ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

​​​​​​​ಭಾರತದ ಡಿಜಿಟಲ್ ಕ್ರಿಯೇಟರ್ ಎಕಾನಮಿ ಮತ್ತು ಅದರ ಪ್ರಭಾವದ ಕುರಿತು ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

Posted On: 10 FEB 2024 2:20PM by PIB Bengaluru

ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯು ಭಾರತದ ಬೆಳವಣಿಗೆ ಮತ್ತು ಸಾಂಸ್ಕೃತಿಕ ನಿರೂಪಣೆಯನ್ನು ರೂಪಿಸುವ, ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಚಾಲನೆ ನೀಡುವ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ವೈವಿಧ್ಯಮಯ ಪ್ರತಿಭೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್ಥಿಕತೆಯ ಪರಿವರ್ತಕ ಶಕ್ತಿ ಮತ್ತು ಪ್ರಭಾವಕ್ಕೆ ಆದ್ಯತೆ ನೀಡಿದ್ದಾರೆ. ಇದಕ್ಕೆ ಅನುಗುಣವಾಗಿ, MyGov ಇಂಡಿಯಾವು ಭಾರತದ ಡಿಜಿಟಲ್ ಕ್ಷೇತ್ರದ ಪ್ರಭಾವಶಾಲಿ ಕೊಡುಗೆಗಳಿಗಾಗಿ ಡಿಜಿಟಲ್ ಇನ್ನೋವೇಟರ್‌ಗಳು ಮತ್ತು ವಿಷಯ ರಚನೆಕಾರರನ್ನು ಗುರುತಿಸಲು ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. 20 ವಿಭಾಗಗಳಲ್ಲಿ ಅಸಾಧಾರಣ ಸೃಜನಶೀಲತೆ ಮತ್ತು ನಾವೀನ್ಯತೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುವುದು. ಡಿಜಿಟಲ್‌ ಆರ್ಥಿಕತೆಯು ಬೆಳವಣಿಗೆಗೆ ಸೂಕ್ತವಾಗಿದೆ, ಮಾಧ್ಯಮದ ಕ್ಷೇತ್ರಕ್ಕೆ ಹೆಚ್ಚು ಪೂರಕವಾಗಿದೆ ಮತ್ತು ತಮ್ಮದೇ ಆದ ಸಮುದಾಯಗಳನ್ನು ನಿರ್ಮಿಸಲು ಯುವಜನರಿಗೆ ಅಧಿಕಾರ ನೀಡುತ್ತಿದೆ. ಈ ಸೃಷ್ಟಿಕರ್ತರು ಆತ್ಮವಿಶ್ವಾಸ, ದೃಢತೆ ಮತ್ತು ಬೇರೂರಿದ ನವ ಭಾರತದ ನಾಯಕರಾಗಿ ಹೊರಹೊಮ್ಮಿದ್ದಾರೆ, ಅವರು ಸಾಮಾಜಿಕ ಪ್ರಭಾವವನ್ನು ಸೃಷ್ಟಿಸಲು, ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ, 'ಲೋಕಲ್ ಫಾರ್ ವೋಕಲ್' ಆಂದೋಲನಕ್ಕೆ ಕೊಡುಗೆ ನೀಡುತ್ತಾರೆ. ರಾಷ್ಟ್ರೀಯ ಪ್ರಶಸ್ತಿಯು ಕಥನ, ಸಾಮಾಜಿಕ ಬದಲಾವಣೆಯ ಸಮರ್ಥನೆ, ಪರಿಸರ ಸಮರ್ಥನೀಯತೆ, ಶಿಕ್ಷಣ, ಗೇಮಿಂಗ್ ಮತ್ತು ಇತರ ವಿಭಾಗ ಸೇರಿದಂತೆ ವಿವಿಧ ಡೊಮೇನ್‌ಗಳ ಶ್ರೇಷ್ಠತೆ ಮತ್ತು ಪ್ರಭಾವವನ್ನು ಗುರುತಿಸುವ ವರ್ಗಗಳ ವ್ಯಾಪಕ ಶ್ರೇಣಿಯನ್ನು ಒಳಗೊಂಡಿದೆ.

1. ಅತ್ಯುತ್ತಮ ಕಥೆಗಾರ ಪ್ರಶಸ್ತಿ: ಸೃಜನಾತ್ಮಕ ಕಥೆ ಹೇಳುವ ಮೂಲಕ ಭಾರತದ ಸಾಂಸ್ಕೃತಿಕ ನೀತಿಯನ್ನು ಉತ್ತೇಜಿಸುವವರಿಗೆ ನೀಡಲಾಗುತ್ತದೆ.

