ಇಂಧನ ಸಚಿವಾಲಯ
azadi ka amrit mahotsav g20-india-2023

ಗೌರವಾನ್ವಿತ ಇಂಧನ ಸಚಿವರಿಂದ ಬೆಂಗಳೂರಿನಲ್ಲಿ ಪವರ್ ಗ್ರಿಡ್ ವಿಶ್ರಾಮ ಸದನ ಉದ್ಘಾಟನೆ

Posted On: 28 DEC 2023 6:07PM by PIB Bengaluru

 ಪವರ್ ಗ್ರಿಡ್ ವಿಶ್ರಾಮ ಸದನವನ್ನು ಭಾರತ ಸರ್ಕಾರದ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಗೌರವಾನ್ವಿತ ಶ್ರೀ ಆರ್. ಕೆ. ಸಿಂಗ್ ಅವರು ಉದ್ಘಾಟಿಸಿದರು.

​​ಈ ವೇಳೆ ವರ್ಚುವಲ್ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಗೌರವಾನ್ವಿತ ಡಾ.ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು. ಅಲ್ಲದೆ, ಗೌರವಾನ್ವಿತ ಇಂಧನ ಸಚಿವ ಶ್ರೀ ಕೆ.ಜೆ.ಜಾರ್ಜ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ತೇಜಸ್ವಿ ಸೂರ್ಯ, ಪವರ್‌ ಗ್ರಿಡ್ ನ ನಿರ್ದೇಶಕ (ಸಿಬ್ಬಂದಿ) ಡಾ.ಯತೀಂದ್ರ ದ್ವಿವೇದಿ, ಬೆಂಗಳೂರು ನಿಮ್ಹಾನ್ಸ್‌ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಮತ್ತು ಪವರ್‌ ಗ್ರಿಡ್ ನ ಹಿರಿಯ ಅಧಿಕಾರಿಗಳು ಖುದ್ದು ಉಪಸ್ಥಿತರಿದ್ದರು.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ. ಆರ್. ಕೆ.ಸಿಂಗ್ ಅವರು ಪವರ್‌ ಗ್ರೀಡ್ ನ ಆದರ್ಶ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು “ ಈ ಪವರ್‌ ಗ್ರೀಡ್ ವಿಶ್ರಾಮ ಸದನದಿಂದ ದೂರದ ಊರುಗಳಿಂದ ಬರುವ ಬಡವರಿಗೆ ಅನುಕೂಲವಾಗುತ್ತದೆ’’ ಎಂದರು.

ಅಲ್ಲದೆ, ಅವರು ದೇಶದಲ್ಲಿನ ಸದೃಢ ಇಂಧನ ವಲಯದ ಚಿತ್ರಣದ ಬಗ್ಗೆ ಮಾತನಾಡಿದ ಅವರು, ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಒದಗಿಸಲು ಭಾರತ ಸರ್ಕಾರ ಗಮನಾರ್ಹ ಪ್ರಯತ್ನಗಳನ್ನು ಕೈಗೊಂಡಿದೆ ಎಂದರು.

23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಎರಡು ಅಂತಸ್ತಿನ ವಿಶ್ರಾಮ ಸದನ 270 ಹಾಸಿಗೆಗಳನ್ನು ಹೊಂದಿದೆ. 55 ಕೋಣೆಗಳಿರುವ ಈ ಸದನದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ರೋಗಿಗಳ ಸಹಾಯಕರಿಗೆ ಗರಿಷ್ಟ ಪ್ರಮಾಣದಲ್ಲಿ ಸಾಧ್ಯವಾದ ಎಲ್ಲಾ ರೀತಿಯ ಆರಾಮ ಒದಗಿಸಲು ಸಾಮರ್ಥ್ಯಗಳನ್ನು ಸೃಷ್ಟಿಸಲಾಗಿದೆ.

ಕಾರ್ಪೋರೇಟ್ ಸಾಮಾಜಿಕ ಹೊಣೆ ಹೊತ್ತಿರುವ ಒಂದು ಸಂಸ್ಥೆಯಾಗಿ ಪವರ್ ಗ್ರಿಡ್ ನವದೆಹಲಿ ಏಮ್ಸ್ಮ ಪಾಟ್ನಾದ ಐಜಿಐಎಂಎಸ್, ದರ್ಬಂಗಾದ ಡಿಎಂಸಿಎಚ್, ಲಕ್ನೋದ ಗುವಾಹಟಿ ಮತ್ತು ವಡೋದರಾ ಕೆಜಿಎಂಯು ಗಳಲ್ಲಿ ಇದೇ ರೀತಿಯ ವಿಶ್ರಾಮ ಸದನಗಳನ್ನು ಜನಸಾಮಾನ್ಯರ ಅನುಕೂಲಕ್ಕಾಗಿ ನಿರ್ಮಿಸಿದೆ. ರಾಂಚಿ ಮತ್ತು ಝಾನ್ಸಿಯಲ್ಲೂ ಪವರ್‌ಗ್ರಿಡ್‌ನಿಂದ ಇಂತಹ ವಿಶ್ರಾಮ ಸದನಗಳನ್ನು ನಿರ್ಮಿಸಲಾಗುತ್ತಿದೆ.

ಪವರ್‌ ಗ್ರಿಡ್ ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಪರಿಸರ, ಕುಡಿಯುವ ನೀರು, ಜಲ ಸಂರಕ್ಷಣೆ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಮತ್ತು ಆ ಮೂಲಕ ದೇಶದಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸುಮಾರು ರೂ. 1000 ಕೋಟಿ ರೂ. ವೆಚ್ಚದಲ್ಲಿ ಸಿಎಸ್‌ಆರ್ ಉಪಕ್ರಮಗಳನ್ನು ಕೈಗೊಂಡಿದೆ.

****



(Release ID: 1991311) Visitor Counter : 83


Read this release in: English , Urdu , Hindi