ಸಂಪುಟ
azadi ka amrit mahotsav

ರಾಷ್ಟ್ರೀಯ ಜಾನುವಾರು ಮಿಷನ್ ನಲ್ಲಿ ಹೆಚ್ಚುವರಿ ಕಾರ್ಯಚಟುವಟಿಕೆಗಳನ್ನು ಸೇರಿಸಲು ಕೇಂದ್ರ ಸಂಪುಟ ಅನುಮೋದನೆ

Posted On: 21 FEB 2024 10:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಕೆಳಗಿನಂತೆ ಹೆಚ್ಚುವರಿ ಕಾರ್ಯಚಟುವಟಿಕೆಗಳನ್ನು ಸೇರಿಸುವ ಮೂಲಕ ರಾಷ್ಟ್ರೀಯ ಜಾನುವಾರು ಮಿಷನ್ ನಲ್ಲಿ ಮತ್ತಷ್ಟು ಮಾರ್ಪಾಡುಗಳನ್ನು ಅನುಮೋದಿಸಿದೆ:

i.    ಕುದುರೆ, ಕತ್ತೆ, ಹೇಸರಗತ್ತೆ, ಒಂಟೆಗಳ ವ್ಯವಸಾಯದಲ್ಲಿ ಉದ್ಯಮಶೀಲತೆ ಸ್ಥಾಪನೆಗಾಗಿ 50% ಬಂಡವಾಳ ಸಬ್ಸಿಡಿಯೊಂದಿಗೆ ರೂ. 50 ಲಕ್ಷದವರೆಗೆ ವ್ಯಕ್ತಿಗಳು, ಎಫ್.ಪಿ.ಒ., ಎಸ್.ಹೆಚ್.ಜಿ., ಜೆ.ಎಲ್.ಜಿ.‌, ಎಫ್.ಸಿ.ಒ. ಮತ್ತು ಸೆಕ್ಷನ್ 8 ಕಂಪನಿಗಳಿಗೆ ನೆರವನ್ನು ಒದಗಿಸಲಾಗುತ್ತದೆ. ಅಲ್ಲದೆ ಕುದುರೆ, ಕತ್ತೆ ಮತ್ತು ಒಂಟೆಗಳ ತಳಿ ಸಂರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ನೆರವು ನೀಡಲಾಗುವುದು. ಕುದುರೆ, ಕತ್ತೆ ಮತ್ತು ಒಂಟೆಗಳಿಗಾಗಿ ವೀರ್ಯ ಕೇಂದ್ರ ಮತ್ತು ನ್ಯೂಕ್ಲಿಯಸ್ ಬ್ರೀಡಿಂಗ್ ಫಾರ್ಮ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ರೂ.10 ಕೋಟಿ ನೀಡಲಿದೆ.

ii.    ಖಾಸಗಿ ಕಂಪನಿಗಳು, ಸ್ಟಾರ್ಟ್ ಅಪ್ಗಳು/ ಎಸ್ಎಚ್ಜಿಗಳು/ ಎಫ್ಪಿಒಗಳು/ ಎಫ್ಸಿಒಗಳು/ ಜೆಎಲ್ಜಿಗಳು/ ರೈತರ ಸಹಕಾರ ಸಂಘಗಳಿಗೆ (ಪ್ರೊಸೆಸಿಂಗ್ ಮತ್ತು ಗ್ರೇಡಿಂಗ್ ಯೂನಿಟ್/ ಮೇವು ಸಂಗ್ರಹಣೆ ಉಗ್ರಾಣ/ಗೋಡೌನ್) ಮೇವು ಬೀಜ ಸಂಸ್ಕರಣಾ ಮೂಲಸೌಕರ್ಯಕ್ಕಾಗಿ ಉದ್ಯಮಿಗಳ ಸ್ಥಾಪನೆ. ಎಫ್ಸಿಒ), ವಿಭಾಗ 8 ಕಂಪನಿಗಳು ಕಟ್ಟಡ ನಿರ್ಮಾಣ, ರಿಸೀವಿಂಗ್ ಶೆಡ್, ಒಣಗಿಸುವ ಪ್ಲಾಟ್ಫಾರ್ಮ್, ಯಂತ್ರೋಪಕರಣಗಳು ಮುಂತಾದ ಮೂಲಸೌಕರ್ಯಗಳನ್ನು ಸ್ಥಾಪಿಸುವುದು, ಗ್ರೇಡಿಂಗ್ ಪ್ಲಾಂಟ್ಗಳು ಮತ್ತು ಬೀಜ ಸಂಗ್ರಹಣೆ ಗೋಡೌನ್ ಸೇರಿದಂತೆ ಕಾರ್ಯಚಟುವಟಿಕೆಗಳಿಗಾಗಿ 50% ಬಂಡವಾಳ ಸಬ್ಸಿಡಿಯೊಂದಿಗೆ ರೂ.50 ಲಕ್ಷಗಳವರೆಗೆ ನೆರವು ನೀಡಲಿದೆ. ಯೋಜನೆಯ ಉಳಿದ ವೆಚ್ಚವನ್ನು ಫಲಾನುಭವಿಯು ಬ್ಯಾಂಕ್ ಹಣಕಾಸು ಅಥವಾ ಸ್ವಯಂ-ಧನಸಹಾಯದ ಮೂಲಕ ವ್ಯವಸ್ಥೆ ಮಾಡಿಕೊಳ್ಳ ಬೇಕಾಗುತ್ತದೆ.

