ಕಲ್ಲಿದ್ದಲು ಸಚಿವಾಲಯ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧ್ಯಕ್ಷತೆಯಲ್ಲಿ ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಮಿತಿ ಸಭೆ


ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ ಒಂದು ಶತಕೋಟಿ ಟನ್ ಮೀರುವ ಸಾಧ್ಯತೆ: ಸಚಿವರಿಂದ ಮಾಹಿತಿ

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನಲ್ಲಿ ಇದುವರೆಗೆ 91 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ

Posted On: 22 DEC 2023 5:13PM by PIB Bengaluru

 

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು, 2030 ರ ವೇಳೆಗೆ ಭಾರತದ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳುವ ಸಾಧ್ಯತೆ ಇರುವುದರಿಂದ, ಕಲ್ಲಿದ್ದಲು ಉತ್ಪಾದನೆ ಮತ್ತು ವಿತರಣೆ ಮೇಲೆ ಗಮನ ಹರಿಸುವ ಮೂಲಕ ರಾಷ್ಟ್ರದ ಇಂಧನ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು. ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಮಿತಿ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು. ಕಲ್ಲಿದ್ದಲು ಸಚಿವಾಲಯವು ಅಳವಡಿಸಿಕೊಂಡಿರುವ ಸರಣಿ ನವೀನ ಕ್ರಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ದೇಶೀಯ ಕಲ್ಲಿದ್ದಲು ಉತ್ಪಾದನೆ ಮತ್ತು ಲಭ್ಯತೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಸಮಿತಿಯ ಸದಸ್ಯರಿಗೆ ತಿಳಿಸಿದರು.

ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ ಈ ವರ್ಷ ಒಂದು ಶತಕೋಟಿ ಟನ್ ಮೀರುವ ಸಾಧ್ಯತೆಯಿದೆ. ಸಾರಿಗೆಗಾಗಿ, ರೇಕ್ ಲಭ್ಯತೆಯು ಇತ್ತೀಚೆಗೆ ಗಣನೀಯವಾಗಿ ಸುಧಾರಿಸಿದೆ, ಆ ಮೂಲಕ ದೇಶದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟುಕಲ್ಲಿದ್ದಲನ್ನು ಖಾತ್ರಿಪಡಿಸಿದೆ ಎಂದು ಸಚಿವರು ಮಾಹಿತಿ ನೀಡಿದರು. ವಾಣಿಜ್ಯ/ ಕ್ಯಾಪ್ಟಿವ್ ಗಣಿಗಳಿಂದ ಉತ್ಪಾದನೆ ಗಣನೀಯವಾಗಿ ಸುಧಾರಿಸಿದೆ ಎಂದು ಸಚಿವರು ಹೇಳಿದರು.
2020 ರಲ್ಲಿ ಪ್ರಾರಂಭಿಸಲಾದ ಸಂಪೂರ್ಣ ಪಾರದರ್ಶಕ ಆನ್-ಲೈನ್ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅಡಿಯಲ್ಲಿ, ಇಲ್ಲಿಯವರೆಗೆ 91 ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ವಾಣಿಜ್ಯ ಹರಾಜಿನ 9 ನೇ ಕಂತನ್ನು 2023 ರ ಡಿಸೆಂಬರ್ 20 ರಂದು ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಅವರು ಎತ್ತಿದ ಸಮಸ್ಯೆಗಳು / ಕಳವಳಗಳನ್ನು ಸೂಕ್ತ ಪರಿಹಾರ ಕ್ರಮಗಳಿಗಾಗಿ ಕಲ್ಲಿದ್ದಲು ಸಚಿವಾಲಯವು ಪರಿಶೀಲಿಸುತ್ತದೆ ಎಂದು ಸಚಿವರು ಸದಸ್ಯರಿಗೆ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರದ ಶ್ರೀ ಎಂ.ನಾಗರಾಜು ಅವರು "ವಾಣಿಜ್ಯ ಮತ್ತು ಕ್ಯಾಪ್ಟಿವ್ ಕಲ್ಲಿದ್ದಲು ಉತ್ಪಾದನೆ, ಕಲ್ಲಿದ್ದಲು ಲಭ್ಯತೆಯನ್ನು ಹೆಚ್ಚಿಸುವ ಕಾರ್ಯತಂತ್ರಗಳು" ಕುರಿತು ಸಮಿತಿಯ ಮುಂದೆ ವಿವರವಾದ ಪ್ರಸ್ತುತಿಯನ್ನು ನೀಡಿದರು. ಭಾರತದ ಕಲ್ಲಿದ್ದಲು ಗಣಿಗಾರಿಕೆ ವಲಯವು ಇತ್ತೀಚೆಗೆ ಕೈಗೊಂಡ ಹಾದಿಯನ್ನು ಮುರಿಯುವ ಉಪಕ್ರಮಗಳನ್ನು ಸಹ ಪ್ರಸ್ತುತಿಯಲ್ಲಿ ಬಿಂಬಿಸಲಾಯಿತು.

