ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಅಸ್ತಿತ್ವದಲ್ಲಿರುವ ಐಟಿ ನಿಯಮಗಳನ್ನು ಅನುಸರಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲಾ ಮಧ್ಯವರ್ತಿಗಳಿಗೆ ಸಲಹೆಯನ್ನು ನೀಡುತ್ತದೆ.


"ಈ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ನಿಯಮ 3(1)(ಬಿ) ನಲ್ಲಿನ ನಿಷೇಧಿತ ವಿಷಯವನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು 'ಒಪ್ಪಿಗೆ' ಕಾರ್ಯವಿಧಾನಗಳನ್ನು ಒಳಗೊಂಡ ಔಪಚಾರಿಕ ಸಲಹೆಯನ್ನು ನೀಡಲಾಗಿದೆ". ಸಚಿವ ರಾಜೀವ್ ಚಂದ್ರದೇಖರ್

"ಐಟಿ ನಿಯಮಗಳ ಕಾನೂನಿನ ಉಲ್ಲಂಘನೆಗಳನ್ನು ಗಮನಿಸಿದರೆ ಅಥವಾ ವರದಿ ಮಾಡಿದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಚಿವ ರಾಜೀವ್ ಚಂದ್ರದೇಖರ್

"ಐಟಿ ನಿಯಮಗಳ ಅಡಿಯಲ್ಲಿ ಅನುಮತಿಸದ ವಿಷಯ, ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಪಟ್ಟಿ ಮಾಡಲಾದವುಗಳನ್ನು ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು". - ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.

Posted On: 26 DEC 2023 6:34PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲಾ ಮಧ್ಯವರ್ತಿಗಳಿಗೆ ಅಸ್ತಿತ್ವದಲ್ಲಿರುವ ಐಟಿ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿ ಎಂದು ನಿರ್ದೇಶನ ನೀಡಿದೆ. ಈ ನಿರ್ದೇಶನವು ನಿರ್ದಿಷ್ಟವಾಗಿ ಏಐ ಡೀಪ್‌ಫೇಕ್ ತಂತ್ರಜ್ಞಾನದಿಂದ ನಡೆಸುತ್ತಿರುವ ತಪ್ಪು ಮಾಹಿತಿಯ ಸುತ್ತ ಬೆಳೆಯುತ್ತಿರುವ ಕಾಳಜಿಗಳ ಕುರಿತಾಗಿದೆ.

ಮಧ್ಯವರ್ತಿಗಳು ನಿಷೇಧಿತ ವಿಷಯವನ್ನು ನಿರ್ದಿಷ್ಟವಾಗಿ ಐಟಿ ನಿಯಮಗಳ ನಿಯಮ 3(1)(b) ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿಷಯವನ್ನು ಬಳಕೆದಾರರಿಗೆ ಸ್ಪಷ್ಟವಾಗಿ ಮತ್ತು ನಿಖರವಾಗಿ ತಿಳಿಸಬೇಕೆಂಬುದನ್ನು ಈ ಸಲಹೆಯು ಕಡ್ಡಾಯಗೊಳಿಸಿದೆ. ಈ ಸಲಹೆಯು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖ‌ರ್ ಅವರು ಡಿಜಿಟಲ್ ಇಂಡಿಯಾ ಸಂವಾದದ ಸಮಯದಲ್ಲಿ ಮಧ್ಯವರ್ತಿಗಳೊಂದಿಗೆ ಒಂದು ತಿಂಗಳಿಂದ ನಡೆಸಿದ ಚರ್ಚೆಯ ಸಮಗ್ರ ಮಾಹಿತಿಯಾಗಿದೆ.

