ಗೃಹ ವ್ಯವಹಾರಗಳ ಸಚಿವಾಲಯ

​​​​​​​ಸಂವಿಧಾನದ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, 2024ಕ್ಕೆ ಲೋಕಸಭೆಯಲ್ಲಿ ಅನುಮೋದನೆ

Posted On: 06 FEB 2024 8:47PM by PIB Bengaluru

ಲೋಕಸಭೆಯು ಇಂದು ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, 2024ಅನ್ನು ಅಂಗೀಕರಿಸಿದೆ. ಈ ಐತಿಹಾಸಿಕ ಮಸೂದೆಯು (i) ಪಹಾರಿ ಜನಾಂಗೀಯ ಗುಂಪು, (ii) ಪದಾರಿ ಬುಡಕಟ್ಟು (iii) ಕೋಲಿ ಮತ್ತು (iv) ಗಡ್ಡ ಬ್ರಾಹ್ಮಣರಿಗೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ಕಲ್ಪಿಸಿ ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಪರಿಶಿಷ್ಟ ಪಂಗಡಗಳ ಸ್ಥಾನಮಾನ ಕಲ್ಪಿಸಬೇಕೆಂಬ ಈ ಸಮುದಾಯಗಳ ಬೇಡಿಕೆಯು ಬಹುಕಾಲದಿಂದ ಬಾಕಿ ಉಳಿದಿತ್ತು.

ಜಮ್ಮು ಮತ್ತು ಕಾಶ್ಮೀರದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಈ ಸಮುದಾಯಗಳ ಸೇರ್ಪಡೆಯಿಂದ ಸದ್ಯ ಪರಿಶಿಷ್ಟ ಪಂಗಡಗಳಲ್ಲಿರುವ ಗುಜ್ಜರ್‌ ಹಾಗೂ ಬಕರ್‌ವಾಲ್‌  ಸಮುದಾಯಗಳ ಮೀಸಲಾತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಪಡೆಯುತ್ತಿರುವ ಮೀಸಲಾತಿಯು ಮುಂದುವರಿಯಲಿದೆ.

ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಮೀಸಲಾತಿಯನ್ನು ಈಗಾಗಲೇ ಪರಿಶಿಷ್ಟ ಪಂಗಡಗಳೆಂದು ಪಟ್ಟಿ ಮಾಡಿರುವ ಸಮುದಾಯಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಒದಗಿಸಲಾಗುತ್ತದೆ. ಸಂಸತ್ತಿನಲ್ಲಿ ಮಸೂದೆ ಅನುಮೋದನೆಯಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಸರ್ಕಾರವು ಮೀಸಲಾತಿ ಕುರಿತಂತೆ ಸೂಕ್ತ ಅಧಿಸೂಚನೆಗಳನ್ನು ಹೊರಡಿಸುತ್ತದೆ, ಇದು ಅಸ್ತಿತ್ವದಲ್ಲಿರುವ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಜನರು ಅದೇ ಪ್ರಮಾಣದ ಮೀಸಲಾತಿ ಪಡೆಯುವುದನ್ನು ಖಾತರಿಪಡಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು "ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ʼ ಎಂಬ ಮಂತ್ರದೊಂದಿಗೆ ಸಮಾಜದ ಪ್ರತಿಯೊಂದು ವರ್ಗ ಮತ್ತು ಸಮುದಾಯಗಳನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಸಂವಿಧಾನದ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, 2024ರ ಅಂಗೀಕಾರವು ಈ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಇಂತಹ ಕಾಯ್ದೆಯ ಮೂಲಕ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಗತಿಪರ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರುವ ಬದ್ಧತೆ ತೋರಿದೆ.

****(Release ID: 2003398) Visitor Counter : 84