ಗೃಹ ವ್ಯವಹಾರಗಳ ಸಚಿವಾಲಯ

ಪದ್ಮ ಪ್ರಶಸ್ತಿ – 2024 ಪ್ರಕಟ

Posted On: 25 JAN 2024 11:01PM by PIB Bengaluru

ಪದ್ಮ ಪ್ರಶಸ್ತಿಗಳು - ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮ ಪ್ರಶಸ್ತಿಗಳನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಚಟುವಟಿಕೆಗಳು ಅಥವಾ ಸಾಧನೆಗಳನ್ನು ಪರಿಗಣಿಸಿ, ಅಮೋಘ ಕೊಡುಗೆ ನೀಡಿದ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಂದರೆ - ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳು ಒಳಗೊಂಡಿವೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ 'ಪದ್ಮ ವಿಭೂಷಣ', ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.

ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. 2024ರ ವರ್ಷಕ್ಕೆ ಕೆಳಗಿನ ಪಟ್ಟಿಯ ಪ್ರಕಾರ, ಇಬ್ಬರಿಗೆ(2 ಜೋಡಿ ಪ್ರಕರಣಗಳು – ಇಬ್ಬರಿಗೆ ಸೇರಿ ಕೊಡುವ ಪ್ರಶಸ್ತಿಯನ್ನು 1 ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ). ಈ ಬಾರಿ ಒಟ್ಟು 132 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಈ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 30 ಮಹಿಳೆಯರು ಮತ್ತು ವಿದೇಶಿ, ಅನಿವಾಸಿ ಭಾರತೀಯರು(ಎನ್ಆರ್ ಐ), ಭಾರತೀಯ ಮೂಲದ ವ್ಯಕ್ತಿ(ಪಿಐಒ), ಭಾರತದ ಸಾಗರೋತ್ತರ ಪೌರತ್ವ(ಒಸಿಐ) ಸಾಧಕರ ವರ್ಗದಿಂದ 8 ವ್ಯಕ್ತಿಗಳು ಮತ್ತು 9 ಮರಣೋತ್ತರ ಪ್ರಶಸ್ತಿ ಪುರಸ್ಕೃತರನ್ನು ಒಳಗೊಂಡಿದೆ.

 

ಪದ್ಮ ವಿಭೂಷಣ(5)

 

ಸರಣಿ ಸಂಖ್ಯೆ

ಹೆಸರು

ಕ್ಷೇತ್ರ

ರಾಜ್ಯ/ಪ್ರದೇಶ/ದೇಶ

1

ಶ್ರೀಮತಿ ವೈಜಯಂತಿಮಾಲ ಬಾಲಿ

ಕಲೆ

ತಮಿಳುನಾಡು

2

ಶ್ರೀ ಕೊನಿದೇಲ ಚಿರಂಜೀವಿ

ಕಲೆ

ಆಂಧ್ರ ಪ್ರದೇಶ

3

ಶ್ರೀ ಎಂ. ವೆಂಕಯ್ಯನಾಯ್ಡು

ಸಾರ್ವಜನಿಕ ವ್ಯವಹಾರ

ಆಂಧ್ರ ಪ್ರದೇಶ

4

ಶ್ರೀ ಬಿಂದೇಶ್ವರ್ ಪಾಠಕ್ (ಮರಣೋತ್ತರ)

ಸಾಮಾಜಿಕ ಕಾರ್ಯ

ಬಿಹಾರ

5

ಶ್ರೀಮತಿ ಪದ್ಮ ಸುಬ್ರಹ್ಮಣ್ಯಂ

ಕಲೆ

ತಮಿಳುನಾಡು

 

 

ಪದ್ಮ ಭೂಷಣ(17)

 

ಸರಣಿ ಸಂಖ್ಯೆ

ಹೆಸರು

ಕ್ಷೇತ್ರ

ರಾಜ್ಯ/ಪ್ರದೇಶ/ರಾಷ್ಟ್ರ

6

ಶ್ರೀಮತಿ ಎಂ. ಫಾತಿಮಾ ಬೀವಿ

(ಮರಣೋತ್ತರ)