ಈ ಸಲಹೆಯು ಹೀಗೆ ಹೇಳಿದೆ, “ಐಟಿ ನಿಯಮಗಳ ಅಡಿಯಲ್ಲಿ ಅನುಮತಿಸದ ವಿಷಯಗಳು, ನಿರ್ದಿಷ್ಟವಾಗಿ ನಿಯಮ 3(1) (ಬಿ) ಅಡಿಯಲ್ಲಿ ಪಟ್ಟಿ ಮಾಡಲಾದವುಗಳನ್ನು ಅದರ ಸೇವಾ ನಿಯಮಗಳು ಮತ್ತು ಬಳಕೆದಾರ ಒಪ್ಪಂದಗಳ ಮೂಲಕ ಬಳಕೆದಾರರಿಗೆ ಸ್ಪಷ್ಟವಾಗಿ ಮತ್ತು ನಿಖರವಾದ ಭಾಷೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು ಮತ್ತು ಮೊದಲ-ನೋಂದಣಿ ಸಮಯದಲ್ಲಿ ಮತ್ತು ನಿಯಮಿತ ಜ್ಞಾಪನೆಗಳಾಗಿ, ನಿರ್ದಿಷ್ಟವಾಗಿ, ಲಾಗಿನ್‌ ಪ್ರತಿಯೊಂದು ಸಂದರ್ಭದಲ್ಲೂ ಮತ್ತು ಪ್ಲಾಟ್‌ಫಾರ್ಮ್‌ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡುವಾಗ/ಹಂಚಿಕೊಳ್ಳುವಾಗಲೂ ಇದನ್ನು ಬಳಕೆದಾರರಿಗೆ ಸ್ಪಷ್ಟವಾಗಿ ಹಾಗೂ ಕಡ್ಡಾಯವಾಗಿ ತಿಳಿಸಬೇಕು.

ನಿಯಮ 3(1)(ಬಿ) ಉಲ್ಲಂಘನೆಯ ಸಂದರ್ಭದಲ್ಲಿ ಐಪಿಸಿ ಮತ್ತು ಐಟಿ ಆಕ್ಟ್ 2000 ಸೇರಿದಂತೆ ದಂಡದ ನಿಬಂಧನೆಗಳ ಬಗ್ಗೆ ಬಳಕೆದಾರರಿಗೆ ತಿಳಿಸಲಾಗಿದೆ ಎಂದು ಡಿಜಿಟಲ್ ಮಧ್ಯವರ್ತಿಗಳು ಖಚಿತಪಡಿಸಿಕೊಳ್ಳಬೇಕೆಂಬುದನ್ನು ಈ ಸಲಹೆಯು ಒತ್ತಿಹೇಳುತ್ತದೆ.

"ಭಾರತೀಯ ದಂಡ ಸಂಹಿತೆ ಐಪಿಸಿ 1860, ಐಟಿ ಕಾಯಿದೆ, 2000 ಮತ್ತು ನಿಯಮ 3(1)(ಬಿ) ಉಲ್ಲಂಘನೆಯ ಸಂದರ್ಭದಲ್ಲಿ ಆಕರ್ಷಿಸಬಹುದಾದ ಇತರ ಕಾನೂನುಗಳ ವಿವಿಧ ದಂಡದ ನಿಬಂಧನೆಗಳ ಬಗ್ಗೆ ಬಳಕೆದಾರರಿಗೆ ಕಡ್ಡಾಯವಾಗಿ ತಿಳಿದಿರಬೇಕು.ಹೆಚ್ಚುವರಿಯಾಗಿ, ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳು ಸಂದರ್ಭಕ್ಕೆ ಅನ್ವಯವಾಗುವ ಸಂಬಂಧಿತ ಭಾರತೀಯ ಕಾನೂನುಗಳ ಅಡಿಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಕಾನೂನು ಉಲ್ಲಂಘನೆಗಳನ್ನು ವರದಿ ಮಾಡಲು ಮಧ್ಯವರ್ತಿಗಳು / ಪ್ಲಾಟ್‌ಫಾರ್ಮ್ ಗಳು ಬಾಧ್ಯತೆ ಹೊಂದಿದ್ದಾರೆ ಎಂದು ಸ್ಪಷ್ಟವಾಗಿ ಹೈಲೈಟ್ ಮಾಡಬೇಕು, "ಎಂದು ಸಲಹೆಯಲ್ಲಿ ಮತ್ತಷ್ಟು ಸುರಕ್ಷತೆಯ ಅಂಶಗಳನ್ನು ಸೇರಿಸಲಾಗಿದೆ.