iii.    ಮೇವು ಸಾಗುವಳಿ ಪ್ರದೇಶಗಳನ್ನು ಹೆಚ್ಚಿಸಲು, ಅರಣ್ಯೇತರ ಭೂಮಿ, ಪಾಳು ಭೂಮಿ/ ಶ್ರೇಣಿಯ ಭೂಮಿ/ ಕೃಷಿಯೋಗ್ಯವಲ್ಲದ ಹಾಗೂ ಅರಣ್ಯ ಭೂಮಿ "ಅರಣ್ಯವಲ್ಲದ ಬಂಜರು ಭೂಮಿ (ವೇಸ್ಟ್‌ಲ್ಯಾಂಡ್) / ರೇಂಜ್‌ಲ್ಯಾಂಡ್ / ಕೃಷಿಯೋಗ್ಯವಲ್ಲದ ಭೂಮಿ" ಮತ್ತು "ಅರಣ್ಯ ಭೂಮಿಯಿಂದ ಮೇವು ಉತ್ಪಾದನೆ" ಹಾಗೂ ಕ್ಷೀಣಿಸಿದ ಅರಣ್ಯ ಭೂಮಿಯಲ್ಲಿ ಮೇವು ಕೃಷಿಗೆ – ಇತ್ಯಾದಿಗಳಿಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸಹಾಯ ಮಾಡುತ್ತದೆ ಇದರಿಂದ ದೇಶದಲ್ಲಿ ಮೇವಿನ ಲಭ್ಯತೆ ಹೆಚ್ಚಲಿದೆ. 

iv.    ಜಾನುವಾರು ವಿಮಾ ಕಾರ್ಯಕ್ರಮವನ್ನು ಸರಳೀಕರಿಸಲಾಗಿದೆ. ರೈತ ಫಲಾನುಭವಿಗಳಿಗೆ ಪ್ರೀಮಿಯಂನ ಪಾಲನ್ನು ಕಡಿತಗೊಳಿಸಲಾಗಿದೆ ಮತ್ತು ಇದು ಪ್ರಸ್ತುತ ಫಲಾನುಭವಿ ಪಾಲಿನ 20%, 30%, 40% ಮತ್ತು 50% ಕ್ಕೆ ಹೋಲಿಸಿದರೆ ಇನ್ನು ಮುಂದಕ್ಕೆ ಅದು ಕೇವಲ 15% ಆಗಿರುತ್ತದೆ. ಪ್ರೀಮಿಯಂನ ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯಗಳು - ಎಲ್ಲಾ ರಾಜ್ಯಗಳಿಗೆ 60:40 ರಂತೆ , ವಿಶೇಷ ರಾಜ್ಯಗಳಿಗೆ 90:10 ರಂತೆ ಹಂಚಿಕೊಳ್ಳಲಾಗುತ್ತದೆ. ಜಾನುವಾರು, ಕುರಿ ಮತ್ತು ಮೇಕೆಗಳಿಗೆ - 5 ಜಾನುವಾರು ಘಟಕದ ಬದಲಿಗೆ 10 ಜಾನುವಾರು ಘಟಕಗಳಿಗೆ ವಿಮೆ ಮಾಡಬೇಕಾದ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇದು ಜಾನುವಾರು ಸಾಕಣೆದಾರ ರೈತರು ತಮ್ಮ ಬೆಲೆಬಾಳುವ ಪ್ರಾಣಿಗಳಿಗೆ ಕೇವಲ ಕನಿಷ್ಠ ಮೊತ್ತವನ್ನು ಪಾವತಿಸುವ ಮೂಲಕ ವಿಮೆ ಮಾಡಲು ಅನುಕೂಲವಾಗುತ್ತದೆ.

