ಉಪರಾಷ್ಟ್ರಪತಿಗಳ ಕಾರ್ಯಾಲಯ
ಎನ್ ಸಿಸಿ ಗಣರಾಜೋತ್ಸವ ದಿನ ಶಿಬಿರ- 2024 ಅನ್ನು ಉದ್ದೇಶಿಸಿ ಉಪರಾಷ್ಟ್ರಪತಿ ಮಾಡಿದ ಭಾಷಣದ ಸಾರಾಂಶ
Posted On:
05 JAN 2024 12:34PM by PIB Bengaluru
ಎನ್ ಸಿಸಿಯ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್, ಎವಿಎಸ್ ಎಂ, ಬಿಎಸ್ ಎಂ, ಗಣ್ಯ ಪ್ರೇಕ್ಷಕರು ಮತ್ತು ನನ್ನ ಪ್ರೀತಿಯ ಕೆಡೆಟ್‌ಗಳು.
ಎಲ್ಲಾ ಎನ್ ಸಿಸಿ ಕೆಡೆಟ್‌ಗಳಿಗೆ ಸಮೃದ್ಧ ಹೊಸ ವರ್ಷದ ಶುಭಾಶಯಗಳು..!
ಆತ್ಮೀಯ ಕೆಡೆಟ್‌ಗಳೇ, ನೀವು ಯುವಕರ ಚೈತನ್ಯವನ್ನು ಸಾಕಾರಗೊಳಿಸಿದ್ದೀರಿ ಮತ್ತು ಎನ್ ಸಿಸಿ ಯ ಅಂತರ್ಗತ ಶಿಸ್ತನ್ನು ಪ್ರತಿಬಿಂಬಿಸುತ್ತೀದ್ದೀರಿ.
ನೀವೆಲ್ಲರೂ ಭವಿಷ್ಯದ ನಾಯಕರು ಮತ್ತು ಮನುಕುಲದ ಆರನೇ ಒಂದು ಭಾಗದ ನೆಲೆಸಿರುವ ಭಾರತದ ಬೆಳವಣಿಗೆ ಮತ್ತು ಏಳಿಗೆಯಲ್ಲಿ ಅತ್ಯಂತ ಪ್ರಮುಖ ಪಾಲುದಾರರು.
ಎನ್‌ಸಿಸಿ ಸಮಯಪಾಲನೆ, ಸ್ಥಿತಿಸ್ಥಾಪಕತ್ವ, ನಿಷ್ಠೆ ಮತ್ತು ಕಠಿಣ ಪರಿಶ್ರಮವನ್ನು ಕಲಿಸುತ್ತದೆ, ಅದು ನಿಮ್ಮನ್ನು ಸಕ್ರಿಯ, ಉತ್ತಮ ನಾಗರಿಕರನ್ನಾಗಿ ಮತ್ತು ಈ ಮಹಾನ್ ದೇಶದ ಅತ್ಯಮೂಲ್ಯ ಮಾನವ ಸಂಪನ್ಮೂಲವಾಗಿ ರೂಪಿಸುತ್ತದೆ.
ನಿಮ್ಮ ಕಾರ್ಯಗಳು ಮತ್ತು ನಡವಳಿಕೆಯಿಂದ ನೀವೆಲ್ಲರೂ “ವೈವಿಧ್ಯತೆಯಲ್ಲಿ ಏಕತೆ"ಗೆ ಉದಾಹರಣೆಯಂತಿದ್ದೀರಿ.
ರಾಷ್ಟ್ರೀಯ ಜಾಗೃತಿ ಅಭಿಯಾನಗಳಿಗೆ ರಾಯಭಾರಿಗಳಾಗಿ ನಿಮ್ಮ ಸಕ್ರಿಯ ಬೆಳವಣಿಗೆಯನ್ನು ಎನ್ ಸಿಸಿ ಖಾತ್ರಿಪಡಿಸುತ್ತದೆ ಮತ್ತು ಸಾಂಸ್ಕೃತಿಕ, ಧಾರ್ಮಿಕ ಮತ್ತು ಭೌಗೋಳಿಕವಾಗಿ ಏಕೀಕರಣವನ್ನು ಉತ್ತೇಜಿಸುತ್ತದೆ.
