ಕಲ್ಲಿದ್ದಲು ಸಚಿವಾಲಯ
2023-24 ರ ಆರ್ಥಿಕ ವರ್ಷದಲ್ಲಿ ಡಿಸೆಂಬರ್ 25 ರವರೆಗೆ 664.37 ಮಿಲಿಯನ್ ಟನ್ ಗೆ ತಲುಪಿದ ಕಲ್ಲಿದ್ದಲು ಉತ್ಪಾದನೆ
ಕಲ್ಲಿದ್ದಲು ರವಾನೆಯಲ್ಲಿ ಶೇಕಡಾ 11.32 ಬೆಳವಣಿಗೆ; ಶೇಕಡಾ 8.39 ಹೆಚ್ಚಳದೊಂದಿಗೆ 2023-24ರ ಅವಧಿಯಲ್ಲಿ ವಿದ್ಯುತ್ ವಲಯಕ್ಕೆ 577.11 ಮಿಲಿಯನ್ ಟನ್ ಕಲ್ಲಿದ್ದಲು ರವಾನೆ
ಇತ್ತೀಚಿನ ಉಪಕ್ರಮಗಳಡಿಯಲ್ಲಿ ತಡೆರಹಿತ ಕಲ್ಲಿದ್ದಲು ಸಾಗಣೆ
Posted On:
28 DEC 2023 11:21AM by PIB Bengaluru
ಕಲ್ಲಿದ್ದಲು ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆರ್ಥಿಕ ವರ್ಷ 2023-24ರ ಅವಧಿಯಲ್ಲಿ ಕಳೆದ ಏಪ್ರಿಲ್ 2023 ರಿಂದ ಡಿಸೆಂಬರ್ 25, 2023 ರವರೆಗೆ ಕಲ್ಲಿದ್ದಲು ಉತ್ಪಾದನೆ 664.37 ಮಿಲಿಯನ್ ಟನ್ (MT)ಗೆ ತಲುಪಿದೆ. ಕಳೆದ ವರ್ಷ ಇದೇ ಸಮಯದಲ್ಲಿ 591.64 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದ್ದು ಈ ವರ್ಷ ಶೇಕಡಾ 12.29ರಷ್ಟು ಬೆಳವಣಿಗೆಯಾಗಿದೆ.
ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, 2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಏಪ್ರಿಲ್ 2023 ರಿಂದ ಡಿಸೆಂಬರ್ 25ರವರೆಗೆ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು 692.84 ಮೆಟ್ರಿಕ್ ಟನ್ ನಷ್ಟಾಗಿದೆ. ಇದು ಹಿಂದಿನ ವರ್ಷದ 622.40 ಮೆಟ್ರಿಕ್ ಟನ್ ಗೆ ಹೋಲಿಸಿದರೆ ಗಮನಾರ್ಹ ಶೇಕಡಾ 11.32ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಹೆಚ್ಚಳವು ವಿದ್ಯುತ್ ವಲಯದ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸ್ಥಿರವಾದ ಮತ್ತು ದೃಢವಾದ ಕಲ್ಲಿದ್ದಲು ಪೂರೈಕೆಯನ್ನು ಖಾತ್ರಿಪಡಿಸುತ್ತದೆ.
ಇದಲ್ಲದೆ, ಕಳೆದ ಏಪ್ರಿಲ್ ನಿಂದ ಡಿಸೆಂಬರ್ 25, 2023 ರವರೆಗೆ ವಿದ್ಯುತ್ ವಲಯಕ್ಕೆ ಒಟ್ಟಾರೆ ಕಲ್ಲಿದ್ದಲು ರವಾನೆಯು ಶೇಕಡಾ 8.39ರಷ್ಟು ಹೆಚ್ಚಾಗಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 532.43 ಮೆಟ್ರಿಕ್ ಟನ್ ಗೆ ಹೋಲಿಸಿದರೆ 577.11 ಮೆಟ್ರಿಕ್ ಟನ್ ಗೆ ತಲುಪಿದೆ.
