ಕಲ್ಲಿದ್ದಲು ಸಚಿವಾಲಯ
ಕೋಲ್ ಇಂಡಿಯಾ ಮತ್ತು ಅಂಗ ಸಂಸ್ಥೆಗಳು ಒದಗಿಸುವ ಆರೋಗ್ಯ ರಕ್ಷಣಾ ಸೌಲಭ್ಯಗಳು
Posted On:
13 DEC 2023 4:15PM by PIB Bengaluru
ಸಾಮಾನ್ಯ ಜನರಿಗೆ ಹೋಲಿಸಿದರೆ ಕಲ್ಲಿದ್ದಲು ಗಣಿ ಕಾರ್ಮಿಕರಲ್ಲಿ ಆಸ್ತಮಾ, ಕಣ್ಣಿನ ಸೋಂಕು ಅಥವಾ ಇತರೆ ಯಾವುದೇ ಆರೋಗ್ಯ ಸಮಸ್ಯೆಗಳಿವೆ ಎಂದು ಸೂಚಿಸುವ ಯಾವುದೇ ವರದಿಗಳಿಲ್ಲ. ಕಾರ್ಮಿಕರ ಆರೋಗ್ಯ ಮತ್ತು ಜೀವನೋಪಾಯ ಮತ್ತು ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ.
ಸಿಐಎಲ್ ಬಲವಾದ ಆರೋಗ್ಯ ಸೌಲಭ್ಯಗಳ ಜಾಲವನ್ನು ಹೊಂದಿದೆ. ಪ್ರತಿಯೊಬ್ಬ ಉದ್ಯೋಗಿ ಮತ್ತು ಕಾರ್ಮಿಕರಿಗೆ ತೀವ್ರತೆರನಾದ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ. ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ [ಎನ್ಎಲ್ ಸಿಐಎಲ್] ಸಾಕಷ್ಟು ಯಾಂತ್ರೀಕೃತವಾದ ಮುಕ್ತ ಗಣಿಗಳನ್ನು ಹೊಂದಿದೆ. ಆದ್ದರಿಂದ ಗಣಿಗಾರಿಕೆ ಚಟುವಟಿಕೆಗಳಿಗೆ ಕಾರ್ಮಿಕರನ್ನು ದೈಹಿಕವಾಗಿ ನಿಯೋಜಿಸಿಲ್ಲ. ಹಾಗಾಗಿ ವೃತ್ತಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿಲ್ಲ. ಎನ್ಎಲ್ ಸಿಐಎಲ್ ಗಣಿಗಾರಿಕೆ ಘಟಕಗಳಲ್ಲಿ ತೊಡಗಿರುವ ಗಣಿ ಕಾರ್ಮಿಕರು ಹಾಗೂ ಕಾರ್ಯನಿರ್ವಾಹಕರು, ಮೇಲ್ವಿಚಾರಕರು ಹಾಗೂ ಕಾರ್ಮಿಕ ಸಮೂಹಕ್ಕೆ ವೃತ್ತಿಪರವಾದ ಆರೋಗ್ಯ ಸೇವೆಗಳನ್ನು [ಒಎಚ್ಎಸ್] ಒದಗಿಸಲಾಗಿದ್ದು, ಅವರ ನೇಮಕಾತಿ ಸಮಯದಿಂದ ನಿವೃತ್ತಿವರೆಗೆ ಆರೋಗ್ಯ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತದೆ. ಇದರಿಂದ ಮುಂದಾಗಿಯೇ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಬಹುದಾಗಿದೆ. ಅದು ಕೆಲಸದ ಪರಿಸರದಿಂದ ಬರುವ, ವೃತ್ತಿನಿರವಾದ ಒತ್ತಡ, ಒತ್ತಡವನ್ನು ನಿಭಾಯಿಸಲು ದೋಷಪೂರಿತ ನಡಾವಳಿಕೆಯ ಪ್ರಕ್ರಿಯೆ ಮತ್ತು ಸೂಕ್ತ ಸಮಯದಲ್ಲಿ ಆರೋಗ್ಯ ಆರೈಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗಾಗಿ ದೃಢವಾದ ಕಾರ್ಯಪಡೆಯ ಪ್ರಚಾರ ಮತ್ತು ಸಂರಕ್ಷಣೆ ಮೂಲಕ ಕಂಪೆನಿಯ ಕೆಳಹಂತದ ಫಲಿತಾಂಶದ ಮೇಲೆ ಪರಿಣಾಮ ಬೀರಲು ನೆರವಾಗಲಿದೆ.