ನೆಚ್ಚಿನ ಕೆಡೆಟ್‌ಗಳೇ, ನಿಮ್ಮೆಲ್ಲರನ್ನೂ ಈ ಕ್ರಿಯಾಶೀಲ ಮನಸ್ಥಿತಿಯಲ್ಲಿ ನೋಡುತ್ತಿರುವಾಗ, ನಾನು ಚಿತ್ತೋರ್‌ಗಢದ ಸೈನಿಕ್ ಶಾಲೆಯಲ್ಲಿ ನನ್ನ ಎನ್ ಸಿಸಿ ದಿನಗಳನ್ನು ಮತ್ತು ಅದು ನನ್ನ ಜೀವನದಲ್ಲಿ ಬೀರಿದ ಸಕಾರಾತ್ಮಕ ಪರಿಣಾಮವನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ.
ಕಳೆದ ವರ್ಷ, ರಾಷ್ಟ್ರೀಯ ಸುಧಾರಣೆಯ ಉಪಕ್ರಮಗಳಲ್ಲಿ ಭಾಗವಹಿಸುವಂತೆ ನಾನು ನಿಮಗೆ ಕರೆ ನೀಡಿದ್ದೆ.
ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ವಹಿವಾಟುಗಳು, ಬೇಟಿ ಬಚಾವೋ ಬೇಟಿ ಪಢಾವೋ ಮತ್ತು ಪರಿಸರ ಕೊಡುಗೆಗಳನ್ನು ನೀಡುವಲ್ಲಿ ನಿಮ್ಮ ಪರಿಣಾಮಕಾರಿ ಒಳಗೊಳ್ಳುವಿಕೆ ನೋಡಲು ನನಗೆ ಸಂತಸವಾಗುತ್ತಿದೆ.
ಈ ಉಪಕ್ರಮಗಳಿಗೆ ಅನುಗುಣವಾಗಿ, ಎನ್‌ಸಿಸಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿರುವ ಮಹಿಳಾ ಪರವಾದ ಬದಲಾವಣೆಯನ್ನು ಗಮನಿಸುತ್ತಿರುವುದು ನನಗೆ ಸಂತೋಷ ತಂದಿದೆ. ಈಗ ಮಹಿಳೆಯರ ಉಪಸ್ಥಿತಿ ಹೆಚ್ಚುತ್ತಿದೆ. ಕೆಲವೇ ಕ್ಷಣಗಳ ಹಿಂದೆ ನನಗೆ ಅದಕ್ಕೆ ಸಾಕ್ಷಿಯಾಗುವ ಸಂದರ್ಭ ದೊರಕಿತ್ತು.
ಮುಂಬರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಮಹಿಳಾ ಕೆಡೆಟ್‌ಗಳು ಎರಡು ಮಹಿಳಾ ಬ್ಯಾಂಡ್‌ಗಳೊಂದಿಗೆ ಎರಡು ವಿಶೇಷ ತುಕಡಿಗಳಲ್ಲಿ ಹೆಮ್ಮೆಯಿಂದ ಕರ್ತವ್ಯ ಪಥದಲ್ಲಿ ಸಾಗಲಿದ್ದಾರೆ.
ಆತ್ಮೀಯ ಕೆಡೆಟ್‌ಗಳೇ, ನೀವು ದೇಶದ ಯುವಜನತೆಗೆ ಮಾದರಿಯಾಗಿದ್ದೀರಿ. .
ರಾಷ್ಟ್ರದ ಯುವಕರು ಅನುಕರಿಸಬಹುದಾದ ಶಿಸ್ತಿಗೆ ಬದ್ಧರಾಗಿ ನಿಮ್ಮ ನಡವಳಿಕೆಯಿಂದ ನೀವು ಉದಾಹರಣೆಯಾಗಿ ನಿಂತಿದ್ದೀರಿ. ನೀವು ಅತ್ಯುನ್ನತ ಘನತೆ ಮತ್ತು ಶಿಸ್ತಿನಿಂದ ಮುಂದುವರಿಯಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಎನ್‌ಸಿಸಿ ತರಬೇತಿಯ ನಂತರವೂ, ಕೆಡೆಟ್ ಮನೋಭಾವವು ಶಾಶ್ವತ ಮತ್ತು ಚಿರವಾಗಿರುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಅದನ್ನು ಪೋಷಿಸಬೇಕು ಮತ್ತು ಅದು ಮತ್ತಷ್ಟು ಅರಳುತ್ತದೆ.
ಶಿಸ್ತು ಮತ್ತು ದೇಶಪ್ರೇಮದ ಗುಣಗಳು ನಿಮ್ಮ ಹೃದಯದಲ್ಲಿ ಸದಾ ಜೀವಂತವಾಗಿರಬೇಕು, ಇದು ನಮ್ಮ ತಾಯಿನಾಡಿಗೆ ನಾವು ಸಲ್ಲಿಸಬಹುದಾದ ಬಹು ದೊಡ್ಡ ಗೌರವವಾಗಿದೆ.
