ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ 73 ರ ಮಂಗಳೂರು-ಮುಡಿಗೆರೆ-ತುಮಕೂರು ವಿಭಾಗದ ವಿಸ್ತರಣೆಗೆ ರೂ. 343.74 ಕೋಟಿ ಅನುಮತಿಸಿದ ಶ್ರೀ ನಿತಿನ್ ಗಡ್ಕರಿ

प्रविष्टि तिथि: 19 JAN 2024 1:17PM by PIB Bengaluru

ಕರ್ನಾಟಕದಲ್ಲಿ ಮಂಗಳೂರು-ಮುಡಿಗೆರೆ-ತುಮಕೂರು ವಿಭಾಗದ ರಾಷ್ಟ್ರೀಯ ಹೆದ್ದಾರಿ 73 ರ ವಿಸ್ತರಣೆಗೆ ರೂ. 343.74 ಕೋಟಿ ಗಳನ್ನು ಮಂಜೂರು ಮಾಡಲಾಗಿದ್ದು, ಅದನ್ನು ಸುಸಜ್ಜಿತ ರಸ್ತೆಬದಿಗಳೊಂದಿಗೆ 2-ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಎಕ್ಸ್ ಖಾತೆಯ ಸಂದೇಶದಲ್ಲಿ ತಿಳಿಸಿದ್ದಾರೆ.


10.8 ಕಿಲೋಮೀಟರ್ ದೂರ ವ್ಯಾಪಿಸಿರುವ ಈ ಯೋಜನೆಯು ಇ.ಪಿ.ಸಿ. ಮೋಡ್ ಅಡಿಯಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ವಿಶೇಷವಾಗಿ ಚಾರ್ಮಾಡಿ ಘಾಟ್ ಸೇರಿದಂತೆ, ಸವಾಲಿನ ಗುಡ್ಡಗಾಡು ಮತ್ತು ಪರ್ವತ ಭೂಚೌಕಟ್ಟುಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸಲು ಉಪಕ್ರಮವನ್ನು ರೂಪಿಸಲಾಗಿದೆ.

*****


(रिलीज़ आईडी: 1997823) आगंतुक पटल : 116
इस विज्ञप्ति को इन भाषाओं में पढ़ें: English , Urdu , हिन्दी