ಸಾರ್ವಜನಿಕ ವ್ಯವಹಾರ

ಕೇರಳ

7

ಶ್ರೀ ಹೊರ್ಮುಸ್ಜಿ ಎನ್ ಕಾಮಾ

ಸಾಹಿತ್ಯ ಮತ್ತು ಶಿಕ್ಷಣ - ಪತ್ರಿಕೋದ್ಯಮ

ಮಹಾರಾಷ್ಟ್ರ

8

ಶ್ರೀ ಮಿಥುನ್ ಚಕ್ರವರ್ತಿ

ಕಲೆ

ಪಶ್ಮಿಮ ಬಂಗಾಳ

9

ಶ್ರೀ ಸೀತಾರಾಮ್ ಜಿಂದಾಲ್

ವಾಣಿಜ್ಯ ಮತ್ತು ಕೈಗಾರಿಕೆ

ಕರ್ನಾಟಕ

10

ಶ್ರೀ ಯಂಗ್ ಲಿಯು

ವ್ಯಾಪಾರ ಮತ್ತು ಕೈಗಾರಿಕೆ

ತೈವಾನ್

11

ಶ್ರೀ ಅಶ್ವಿನ್ ಬಾಲಚಂದ್ ಮೆಹ್ತಾ

ವೈದ್ಯಕೀಯ

ಮಹಾರಾಷ್ಟ್ರ

12

ಶ್ರೀ ಸತ್ಯಬ್ರತಾ ಮುಖರ್ಜಿ(ಮರಣೋತ್ತರ)

ಸಾರ್ವಜನಿಕ ವ್ಯವಹಾರ

ಪಶ್ಚಿಮ ಬಂಗಾಳ

13

ಶ್ರೀ ರಾಮ್ ನಾಯ್ಕ್

ಸಾರ್ವಜನಿಕ ವ್ಯವಹಾರ

ಮಹಾರಾಷ್ಟ್ರ

14

ಶ್ರೀ ತೇಜಸ್ ಮಧುಸೂದನ್ ಪಟೇಲ್

ವೈದ್ಯಕೀಯ

ಗುಜರಾತ್

15

ಶ್ರೀ ಒಲಂಚೇರಿ ರಾಜಗೋಪಾಲ್

ಸಾರ್ವಜನಿಕ ವ್ಯವಹಾರ

ಕೇರಳ

16

ಶ್ರೀ ದತ್ತಾತ್ರೇಯ ಅಂಬಾದಾಸ್ ಮಯಲೂ ಅಲಿಯಾಸ್ ರಾಜ್ದೂತ್

ಕಲೆ

ಮಹಾರಾಷ್ಟ್ರ

17

ಶ್ರೀ ತೋಗ್ದಾನ್ ರಿನ್ ಪೋಚೆ(ಮರಣೋತ್ತರ)

ಇತರೆ - ಆಧ್ಯಾತ್ಮಿಕತೆ

ಲಡಖ್

18

ಶ್ರೀ ಪ್ಯಾರೆಲಾಲ್ ಶರ್ಮಾ

ಕಲೆ

ಮಹಾರಾಷ್ಟ್ರ

19

ಶ್ರೀ ಚಂದ್ರೇಶ್ವರ್ ಪ್ರಸಾದ್ ಥಾಕೂರ್

ವೈದ್ಯಕೀಯ

ಬಿಹಾರ

20

ಶ್ರೀಮತಿ ಉಷಾ ಉತ್ತುಪ್

ಕಲೆ

ಪಶ್ಚಿಮ ಬಂಗಾಳ

21

ಶ್ರೀ ವಿಜಯಕಾಂತ್(ಮರಣೋತ್ತರ)

ಕಲೆ

ತಮಿಳುನಾಡು

22

ಶ್ರೀ ಕುಂದನ್ ವ್ಯಾಸ್

ಸಾಹಿತ್ಯ & ಶಿಕ್ಷಣ - ಪತ್ರಿಕೋದ್ಯಮ

ಮಹಾರಾಷ್ಟ್ರ

 

ಪದ್ಮಶ್ರೀ (110)

 

ಸರಣಿ ಸಂಖ್ಯೆ

ಹೆಸರು

ಕ್ಷೇತ್ರ

ರಾಜ್ಯ/ಪ್ರದೇಶ/ರಾಷ್ಟ್ರ

23

ಶ್ರೀ ಖಲೀಲ್ ಅಹ್ಮದ್

ಕಲೆ

ಉತ್ತರ ಪ್ರದೇಶ

24

ಶ್ರೀ ಭದ್ರಪ್ಪನ್ ಎಂ.