ಹಿರಿಯ ಅಧಿಕಾರಿಗಳು ಮೊದಲು ಭಾರತದ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯ ಬಗ್ಗೆ ಮತ್ತು ವಿಶೇಷವಾಗಿ ಕ್ಯಾಪ್ಟಿವ್ ಮತ್ತು ವಾಣಿಜ್ಯ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆಯ ಸಂಕ್ಷಿಪ್ತ ವಿವರವನ್ನು ನೀಡಿದರು. 2014 ಕ್ಕಿಂತ ಮೊದಲು, ಒಟ್ಟು 218 ಕಲ್ಲಿದ್ದಲು ನಿಕ್ಷೇಪಗಳನ್ನು ಕ್ಯಾಪ್ಟಿವ್ ಉದ್ದೇಶಗಳಿಗಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಯಿತು, ಆದಾಗ್ಯೂ, 204 ಗಣಿಗಳ ಹಂಚಿಕೆಯನ್ನು 2014 ರಲ್ಲಿ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ನಂತರ, ಅಕ್ಟೋಬರ್-2014 ರಲ್ಲಿ ಸಿಎಂಎಸ್ ಪಿ  ಸುಗ್ರೀವಾಜ್ಞೆ ಮತ್ತು ಮಾರ್ಚ್ 2015 ರಲ್ಲಿ ಸಿಎಂಎಸ್ ಪಿ ಕಾಯ್ದೆಯನ್ನು ಘೋಷಿಸಲಾಯಿತು. 2014-2020ರ ಅವಧಿಯಲ್ಲಿ, 100 ಕಲ್ಲಿದ್ದಲು ನಿಕ್ಷೇಪಗಳನ್ನು 10 ಕಂತುಗಳ ಹರಾಜು ಮತ್ತು 9 ಕಂತುಗಳ ಹಂಚಿಕೆಯ ಮೂಲಕ ಪಿಎಸ್ ಯು ಗಳಿಗೆ ಹಂಚಿಕೆ ಮಾಡಲಾಗಿದೆ, ಆದಾಗ್ಯೂ, ಈ 100 ಬ್ಲಾಕ್ ಗಳಲ್ಲಿ 22 ಅನ್ನು ರದ್ದುಪಡಿಸಲಾಗಿದೆ.
2020 ರ ಜೂನ್  ರಲ್ಲಿ, ಮೊದಲ ಸುತ್ತಿನ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ ನೀಡಿದರು. ವಾಣಿಜ್ಯ ಬಳಕೆಗಾಗಿ ಒಟ್ಟು 7 ಕಂತಿನ ಬ್ಲಾಕ್ ಗಳ ಹರಾಜು ಪೂರ್ಣಗೊಂಡಿದೆ ಮತ್ತು ಎಂಟನೇ ಮತ್ತು ಒಂಬತ್ತನೇ ಹಂತದ ಹರಾಜು ಪ್ರಕ್ರಿಯೆಯಲ್ಲಿದೆ. 98 ಬ್ಲಾಕ್ ಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದ್ದು, ಅದರಲ್ಲಿ 7 ಬ್ಲಾಕ್ ಗಳನ್ನು ಕೊನೆಗೊಳಿಸಲಾಗಿದೆ. ಈ 91 ಕಲ್ಲಿದ್ದಲು ನಿಕ್ಷೇಪಗಳ ವಾರ್ಷಿಕ ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯ ಸುಮಾರು 221 ಮೆಟ್ರಿಕ್ ಟನ್ ಆಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ನಂತರ, ಸುಮಾರು 33,136 ಕೋಟಿ ರೂ.