2. ದಿ ಡಿಸ್ಟ್ರಪ್ಟರ್ ಆಫ್ ದಿ ಇಯರ್: ಹಾಲಿ ಸ್ಥಿತಿಗೆ  ಸವಾಲು ಹಾಕಿ ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಅಥವಾ ನಾವೀನ್ಯತೆಯನ್ನು ತರುತ್ತಿರುವವರನ್ನು ಗುರುತಿಸುತ್ತದೆ.

3. ವರ್ಷದ ಸೆಲೆಬ್ರಿಟಿ ಕ್ರಿಯೇಟರ್: ಸಕಾರಾತ್ಮಕ ಬದಲಾವಣೆಯ ಮೇಲೆ ಪ್ರಭಾವ ಬೀರಲು ಮತ್ತು ಸೃಜನಾತ್ಮಕ ಮತ್ತು ಪ್ರಭಾವಶಾಲಿ ಆನ್‌ಲೈನ್ ವಿಷಯಕ್ಕೆ ಪೂರ್ವನಿದರ್ಶನವನ್ನು ಹೊಂದಿಸಲು ತಮ್ಮ ಸ್ಥಾನಮಾನವನ್ನು ಹತೋಟಿಯಲ್ಲಿಟ್ಟುಕೊಂಡು ಉನ್ನತ ಸ್ಥಾನಕ್ಕೆ ಹೋದವರನ್ನು ಗುರುತಿಸುತ್ತದೆ.

4. ಗ್ರೀನ್ ಚಾಂಪಿಯನ್ ಪ್ರಶಸ್ತಿ: ಪರಿಸರ ಸಂರಕ್ಷಣೆ, ಸುಸ್ಥಿರತೆ ಮತ್ತು ಹಸಿರು ಜೀವನ ಪದ್ಧತಿಗಳಿಗಾಗಿ ಪ್ರತಿಪಾದಿಸುವವರಿಗೆ ಮನ್ನಣೆ

5. ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಸೃಷ್ಟಿಕರ್ತ: ಸಾಮಾಜಿಕ ಕಾರಣಗಳು, ದತ್ತಿ, ಒಳಗೊಳ್ಳುವಿಕೆ, ಸಬಲೀಕರಣ ಮತ್ತು ಇತರ ಸಕಾರಾತ್ಮಕ ಬದಲಾವಣೆಗಳಿಗಾಗಿ ಪ್ರತಿಪಾದಿಸಲು ತಮ್ಮ ವೇದಿಕೆಯನ್ನು ಬಳಸುವವರಿಗೆ ಆದ್ಯತೆ

6. ಅತ್ಯಂತ ಪ್ರಭಾವಶಾಲಿ ಅಗ್ರಿ ಕ್ರಿಯೇಟರ್: ಭಾರತದಲ್ಲಿ ಕೃಷಿಯನ್ನು ಉನ್ನತೀಕರಿಸಲು ಹೊಸ ಕೃಷಿ ತಂತ್ರಗಳು, ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಉಪಕರಣಗಳು ಇತ್ಯಾದಿಗಳ ಬಗ್ಗೆ ಶಿಕ್ಷಣ ನೀಡುವ, ವಿಮರ್ಶಿಸುವ ಮತ್ತು ಪ್ರದರ್ಶಿಸುವವರಿಗೆ ಪ್ರಶಸ್ತಿ

7. ವರ್ಷದ ಸಾಂಸ್ಕೃತಿಕ ರಾಯಭಾರಿ: ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಕೇಂದ್ರೀಕರಿಸಿದ ವಿಭಿನ್ನ ಜೀವನಶೈಲಿಯ ವಿಷಯದ ಮೂಲಕ ದೇಶದ ಸಂಸ್ಕೃತಿಯನ್ನು ಉತ್ತೇಜಿಸಲು ಸಹಾಯ ಮಾಡುವವರನ್ನು ಗೌರವಿಸುತ್ತದೆ.

8. ಇಂಟರ್‌ನ್ಯಾಷನಲ್ ಕ್ರಿಯೇಟರ್ ಪ್ರಶಸ್ತಿ: ವಿದೇಶದಲ್ಲಿ ನೆಲೆಸಿ ಭಾರತದ ಸಂಸ್ಕೃತಿ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿರುವವರಿಗೆ ಗೌರವ

9. ಅತ್ಯುತ್ತಮ ಟ್ರಾವೆಲ್ ಕ್ರಿಯೇಟರ್ ಪ್ರಶಸ್ತಿ: ಪ್ರಯಾಣದ ವಿಷಯದ ಮೂಲಕ ಭಾರತದ ಶ್ರೀಮಂತ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುವವರಿಗೆ ಪ್ರಶಸ್ತಿ.