ಕಲೆ

ತಮಿಳುನಾಡು

25

ಶ್ರೀ ಕಲುರಾಮ್ ಬಮಾನಿಯಾ

ಕಲೆ

ಮಧ್ಯ ಪ್ರದೇಶ

26

ಶ್ರೀಮತಿ ರೆಜ್ವಾನಾ ಚೌಧುರಿ ಬನ್ಯಾ

ಕಲೆ

ಬಾಂಗ್ಲಾದೇಶ

27

ಶ್ರೀಮತಿ ನಸೀಮ್ ಬನೊ

ಕಲೆ

ಉತ್ತರ ಪ್ರದೇಶ

28

ಶ್ರೀ ರಾಮ್ ಲಾಲ್ ಬರೇತ್

ಕಲೆ

ಛತ್ತೀಸ್ ಗಢ

29

ಶ್ರೀಮತಿ ಗೀತಾ ರಾಯ್ ಬರ್ಮನ್

ಕಲೆ

ಪಶ್ಚಿಮ ಬಂಗಾಳ

30

ಶ್ರೀಮತಿ ಪರ್ಬತಿ ಬರುವಾ

ಸಾಮಾಜಿಕ ಕಾರ್ಯ

ಅಸ್ಸಾಂ

31

ಶ್ರೀ ಸರ್ಬೇಶ್ವರ್ ಬಸುಮತರಿ

ಇತರೆ – ಕೃಷಿ

ಅಸ್ಸಾಂ

32

ಶ್ರೀ ಸೋಮ್ ದತ್ ಬಟ್ಟು

ಕಲೆ

ಹಿಮಾಚಲ ಪ್ರದೇಶ

33

ಶ್ರೀಮತಿ ತಕ್ದೀರಾ ಬೇಗಂ

ಕಲೆ

ಪಶ್ಚಿಮ ಬಂಗಾಳ

34

ಶ್ರೀ ಸತ್ಯನಾರಾಯಣ ಬೆಲೇರಿ

ಇತರೆ – ಕೃಷಿ

ಕೇರಳ

35

ಶ್ರೀ ದ್ರೋಣ ಭುಯನ್

ಕಲೆ

ಅಸ್ಸಾಂ

36

ಶ್ರೀ ಅಶೋಕ್ ಕುಮಾರ್ ಬಿಸ್ವಾಸ್

ಕಲೆ

ಬಿಹಾರ

37

ಶ್ರೀ ರೋಹನ್ ಮಾಚಂಡ ಬೋಪಣ್ಣ

ಕ್ರೀಡೆ

ಕರ್ನಾಟಕ

38

ಶ್ರೀಮತಿ ಸ್ಮೃತಿ ರೇಖಾ ಚಕ್ಮ

ಕಲೆ

ತ್ರಿಪುರ

39

ಶ್ರೀ ನಾರಾಯಣ್ ಚಕ್ರವರ್ತಿ

ವಿಜ್ಞಾನ & ಎಂಜಿನಿಯರಿಂಗ್

ಪಶ್ಚಿಮ ಬಂಗಾಳ

40

ಶ್ರೀ ಎ ವೇಲು ಆನಂದಾಚಾರಿ

ಕಲೆ

ತೆಲಂಗಾಣ

41

ಶ್ರೀ ರಾಮ್ ಶೇಟ್ ಚೌಧರಿ

ವಿಜ್ಞಾನ & ಎಂಜಿನಿಯರಿಂಗ್

ಉತ್ತರ ಪ್ರದೇಶ

42

ಶ್ರೀಮತಿ ಕೆ. ಚೆಲ್ಲಮ್ಮಾಳ್

ಇತರೆ – ಕೃಷಿ

ಅಂಡಮಾನ್ & ನಿಕೋಬಾರ್ ದ್ವೀಪ