ತನ್ನ ಅವಿರತ ಪ್ರಯತ್ನಗಳ ಮೂಲಕ, ಎನ್‌ಸಿಸಿ ಯುವಜನತೆಯ ಅಭಿವೃದ್ಧಿ ಮತ್ತು ರಾಷ್ಟ್ರೀಯ ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಇದು ದೇಶದ ಯುವಕರಿಗೆ ರಚನಾತ್ಮಕ ರೀತಿಯಲ್ಲಿ ತಮ್ಮ ಶಕ್ತಿಯನ್ನು ಸಕಾರಾತ್ಮಕತೆಗಾಗಿ ಬಳಕೆ ಮಾಡಿಕೊಳ್ಳುವ ವೇದಿಕೆಯಾಗಿದೆ.
2047ರ ವೇಳೆಗೆ ನಮ್ಮ ಭಾರತವನ್ನು ದೊಡ್ಡ ಪ್ರಜಾಪ್ರಭುತ್ವ, ನಿಜವಾದ ಅಭಿವೃದ್ಧಿ ಹೊಂದಿದ ರಾಷ್ಟ್ರ ಮತ್ತು ವಿಶ್ವ ನಾಯಕನನ್ನಾಗಿ ಮಾಡಲು ನೀವೆಲ್ಲರೂ ಅದೇ ಉತ್ಸಾಹ, ಶೌರ್ಯ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೀರಿ ಎಂಬ ವಿಶ್ಚಾಸ ನನಗಿದೆ.
ನೀವು ಎನ್ ಸಿಸಿ ಯ ಭಾಗವಾಗಿರುವುದನ್ನು ನಿಮ್ಮ ಜೀವನದುದ್ದಕ್ಕೂ ನೀವು ಆನಂದಿಸುತ್ತೀರಿ.
ಇದು ನೀವು ಎಂದಿಗೂ ಹೆಮ್ಮೆಪಡುವಂತಹ ಭೂಷಣವಾಗಿದೆ! ನಾನು ಏಕೆ ಹಾಗೆ ಹೇಳುತ್ತೇನೆಂದರೆ ನಾನು ಅದರೊಂದಿಗೆ ಬದುಕಿದ್ದೇನೆ.
ಎನ್‌ಸಿಸಿ ಮತ್ತು ಅದರ ಕೆಡೆಟ್‌ಗಳಿಗೆ ನನ್ನ ಅಭಿನಂದನೆಗಳು. ಎನ್ ಸಿಸಿ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್, ನಿಮ್ಮ ಹೃದಯದಲ್ಲಿ ಶಿಸ್ತು, ಸಜ್ಜನಿಕೆ ಮತ್ತು ಗುರಿ ಹೊಂದಿರುವ ವ್ಯಕ್ತಿಯ ಬದ್ಧತೆ ಮತ್ತು ಕ್ರಿಯಾಶೀಲತೆಗೆ ಕೃತಜ್ಞತೆಯ ಭಾವವಿದೆ. ಅವರ ಸಮರ್ಥ ಮಾರ್ಗದರ್ಶನದಲ್ಲಿ ನೀವು ಎನ್‌ಸಿಸಿಯ ಭಾಗವಾಗಿದ್ದ ದಿನಗಳನ್ನು ನೀವು ಸದಾ ನೆನಪಿಸಿಕೊಳ್ಳುತ್ತೀರಿ.
ಆತ್ಮೀಯ ಕೆಡೆಟ್‌ಗಳೇ, ಹೆಮ್ಮೆಯ ಭಾರತೀಯರಾಗಿರಿ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಲಿ.
ನಮ್ಮ ಅದ್ಭುತ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಕು.
ಈ ದೇಶದ ಬೆಳವಣಿಗೆಯಲ್ಲಿ ನೀವು ಅತ್ಯಂತ ದೊಡ್ಡ ಪಾಲುದಾರರು ಎಂಬುದಕ್ಕೆ ಹೆಮ್ಮೆಪಡಿ. ಜಗತ್ತಿನ ರಾಷ್ಟ್ರಗಳ ಶಿಖರದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಲು ನೀವು ಈ ಗ್ರಹದಲ್ಲಿರುವ ಇತರ ಎಲ್ಲ ಮಾನವ ಸಂಪನ್ಮೂಲಗಳನ್ನು ಮೀರಿಸಿ ಬೆಳಯಬೇಕು. ಸದಾ ನಿಮಗೆ ಅನುಗ್ರಹವಾಗಲಿ.
ಜೈ ಭಾರತ್ !
***
(Release ID: 1993428)
Visitor Counter : 83