10. ಸ್ವಚ್ಛತಾ ರಾಯಭಾರಿ ಪ್ರಶಸ್ತಿ: ಸ್ವಚ್ಛತೆಯನ್ನು ಉತ್ತೇಜಿಸಲು ಸಮರ್ಪಿತವಾದವರಿಗೆ ವಿಶೇಷ ಸಮ್ಮಾನ

11. ದಿ ನ್ಯೂ ಇಂಡಿಯಾ ಚಾಂಪಿಯನ್ ಪ್ರಶಸ್ತಿ: ಭಾರತದ ಪ್ರಗತಿ, ಸಾಧನೆಗಳನ್ನು ಪ್ರದರ್ಶಿಸುವ ರಚನೆಕಾರಗೆ ಆದ್ಯತೆ ಜೊತೆಗೆ ಸರ್ಕಾರದ ನೀತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಮೇಲೆ ಕೇಂದ್ರೀಕರಿಸುವ ಉಪಕ್ರಮಗಳನ್ನು ಉತ್ತೇಜಿಸುವುದು.

12. ಟೆಕ್ ಕ್ರಿಯೇಟರ್ ಪ್ರಶಸ್ತಿ: ಇತ್ತೀಚಿನ ಗ್ಯಾಜೆಟ್‌ಗಳು ಮತ್ತು ನಾವೀನ್ಯತೆಗಳ ಕುರಿತು ಒಳನೋಟಗಳು, ವಿಮರ್ಶೆಗಳು ಮತ್ತು ಶಿಫಾರಸುಗಳನ್ನು ನೀಡುವ ತಂತ್ರಜ್ಞರಿಗೆ ಸನ್ಮಾನ

13. ಹೆರಿಟೇಜ್ ಫ್ಯಾಶನ್ ಐಕಾನ್ ಪ್ರಶಸ್ತಿ: ಸ್ಥಳೀಯ ಬಟ್ಟೆ ಬ್ರಾಂಡ್‌ಗಳನ್ನು ಉತ್ತೇಜಿಸುವವರಿಗೆ ಪ್ರಶಸ್ತಿ. ಭಾರತದ ಶ್ರೀಮಂತ ಪರಂಪರೆಯನ್ನು ಉತ್ತೇಜಿಸುತ್ತದೆ ಮತ್ತು ಸಂರಕ್ಷಿಸುತ್ತದೆ.

14. ಅತ್ಯಂತ ಸೃಜನಾತ್ಮಕತೆ (ಪುರುಷ ಮತ್ತು ಸ್ತ್ರೀ): ಮನರಂಜನಾ ಮೌಲ್ಯ ಮತ್ತು ಸಾಮಾಜಿಕ ಸಂದೇಶ ಎರಡನ್ನೂ ಹೊಂದಿರುವ ಅಸಾಧಾರಣ ವಿಷಯವನ್ನು ಒದಗಿಸುವ ಪುರುಷ ಮತ್ತು ಸ್ತ್ರೀ ರಚನೆಕಾರರಿಗೆ ವಿಶೇಷ ಗೌರವ

15. ಆಹಾರ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣತ: ಭಾರತದ ಆಹಾರ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರದರ್ಶಿಸುವ ಪಾಕಶಾಲೆಯ ವಿಷಯವನ್ನು ಅನ್ವೇಷಿಸುವ, ವಿಮರ್ಶಿಸುವ ಪರಿಣತರಿಗೆ ಗೌರವ.

16. ಶಿಕ್ಷಣ ಕ್ಷೇತ್ರದಲ್ಲಿ ಸಾಧಕ: ಕಲಿಯುವವರನ್ನು ಉತ್ಕೃಷ್ಟಗೊಳಿಸುವ ಮಾಹಿತಿಯುಕ್ತ ವಿಷಯದೊಂದಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ರಚನೆಕಾರರಿಗೆ ಆದ್ಯತೆ

17. ಗೇಮಿಂಗ್ ವಿಭಾಗದಲ್ಲಿ ಅತ್ಯುತ್ತಮ ರಚನೆಕಾರರು: ಗೇಮ್‌ಪ್ಲೇ, ವಿಮರ್ಶೆಗಳು ಅಥವಾ ಎಸ್‌ಪೋರ್ಟ್ಸ್ ಕಾಮೆಂಟರಿ ಮೂಲಕ ಗೇಮಿಂಗ್‌ನಲ್ಲಿ ವಿಶೇಷ ಪ್ರತಿಭೆ ತೋರಿರುವವರಿಗೆ ಪ್ರಶಸ್ತಿ

18. ಅತ್ಯುತ್ತಮ ಮೈಕ್ರೋ ಕ್ರಿಯೇಟರ್: ಕಡಿಮೆ ಪ್ರೇಕ್ಷಕರ ಹೊರತಾಗಿಯೂ, ತಮ್ಮ ಸಮುದಾಯದೊಳಗೆ ಗಮನಾರ್ಹ ಪ್ರಭಾವ ಬೀರುವ ಮೈಕ್ರೋ-ಕ್ರಿಯೇಟರ್‌ಗಳಿಗೆ ವಿಶೇಷ ಆದ್ಯತೆ.