ಸಿಂಗರೇಣಿ ಕಲ್ಲಿದ್ದಲು ಗಣಿಗಳ ಕಂಪೆನಿ ಲಿಮಿಟೆಡ್ [ಎಸ್.ಸಿ.ಸಿ.ಎಲ್] ಸಂಸ್ಥೆ ತನ್ನ ಉದ್ಯೋಗಿಗಳು ಮತ್ತು ಗುತ್ತಿಗೆ ಸಿಬ್ಬಂದಿಗೆ ವೈದ್ಯಕೀಯ ಮತ್ತು ಆರೋಗ್ಯ ಆರೈಕೆಯನ್ನು ಒದಗಿಸುತ್ತಿದೆ. ಎಸ್.ಸಿ.ಸಿ.ಎಲ್ ತನ್ನ ಗಣಿಗಾರಿಕೆ ಪ್ರಗತಿಯಲ್ಲಿರುವ ತೆಲಂಗಾಣ ಭಾಗದ 6 ಜಿಲ್ಲೆಗಳಲ್ಲಿ ಏಳು ಪ್ರಾದೇಶಿಕ ಆಸ್ಪತ್ರೆ [821 ಹಾಸಿಗೆಗಳ ಸಾಮರ್ಥ್ಯ], 21 ಔಷಧಾಲಯಗಳನ್ನು ಹೊಂದಿದ್ದು, ಇಲ್ಲಿ ಎದೆ ರೋಗ ತಜ್ಞರು, ನೇತ್ರತಜ್ಞರನ್ನು ನಿಯೋಜಿಸಲಾಗಿದೆ. ಎಸ್.ಸಿ.ಸಿ.ಎಲ್ ಗಣಿ ಮತ್ತು ಇಲಾಖೆಗಳಲ್ಲಿ ತನ್ನ ಸಿಬ್ಬಂದಿಗೆ ವೃತ್ತಿ ಸಂಬಂಧಿತ ರೋಗಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಇಲ್ಲಿ 12 ವೃತ್ತಿ ಸಂಬಂಧಿತ ಆರೋಗ್ಯ ಸೇವೆಗಳು ಮತ್ತು ಉದ್ಯೋಗಿಗಳ ಗಂಭೀರ ರೋಗಗಳ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ. ಪಿಎಂಇ, ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರಿಗೆ ಕಣ್ಣಿನ ಪರೀಕ್ಷೆ, ಎದೆ ರೇಡಿಯೋಗ್ರಫಿ ಪರೀಕ್ಷೆಗಳಿಗೆ ವ್ಯವಸ್ಥೆ ಮಾಡಿದ್ದು, ಏನಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಕಂಪೆನಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸಿಐಎಲ್ ಸಂಸ್ಥೆಯು ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳು ಮತ್ತು ಗುತ್ತಿಗೆ ನೌಕರರಿಗೆ ಆರಂಭಿಕ ವೈದ್ಯಕೀಯ ಪರೀಕ್ಷೆ [ಐಎಂಇ] ನಡೆಸುತ್ತಿದೆ ಮತ್ತು ಹಾಲಿ ಕರ್ತವ್ಯ ನಿರತ ಉದ್ಯೋಗಿಗಳು ಮತ್ತು ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿರುವವರಿಗೆ ನಿಯಮಿತವಾಗಿ ಆಸ್ಪತ್ರೆಗಳು ಮತ್ತು ಸಿಐಎಲ್ ನಿರ್ವಹಣೆ ಮಾಡುವ ಔಷಧಾಲಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಉದ್ಯೋಗಿಗಳು ಮತ್ತು ಗುತ್ತಿಗೆ ನೌಕರರಿಗೆ ಕಂಪೆನಿಯ ಔಷಧಾಲಯಗಳು ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಸೂಕ್ತ ಆರೋಗ್ಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಸೂಕ್ತ ಆರೋಗ್ಯ ಸೌಲಭ್ಯಕ್ಕಾಗಿ 395 ಆಸ್ಪತ್ರೆಗಳನ್ನು ಪ್ಯಾನ್ ಇಂಡಿಯಾದಡಿ ಜೋಡಿಸಲಾಗಿದೆ. 2018 ಏಪ್ರಿಲ್ ನಿಂದ 2023 ರ ಮಾರ್ಚ್ ವರೆಗೆ 74550 ಉದ್ಯೋಗಿಗಳಿಗೆ ಆರಂಭಿಕ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ ಮತ್ತು ಇದೇ ಅವಧಿಯಲ್ಲಿ 311945 ವ್ಯಕ್ತಿಗಳಿಗೆ ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಲಾಗಿದೆ.
