ಗೃಹ ವ್ಯವಹಾರಗಳ ಸಚಿವಾಲಯ
ಪೊಲೀಸರಿಗೆ ಲಿಂಗ ಸಂವೇದನೆ ಬಗ್ಗೆ ತರಬೇತಿ
Posted On:
07 FEB 2024 3:55PM by PIB Bengaluru
ಭಾರತದ ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ - II (ರಾಜ್ಯ ಪಟ್ಟಿ) ಅಡಿಯಲ್ಲಿ ಪೊಲೀಸ್ ವಿಷಯವು ಸರ್ಕಾರದ ವಿಷಯವಾಗಿದೆ. ಆದ್ದರಿಂದ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಿಂಗ ಸಂವೇದನೆ ಮತ್ತು ಈ ನಿಟ್ಟಿನಲ್ಲಿ ನಿರ್ದಿಷ್ಟ ಅಧ್ಯಯನಗಳು ಸೇರಿದಂತೆ ತರಬೇತಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರಾಥಮಿಕವಾಗಿ ಜವಾಬ್ದಾರರಾಗಿರುತ್ತಾರೆ. ಲಿಂಗ ಸಂವೇದನೆಯು ಹೈದರಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ (ಎಸ್ ವಿ ಪಿಎನ್ ಎ), ಈಶಾನ್ಯ ಪೊಲೀಸ್ ಅಕಾಡೆಮಿ (ಎನ್ಇಪಿಎ), ಶಿಲ್ಲಾಂಗ್ ಮತ್ತು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ & ಡೆವಲಪ್ಮೆಂಟ್ (ಬಿಪಿಆರ್ & ಡಿ) ಮೂಲಕ ನಡೆಸಲಾಗುವ ತರಬೇತಿ ಘಟಕ (ಮಾಡ್ಯೂಲ್) ಗಳ ಅವಿಭಾಜ್ಯ ಅಂಗವಾಗಿದೆ.
ಲಿಂಗ ಸಂಬಂಧಿತ ಸಮಸ್ಯೆಗಳಿಗೆ ಅವರನ್ನು ಸಂವೇದನಾಶೀಲಗೊಳಿಸಲು ಮೂಲಭೂತ ಕೋರ್ಸ್ ತರಬೇತಿ, ವೃತ್ತಿ ಸಂಬಂಧಿತ ತರಬೇತಿ ಕಾರ್ಯಕ್ರಮಗಳು (ಎಂಸಿಟಿಪಿ ಗಳು) ಮತ್ತು ನೇಮಕಾತಿ ತರಬೇತಿ ಕೋರ್ಸ್ ಗಳು (ಐಟಿಸಿ ಗಳು) ಈ ಕೆಳಗಿನ ವಿಶೇಷ ಘಟಕಗಳನ್ನು ಸೇರಿಸುವ ಮೂಲಕ ಎಸ್ ವಿ ಪಿಎನ್ ಎ, ಹೈದರಾಬಾದ್ ನಿಂದ ಸಂಘಟಿತ ಪ್ರಯತ್ನಗಳನ್ನು ಮಾಡಲಾಗಿದೆ:
i. ಪೊಲೀಸ್ ಠಾಣೆಯ ಕೆಲಸದಲ್ಲಿ ಲಿಂಗ ಸಂವೇದನೆ ಸಂಬಂಧಿತ ಸಮಸ್ಯೆಗಳು,
ii. ತನಿಖೆಯ ಪ್ರಕ್ರಿಯೆಯಲ್ಲಿ ಲಿಂಗ ಸಂವೇದನೆ ಸಂಬಂಧಿತ ಸಮಸ್ಯೆಗಳು, ಪ್ರಕರಣಗಳ ಅಧ್ಯಯನ ಮತ್ತು ಮಹಿಳೆಯರ ಮೇಲಾದ ಹಿಂಸೆ / ಅಪರಾಧಕ್ಕೆ ಸಂಬಂಧಿಸಿದ ಪ್ರಕರಣದ ಕಾನೂನುಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ / ಅಪರಾಧದ ತನಿಖೆಗೆ ವೈಜ್ಞಾನಿಕ ಸಹಾಯಗಳ ಕಾರ್ಯವಿಧಾನ,
iii.POSH (ಲೈಂಗಿಕ ಕಿರುಕುಳ ತಡೆ) ಕಾಯಿದೆ,
iv. ಕಾರ್ಯತಂತ್ರದ ನಿರ್ವಹಣೆ: ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವುದು,
v.ಮಹಿಳೆಯರ ಭದ್ರತೆಗೆ ಸಂಬಂಧಿಸಿದ ಅಂಶಗಳು, ಮಹಿಳೆಯರ ಮೇಲಿನ ದೌರ್ಜನ್ಯ / ಅಪರಾಧಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳು ಮತ್ತು ಹಿಂಸೆ ಮತ್ತು ಅಪರಾಧಕ್ಕೆ ಒಳಗಾದವರನ್ನು ನಿರ್ವಹಿಸುವುದು,
vi.ಸೈಬರ್ ಅಪರಾಧದಿಂದ ಮಹಿಳೆಯರು ಮತ್ತು ಮಕ್ಕಳಿಗೆ ಬೆದರಿಕೆಗಳು ಮತ್ತು ಅವುಗಳನ್ನು ಎದುರಿಸಲು ಕ್ರಮಗಳು,
vii.ಪೊಲೀಸ್ ನಲ್ಲಿ ಮಹಿಳೆಯರಿಗೆ ಮತ್ತು ಪೊಲೀಸ್ ನಾಯಕತ್ವದಲ್ಲಿ ಮಹಿಳೆಯರಿಗೆ ಮಾದರಿ ನೀತಿ.