ನಿಯಮ 3(1)(ಬಿ) ಐಟಿ ನಿಯಮಗಳಡಿಯ ಶ್ರದ್ಧೆ ವಿಭಾಗದಲ್ಲಿ ಮಧ್ಯವರ್ತಿಗಳು ತಮ್ಮ ನಿಯಮಗಳು, ನಿಬಂಧನೆಗಳು, ಗೌಪ್ಯತೆ ನೀತಿ ಮತ್ತು ಬಳಕೆದಾರರ ಒಪ್ಪಂದವನ್ನು ಬಳಕೆದಾರರ ಆದ್ಯತೆಯ ಭಾಷೆಯಲ್ಲಿ ತಿಳಿಸಬೇಕೆಂಬುದನ್ನು ಕಡ್ಡಾಯಗೊಳಿಸಲಾಗಿದೆ.

11 ಪಟ್ಟಿ ಮಾಡಲಾದ ಬಳಕೆದಾರರ ಹಾನಿಗಳು ಅಥವಾ ಡಿಜಿಟಲ್ ಮಧ್ಯವರ್ತಿಗಳಲ್ಲಿ ನಿಷೇಧಿಸಲಾದ ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪೋಸ್ಟ್ ಮಾಡುವುದು, ಪ್ರದರ್ಶಿಸುವುದು, ಅಪ್‌ಲೋಡ್ ಮಾಡುವುದು, ಮಾರ್ಪಡಿಸುವುದು, ಪ್ರಕಟಿಸುವುದು, ರವಾನಿಸುವುದು, ಸಂಗ್ರಹಿಸುವುದು, ನವೀಕರಿಸುವುದು ಅಥವಾ ಹಂಚಿಕೊಳ್ಳುವುದರಿಂದ ಬಳಕೆದಾರರನ್ನು ತಡೆಯಲು ಸಮಂಜಸವಾದ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಬೇಕು.

ಈ ನಿಯಮವು ಪ್ಲಾಟ್‌ಫಾರ್ಮ್ ಗಳು ತಪ್ಪು ಮಾಹಿತಿ, ತಪ್ಪು ಅಥವಾ ತಪ್ಪುದಾರಿಗೆಳೆಯುವ ವಿಷಯ ಮತ್ತು ಡೀಪ್‌ಫೇಕ್‌ಗಳನ್ನು ಒಳಗೊಂಡಂತೆ ಇತರ ವಿಷಯವನ್ನು ಗುರುತಿಸಲು ಮತ್ತು ತ್ವರಿತವಾಗಿ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನೀಡಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಡೀಪ್‌ಫೇಕ್‌ಗಳ ಸಮಸ್ಯೆಯನ್ನು ಪರಿಹರಿಸಲು ಉದ್ಯಮದ ಪ್ರಮುಖರೊಂದಿಗೆ ಪ್ರಮುಖ ಪಾಲುದಾರರ ಸಭೆಗಳನ್ನು ಕರೆದರು. ಸಭೆಯಲ್ಲಿ, ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಮತ್ತು ಮಧ್ಯವರ್ತಿಗಳು ಪ್ರಸ್ತುತ ಕಾನೂನುಗಳು ಮತ್ತು ನಿಬಂಧನೆಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕಾದ ತುರ್ತು ಅಗತ್ಯವನ್ನು ಅವರು ಎತ್ತಿ ತೋರಿಸಿದರು, ಐಟಿ ನಿಯಮಗಳು ಡೀಪ್‌ಪ್ಲೇಕ್‌ಗಳ ಅಪಾಯವನ್ನು ಸಮಗ್ರವಾಗಿ ಪರಿಹರಿಸುತ್ತವೆ ಎಂದು ಸಚಿವರು ಒತ್ತಿ ಹೇಳಿದರು.