19. ಅತ್ಯುತ್ತಮ ನ್ಯಾನೊ ಸೃಷ್ಟಿಕರ್ತ: ನ್ಯಾನೊ-ಸೃಷ್ಟಿಕರ್ತರನ್ನು ಗೌರವಿಸಲಾಗುವುದು. ಹೆಚ್ಚಿನ ಮಟ್ಟದ ಸಂವಹನ ಮತ್ತು ವೈಯಕ್ತಿಕ ಸಂಪರ್ಕವನ್ನು ಹೆಚ್ಚಿಸುತ್ತದೆ.

20. ಅತ್ಯುತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ತಜ್ಞ: ಆರೋಗ್ಯ, ಕ್ಷೇಮ ಮತ್ತು ಫಿಟ್‌ನೆಸ್ ಅನ್ನು ಉತ್ತೇಜಿಸುವ ರಚನೆಕಾರರನ್ನು ಗುರುತಿಸುತ್ತದೆ, ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಉತ್ತೇಜಿಸುವವರರಿಗೆ ಪ್ರಶಸ್ತಿ

ಆಯ್ಕೆ ಪ್ರಕ್ರಿಯೆ: ಆಯ್ಕೆ ಪ್ರಕ್ರಿಯೆಯು ನಾಮನಿರ್ದೇಶನ ಹಂತ, ನಾಮನಿರ್ದೇಶನಗಳ ಸ್ಕ್ರೀನಿಂಗ್, ನಂತರ ಸಾರ್ವಜನಿಕ ಮತದಾನ ಮತ್ತು ತೀರ್ಪುಗಾರರ ವಿಮರ್ಶೆಯನ್ನು ಒಳಗೊಂಡಿರುತ್ತದೆ. ತೀರ್ಪುಗಾರರ ಮತ್ತು ಸಾರ್ವಜನಿಕ ಮತಗಳ ಸಂಯೋಜನೆಯ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುತ್ತದೆ.

ಫಲಿತಾಂಶಗಳು: ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯು ಹೆಚ್ಚು ಅಂತರ್ಗತ, ಭಾಗವಹಿಸುವಿಕೆ ಮತ್ತು ಸಶಕ್ತ ಸಮಾಜವನ್ನು ನಿರ್ಮಿಸುವಲ್ಲಿ ಡಿಜಿಟಲ್ ಮಾಧ್ಯಮದ ಪರಿವರ್ತಕ ಸಾಮರ್ಥ್ಯವನ್ನು ಪ್ರೇರೇಪಿಸುವ, ಗುರುತಿಸುವ ಗುರಿಯನ್ನು ಹೊಂದಿದೆ. ಧನಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಡಿಜಿಟಲ್ ರಚನೆಕಾರರಿಗೆ ಆದ್ಯತೆ ಒದಗಿಸಲು ಇದು ನೆರವಾಗಲಿದೆ. ಸಹಯೋಗ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚಿನ ಒಳಿತಿಗಾಗಿ ತಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರಸ್ತುತಪಡಿಸಲು ಹೊಸಬರಿಗೆ ಹೆಚ್ಚಿನ ಅವಕಾಶ ನೀಡಿ ಪ್ರೋತ್ಸಾಹಿಸುತ್ತದೆ.

ಭಾರತದಲ್ಲಿ ಡಿಜಿಟಲ್ ನಾವೀನ್ಯತೆ ಮತ್ತು ಅದರ ಪ್ರಭಾವ ಹೆಚ್ಚಿಸಲು ಈ ಉಪಕ್ರಮದಲ್ಲಿ ಭಾಗವಹಿಸಲು MyGov ಇಂಡಿಯಾ ಎಲ್ಲಾ ಡಿಜಿಟಲ್ ರಚನೆಕಾರರು, ನಾವೀನ್ಯಕಾರರು ಮತ್ತು ಬದಲಾವಣೆ ಮಾಡುವವರನ್ನು ಆಹ್ವಾನಿಸುತ್ತದೆ.

****


(Release ID: 2004839) Visitor Counter : 105


Read this release in: English , Urdu , Marathi , Hindi