43

ಶ್ರೀಮತಿ ಜೋಸ್ನಾ ಚಿಣ್ಣಪ್ಪ

ಕ್ರೀಡೆ

ತಮಿಳುನಾಡು

44

ಶ್ರೀಮತಿ ಚಾರ್ಲೋಟ್ ಚಾಪಿನ್

ಇತರೆ - ಯೋಗ

ಫ್ರಾನ್ಸ್

45

ಶ್ರೀ ರಘುವೀರ್ ಚೌಧರಿ

ಸಾಹಿತ್ಯ & ಶಿಕ್ಷಣ

ಗುಜರಾತ್

46

ಶ್ರೀ ಜೊ ಡಿ ಕ್ರೂಜ್

ಸಾಹಿತ್ಯ & ಶಿಕ್ಷಣ

ತಮಿಳುನಾಡು

47

ಶ್ರೀ ಗುಲಾಬ್ ನಬಿ ದಾರ್

ಕಲೆ

ಜಮ್ಮು& ಕಾಶ್ಮೀರ

48

ಶ್ರೀ ಚಿತ್ತ ರಂಜನ್ ದೆಬ್ಬರ್ಮ

ಇತರೆ – ಆಧ್ಯಾತ್ಮಿಕತೆ

ತ್ರಿಪುರ

49

ಶ್ರೀ ಉದಯ್ ವಿಶ್ವನಾಥ್ ದೇಶಪಾಂಡೆ

ಕ್ರೀಡೆ

ಮಹಾರಾಷ್ಟ್ರ

50

ಶ್ರೀಮತಿ ಪ್ರೇಮ ಧನರಾಜ್

ವೈದ್ಯಕೀಯ

ಕರ್ನಾಟಕ

51

ಶ್ರೀ ರಾಧಕೃಷ್ಣನ್ ಧಿಮಾನ್

ವೈದ್ಯಕೀಯ

ಉತ್ತರ ಪ್ರದೇಶ

52

ಶ್ರೀ ಮನೋಹರ್ ಕೃಷ್ಣ(ಕೃಷನ) ದೋಲೆ

ವೈದ್ಯಕೀಯ

ಮಹಾರಾಷ್ಟ್ರ

53

ಶ್ರೀ ಪಿಯರ್ ಸಿಲ್ವೇನ್ ಫಿಲಿಯೊಜತ್

ಸಾಹಿತ್ಯ & ಶಿಕ್ಷಣ

ಫ್ರಾನ್ಸ್

54

ಶ್ರೀ ಮಹಾಬೀರ್ ಸಿಂಗ್ ಗುದ್ದು

ಕಲೆ

ಹರಿಯಾಣ

55

ಶ್ರೀಮತಿ ಅನುಪಮಾ ಹೊಸಕೆರೆ

ಕಲೆ

ಕರ್ನಾಟಕ

56

ಶ್ರೀ ಯಜ್ಡಿ ಮಾಣೆಕ್ಷ ಇಟಾಲಿಯಾ

ವೈದ್ಯಕೀಯ

ಗುಜರಾತ್

57

ಶ್ರೀ ರಾಜಾರಾಮ್ ಜೈನ್

ಸಾಹಿತ್ಯ & ಶಿಕ್ಷಣ

ಉತ್ತರ ಪ್ರದೇಶ

58

ಶ್ರೀ ಜಾನಕಿಲಾಲ್

ಕಲೆ

ರಾಜಸ್ಥಾನ

59

ಶ್ರೀ ರತನ್ ಕಹಾರ್

ಕಲೆ

ಪಶ್ಚಿಮ ಬಂಗಾಳ

60

ಶ್ರೀ ಯಶವಂತ್ ಸಿಂಗ್ ಕತೋಚ್

ಸಾಹಿತ್ಯ & ಶಿಕ್ಷಣ