ಜೊತೆಗೆ, ಎಸ್ ವಿ ಪಿಎನ್ ಎನಲ್ಲಿ ತರಬೇತಿಯ ಸಮಯದಲ್ಲಿ, ಭಾಗವಹಿಸುವವರಿಗೆ ಲಿಂಗ ಸಂವೇದನೆಯ ಕ್ಷೇತ್ರದಲ್ಲಿ ವಿಶೇಷ ಉಪಕ್ರಮಗಳೊಂದಿಗೆ ಪರಿಚಿತರಾಗಲು ಸಂಬಂಧಪಟ್ಟ ಸ್ಥಳಗಳ ಭೇಟಿಗಳನ್ನು ಆಯೋಜಿಸಲಾಗುತ್ತದೆ.
ಈ ವಿಷಯದ ಕುರಿತು, ಎನ್ ಇ ಪಿ ಎ ಲಿಂಗ ಸಂವೇದನೆ ಕುರಿತು 13 ಕೋರ್ಸ್ ಗಳನ್ನು ನಡೆಸಿದೆ ಮತ್ತು 2021 - 2023 ರ ಅವಧಿಯಲ್ಲಿ 317 ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಿದೆ. ಅದೇ ರೀತಿ, ಬ್ಯೂರೋ ಆಫ್ ಪೊಲೀಸ್ ರಿಸರ್ಚ್ & ಡೆವಲಪ್ಮೆಂಟ್ (ಬಿಪಿಆರ್ & ಡಿ) ಅದರ ಸಂಪರ್ಕ ಘಟಕಗಳ ಮೂಲಕ ಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಗಳು / ಸೆಂಟ್ರಲ್ ಅಕಾಡೆಮಿ ಫಾರ್ ಪೊಲೀಸ್ ಟ್ರೈನಿಂಗ್ಸ್ (ಸಿಎಪಿಟಿಗಳು) 9 ಕೋರ್ಸ್ಗಳನ್ನು ನಡೆಸಿದೆ ಮತ್ತು 2023-24 ರ ಅವಧಿಯಲ್ಲಿ 407 ಸಂಬಂಧಪಟ್ಟವರಿಗೆ ಲಿಂಗ ಸಂಬಂಧಿತ ಸಮಸ್ಯೆಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸಲು ತರಬೇತಿ ನೀಡಿದೆ.
ದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಕ್ರಮಗಳನ್ನು ಬಲಪಡಿಸುವಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಪೂರಕವಾಗುವ ಪ್ರಧಾನ ಉದ್ದೇಶದೊಂದಿಗೆ ಗೃಹ ವ್ಯವಹಾರಗಳ ಸಚಿವಾಲಯವು ‘ಮಹಿಳಾ ಸಹಾಯ ಕೇಂದ್ರಗಳ (ಡಬ್ಲ್ಯೂ ಎಚ್ ಡಿಗಳ) ಯೋಜನೆ’ಯನ್ನು ಪರಿಕಲ್ಪನೆ ಮಾಡಿದೆ. ಈ ಯೋಜನೆಯಡಿ, ದೇಶಾದ್ಯಂತದ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇದಕ್ಕಾಗಿ ಪ್ರತಿ ಪೊಲೀಸ್ ಠಾಣೆಗೆ ಒಂದು ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ, ದೇಶದಲ್ಲಿ ಮಂಜೂರಾದ ಒಟ್ಟು 16,469 ಪೊಲೀಸ್ ಠಾಣೆಗಳ ಪೈಕಿ ಒಟ್ಟು 13,557 ಮಹಿಳಾ ಸಹಾಯ ಕೇಂದ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಲಾಗಿದೆ. ಮಹಿಳಾ ಸಹಾಯ ಕೇಂದ್ರಗಳ ಯೋಜನೆಯ ಉದ್ದೇಶಗಳು:
i. ಪೊಲೀಸ್ ಠಾಣೆಗಳನ್ನು ಹೆಚ್ಚು ಮಹಿಳಾ ಸ್ನೇಹಿ ಮತ್ತು ಸುಲಭವಾಗಿ ಸಂಪರ್ಕಿಸುವಂತೆ ಮಾಡುವುದು
ii ಯಾವುದೇ ಮಹಿಳೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಸಂಪರ್ಕಿಸಲು ಇರುವ ಮೊದಲ ಮತ್ತು ಏಕೈಕ ವಿಭಾಗ
iii ಡಬ್ಲ್ಯೂ ಎಚ್ ಡಿ ಗಳು ಆಶ್ರಯ, ಪುನರ್ವಸತಿ ಮತ್ತು ತರಬೇತಿ ಇತ್ಯಾದಿಗಳನ್ನು ಒದಗಿಸಲು ಸಹಾಯ ಮಾಡುವ ವಕೀಲರು, ಮನಶ್ಶಾಸ್ತ್ರಜ್ಞರು, ಎನ್ ಜಿ ಒಗಳಂತಹ ತಜ್ಞರ ಪಟ್ಟಿಯನ್ನು ಹೊಂದಿರತಕ್ಕದ್ದು.
ಈ ಮಾಹಿತಿಯನ್ನು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಅವರು ತಿಳಿಸಿದರು.
***
(Release ID: 2003600)