ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಹೊಸ ವರ್ಷದ ಉಪಗ್ರಹ  ಎಕ್ಸ್ ಪೋಸ್ಯಾಟ್ ಒಂದಕ್ಕಿಂತ ಹೆಚ್ಚು ಸಂಸ್ಥೆಗಳ 'ಸಂಪೂರ್ಣ ವಿಜ್ಞಾನ'ದ ಜಂಟಿ ಪ್ರಯತ್ನದ ಪ್ರತೀಕ  : ಡಾ ಜಿತೇಂದ್ರ ಸಿಂಗ್

Posted On: 02 JAN 2024 5:24PM by PIB Bengaluru

ಹೊಸ ವರ್ಷದ ಉಪಗ್ರಹ ಎಕ್ಸ್ ಪೋಸ್ಯಾಟ್ ಒಂದಕ್ಕಿಂತ ಹೆಚ್ಚು ಸಂಸ್ಥೆಗಳ "ಸಂಪೂರ್ಣ ವಿಜ್ಞಾನ" ಜಂಟಿ ಪ್ರಯತ್ನದ ಪ್ರತೀಕ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು .

ಇಲ್ಲಿ "ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್" ನ ಪ್ಲಾಟಿನಂ ಜುಬಿಲಿ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಾಥಮಿಕ ಹೊರುವ ಭಾಗವನ್ನು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಕಲ್ಪಿಸಿ, ವಿನ್ಯಾಸಗೊಳಿಸಿ   ಹಾಗು ಅಭಿವೃದ್ಧಿಪಡಿಸಿದ್ದು, ಉಡಾವಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಡಿತು ಎಂದು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಮಾತನಾಡಿ, ‘ಮೇಕ್ ಇನ್ ಇಂಡಿಯಾ’ ಸಂಸ್ಕೃತಿ ಮತ್ತು ʼಆತ್ಮನಿರ್ಭರʼವು ಗಮನಾರ್ಹ 75 ವರ್ಷಗಳಿಂದ ರಾಮನ್ ಸಂಶೋಧನಾ ಸಂಸ್ಥೆ (ಆರ್ ಆರ್ ಐ)ಯ ಯಶಸ್ಸಿನ ಮಂತ್ರವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತದ ಬಾಹ್ಯಾಕಾಶ ಆಧಾರಿತ ವಿಜ್ಞಾನ ಕಾರ್ಯಕ್ರಮದಲ್ಲಿ ದೀರ್ಘಕಾಲದ ಮಾನ್ಯತೆ ಪಡೆದ ಶೈಕ್ಷಣಿಕ ಪಾಲುದಾರರಾದ ರಾಮನ್ ಸಂಶೋಧನಾ ಸಂಸ್ಥೆ ನಡುವಿನ ಜಂಟಿ ಕಾರ್ಯದ ಬಗ್ಗೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು.

ಡಾ. ಜಿತೇಂದ್ರ ಸಿಂಗ್ ಅವರು ಇತ್ತೀಚಿನ ಮಿಷನ್ಗೆ ಅತ್ಯುತ್ತಮವಾದ ಪಿಒಎಲ್ಐಎಕ್ಸ್ ನಲ್ಲಿ ಕೆಲಸ ಮಾಡಿದ ಆರ್ ಆರ್ ಐ   ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಅಭಿನಂದಿಸಿದರು. ಇಸ್ರೋ ಸಹಯೋಗದೊಂದಿಗೆ ಮತ್ತೆ ಉಪಗ್ರಹ ಆಧಾರಿತ ಕ್ವಾಂಟಮ್ ಸಂವಹನದಲ್ಲಿ ಆರ್ ಆರ್ ಐ  ಪ್ರಮುಖ ಪಾಲುದಾರ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

"ನಮ್ಮ ದೇಶದ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ದೇಶದ ಹಿತಾಸಕ್ತಿಯ ಈ ಒತ್ತಡದ ಕ್ಷೇತ್ರದಲ್ಲಿ ಆರ್ ಆರ್ ಐ  ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲು ನಾನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ" ಎಂದು ಸಚಿವರು ಹೇಳಿದರು.

ಚಂದ್ರಯಾನ-3 ಮತ್ತು ಇತರ ಯೋಜನೆಗಳನ್ನು ವಿವರಿಸಿದ ಸಚಿವರು, 2023ರ ವರ್ಷವು ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳಲ್ಲಿ ದೇಶಕ್ಕೆ ವಿಶೇಷವಾಗಿ ಮಹತ್ವದ್ದಾಗಿದೆ ಎಂದು ಹೇಳಿದರು.