ಉತ್ತರಾಖಂಡ

61

ಶ್ರೀ ಜಹೀರ್ ಐ ಕಾಜಿ

ಸಾಹಿತ್ಯ & ಶಿಕ್ಷಣ

ಮಹಾರಾಷ್ಟ್ರ

62

ಶ್ರೀ ಗೌರವ್ ಖನ್ನಾ

ಕ್ರೀಡೆ

ಉತ್ತರ ಪ್ರದೇಶ

63

ಶ್ರೀ ಸುರೇಂದ್ರ ಕಿಶೋರ್

ಸಾಹಿತ್ಯ & ಶಿಕ್ಷಣ - ಪತ್ರಿಕೋದ್ಯಮ

ಬಿಹಾರ

64

ಶ್ರೀ ದಾಸರಿ ಕೊಂಡಪ್ಪ

ಕಲೆ

ತೆಲಂಗಾಣ

65

ಶ್ರೀ ಶ್ರೀಧರ್ ಮಕಮ್ ಕೃಷ್ಣಮೂರ್ತಿ

ಸಾಹಿತ್ಯ & ಶಿಕ್ಷಣ

ಕರ್ನಾಟಕ

66

ಶ್ರೀಮತಿ ಯನುಂಗ್ ಜಮ್ಹೊ ಲೆಗೊ

ಇತರೆ - ಕೃಷಿ

ಅರುಣಾಚಲ ಪ್ರದೇಶ

67

ಶ್ರೀ ಜೋರ್ಡನ್ ಲೆಪ್ಚಾ

ಕಲೆ

ಸಿಕ್ಕಿಂ

68

ಶ್ರೀ ಸತೇಂದ್ರ ಸಿಂಗ್ ಲೋಹಿಯಾ

ಕ್ರೀಡೆ

ಮಧ್ಯ ಪ್ರದೇಶ

69

ಶ್ರೀ ಬಿನೋದ್ ಮಹಾರಾಣಾ

ಕಲೆ

ಒಡಿಶಾ

70

ಶ್ರೀಮತಿ ಪೂರ್ಣಿಮಾ ಮಹತೊ

ಕ್ರೀಡೆ

ಜಾರ್ಖಂಡ್

71

ಶ್ರೀಮತಿ ಉಮಾ ಮಹೇಶ್ವರಿ ಡಿ

ಕಲೆ

ಆಂದ್ರ ಪ್ರದೇಶ

72

ಶ್ರೀ ದುಖು ಮಜ್ಹಿ

ಸಾಮಾಜಿಕ ಕಾರ್ಯ

ಪಶ್ಚಿಮ ಬಂಗಾಳ

73

ಶ್ರೀ ರಾಮ್ ಕುಮಾರ್ ಮಲ್ಲಿಕ್

ಕಲೆ

ಬಿಹಾರ

74

ಶ್ರೀ ಹೇಮ್ ಚಂದ್ ಮಂಜ್ಹಿ

ವೈದ್ಯಕೀಯ

ಛತ್ತೀಸ್ ಗಢ

75

ಶ್ರೀ ಚಂದ್ರಶೇಖರ್ ಮಹದೇವ್ ರಾವ್ ಮೆಶ್ರಂ

ವೈದ್ಯಕೀಯ

Maharashtra

76

ಶ್ರೀ ಸುರೇಂದ್ರ ಮೋಹನ್ ಮಿಶ್ರಾ(ಮರಣೋತ್ತರ)

ಕಲೆ

ಉತ್ತರ ಪ್ರದೇಶ

77

ಶ್ರೀ ಅಲಿ ಮೊಹಮ್ಮದ್ & ಶ್ರೀ ಘನಿ ಮೊಹಮ್ಮದ್*
(ಇಬ್ಬರಿಗೂ ಸೇರಿ 1 ಪ್ರಶಸ್ತಿ)

