ಕಲ್ಲಿದ್ದಲು ಸಚಿವಾಲಯ

ಆರು ಕಲ್ಲಿದ್ದಲು ಗಣಿಗಳು ವಾಣಿಜ್ಯ ಹರಾಜಿನ ಅಡಿಯಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿವೆ ಮತ್ತು ಇನ್ನೂ ಮೂರು ಗಣಿಗಳು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.


ಕಲ್ಲಿದ್ದಲು ಸಚಿವಾಲಯ ಇದುವರೆಗೆ ತೊಂಬತ್ತೊಂದು ಕಲ್ಲಿದ್ದಲು/ಲಿಗ್ನೈಟ್ ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಿದೆ
 
ತೊಂಬತ್ತೊಂದು ಗಣಿಗಳಿಂದಾಗಿ 33,343 ಕೋಟಿ ರೂಪಾಯಿ ಹೂಡಿಕೆ ಮತ್ತು ಮೂರು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

Posted On: 05 JAN 2024 12:32PM by PIB Bengaluru

ಮೂರು ವರ್ಷಗಳ ಹಿಂದೆ ಕಲ್ಲಿದ್ದಲು ಸಚಿವಾಲಯ ಆರಂಭಿಸಿದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನಲ್ಲಿ ಇದುವರೆಗೆ 91 ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಈ ಹಂಚಿಕೆಯಾದ ಗಣಿಗಳ ಪೈಕಿ ಆರು ವಾಣಿಜ್ಯ ಗಣಿಗಳಲ್ಲಿ ಈಗಾಗಲೇ ಕಲ್ಲಿದ್ದಲು ಉತ್ಪಾದನೆ ಆರಂಭವಾಗಿದ್ದು, ಇನ್ನೂ ಮೂರರಲ್ಲಿ ಒಂದೆರಡು ತಿಂಗಳಲ್ಲಿ ಉತ್ಪಾದನೆ ಆರಂಭವಾಗುವ ಸಾಧ್ಯತೆ ಇದೆ.

 ಒಂಬತ್ತನೇ ಸುತ್ತಿನ ಹರಾಜನ್ನು ಇತ್ತೀಚೆಗೆ ಡಿಸೆಂಬರ್ 2023 ರಲ್ಲಿ ಪ್ರಾರಂಭಿಸಲಾಯಿತು, ನಾಲ್ಕು ರಾಜ್ಯಗಳಿಂದ 31 ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ನೀಡಲಾಯಿತು. ಜಾರ್ಖಂಡ್, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕಲ್ಲಿದ್ದಲು/ಲಿಗ್ನೈಟ್ ಗಣಿಗಳನ್ನು ಒಂಬತ್ತನೇ ಸುತ್ತಿನ ಹರಾಜಿನಲ್ಲಿ ಸೇರಿಸಲಾಗಿದೆ. 2020ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾರಂಭಿಸಿದ ಸಂಪೂರ್ಣ ಪಾರದರ್ಶಕ ಆನ್ ಲೈನ್ ಹರಾಜಿನ ಅಡಿಯಲ್ಲಿ ಕಲ್ಲಿದ್ದಲು ಸಚಿವಾಲಯವು ಇದುವರೆಗೆ ಏಳು ಸುತ್ತಿನ ಹರಾಜುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈಗಾಗಲೇ ಹರಾಜಾಗಿರುವ ಗಣಿಗಳಿಂದ ಕಲ್ಲಿದ್ದಲು ಗಣಿಗಾರಿಕೆಯ ವಾರ್ಷಿಕ ಒಟ್ಟು 220.90 ದಶಲಕ್ಷ  ಟನ್ (MTPA) ಸಾಮರ್ಥ್ಯದ ಮಟ್ಟದಲ್ಲಿ ಉತ್ಪಾದನೆಯನ್ನು ಪರಿಗಣಿಸಿದರೆ ವಾರ್ಷಿಕ ಆದಾಯ ರೂ.33,343 ಕೋಟಿಗಳನ್ನು ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ, ಒಮ್ಮೆ ಈ ಗಣಿಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದರೆ, ಅವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ಮೂರು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತವೆ.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯು ದೇಶಕ್ಕೆ ಹೊಸ ಹೂಡಿಕೆಯನ್ನು ತರುವ ನಿರೀಕ್ಷೆಯಿದೆ ಮತ್ತು ಹರಾಜಿನಿಂದ ಬರುವ ಸಂಪೂರ್ಣ ಆದಾಯವನ್ನು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಜಾರ್ಖಂಡ್, ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಬಿಹಾರ ಮತ್ತು ಅಸ್ಸಾಂಗೆ ಹಂಚಲಾಗುತ್ತದೆ. 

****



(Release ID: 1993452) Visitor Counter : 81