ಡಿಸೆಂಬರ್ 25, 2023ರ ಅಂಕಿಅಂಶದಂತೆ ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು (DCB), ಸಾಗಣೆ ಇತ್ಯಾದಿಗಳನ್ನು ಒಳಗೊಂಡಂತೆ ಒಟ್ಟಾರೆ ಕಲ್ಲಿದ್ದಲು ಸಂಗ್ರಹವು 91.05 ಮೆಟ್ರಿಕ್ ಟನ್ ಗೆ ತಲುಪಿದೆ. ಡಿಸೆಂಬರ್ 25, 2022ರಂದು 74.90 ಮೆಟ್ರಿಕ್ ಟನ್ ನಿಂದ ಉತ್ತಮ ಶೇಕಡಾ 21.57 ಬೆಳವಣಿಗೆಯನ್ನು ತೋರಿಸುತ್ತದೆ. ಹೆಚ್ಚುವರಿಯಾಗಿ, 25.12.23 ರಂದು ಕೋಲ್ ಇಂಡಿಯಾ ಲಿಮಿಟೆಡ್ (CIL) ನಲ್ಲಿ ಪಿಟ್‌ಹೆಡ್ ಕೋಲ್ ಸಂಗ್ರಹ 47.29 ಮೆಟ್ರಿಕ್ ಟನ್ ಆಗಿತ್ತು. 25.12.22 ರಂದು 30.88 ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹಕ್ಕೆ ಹೋಲಿಸಿದರೆ ಶೇಕಡಾ 53.02ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ.
ಕಲ್ಲಿದ್ದಲು ಸಚಿವಾಲಯವು ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ಪೂರೈಕೆಯ ಭರವಸೆ ನೀಡುತ್ತದೆ. ಥರ್ಮಲ್ ಪವರ್ ಪ್ಲಾಂಟ್‌ಗಳಿಗೆ (TPPs) ಸಮರ್ಥ ಕಲ್ಲಿದ್ದಲು ಪೂರೈಕೆಯು ವಿವಿಧ ಪಿಟ್‌ಹೆಡ್‌ಗಳಲ್ಲಿ ದೃಢವಾದ ಕಲ್ಲಿದ್ದಲು ದಾಸ್ತಾನು ಮಟ್ಟವನ್ನು ಸೃಷ್ಟಿಸಿದೆ, ಇದು ರಾಷ್ಟ್ರವ್ಯಾಪಿ ತಡೆರಹಿತ ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಪರಿಣಾಮಕಾರಿ ಕಲ್ಲಿದ್ದಲು ಪೂರೈಕೆ ಸರಪಳಿಯನ್ನು ಎತ್ತಿ ತೋರಿಸುತ್ತದೆ.
ಈ ಹೆಚ್ಚಿನ ಕಲ್ಲಿದ್ದಲು ಸಂಗ್ರಹವು ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ನಿರ್ವಹಿಸಲು ಕಲ್ಲಿದ್ದಲು ಸಚಿವಾಲಯದ ಬದ್ಧತೆಯನ್ನು ತೋರಿಸುತ್ತದೆ ಮತ್ತು ಪರಿಣಾಮಕಾರಿ ಸಂಗ್ರಹ ನಿರ್ವಹಣಾ ಕಾರ್ಯತಂತ್ರಗಳು ಮತ್ತು ಕಾರ್ಯಾಚರಣೆಯ ದಕ್ಷತೆ ಮತ್ತು ವಿದ್ಯುತ್ ವಲಯದ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸ್ಥಿರವಾದ ಕಲ್ಲಿದ್ದಲು ಪೂರೈಕೆಯನ್ನು ಒತ್ತಿಹೇಳುತ್ತದೆ.
ಇದಲ್ಲದೆ, ಕಲ್ಲಿದ್ದಲು ಸಾಗಾಟಕ್ಕೆ ನಿರ್ಣಾಯಕವಾದ ಕಲ್ಲಿದ್ದಲು ಕುಂಟೆಗಳ ಅಡೆತಡೆಯಿಲ್ಲದ ಲಭ್ಯತೆಯು ಸುಗಮ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಖಾತ್ರಿಗೊಳಿಸುತ್ತದೆ, ಸಾರಿಗೆ ಅಡಚಣೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ ಮತ್ತು ತಡೆರಹಿತ ಕಲ್ಲಿದ್ದಲು ಪೂರೈಕೆಯನ್ನು ಖಾತರಿಪಡಿಸುತ್ತದೆ.
ಎಲ್ಲಾ ಕಾರ್ಯಾಚರಣೆಗಳ ನಿರಂತರ ಮತ್ತು ಸಮಗ್ರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ಬದ್ಧತೆಯೊಂದಿಗೆ, ಕಲ್ಲಿದ್ದಲು ಸಚಿವಾಲಯವು ಈ ಪ್ರಭಾವಶಾಲಿ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಪ್ರಗತಿಯನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವಾಸಾರ್ಹ ಮತ್ತು ನಿರಂತರ ವಿದ್ಯುತ್ ಸರಬರಾಜನ್ನು ಸಚಿವಾಲಯ ಖಾತ್ರಿಪಡಿಸುತ್ತಿದೆ. ಹೀಗಾಗಿ ಸ್ವಾವಲಂಬಿ ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡುತ್ತದೆ.
****
(Release ID: 1991264)
Visitor Counter : 96