ಗಳ ಹೂಡಿಕೆ ಮತ್ತು ಈ 91 ಗಣಿಗಳಿಂದ ಸುಮಾರು 3 ಲಕ್ಷ ಸಿಬ್ಬಂದಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಒಂಬತ್ತು ವಾಣಿಜ್ಯ ಬ್ಲಾಕ್ ಗಳು ಗಣಿ ತೆರೆಯಲು ಅನುಮತಿ ಪಡೆದಿವೆ, ಅವುಗಳಲ್ಲಿ ಆರು ನಿರ್ಮಾಣ ಹಂತದಲ್ಲಿವೆ ಮತ್ತು ಉಳಿದ ಮೂರು ಶೀಘ್ರದಲ್ಲೇ ಉತ್ಪಾದನೆಯನ್ನು ಪ್ರಾರಂಭಿಸಲಿವೆ.
2015-16 ರಿಂದ 2020-23 ರವರೆಗೆ ಕ್ಯಾಪ್ಟಿವ್ / ವಾಣಿಜ್ಯ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆಯು ಸುಮಾರು 28.62 ಮೆಟ್ರಿಕ್ ಟನ್ ನಿಂದ 116.55 ಮೆಟ್ರಿಕ್ ಟನ್ ಗೆ ಶೇ. 22.21 ಸಿಎಜಿಆರ್ ನೊಂದಿಗೆ ಹೆಚ್ಚಾಗಿದೆ ಮತ್ತು ಇದು 2023-24ರ ಹಣಕಾಸು ವರ್ಷದಲ್ಲಿ ಸುಮಾರು 145 ಮೆಟ್ರಿಕ್ ಟನ್ ತಲುಪುವ ನಿರೀಕ್ಷೆಯಿದೆ. ಹಣಕಾಸು ವರ್ಷ 2030 ರ ವೇಳೆಗೆ ಕ್ಯಾಪ್ಟಿವ್ / ಕಮರ್ಷಿಯಲ್ ನಿಂದ ಕಲ್ಲಿದ್ದಲು ಉತ್ಪಾದನೆಯು ಸುಮಾರು 350 ಮೆಟ್ರಿಕ್ ಟನ್ ಮಟ್ಟವನ್ನು ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಇದು ಸಿಐಎಲ್ ನ ಉತ್ಪಾದನೆಯ ಪಕ್ಕದಲ್ಲಿರುತ್ತದೆ. ಹಣಕಾಸು ವರ್ಷ 22-23 ರಲ್ಲಿ ಒಟ್ಟು ದೇಶೀಯ ಉತ್ಪಾದನೆಯಲ್ಲಿ ಕ್ಯಾಪ್ಟಿವ್ ಮತ್ತು ವಾಣಿಜ್ಯ ಗಣಿಗಳ ಕೊಡುಗೆ ಸುಮಾರು ಶೇ.13 ಮತ್ತು ಇದು 2030 ರ ಹಣಕಾಸು ವರ್ಷದಲ್ಲಿ ಸುಮಾರು ಶೇ. 25 ಕ್ಕೆ ಹೆಚ್ಚಾಗುತ್ತದೆ. ಕಲ್ಲಿದ್ದಲು ಸಚಿವಾಲಯವು ಭಾರತದಲ್ಲಿ ಕಲ್ಲಿದ್ದಲಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸುತ್ತಿದೆ ಮತ್ತು 2026 ರ ಹಣಕಾಸು ವರ್ಷದ ವೇಳೆಗೆ, ದೇಶದ ಥರ್ಮಲ್ ಕಲ್ಲಿದ್ದಲು ಅಗತ್ಯವನ್ನು ದೇಶೀಯ ಕಲ್ಲಿದ್ದಲಿನಿಂದ ಪೂರೈಸಲಾಗುವುದು.