ಕಲೆ

ರಾಜಸ್ಥಾನ

78

ಶ್ರೀಮತಿ ಕಲ್ಪನಾ ಮಾರ್ಪರಿಯಾ

ವಾಣಿಜ್ಯ & ಕೈಗಾರಿಕೆ

ಮಹಾರಾಷ್ಟ್ರ

79

ಶ್ರೀಮತಿ ಚಾಮಿ ಮುರ್ಮು

ಸಾಮಾಜಿಕ ಕಾರ್ಯ

ಜಾರ್ಖಂಡ್

80

ಶ್ರೀ ಸಸೀಂದ್ರನ್ ಮುತ್ತುವೇಲ್

ಸಾರ್ವಜನಿಕ ವ್ಯವಹಾರ

ಪಪುವಾ ನ್ಯೂ ಗಿನಿಯಾ

81

ಶ್ರೀಮತಿ ಜಿ ನಾಚಿಯಾರ್

ವೈದ್ಯಕೀಯ

ತಮಿಳುನಾಡು

82

ಶ್ರೀಮತಿ ಕಿರಣ್ ನಾದರ್

ಕಲೆ

ದೆಹಲಿ

83

ಶ್ರೀ ಪಕರವೂರ್ ಚಿತ್ರನ್ ನಂಬೂದರಿಪಾಡ್(ಮರಣೋತ್ತರ)

ಸಾಹಿತ್ಯ & ಶಿಕ್ಷಣ

ಕೇರಳ

84

ಶ್ರೀ ನಾರಾಯಣನ್ ಇ ಪಿ

ಕಲೆ

ಕೇರಳ

85

ಶ್ರೀ ಶೈಲೇಶ್ ನಾಯಕ್

ವಿಜ್ಞಾನ & ಎಂಜಿನಿಯರಿಂಗ್

ದೆಹಲಿ

86

ಶ್ರೀ ಹರೀಶ್ ನಾಯಕ್(ಮರಣೋತ್ತರ)

