತ್ಯತೆಗಳು ಮತ್ತು ಅವಶ್ಯಕತೆಗಳು ಮತ್ತು ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
“ಆರಂಭದಿಂದಲೂ, ಕರ್ನಾಟಕದ ಮಾರಾಟಗಾರರು ಜಿಇಎಂ ಮೂಲಕ ರೂ.32,937 ಕೋಟಿ ಮೌಲ್ಯದ ಆರ್ಡರ್ ಗಳನ್ನು ಪೂರೈಸಿದ್ದಾರೆ. ಇದರಲ್ಲಿ, ರೂ 12,570 ಕೋಟಿ ಮೌಲ್ಯದ ಆರ್ಡರ್ಗಳನ್ನು ರಾಜ್ಯದಲ್ಲಿ ನೋಂದಾಯಿಸಲಾದ ಎಂಎಸ್ಇ ಘಟಕಗಳು (31ನೇ ಜನವರಿ 2024 ರವರೆಗೆ) ಪೂರೈಸಿವೆ. ರಾಷ್ಟ್ರೀಯ ಸಾರ್ವಜನಿಕ ಸಂಗ್ರಹಣೆ ಮಾರುಕಟ್ಟೆಗೆ ತಮ್ಮ ಬೆರಳ ತುದಿಯಲ್ಲಿ ಪ್ರವೇಶದೊಂದಿಗೆ, ರಾಜ್ಯ ಎಂಎಸ್ಇಗಳು ಸಿ.ಪಿ.ಎಸ್.ಇ ಗಳು ಮತ್ತು ಇತರ ರಾಜ್ಯ ಸರ್ಕಾರಿ ಇಲಾಖೆಗಳಿಂದ ಹೆಚ್ಚಿನ ಪಾಲನ್ನು ಪಡೆದಿವೆ, ”ಎಂದು ಶ್ರೀ ಚವಾಣ್ ವಿವರಿಸಿದರು.
ಸುಮಾರು ರೂ11,529 ಕೋಟಿ ಮೌಲ್ಯದ ಆರ್ಡರ್ಗಳನ್ನು ಈ ಎಂಎಸ್ಇಗಳು, ಕೇಂದ್ರ ಸರ್ಕಾರದ ಖರೀದಿದಾರರು ಮತ್ತು ಇತರ ರಾಜ್ಯ ಖರೀದಿದಾರರಿಂದ (31ನೇ ಜನವರಿ 2023 ರವರೆಗೆ) ಸ್ವೀಕರಿಸಿವೆ.
ಕುಶಲಕರ್ಮಿಗಳು ಮತ್ತು ನೇಕಾರರು, ಕುಶಲಕರ್ಮಿಗಳು, ಬುಡಕಟ್ಟು ಉದ್ಯಮಿಗಳು, ಎಂಎಸ್ಇಗಳು, ವಿಶೇಷವಾಗಿ ಮಹಿಳಾ ನೇತೃತ್ವದ ಮತ್ತು ಎಸ್ಸಿ/ಎಸ್ಟಿ ಎಂಎಸ್ಇಗಳು, ದಿವ್ಯಾಂಗನ್ಗಳು, ಎಸ್ಎಚ್ಜಿಗಳು, ಎಫ್ಪಿಒಗಳು ಮತ್ತು ಸ್ಟಾರ್ಟ್ಅಪ್ಗಳಂತಹ ಅಂಚಿನಲ್ಲಿರುವ ಮಾರಾಟಗಾರರ ಗುಂಪುಗಳಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆಗೆ ಪ್ರವೇಶವನ್ನು ಹೆಚ್ಚಿಸಲು ಜಿಇಎಂ ಬದ್ಧವಾಗಿದೆ. ಎಂಎಸ್ಇಗಳ ನೋಂದಣಿ ಮತ್ತು ಆನ್ಬೋರ್ಡಿಂಗ್ ಅನ್ನು ಸುಲಭಗೊಳಿಸಲು ಪೋರ್ಟಲ್ ಉದ್ಯಮ ಪೋರ್ಟಲ್ ದೊಂದಿಗೆ ಸಂಯೋಜಿಸಲಾಗಿದೆ.
ಈ ಸಂದರ್ಭದಲ್ಲಿ, ಲಘು ಉದ್ಯೋಗ ಭಾರತಿ- ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶ್ರೀ ಕೆ ನಾರಾಯಣ ಪ್ರಸನ್ನ ಮತ್ತು ಲಘು ಉದ್ಯೋಗ ಭಾರತಿ- ಕರ್ನಾಟಕ ಅಧ್ಯಕ್ಷ ಡಾ. ಸಚಿನ್ ಬಿ ಸಬ್ನಿಸ್ ಅವರು ಅವರು ಪ್ರತಿನಿಧಿಸುವ ಲಘು ಉದ್ಯೋಗ ಭಾರತಿಯ ಸದಸ್ಯರಿಗೆ ಲೈವ್ ಆನ್ಬೋರ್ಡಿಂಗ್ ಅನುಕೂಲ ಮಾಡಿಕೊಟ್ಟರು. ಜಿಇಎಂ ಪೋರ್ಟಲ್ ಮತ್ತು ಜಿಇಎಂ ಪ್ರತಿನಿಧಿಗಳಿಂದ ಸಮಸ್ಯೆಗಳ ಸ್ಥಳದಲ್ಲೇ ಪರಿಹಾರವನ್ನು ವ್ಯವಸ್ಥೆ ಮಾಡಲಾಯಿತು. ಈ ತಿಂಗಳ ಆರಂಭದಲ್ಲಿ, ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟು ಮರ್ಚಂಡೈಸ್ ಮೌಲ್ಯದಲ್ಲಿ ರೂ 3 ಲಕ್ಷ ಕೋಟಿಯನ್ನು ಮೀರಿಸುವ ಮೂಲಕ ಜಿಇಎಂ, ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮೌಲ್ಯದ ಆರ್ಡರ್ಗಳೊಂದಿಗೆ, ಪೋರ್ಟಲ್ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ರೂ 4 ಲಕ್ಷ ಕೋಟಿಯ ಗಡಿಯನ್ನು ತಲುಪುವ ನಿರೀಕ್ಷೆಯಲ್ಲಿದೆ.
ಜಿಇಎಂ ಬಗ್ಗೆ:
ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ (ಜಿಇಎಂ) ವಿವಿಧ ಸರ್ಕಾರಿ ಇಲಾಖೆಗಳು, ಏಜೆನ್ಸಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಸರಕು ಮತ್ತು ಸೇವೆಗಳ ಸಂಗ್ರಹಣೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ ಕೇಂದ್ರ ಸರ್ಕಾರದ ಆನ್ಲೈನ್ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಆಗಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯನ್ನು ತರಲು ಸರ್ಕಾರದ "ಡಿಜಿಟಲ್ ಇಂಡಿಯಾ" ಉಪಕ್ರಮದ ಭಾಗವಾಗಿ ಇದನ್ನು ಆಗಸ್ಟ್ 2016 ರಲ್ಲಿ ಪ್ರಾರಂಭಿಸಲಾಯಿತು. ಸಾರ್ವಜನಿಕ ಸಂಗ್ರಹಣೆ ಪ್ರಕ್ರಿಯೆಗಳನ್ನು ಸರಳಗೊಳಿಸಲು ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಜಿಇಎಂ ಹೊಂದಿದೆ.
*****
(ಪ್ರಕಟಣೆ ಐ.ಡಿ.: 2008472)
ವಿಸಿಟರ್ ಕೌಂಟರ್ : 57