ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ ತಮಿಳುನಾಡಿನ ಅಧಿಕೃತ ಲೋಗೋ ಮತ್ತು ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ.

Posted On: 21 DEC 2023 4:37PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್  ಶುಕ್ರವಾರ ಡಿಸೆಂಬರ್ 22,2023 ರಂದು ಚೆನ್ನೈನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ತಮಿಳುನಾಡಿನ ಅಧಿಕೃತ ಲೋಗೋ, ಜರ್ಸಿ, ಲಾಂಛನ, ಟಾರ್ಚ್ ಮತ್ತು ಥೀಮ್ ಸಾಂಗ್ ಬಿಡುಗಡೆ ಮಾಡಲಿದ್ದಾರೆ.

ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ 6 ನೇ ಆವೃತ್ತಿಯು ಜನವರಿ 19 ರಿಂದ 31, 2024 ರವರೆಗೆ ನಡೆಯಲಿದೆ.

ಯೂತ್ ಗೇಮ್ಸ್‌ನ ಹಿಂದಿನ 5 ಆವೃತ್ತಿಗಳು ದೆಹಲಿ, ಪುಣೆ, ಗುವಾಹಟಿ, ಪಂಚಕುಲ ಮತ್ತು ಭೋಪಾಲ್‌ನಲ್ಲಿ ನಡೆದಿವೆ. ಮುಂಬರುವ ಆವೃತ್ತಿಯು ತಮಿಳುನಾಡಿನ ನಾಲ್ಕು ನಗರಗಳಾದ ಚೆನ್ನೈ, ತಿರುಚ್ಚಿ, ಮಧುರೈ ಮತ್ತು ಕೊಯಮತ್ತೂರಿನಲ್ಲಿ ನಡೆಯಲಿದೆ.

ಶುಕ್ರವಾರದ ಉದ್ಘಾಟನಾ ಸಮಾರಂಭದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ಕೇಂದ್ರ ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಇತರ ಗಣ್ಯರು ಭಾಗವಹಿಸಲಿದ್ದಾರೆ.

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಟೋಕಿಯೊ ಒಲಿಂಪಿಯನ್  ಭವಾನಿ ದೇವಿ, ಬ್ಯಾಡ್ಮಿಂಟನ್ ತಾರೆ ಜೋಷ್ನಾ ಚಿನ್ನಪ್ಪ ಮತ್ತು ಹಾಕಿ ಏಷ್ಯಾಕಪ್ ಕಂಚಿನ ಪದಕ ವಿಜೇತ ಎಸ್. ಮರೇಶ್ವರನ್, ಇತರ ಗೌರವಾನ್ವಿತ ಕ್ರೀಡಾಪಟಗಳು ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

*****
 



(Release ID: 1989262) Visitor Counter : 57