ಕಲ್ಲಿದ್ದಲು ಸಚಿವಾಲಯವು 2020 ರಿಂದ ಆದಾಯ ಹಂಚಿಕೆ ಆಧಾರದ ಮೇಲೆ ಹರಾಜು, ಆರಂಭಿಕ ಉತ್ಪಾದನೆ ಮತ್ತು ಅನಿಲೀಕರಣಕ್ಕೆ ಪ್ರೋತ್ಸಾಹ, ರಾಷ್ಟ್ರೀಯ ಕಲ್ಲಿದ್ದಲು ಮತ್ತು ಲಿಗ್ನೈಟ್ ಸೂಚ್ಯಂಕವನ್ನು ಬೆಲೆಗಾಗಿ ಪರಿಚಯಿಸುವುದು, ಮುಂಗಡ ಮತ್ತು ಬಿಜಿ ಮೊತ್ತವನ್ನು ಕಡಿಮೆ ಮಾಡುವುದು ಮುಂತಾದ ಹಲವಾರು ಸುಧಾರಣೆಗಳನ್ನು ಮಾಡಿದೆ. ಕಲ್ಲಿದ್ದಲು ಉತ್ಪಾದನೆಗೆ ಪರಿಷ್ಕೃತ ಗಣಿಗಾರಿಕೆ ಯೋಜನೆ ಅನುಮೋದನೆ ಪ್ರಕ್ರಿಯೆ, ರಾಜ್ಯ ಸರ್ಕಾರಗಳು ಸೇರಿದಂತೆ ಮಧ್ಯಸ್ಥಗಾರರೊಂದಿಗೆ ಸಾಪ್ತಾಹಿಕ ಪರಿಶೀಲನಾ ಸಭೆಗಳು, ಯೋಜನಾ ಮೇಲ್ವಿಚಾರಣಾ ಘಟಕ ಮತ್ತು ಏಕ ಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸುವುದು ಮುಂತಾದ ಹಲವಾರು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಲ್ಲಿದ್ದಲು ಸಚಿವಾಲಯವು ರೈಲ್ವೆ ಸಚಿವಾಲಯದೊಂದಿಗೆ ಸಮಾಲೋಚಿಸಿ ರೈಲು ಮೂಲಕ ಕಲ್ಲಿದ್ದಲು ಸಾಗಣೆ ಸಾಮರ್ಥ್ಯವನ್ನು ಸುಧಾರಿಸಿದೆ.
ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯ ಮಾಡಿದ ಪ್ರಯತ್ನಗಳನ್ನು ಸಂಸತ್ ಸದಸ್ಯರು ಶ್ಲಾಘಿಸಿದರು ಮತ್ತು ಅಮೂಲ್ಯ ಸಲಹೆಗಳನ್ನು ನೀಡಿದರು.
ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯಲ್ಲಿ ಸುಧಾರಣೆಗಾಗಿ ಸಿಐಎಲ್ / ಇತರ ಪಿಎಸ್ ಯುಗಳು ಮತ್ತು ಖಾಸಗಿ ಕಂಪನಿಗಳನ್ನು ಅಭಿನಂದಿಸಿದರು. ಕಲ್ಲಿದ್ದಲು ಸ್ಥಳಾಂತರಿಸುವಿಕೆಯಲ್ಲಿ ಇನ್ನೂ ಕೆಲವು ಸವಾಲುಗಳಿವೆ ಮತ್ತು ರೈಲ್ವೆ ಸಚಿವಾಲಯದ ಸಹಾಯದಿಂದ, ಅಂತಹ ಸವಾಲುಗಳನ್ನು ನಿಯಮಿತವಾಗಿ ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು. ಮುಂದಿನ ಎರಡು ಮೂರು ವರ್ಷಗಳಲ್ಲಿ ಥರ್ಮಲ್ ಕಲ್ಲಿದ್ದಲಿನ ಆಮದನ್ನು ಸಂಪೂರ್ಣವಾಗಿ ದೇಶೀಯ ಥರ್ಮಲ್ ಕಲ್ಲಿದ್ದಲಿನಿಂದ ಬದಲಾಯಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಸಮಿತಿಯ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಸಚಿವರು, ಸದಸ್ಯರು ನೀಡಿದ ಸಲಹೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.



(Release ID: 1989918) Visitor Counter : 53