ಇಂದು ಬೆಂಗಳೂರಿನಲ್ಲಿ ನಡೆದ ಆರ್ಆರ್ಐನ ಪ್ಲಾಟಿನಂ ಜುಬಿಲಿ ವರ್ಷಾಚರಣೆಯ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಡಾ.ಜಿತೇಂದ್ರ ಸಿಂಗ್ ಅವರು ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಸಿ.ವಿ. ರಾಮನ್  ರವರ  ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು., ಒಂದು ಶತಮಾನದ ಹಿಂದೆ ಮಾಡಿದ ಅವರ  ನವನವೀನ ಅನ್ವೇಷಣೆಯು ಈಗ ಸ್ಪೆಕ್ಟ್ರೋಸ್ಕೋಪಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ  ಉಪಯೋಗಗಳನ್ನು  ಹುಟ್ಟುಹಾಕಿದೆ. ಇದು ಅತ್ಯಾಧುನಿಕ  ವಿಜ್ಞಾನ ಮತ್ತು ತಂತ್ರಜ್ಞಾನದ ಸುಪ್ತ ಮೌಲ್ಯವಾಗಿದ್ದು, ಪ್ರಪಂಚದಾದ್ಯಂತ ಪ್ರತಿ ಅಭಿವೃದ್ಧಿ ಹೊಂದಿದ ಸಮಾಜವು ಪ್ರಶಂಸಿಸಲು ಕಲಿಯಬೇಕು ಎಂದು ಅವರು ಹೇಳಿದರು.

ಪ್ರೊಫೆಸರ್ ರಾಮನ್ ಅವರನ್ನು ಗಡಿಗಳಿಲ್ಲದ ವಿಜ್ಞಾನಿ ಎಂದು ಬಣ್ಣಿಸಿದ ಸಚಿವರು, ಅವರ ಗಮನಾರ್ಹ  ಪ್ರಭಾವವು ಆಣ್ವಿಕ ಜೀವಶಾಸ್ತ್ರ, ಕ್ವಾಂಟಮ್ ಆಪ್ಟಿಕ್ಸ್ ಮತ್ತು ಬಾಹ್ಯಾಕಾಶ ಕಾರ್ಯಕ್ರಮದ ಅತ್ಯಂತ ವೈವಿಧ್ಯಮಯ   ಕ್ಷೇತ್ರಗಳ  ಭವಿಷ್ಯದ ನಾಯಕರಾದ ಜಿ.ಎನ್. ರಾಮಚಂದ್ರನ್, ಎಸ್. ಪಂಚರತ್ನಂ ಮತ್ತು ವಿಕ್ರಮ್ ಸಾರಾಭಾಯ್ ಅವರನ್ನು ಸೆಳೆಯಿತು.


ಭಾರತವು ಅಗ್ರ ನಾಲ್ಕು ಆರ್ಥಿಕತೆಗಳತ್ತ ವೇಗವಾಗಿ ಪ್ರಗತಿ ಸಾಧಿಸುತ್ತಿರುವುದನ್ನು ಶ್ಲಾಘಿಸಿದ ಸಚಿವರು, ಮನುಕುಲವು ಅನೇಕ ಸವಾಲುಗಳನ್ನು ಎದುರಿಸಲಿದೆ, ಇದಕ್ಕೆ ಪರಿಹಾರಗಳನ್ನು ಒದಗಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅವಲಂಬಿಸಬೇಕಾಗಿದೆ ಎಂದು ತಿಳಿಸಿದರು. ಅಮೃತ ಕಾಲದ ಕಡೆಗಿನ ಭಾರತದ ಪ್ರಯಾಣಕ್ಕೆ ಕೊಡುಗೆ ನೀಡುವಂತೆ ಅವರು ಇಲ್ಲಿನ ವಿಜ್ಞಾನಿಗಳಿಗೆ ಕೇಳಿದರು.

ಹೋಮಿ ಭಾಭಾ ರಾಷ್ಟ್ರೀಯ ಸಂಸ್ಥೆಯ ಕುಲಪತಿ ಡಾ.ಅನಿಲ್ ಕಾಕೋಡ್ಕರ್, ಇಸ್ರೋ ಮಾಜಿ ಅಧ್ಯಕ್ಷರು, ಆರ್ಆರ್ಐ ಆಡಳಿತದ ಅಧ್ಯಕ್ಷರಾದ ಶ್ರೀ ಎ.ಎಸ್. ಕಿರಣ್ ಕುಮಾರ್ ಮತ್ತು ಆರ್ಆರ್ಐ ನಿರ್ದೇಶಕರು ಪ್ರೊ. ತರುಣ್ ಸೌರದೀಪ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಆಗಮನದ ನಂತರ ಮೊದಲು ಸಚಿವರು ಆರ್ಆರ್ಐ ಗ್ರಂಥಾಲಯ ಸಂಕೀರ್ಣಕ್ಕೆ ಭೇಟಿ ನೀಡಿ, ಹಿರಿಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಸಂದರ್ಶಕರ ಪುಸ್ತಕದಲ್ಲಿ ಟಿಪ್ಪಣಿಗಳನ್ನು ದಾಖಲಿಸಿದರು.

ನಂತರ ಸಂಸ್ಥೆಯ ಆವರಣದಲ್ಲಿ ನೂತನ ರಾಮನ್ ವೃಕ್ಷವನ್ನು ನೆಟ್ಟ ಸಚಿವರು, ಆರ್ಆರ್ಐನ ವೈಜ್ಞಾನಿಕ ಸಾಧನೆಗಳನ್ನು ವಿವರಿಸುವ “ಲೈಟಿಂಗ್ ದಿ ವೇ ಆಫ್ ಫಿಸಿಕ್ಸ್” ಪುಸ್ತಿಕೆಯನ್ನು ಬಿಡುಗಡೆ ಮಾಡಿದರು.

*******


(Release ID: 1992480) Visitor Counter : 147


Read this release in: English , Urdu , Hindi