“ತಪ್ಪು ಮಾಹಿತಿಯು ಇಂಟರ್ನೆಟ್‌ನಲ್ಲಿ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆಗೆ ಆಳವಾದ ಬೆದರಿಕೆಯನ್ನು ಪ್ರತಿನಿಧಿಸುತ್ತದೆ. ಏಐ ನಿಂದ ನಡೆಸಲ್ಪಡುವ ತಪ್ಪು ಮಾಹಿತಿಯಾದ ಡೀಪ್‌ಫೇಕ್, ನಮ್ಮ ಡಿಜಿಟಲ್ ನಾಗರೀಕರ ಸುರಕ್ಷತೆ ಮತ್ತು ನಂಬಿಕೆಗೆ ಬೆದರಿಕೆಯನ್ನು ಇನ್ನಷ್ಟು ವರ್ಧಿಸುತ್ತದೆ. ನವೆಂಬರ್ 17 ರಂದು, ಗೌರವಾನ್ವಿತ ಪ್ರಧಾನಿಯವರು ಡೀಪ್‌ಫೇಕ್‌ಗಳ ಅಪಾಯಗಳ ಬಗ್ಗೆ ದೇಶವನ್ನು ಎಚ್ಚರಿಸಿದರು ಮತ್ತು ಅಕ್ಟೋಬರ್‌ನಲ್ಲಿ ತಿಳಿಸಲಾದ ಐಟಿ ನಿಯಮಗಳ ನಿಬಂಧನೆಗಳ ಬಗ್ಗೆ ಎಚ್ಚರಿಸಲು ಸಚಿವಾಲಯವು ಭಾರತೀಯ ಇಂಟರ್ನೆಟ್‌ ಎಲ್ಲಾ ಮಧ್ಯಸ್ಥಗಾರರೊಂದಿಗೆ ಎರಡು ಡಿಜಿಟಲ್ ಇಂಡಿಯಾ ಸಂವಾದಗಳನ್ನು ನಡೆಸಿದೆ. 2022, ಮತ್ತು ಏಪ್ರಿಲ್ 2023 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಎಲ್ಲಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ 11 ನಿರ್ದಿಷ್ಟ ನಿಷೇಧಿತ ರೀತಿಯ ವಿಷಯವನ್ನು ಲೇಪಿಸಬೇಕು ಎಂದು ಸಚಿವ ರಾಜೀವ್ ಚಂದ್ರಶೇಖ‌ರ್ ಅವರು ಹೇಳಿದರು.

ನಿಯಮ 3(1)(ಬಿ)(ವಿ) ತಪ್ಪು ಮಾಹಿತಿಯ ಪ್ರಸಾರವನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ಪರಿಣಾಮವಾಗಿ, ಎಲ್ಲಾ ಮಧ್ಯವರ್ತಿಗಳು ತಮ್ಮ ಪ್ಲಾಟ್ಫಾರ್ಮ್‌ಗಳಿಂದ ಅಂತಹ ವಿಷಯವನ್ನು ತ್ವರಿತವಾಗಿ ತೆಗೆದುಹಾಕಲು ಸರಿಯಾದ ಶ್ರದ್ಧೆಯಿಂದ ಕೆಲಸ ಮಾಡಿ ಎಂದು ವಿನಂತಿಸಲಾಯಿತು.