ಸಾಹಿತ್ಯ & ಶಿಕ್ಷಣ

Gujarat

87

ಶ್ರೀ ಫ್ರೆಡ್ ನೆಗ್ರಿಟ್

ಸಾಹಿತ್ಯ & ಶಿಕ್ಷಣ

ಫ್ರಾನ್ಸ್

88

ಶ್ರೀ ಹರಿ ಓಂ

ವಿಜ್ಞಾನ & ಎಂಜಿನಿಯರಿಂಗ್

ಹರಿಯಾಣ

89

ಶ್ರೀ ಭಾಗಬತ್ ಪಧಾನ್

ಕಲೆ

ಒಡಿಶಾ

90

ಶ್ರೀ ಸನಾತನ್ ರುದ್ರಪಾಲ್

ಕಲೆ

ಪಶ್ಚಿಮ ಬಂಗಾಳ

91

ಶ್ರೀ ಶಂಕರ್ ಬಾಬಾ ಪುಂಡಲೀಕರಾವ್ ಪಾಪಲ್ಕರ್

ಸಾಮಾಜಿಕ ಕಾರ್ಯ

ಮಹಾರಾಷ್ಟ್ರ

92

ಶ್ರೀ ರಾಧೆ ಶ್ಯಾಮ್ ಪರೀಖ್

ವೈದ್ಯಕೀಯ

ಉತ್ತರ ಪ್ರದೇಶ

93

ಶ್ರೀ ದಯಾಳ್ ಮಾವ್ ಜೀ ಬಾಯ್ ಪರ್ಮರ್

ವೈದ್ಯಕೀಯ

ಗುಜರಾತ್

94

ಶ್ರೀ ವಿನೋದ್ ಕುಮಾರ್ ಪಸಾಯತ್

ಕಲೆ

ಒಡಿಶಾ

95

ಶ್ರೀಮತಿ ಸಿಲ್ಬಿ ಪಸ್ಸಾ

ಕಲೆ

ಮೇಘಾಲಯ

96

ಶ್ರೀತಿ ಶಾಂತಿದೇವಿ ಪಾಸ್ವಾನ್ & ಶ್ರೀ ಶಿವನ್ ಪಾಸ್ವಾನ್(ಇಬ್ಬರಿಗೂ ಸೇರಿ ಪ್ರಶಸ್ತಿ)*

ಕಲೆ

ಬಿಹಾರ

97

ಶ್ರೀ ಸಂಜಯ್ ಅನಂತ್ ಪಾಟೀಲ್

ಇತರೆ - ಕೃಷಿ

ಗೋವಾ

98

ಶ್ರೀ ಮುನಿ ನಾರಾಯಣಪ್ರಸಾದ್

ಸಾಹಿತ್ಯ & ಶಿಕ್ಷಣ

ಕೇರಳ

99

ಶ್ರೀ ಕೆ ಎಸ್ ರಾಜಣ್ಣ

ಸಾಮಾಜಿಕ ಕಾರ್ಯ

ಕರ್ನಾಟಕ

100

ಶ್ರೀ ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್

ವೈದ್ಯಕೀಯ

ಕರ್ನಾಟಕ

101

ಶ್ರೀ ಭಗವತಿಲಾಲ್ ರಾಜ್ ಪುರೋಹಿತ್

ಸಾಹಿತ್ಯ & ಶಿಕ್ಷಣ

ಮಧ್ಯ ಪ್ರದೇಶ

102

ಶ್ರೀ ರಾಮಲೊ ರಾಮ್

ಕಲೆ

ಜಮ್ಮು & ಕಾಶ್ಮೀರ

103

ಶ್ರೀ ನವ್ ಜೀನ್ ರಸ್ತೋಗಿ

ಸಾಹಿತ್ಯ & ಶಿಕ್ಷಣ

ಉತ್ತರ ಪ್ರದೇಶ

104

ಶ್ರೀಮತಿ ನಿರ್ಮಲ್ ರಿಶಿ

ಕಲೆ

ಪಂಜಾಬ್

105

ಶ್ರೀ ಪ್ರಾಣ್ ಸಭರ್ ವಾಲ್

ಕಲೆ

ಪಂಜಾಬ್

106

ಶ್ರೀ ಗದ್ದಂ ಸಾಮಯ್ಯ

ಕಲೆ

ತೆಲಂಗಾಣ

107

ಶ್ರೀ ಸಂಗ್ ಥಂಕಿಮಾ

ಸಾಮಾಜಿಕ ಕಾರ್ಯ

ಮಿಜೋರಾಮ್

108

ಶ್ರೀ ಮಚಿಹಾನ್ ಸಸಾ

ಕಲೆ

ಮಣಿಪುರ

109

ಶ್ರೀ ಓಂಪ್ರಕಾಶ್ ಶರ್ಮಾ

ಕಲೆ

ಮಧ್ಯ ಪ್ರದೇಶ

110

ಶ್ರೀ ಏಕಲಬ್ಯ ಶರ್ಮಾ

ವಿಜ್ಞಾನ & ಎಂಜಿನಿಯರಿಂಗ್

ಪಶ್ಚಿಮ ಬಂಗಾಳ

111

ಶ್ರೀ ರಾಮ್ ಚಂದರ್ ಸಿಹಾಗ್