ಎನ್ಎಲ್ ಸಿಐಎಲ್ ಸಂಸ್ಥೆಯು ತನ್ನ ಸೊಸೈಟಿ, ಅಲ್ಪಾವಧಿ, ಹೊರಗುತ್ತಿಗೆ ಮತ್ತು ಇತರೆ ಗುತ್ತಿಗೆ ನೌಕರರಿಗೆ ಆರಂಭಿಕ ವೈದ್ಯಕೀಯ ಪರೀಕ್ಷೆ [ಐಎಂಇ]ಗೆ ವ್ಯವಸ್ಥೆ ಮಾಡಿದೆ. ಉದ್ಯೋಗಿಗಳು, ಸೊಸೈಟಿ, ಅಲ್ಪಾವಧಿ, ಹೊರಗುತ್ತಿಗೆ ಮತ್ತು ಇತರೆ ಗುತ್ತಿಗೆ ನೌಕರರಿಗೆ ಮೂರು ವರ್ಷಗಳಿಗೊಮ್ಮೆ ಎಲ್ಲಾ ವಯೋಮಾನದವರಿಗೆ ಎನ್ಎಲ್ ಸಿಐಎಲ್ ಸಂಸ್ಥೆಯು ಆರೋಗ್ಯ ತಪಾಸಣೆಗೆ ಒತ್ತು ನೀಡಿದೆ. ಎನ್ಎಲ್ ಸಿ ಇಂಡಿಯಾ ಆಸ್ಪತ್ರೆಯು ಒಎಚ್ಎಸ್ [ಔದ್ಯೋಗಿಕ ಆರೋಗ್ಯ ಸೇವೆಗಳು] ಘಟಕ ಔದ್ಯೋಗಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲ್ವಿಚಾರಣೆಗೆ ಡಿಜಿಎಂಎಸ್ ಮಾರ್ಗಸೂಚಿಗಳ ಪ್ರಕಾರ ಆವರ್ತಕ ವೈದ್ಯಕೀಯ ಪರೀಕ್ಷೆ [ಪಿಎಂಇ] ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಡಿಜಿಎಂಎಸ್ ಮಾರ್ಗಸೂಚಿಯನ್ವಯ ಪ್ರತಿ ಮೂರು ವರ್ಷಗಳಿಗೊಮ್ಮೆ ಪಿಎಂಇ ಅಡಿ ಎಲ್ಲಾ ಗಣಿ ಸಮೂಹಕ್ಕೆ ಮೂರು ವರ್ಷಗಳಿಗೊಮ್ಮೆ ಎಲ್ಲಾ ವಯೋಮಾನದವರಿಗೆ ಆರೋಗ್ಯ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಗುತ್ತಿಗೆ ನೌಕರರು ಒಳಗೊಂಡಂತೆ ಪ್ರತಿಯೊಬ್ಬರಿಗೂ ಮೂರು ವರ್ಷಗಳಿಗೊಮ್ಮೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಈ ಚಕ್ರವನ್ನು ನಿಯಮಿತವಾಗಿ ಪುನರಾವರ್ತಿಸಲಾಗುತ್ತದೆ. ಇದು ಗಣಿಗಳ ಆರೋಗ್ಯ ಮತ್ತು ಯೋಗ ಕ್ಷೇಮದ ಬಗ್ಗೆ ಸೂಕ್ತ ದೃಷ್ಟಿಕೋನ ಹೊಂದಲು ಒಎಚ್ಎಸ್ ಗೆ ಅನುವು ಮಾಡಿಕೊಡುತ್ತದೆ. ಎದೆಯ ಎಕ್ಸ್ ರೇ ಮತ್ತು ಶ್ವಾಸಕೋಶದ ಪರೀಕ್ಷೆಗಳಂತಹ ಸೂಕ್ತ ವಿಧಾನಗಳ ಮೂಲಕ ಉಸಿರಾಟದ ಕಾಯಿಲೆಯನ್ನು ತಡೆಗಟ್ಟುವತ್ತ ಪಿಎಂಇ ಗಮನಹರಿಸುತ್ತದೆ. ಕಾರ್ಯನಿರ್ವಾಹಕರು ಮತ್ತು ಕಾರ್ಯನಿರ್ವಾಹಕೇತರರಿಗೆ ಒಎಚ್ಎಸ್ ನಿಂದ ಎಲ್ಲಾ ಘಟಕಗಳಲ್ಲಿ ರೋಗನಿಯಂತ್ರಣ ಕಾರ್ಯತಂತ್ರದ ಅಂಗವಾಗಿ ಒಎಚ್ಎಸ್ ನಡಿ ಮಾಸ್ಟರ್ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.
ಎಸ್.ಸಿ.ಸಿ.ಎಲ್ ತನ್ನ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುತ್ತಿದೆ.
ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಕೊಟ್ಟಿದ್ದಾರೆ.
****
(Release ID: 1986127)