ಐಟಿ ನಿಯಮಗಳ ಅಡಿಯಲ್ಲಿ ಯಾವುದೇ ಉಲ್ಲಂಘನೆಗಳಿಗೆ ಸಂಬಂಧಿಸಿದ ಕಾನೂನು ಪರಿಣಾಮಗಳ ಬಗ್ಗೆ ವೇದಿಕೆಗಳಿಗೆ ಸರಿಯಾಗಿ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ನಿಯಮ 3(1)(ಬಿ)(ವಿ) ತಪ್ಪು ಮಾಹಿತಿ ಮತ್ತು ಪೇಟೆಂಟ್ ಸುಳ್ಳು ಮಾಹಿತಿಯನ್ನು ನಿಷೇಧಿಸುತ್ತದೆ. ಎರಡು ಡಿಜಿಟಲ್ ಇಂಡಿಯಾ ಸಂವಾದಗಳ ಸಮಯದಲ್ಲಿ, ಮಾಧ್ಯಮಗಳಲ್ಲಿ ಈ ಹಿಂದೆ ವಿವರಿಸಲಾದ ಐಟಿ ನಿಯಮಗಳೊಂದಿಗೆ ಪ್ಲಾಟ್‌ಫಾರ್ಮ್ ಗಳು ಮತ್ತು ಬಳಕೆದಾರರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಉದ್ಯಮವು ಹೆಚ್ಚಿನ ಕ್ರಮಗಳನ್ನು ಒಪ್ಪಿಕೊಂಡಿವೆ. ಇಂದು, ನಿಯಮ 3(1)(ಬಿ) ನಲ್ಲಿನ ನಿಷೇಧಿತ ವಿಷಯವನ್ನು ಈ ಪ್ಲಾಟ್‌ಫಾರ್ಮ್‌ ಗಳಲ್ಲಿ ಬಳಕೆದಾರರು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು 'ಒಪ್ಪಿಗೆ' ಕಾರ್ಯವಿಧಾನಗಳನ್ನು ಒಳಗೊಂಡ ಔಪಚಾರಿಕ ಸಲಹೆಯನ್ನು ನೀಡಲಾಗಿದೆ ಮತ್ತು ಅಂತಹ ಕಾನೂನು ಉಲ್ಲಂಘನೆಗಳನ್ನು ಗಮನಿಸಿದರೆ ಅಥವಾ ವರದಿ ಮಾಡಿದರೆ ಅದರ ಅಡಿಯಲ್ಲಿ ಪರಿಣಾಮಗಳ ಎಚ್ಚರಿಕೆ ಸಹ ನೀಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮುಂಬರುವ ವಾರಗಳಲ್ಲಿ ಮಧ್ಯವರ್ತಿಗಳ ಅನುಸರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಮತ್ತು ಅಗತ್ಯವಿದ್ದರೆ ಮತ್ತು ಐಟಿ ನಿಯಮಗಳಿಗೆ ಮತ್ತು ಕಾನೂನಿಗೆ ಮತ್ತಷ್ಟು ತಿದ್ದುಪಡಿಗಳನ್ನು ಸೇರಿಸಲು ಸಿದ್ಧವಾಗಿದೆ.

ಇಂಟರ್ನೆಟ್ ಒಂದು ಸುರಕ್ಷಿತವಾದ ಹಾಗೂ ವಿಶ್ವಾಸಾರ್ಹವಾಗಿದ್ದು ಭಾರತದಲ್ಲಿ ಇಂಟರ್ನೆಟ್ ಬಳಸುವ ಡಿಜಿಟಲ್ ನಾಗರೀಕರ ಸುರಕ್ಷತೆ ಮತ್ತು ನಂಬಿಕೆಗೆ ಎಲ್ಲಾ ಮಧ್ಯವರ್ತಿಗಳು ಕಾನೂನಿನಡಿಯಲ್ಲಿ ಜವಾಬ್ದಾರರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಉದ್ದೇಶವಾಗಿದೆ, "ಎಂದು ಸಚಿವರು ಸ್ಪಷ್ಟಪಡಿಸಿದರು.

****



(Release ID: 1990586) Visitor Counter : 110