ವಿಜ್ಞಾನ & ಎಂಜಿನಿಯರಿಂಗ್

ಹರ್ಯಾಣ

112

ಶ್ರೀ ಹರ್ಬೀಂದರ್ ಸಿಂಗ್

ಕ್ರೀಡೆ

ದೆಹಲಿ

113

ಶ್ರೀ ಗುರುವಿಂದರ್ ಸಿಂಗ್

ಸಾಮಾಜಿಕ ಕಾರ್ಯ

ಹರ್ಯಾಣ

114

ಶ್ರೀ ಗೋದಾವರಿ ಸಿಂಗ್

ಕಲೆ

ಉತ್ತರ ಪ್ರದೇಶ

115

ಶ್ರೀ ರವಿಪ್ರಕಾಶ್ ಸಿಂಗ್

ವಿಜ್ಞಾನ & ಎಂಜಿನಿಯರಿಂಗ್

ಮೆಕ್ಸಿಕೊ

116

ಶ್ರೀ ಶೇಷಂಪಟ್ಟಿ ಟಿ ಸಿವಲಿಂಗಮ್

ಕಲೆ

ತಮಿಳುನಾಡು

117

ಶ್ರೀ ಸೋಮಣ್ಣ

ಸಾಮಾಜಿಕ ಕಾರ್ಯ

ಕರ್ನಾಟಕ

118

ಶ್ರೀ ಕೇತವತ್ ಸೋಮ್ ಲಾಲ್

ಸಾಹಿತ್ಯ & ಶಿಕ್ಷಣ

ತೆಲಂಗಾಣ

119

ಶ್ರೀಮತಿ ಶಶಿ ಸೋನಿ

ವಾಣಿಜ್ಯ ಮತ್ತು ಕೈಗಾರಿಕೆ

ಕರ್ನಾಟಕ

120

ಶ್ರೀಮತಿ ಊರ್ಮಿಳಾ ಶ್ರೀವಾಸ್ತವ

ಕಲೆ

ಉತ್ತರ ಪ್ರದೇಶ

121

ಶ್ರೀ ನೇಪಾಳ್ ಚಂದ್ರ ಸೂತ್ರಧಾರ್

(ಮಣೋತ್ತರ)

ಕಲೆ

ಪಶ್ಚಿಮ ಬಂಗಾಳ

122

ಶ್ರೀ ಗೋಪಿನಾಥ್ ಸ್ವೇನ್

ಕಲೆ

ಒಡಿಶಾ

123

ಶ್ರೀ ಲಕ್ಷ್ಮಣ್ ಭಟ್ ತೈಲಾಂಗ್

ಕಲೆ

ರಾಜಸ್ಥಾನ

124

ಶ್ರೀಮತಿ ಮಾಯಾ ಟಂಡನ್

ಸಾಮಾಜಿಕ ಕಾರ್ಯ

ರಾಜಸ್ಥಾನ

125

ಶ್ರೀಮತಿ ಅಸ್ವತಿ ತಿರುನಾಳ್ ಗೌರಿ ಲಕ್ಷ್ಮೀಬಾಯಿ ತಂಪುರಟ್ಟಿ

ಸಾಹಿತ್ಯ & ಶಿಕ್ಷಣ

ಕೇರಳ

126

ಶ್ರೀ ಜಗದೀಶ್ ಲಾಭ್ ಶಂಕರ್ ತ್ರಿವೇದಿ

ಕಲೆ

ಗುಜರಾತ್

127

ಶ್ರೀಮತಿ ಸನೊ ವಮುಜೊ

ಸಾಮಾಜಿಕ ಕಾರ್ಯ

ನಾಗಾಲ್ಯಾಂಡ್

128

ಶ್ರೀ ಬಾಲಕೃಷ್ಣ ಸದಾನಮ್ ಪುತಿಯಾ ವೀಟಿಲ್

ಕಲೆ

ಕೇರಳ

129

ಶ್ರೀ ಕುರೆಲ್ಲಾ ವಿಠ್ಠಲಾಚಾರ್ಯ

ಸಾಹಿತ್ಯ & ಶಿಕ್ಷಣ

ತೆಲಂಗಾಣ

130

ಶ್ರೀ ಕಿರಣ್ ವ್ಯಾಸ್

ಇತರೆ - ಯೋಗ

ಫ್ರಾನ್ಸ್

131

ಶ್ರೀ ಜಗೇಶ್ವರ್ ಯಾದವ್

ಸಾಮಾಜಿಕ ಕಾರ್ಯ

ಛತ್ತೀಸ್ ಗಢ

132

ಶ್ರೀ ಬಾಲು ರಾಮ್ ಯಾದವ್

ಕಲೆ

ಉತ್ತರ ಪ್ರದೇಶ

 

ಗಮನಿಸಿ: * ಇಬ್ಬರಿಗೆ ಸೇರಿ ನೀಡಿರುವ ಪ್ರಶಸ್ತಿಯನ್ನು ಒಂದು ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ.

 

 

*****

 (Release ID: 2000289) Visitor Counter : 255