ಹಿನ್ನೆಲೆ:

2014-15 ರಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು (i) ಮೇವು ಮತ್ತು ಫೀಡ್ ಅಭಿವೃದ್ಧಿಯ ಉಪ-ಮಿಷನ್ (ii) ಜಾನುವಾರು ಅಭಿವೃದ್ಧಿಯ ಉಪ-ಮಿಷನ್ (ii) ಈಶಾನ್ಯ ಪ್ರದೇಶದಲ್ಲಿ ಹಂದಿ ಅಭಿವೃದ್ಧಿಯ ಉಪ-ಮಿಷನ್ (iii) 50 ಚಟುವಟಿಕೆಗಳನ್ನು ಹೊಂದಿರುವ ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ ಮತ್ತು ವಿಸ್ತರಣೆಯ ಉಪ-ಮಿಷನ್ – ಎಂಬ ರೀತಿಯ ನಾಲ್ಕು ಉಪ-ಮಿಷನ್ ಗಳೊಂದಿಗೆ ಪ್ರಾರಂಭಿಸಲಾಯಿತು.

ಯೋಜನೆಯನ್ನು 2021-22 ರಲ್ಲಿ ಮರು-ಜೋಡಣೆ ಮಾಡಲಾಯಿತು ಮತ್ತು 2021 ರ ಜುಲೈನಲ್ಲಿ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ರೂ.2300 ಕೋಟಿ ವೆಚ್ಚದಲ್ಲಿ ಸಿಸಿಇಎ ಅನುಮೋದಿಸಿತು.

ಪ್ರಸ್ತುತ ಮರು-ಜೋಡಣೆಗೊಂಡ ರಾಷ್ಟ್ರೀಯ ಜಾನುವಾರು ಮಿಷನ್ ಈಗ ಮೂರು ಉಪ-ಮಿಷನ್‌ಗಳನ್ನು ಹೊಂದಿದೆ. ಅವುಗಳೆಂದರೆ -  (i) ಜಾನುವಾರು ಮತ್ತು ಕೋಳಿಗಳ ತಳಿ ಸುಧಾರಣೆಯ ಉಪ-ಮಿಷನ್ (ii) ಫೀಡ್ ಮತ್ತು ಮೇವಿನ ಉಪ-ಮಿಷನ್ ಮತ್ತು (iii) ನಾವೀನ್ಯತೆ ಮತ್ತು ವಿಸ್ತರಣೆಯ ಉಪ-ಮಿಷನ್. ಮರು-ಜೋಡಣೆಗೊಂಡ ರಾಷ್ಟ್ರೀಯ ಜಾನುವಾರು ಮಿಷನ್ ಈಗ ಉದ್ಯಮಶೀಲತೆ ಅಭಿವೃದ್ಧಿ, ಆಹಾರ (ಫೀಡ್) ಮತ್ತು ಮೇವು ಅಭಿವೃದ್ಧಿ, ಸಂಶೋಧನೆ ಮತ್ತು ನಾವೀನ್ಯತೆ, ಜಾನುವಾರು ವಿಮೆಯ ಗುರಿ ಮುಂತಾದ 10 ಕಾರ್ಯ ಚಟುವಟಿಕೆಗಳನ್ನು ಹೊಂದಿದೆ.

******


(Release ID: 2008280) Visitor Counter : 88